Site icon Vistara News

Karnataka Weather : ಮುಂದಿನ 3 ದಿನ ಏರುತ್ತೆ ಟೆಂಪ್ರೇಚರು

Karnataka Weather

ಬೆಂಗಳೂರು: ಬಿಸಿಲಿನ ಶಾಖಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಬರಿಗಾಲಿನಲ್ಲಿ ಏನಾದರೂ ಹೊರಗೆ ಕಾಲಿಟ್ಟರೆ ಸುಟ್ಟು ಹೋಗುವುದು ಗ್ಯಾರಂಟಿ. ಮುಂದಿನ ಮೂರು ದಿನಗಳು ತಾಪಮಾನ ಏರಿಕೆ (Temperature rising) ಆಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ. ಇದರೊಟ್ಟಿಗೆ ಹೀಟ್‌ ವೇವ್‌ (Heat Wave Warning) ಎಚ್ಚರಿಕೆಯನ್ನು ನೀಡಲಾಗಿದೆ.

ಮುಂದಿನ 48 ಗಂಟೆಯಲ್ಲಿ ರಾಜ್ಯಾದ್ಯಂತ ಒಣಹವೆ (Dry Weather) ಇರುವ ಸಾಧ್ಯತೆ ಇದೆ. ಮುಂದಿನ ಮೂರು ದಿನಗಳು ಒಳನಾಡಿನ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು 2-3 ಡಿ.ಸೆ ಹೆಚ್ಚಾಗುವ ಸಾಧ್ಯತೆ ಇದೆ. ಜತೆಗೆ ಮುಂದಿನ 2 ದಿನಗಳಲ್ಲಿ ಉತ್ತರ ಒಳನಾಡಿನ ಕಲಬುರಗಿ, ಬಾಗಲಕೋಟೆ, ರಾಯಚೂರು, ವಿಜಯಪುರ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಉಷ್ಣ ಅಲೆ ಪರಿಸ್ಥಿತಿ ಇರಲಿದೆ.

ರಾಜಧಾನಿ ಬೆಂಗಳೂರಲ್ಲಿ ನಿರ್ಮಲ ಆಕಾಶ ಇರಲಿದೆ. ಗರಿಷ್ಠ ಉಷ್ಣಾಂಶವು 36 ಹಾಗೂ ಕನಿಷ್ಠ ಉಷ್ಣಾಂಶವು 22 ಡಿ.ಸೆ ಇರಲಿದೆ. ಇದರಿಂದ ಬಿಸಿಲ ಧಗೆ ಹೆಚ್ಚಿರಲಿದೆ.

ಕಾದ ಕೆಂಡವಾಗುತ್ತಿದೆ ಉತ್ತರ ಕರ್ನಾಟಕ

ಕರ್ನಾಟಕದಲ್ಲಿ ಒಣ ಹವೆ ಮುಂದುವರಿದಿದ್ದು, ಗರಿಷ್ಠ ಉಷ್ಣಾಂಶವು ಕಲಬುರಗಿಯಲ್ಲಿ 40.9 ಡಿ.ಸೆ ದಾಖಲಾಗಿತ್ತು. ಚಾಮರಾಜನಗರದಲ್ಲಿ ಕನಿಷ್ಠ ಉಷ್ಣಾಂಶವು 19.5 ಡಿ.ಸೆ ನಷ್ಟು ದಾಟಿತ್ತು. ಕೋಲಾರ ಜಿಲ್ಲೆಯಲ್ಲಿ ಸರಾಸರಿ ಕನಿಷ್ಠ ಉಷ್ಣಾಂಶ 18.0 ಡಿ.ಸೆ ಹಾಗೂ ರಾಯಚೂರಿನಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 41.9 ಡಿ.ಸೆ ದಾಖಲಾಗಿದೆ.

ಕೋಲಾರ, ಹಾಸನ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್‌ನಿಂದ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್, ಬಾಗಲಕೋಟೆ ಮತ್ತು ಬಳ್ಳಾರಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ 42 ಡಿಗ್ರಿ ಸೆಲ್ಸಿಯಸ್‌ನಿಂದ 44 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಇದನ್ನೂ ಓದಿ: Karnataka Weather: 28 ವರ್ಷಗಳ ಬಳಿಕ ಬೆಂಗಳೂರಲ್ಲಿ ದಾಖಲೆಯ ತಾಪಮಾನ; ಇನ್ನೊಂದು ವಾರ ಕಾದ ಕೆಂಡ

ಸಮ್ಮರ್‌ ಸೀಸನ್‌ನಲ್ಲಿ ಬದಲಾಯ್ತು ನೇಲ್‌ ಕಲರ್ಸ್‌ ಟ್ರೆಂಡ್‌


ಬೇಸಿಗೆ ಬಂದಾಯ್ತು, ಇನ್ನೇನಿದ್ದರೂ ಲೈಟ್‌ ಹಾಗೂ ಬ್ರೈಟ್‌ ನೇಲ್‌ ಕಲರ್‌ಗಳ ಹಾವಳಿ. ಯಾವ ಫ್ಯಾಷನ್‌ ಪ್ರಿಯ ಹೆಣ್ಮಕ್ಕಳನ್ನು ನೋಡಿದರೂ ಸಾಕು, ಟ್ರೆಂಡಿಯಾಗಿರುವ ನೇಲ್‌ ಕಲರ್‌ ಹಾಗೂ ಶೇಡ್‌ಗಳನ್ನು ಹಚ್ಚಿರುವ ಉಗುರುಗಳು ಮನ ಸೆಳೆಯುತ್ತವೆ. ಆ ಮಟ್ಟಿಗೆ ಈ ಬಾರಿ ಭಿನ್ನ-ವಿಭಿನ್ನ ಮಾನೋಕ್ರೋಮಾಟಿಕ್‌ ಶೇಡ್‌ಗಳು ಹಾಗೂ ಲೈಟ್‌ ವರ್ಣಗಳು ಬ್ಯೂಟಿ ಲೋಕಕ್ಕೆ ಕಾಲಿಟ್ಟಿವೆ.

ಟ್ರೆಂಡ್‌ನಲ್ಲಿ ಕಾಲಿಟ್ಟ ನೇಲ್‌ ಬಣ್ಣಗಳು

ನನಗೆ ಅತಿಯಾಗಿರುವ ನೇಲ್‌ ಡಿಸೈನ್‌ ಬೇಡ. ನೋಡಲು ಆಕರ್ಷಕವಾಗಿ ಕಾಣಬೇಕು ಹಾಗೂ ಸಿಂಪಲ್ಲಾಗಿರಬೇಕು ಎನ್ನುವವರಿಗೆ ಈ ಸೀಸನ್‌ನ ಸಾಕಷ್ಟು ನೇಲ್‌ ಕಲರ್‌ಗಳು ಹೊಂದುತ್ತವೆ ಎನ್ನುವ ನೇಲ್‌ ಆರ್ಟಿಸ್ಟ್‌ ರಿಚಾ ಪ್ರಕಾರ, ಇವು ಡಿಫರೆಂಟ್‌ ಆಗಿ ಹಚ್ಚಿದಲ್ಲಿ ಮೋಡಲು ವಿಭಿನ್ನವಾಗಿ ಕಾಣುತ್ತವೆ. ಇದಕ್ಕೆ ಉದಾಹರಣೆ ಮಾನೋಕ್ರೋಮ್ಯಾಟಿಕ್‌ ನೇಲ್‌ ಡಿಸೈನ್‌ ಎನ್ನುತ್ತಾರೆ.

ಕಲರ್‌ಫುಲ್‌ ನೇಲ್‌ ಶೇಡ್ಸ್

ಸಾವಿರಗಟ್ಟಲೇ ಕೊಟ್ಟು ನೇಲ್‌ ಆರ್ಟ್ ಮಾಡಿಸಲು ಸಾಧ್ಯವಾಗದು ಎನ್ನುವವರಿಗೆ ಈ ನೇಲ್‌ ಶೇಡ್ಸ್ ಹೊಸ ಲುಕ್‌ ನೀಡುತ್ತವೆ ಎನ್ನಬಹುದು. ಹಚ್ಚುವವರ ಕ್ರಿಯಾತ್ಮಕತೆ ಮೇಲೆ ಡಿಪೆಂಡ್‌ ಆಗುತ್ತದೆ ಎನ್ನುತ್ತಾರೆ ನೇಲ್‌ ಆರ್ಟ್ ಡಿಸೈನರ್‌. ಇನ್ನು ಇದೀಗ ಒಂದೊಂದು ಉಗುರುಗಳಿಗೂ ಒಂದೊಂದು ಬಗೆಯ ಬಣ್ಣ ಹಚ್ಚುವುದು ಕೂಡ ಫ್ಯಾಷನ್‌ ಆಗಿದೆ. ಇದರೊಂದಿಗೆ ಇದೀಗ ಈ ಬಣ್ಣಗಳನ್ನು ಅಡ್ಡಡ್ಡ, ಉದ್ದುದ್ದವಾಗಿ ಹಚ್ಚುವ ಫ್ಯಾಷನ್‌ ಕೂಡ ಆರಂಭವಾಗಿದೆಯಂತೆ ಎನ್ನುತ್ತಾರೆ. ಇನ್ನು ಯಾವುದೇ ನೇಲ್‌ ವರ್ಣಗಳು ಚೆನ್ನಾಗಿ ಕಾಣಬೇಕೆಂದಲ್ಲಿ ಒಂದಿಷ್ಟು ಸಲಹೆಗಳನ್ನು ಪಾಲಿಸಲೇಬೇಕು ಎಂಬುದು ಬ್ಯೂಟಿ ಎಕ್ಸ್ಪಟ್ರ್ಸ್ ಅಭಿಪ್ರಾಯ. ಇದಕ್ಕಾಗಿ ಉಗುರುಗಳಿಗೆ ಆಕಾರ ನೀಡುವುದು ಅಗತ್ಯ ಎನ್ನುತ್ತಾರೆ.

ಮರೆಯಾದ ನೇಲ್‌ ಶೇಡ್ಸ್‌

ಬೋಲ್ಡ್‌ ಕಲರ್‌ಗಳಾದ ಬರ್ಗ್ಯಾಂಡಿ, ರೆಡ್‌ವೈನ್‌, ಶೇಡಿ ಬ್ಲಾಕ್‌, ಗೋಲ್ಡನ್‌ ಟ್ರೆಂಡಿ ಕಲರ್‌ಗಳು ಕಳೆದ ಸಾಲಿಗೆ ಕೊನೆಯಾಗಿವೆ. ಆದರೆ, ಮೆಟಾಲಿಕ್‌ ಕಲರ್ಸ್‌ ಈ ಸೀಸನ್‌ನ ನೇಲ್‌ ಫ್ಯಾಷನ್‌ನಲ್ಲಿಮಾತ್ರವಲ್ಲ, ಈ ಸಾಲಿಗೂ ಮುಂದುವರೆದಿವೆ. ನೀಲಿ, ಹಸಿರು, ಗೋಲ್ಡ್‌, ಸಿಲ್ವರ್‌ ಕಲರ್‌ಗಳು ಕಾಂಟ್ರಾಸ್ಟ್‌ ಮ್ಯಾಚ್‌ನೊಂದಿಗೆ ಮುಂದುವರೆದಿವೆ ಎನ್ನುತ್ತಾರೆ ನೇಲ್‌ ಆರ್ಟ್ ಡಿಸೈನರ್‌ ರಕ್ಷಾ.

ನೇಲ್‌ ಕಲರ್ಸ್ ಪ್ರಿಯರಿಗೆ ಟಿಪ್ಸ್‌

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version