ಬೆಂಗಳೂರು: ಮನೆಯಿಂದ ಹೊರಬೇಕಾದರೆ ನೂರು ಬಾರಿ ಯೋಚಿಸುವಂತಾಗಿದೆ. ಹೊರಗೆ ಬಂದರೆ ಸೂರ್ಯನ ಬೆಳಕಿಗೆ ಕಣ್ಣು ಬಿಡಲಾಗದಷ್ಟು ತಾಪ (temperature rising) ಇರಲಿದೆ. ಮುಂದಿನ ಒಂದು ವಾರ ಬೆಂಗಳೂರು ಬೆಂದು (Dry weather) ಹೋಗಲಾಗಿದೆ. ಕರ್ನಾಟಕದಲ್ಲಿ ಬೇಸಿಗೆಯ ಕಾರುಬಾರು (Karnataka weather Forecast) ಜೋರಾಗಿರಲಿದೆ.
ರಾಜ್ಯಾದ್ಯಂತ ಮಾರ್ಚ್ 10 ರಿಂದ 16ರವೆರಗೂ ಒಣಹವೆ ವಾತಾವರಣವೇ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಲ್ಲಿ ಇನ್ನೆರಡು ದಿನಗಳು ಗರಿಷ್ಟ ತಾಪಮಾನವು 35 ಡಿ.ಸೆ ತಲುಪುವ ನಿರೀಕ್ಷೆ ಇದೆ. ಕರಾವಳಿಯ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಇರಲಿದೆ. ಒಳನಾಡಿನ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ.
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಗರಿಷ್ಠ ಉಷ್ಣಾಂಶ 34 ಮತ್ತು ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇನ್ನೂ ರಾಜ್ಯಾದ್ಯಂತ ಶನಿವಾರ ಶುಷ್ಕ ವಾತಾವರಣ ಇತ್ತು. ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 38.6 ಡಿ.ಸೆ ತಲುಪಿದ್ದರೆ, ದಾವಣಗೆರೆಯಲ್ಲಿ ಕನಿಷ್ಠ ಉಷ್ಣಾಂಶವು 19.0 ಡಿ.ಸೆ ದಾಖಲಾಗಿತ್ತು.
ಇದನ್ನೂ ಓದಿ: Physical Abuse : ಚರ್ಚ್ ಧರ್ಮಗುರು ವಿರುದ್ಧ ಎಫ್‌ಐಆರ್; ಪ್ರಾರ್ಥನೆಗೆ ಬಂದವಳ ಮೇಲೆ ಅತ್ಯಾಚಾರ
ನಮ್ಮ ಆರೋಗ್ಯಕ್ಕೆ ಜಿಂಕ್ ಏಕೆ ಬೇಕೆಂದರೆ…
ನಮ್ಮ ದೇಹಕ್ಕೆ ಹಲವಾರು ಸೂಕ್ಷ್ಮ ಪೋಷಕಾಂಶಗಳು ಬೇಕು. ಆದರೆ ಇವುಗಳು ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ಅಗತ್ಯವಿಲ್ಲ, ಅಲ್ಪ ಪ್ರಮಾಣದಲ್ಲಿ ಸಾಕಾಗುತ್ತದೆ. ಆದರೆ ಬೇಕಾದ ಕೊಂಚ ಅಂಶವೂ ದೊರೆಯದಿದ್ದರೆ ಶರೀರಕ್ಕೆ ತೊಂದರೆಯಾಗುವುದು ಖಚಿತ. ಅಂಥ ಪೋಷಕ ಸತ್ವಗಳಲ್ಲಿ ಜಿಂಕ್ ಅಥವಾ ಸತು ಸಹ ಒಂದು. ಈ ಪೋಷಕಾಂಶವು ವಯಸ್ಕ ಮಹಿಳೆಯರ ಆರೋಗ್ಯಕ್ಕೆ ಉಳಿದೆಲ್ಲರಿಗಿಂತ ಅಗತ್ಯವಾಗಿ ಬೇಕು. ಯಾಕೆ ಎನ್ನುವುದಕ್ಕೆ (Why zinc is necessary)ಇಲ್ಲಿದೆ ವಿವರಣೆಗಳು.
ಎಷ್ಟು ಬೇಕು?
ಪ್ರೊಟೀನ್, ನಾರು ಮುಂತಾದ ಸತ್ವಗಳು ನಮಗೆ ದಿನಕ್ಕೆ ಹಲವಾರು ಗ್ರಾಂಗಳ ಲೆಕ್ಕದಲ್ಲಿ ಬೇಕಾಗುತ್ತದೆ. ಆದರೆ ಸೂಕ್ಷ್ಮ ಪೋಷಕಾಂಶಗಳು ಬೇಕಾಗುವುದು ಕೆಲವೇ ಮಿಲಿ ಗ್ರಾಂ.ಗಳ ಲೆಕ್ಕದಲ್ಲಿ. ವಯಸ್ಕ ಪುರುಷರಿಗೆ ದಿನವೊಂದಕ್ಕೆ 11 ಮಿ.ಲಿ ಗ್ರಾಂ ಸತು ಬೇಕಾದರೆ, ವಯಸ್ಕ ಮಹಿಳೆಯರಿಗೆ ಈ ಪ್ರಮಾಣ 9 ಮಿ. ಗ್ರಾಂ. ಇದ್ದರೆ ಸಾಕು. ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಈ ಪ್ರಮಾಣ ಕೊಂಚ ಹೆಚ್ಚು. ಇಷ್ಟು ಕಡಿಮೆ ಪ್ರಮಾಣದಲ್ಲಾದರೂ ಸ್ತ್ರೀಯರಿಗೆ ಸತು ಬೇಕಾಗುವುದೇಕೆ?
ಹಾರ್ಮೋನ್ ಸಮತೋಲನಕ್ಕೆ
ಮಹಿಳೆಯರನ್ನು ಕಾಡುವ, ಪಿಸಿಒಎಸ್ ಎಂದೇ ಕರೆಯಲಾಗುವ, ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆಗೆ ಜಿಂಕ್ ಪೂರಕಗಳ ಸೇವನೆ ನೆರವಾಗಬಹುದು. ಇಂಥ ಹಾರ್ಮೋನುಗಳ ಉತ್ಪಾದನೆಯನ್ನು ಸಮತೋಲನೆಯಲ್ಲಿ ಇರಿಸಿಕೊಳ್ಳುವುದಕ್ಕೆ ಸತುವಿನ ಅಂಶ ಪೂರಕವಾಗಿ ಕೆಲಸ ಮಾಡುತ್ತದೆ. ಮುಟ್ಟಿನ ದಿನಗಳ ಮುನ್ನ ಕಾಡುವ ಪಿಎಂಎಸ್ ಅಥವಾ ಪ್ರಿ ಮೆನ್ಸ್‌ಟ್ರುವಲ್ ಸಿಂಡ್ರೋಮ್ ಸಹ ಜಿಂಕ್ ಸೇವನೆಯಿಂದ ತಹಬಂದಿಗೆ ಬರಬಹುದು. ಆ ದಿನಗಳ ಹೊಟ್ಟೆನೋವು, ಹೊಟ್ಟೆ ಉಬ್ಬರ, ಮೂಡ್ ಬದಲಾವಣೆಗಳನ್ನು ನಿಯಂತ್ರಿಸಲು ಇದು ನೆರವಾಗುತ್ತದೆ.
ಚರ್ಮದ ಆರೋಗ್ಯ
ದೇಹವನ್ನು ಬುಡಮಟ್ಟದಿಂದ ದುರಸ್ತಿ ಮಾಡುವುದಕ್ಕೆ ಸತು ಬೇಕಾಗುತ್ತದೆ. ಗಾಯ ಗುಣವಾಗುವುದರಿಂದ ಹಿಡಿದು, ಚರ್ಮದ ಕೋಶಗಳ ಯೋಗಕ್ಷೇಮಕ್ಕೆ ಜಿಂಕ್ ಅಗತ್ಯ. ಪ್ರೊಟೀನ್ ಸಂಶ್ಲೇಷಣೆ ಮತ್ತು ಡಿಎನ್‌ಎ ಸಂಶ್ಲೇಷಣೆಗಳಿಗೆ ಸತು ಪ್ರಚೋದನೆ ನೀಡುತ್ತದೆ. ಇದರಿಂದ ನಾಶವಾಗುವಂಥ ಕೋಶಗಳ ಮರು ಉತ್ಪಾದನೆ ಸಾಧ್ಯವಾಗುತ್ತದೆ. ಜೊತೆಗೆ, ಜಿಂಕ್‌ನಲ್ಲಿರುವ ಉರಿಯೂತ ಶಾಮಕ ಗುಣಗಳು ಮೊಡವೆಯನ್ನು ನಿಯಂತ್ರಿಸಲು ನೆರವಾಗುತ್ತವೆ.
ರೋಗ ನಿರೋಧಕ ಶಕ್ತಿಗೆ
ದೇಹದ ಪ್ರತಿರೋಧಕ ಶಕ್ತಿ ಉದ್ದೀಪಿಸಲು ಮತ್ತು ಸೋಂಕುಗಳೊಂದಿಗೆ ಹೋರಾಡುವ ಶಕ್ತಿಯನ್ನು ಹೆಚ್ಚಿಸಲು ಜಿಂಕ್ ಅಗತ್ಯ. ಇದರಿಂದ ಕೋಶಗಳ ಮಟ್ಟದಲ್ಲಿ ಉಂಟಾಗಬಹುದಾದ ಆಕ್ಸಿಡೇಟಿವ್ ಸ್ಟ್ರೆಸ್ ಕಡಿಮೆ ಮಾಡಿ, ಪ್ರತಿಕಾಯ ಸೃಷ್ಟಿಸುವ ಪ್ರಕ್ರಿಯೆಯನ್ನು ಚುರುಕಾಗಿಸುತ್ತದೆ.
ಫಲವಂತಿಕೆ ಹೆಚ್ಚಳ
ಸ್ತ್ರೀಯರ ದೇಹದಲ್ಲಿ ಜಿಂಕ್ ಪ್ರಮಾಣ ಸರಿಯಾಗಿರುವುದಕ್ಕೂ ಫಲವಂತಿಕೆಗೂ ಸಂಬಂಧವಿದೆ ಎನ್ನುತ್ತವೆ ಅಧ್ಯಯನಗಳು. ಪುನರುತ್ಪತ್ತಿಯ ವ್ಯವಸ್ಥೆ ಆರೋಗ್ಯವಾಗಿರುವುದಕ್ಕೂ, ಅಂಡಾಣುಗಳ ಗುಣಮಟ್ಟ ಚೆನ್ನಾಗಿರುವುದಕ್ಕೂ ಮತ್ತು ಸತುವಿನ ಪ್ರಮಾಣ ಶರೀರದಲ್ಲಿ ಸೂಕ್ತ ಮಟ್ಟದಲ್ಲಿ ಇರಬೇಕಾಗುತ್ತದೆ. ಹೊಸ ಕೋಶಗಳ ಬೆಳವಣಿಗೆ ಸರಿಯಾಗಿರುವುದು ಫಲವಂತಿಕೆಗೆ ಅಗತ್ಯ. ಈ ಅಂಶದ ನಿರ್ವಹಣೆಯಲ್ಲಿ ಸತು ಮುಖ್ಯ.
ಜಿಂಕ್ ಕೊರತೆ ಎದುರಾದರೆ ದೇಹದ ಪ್ರತಿರೋಧಕತೆ ಕುಂಠಿತಗೊಳ್ಳುತ್ತದೆ, ಹಾರ್ಮೋನುಗಳಲ್ಲಿ ಏರಿಳಿತವಾಗಬಹುದು, ಚರ್ಮದ ಕಾಂತಿ ಕಡಿಮೆಯಾಗಬಹುದು, ಫಲವಂತಿಕೆಯ ಸಮಸ್ಯೆ ಬರಬಹುದು, ಇದಲ್ಲದೆ, ಜೀರ್ಣಾಂಗಗಳ ತೊಂದರೆ, ಮೂಳೆಗಳಲ್ಲಿ ಸಮಸ್ಯೆ, ಕೂದಲು ಉದುರುವುದು ಮತ್ತು ಸೋಂಕುಗಳ ಸಮಸ್ಯೆಯೂ ಹೆಚ್ಚಾಗಬಹುದು. ಹಾಗಾದರೆ ಯಾವೆಲ್ಲ ಆಹಾರಗಳಿಂದ ನಾವು ಜಿಂಕ್ ಪಡೆಯುವುದಕ್ಕೆ ಸಾಧ್ಯ?
ಯಾವುದರಲ್ಲಿದೆ?
ಜಿಂಕ್ ಹೇರಳವಾಗಿ ದೊರೆಯುವುದು ಮತ್ಸಾಹಾರದಲ್ಲಿ, ಅದರಲ್ಲೂ ಮುಖ್ಯವಾಗಿ ಏಡಿ ಮತ್ತು ಸಿಂಪಿಯಂಥವುಗಳಲ್ಲಿ. ಇದಲ್ಲದೆ, ಗೋಡಂಬಿ, ಬಾದಾಮಿ, ಎಳ್ಳು, ಅಗಸೆಯಂಥ ಬೀಜಗಳಲ್ಲಿ ಒಂದಿಷ್ಟು ಸತು ದೊರೆಯುತ್ತದೆ. ಜೊತೆಗೆ, ರಾಜ್ಮ, ಕಡಲೆ ಕಾಳು, ಓಟ್, ಚಿಕನ್ ಮುಂತಾದ ಹಲವು ರೀತಿಯ ಆಹಾರಗಳಿಂದ ಅಲ್ಪ ಪ್ರಮಾಣದಲ್ಲಿ ಜಿಂಕ್ ದೊರೆಯುತ್ತದೆ. ಹಾಗಾಗಿ ಎಲ್ಲ ರೀತಿಯ ಆಹಾರಗಳನ್ನೂ ಸಮತೋಲನದಲ್ಲಿ ಸೇವಿಸಿದರೆ ಪೌಷ್ಟಿಕಾಂಶಗಳ ಕೊರತೆ ಕಾಡದು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ