Site icon Vistara News

Karnataka Weather : ಕರಾವಳಿ, ಮಲೆನಾಡಲ್ಲಿ ಗುಡುಗು, ಮಿಂಚು; ಒಳನಾಡಿನಲ್ಲಿ ಸಾಧಾರಣ ಮಳೆ

karnataka weather Forecast

ಬೆಂಗಳೂರು: ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಮಧ್ಯಮ ಮಳೆಯಾಗುವ (Rain News) ಸಾಧ್ಯತೆಯಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಮಳೆ ಇರಲಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು, ಮಿಂಚು ಸಹಿತ ಗಂಟೆಗೆ 30-40 ಕಿ.ಮೀ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ (karnataka weather Forecast) ಮುನ್ಸೂಚನೆಯನ್ನು ನೀಡಿದೆ.

ದಕ್ಷಿಣ ಒಳನಾಡಿನ ರಾಮನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಬಹುದು. ಬೆಂಗಳೂರು ನಗರ ಮತ್ತು ತುಮಕೂರಿನಲ್ಲಿ ಚದುರಿದಂತೆ ಮಳೆಯಾಗುವ ನಿರೀಕ್ಷೆ ಇದೆ. ಉಳಿದ ಭಾಗಗಳಲ್ಲಿ ಒಣ ಹವೆ ಇರಲಿದೆ.

ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ.

ಮಲೆನಾಡಿನ ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾದರೆ, ಕರಾವಳಿಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ಮಳೆಯು ಅಬ್ಬರಿಸಲಿದೆ. ಇನ್ನೂ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 31 ಡಿಗ್ರಿ ಸೆಲ್ಸಿಯಸ್ ಮತ್ತು 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನೂ ಓದಿ: Constable Death : ಹುಬ್ಬಳ್ಳಿಯಲ್ಲಿ ರೈಲಿಗೆ ತಲೆ ಕೊಟ್ಟ ಕಾನ್ಸ್‌ಟೇಬಲ್‌; ಆತ್ಮಹತ್ಯೆಗೆ ಕಾರಣ ಇನ್ನೂ ನಿಗೂಢ

ಬಾಯಿಯ ಎಲ್ಲ ಸಮಸ್ಯೆಗಳಿಗೂ ಮೌತ್‌ವಾಷ್‌ ಪರಿಹಾರವೆ?

ಜಾಹೀರಾತುಗಳನ್ನು ನೋಡಿ ಮರುಳಾಗುವುದು, ಅದನ್ನೇ ಅನುಸರಿಸುವುದು ಹೊಸದೇನಲ್ಲ. ಉದಾಹರಣೆಗೆ ಹೇಳುವುದಾದರೆ, ಯಾವುದೋ ಟೂತ್‌ಪೇಸ್ಟ್‌ ಉಪಯೋಗಿಸಿದರೆ ಹಲ್ಲುಗಳೆಲ್ಲ ಫಳಫಳಿಸಿ, ಉಸಿರು ತಾಜಾ ಆಗುತ್ತದೆ ಎಂದಿದ್ದರೆ, ಅದು ಸತ್ಯ ಎಂದು ಭಾವಿಸಿಯೇ ನಾವು ಉಪಯೋಗಿಸುತ್ತೇವೆ. ಮೌತ್‌ವಾಷ್‌ ಸಹ ಅದೇ ಸಾಲಿಗೆ ಸೇರುವಂಥದ್ದು. ಯಾವುದೇ ಮನೆಯ ಬಾತ್‌ರೂಂಗಳಲ್ಲಿ ಅದೀಗ ಖಾಯಂ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಬಣ್ಣದ ಬಾಟಲಿಗಳ ಮೇಲಿನ ಮೋಹವನ್ನೋ ಅಥವಾ ಜಾಹೀರಾತುಗಳ ಭರವಸೆಯನ್ನೋ ಒಂದೆಡೆ ಇಟ್ಟು, ಮೌತ್‌ವಾಷ್‌ (Mouthwashes) ಬಳಕೆ ಇತಿ-ಮಿತಿಗಳೇನು ಎಂಬುದನ್ನು ಅರ್ಥ ಮಾಡಿಕೊಳ್ಳೋಣ.

ದುರ್ಗಂಧ ದೂರ

ಬಾಯಿಯ ದುರ್ಗಂಧ ಎಷ್ಟೋ ಸಂದರ್ಭಗಳಲ್ಲಿ ಮುಜುಗರ ತರುವಂತಹದ್ದು. ಸಾಮಾಜಿಕ, ವೈಯಕ್ತಿಕ ಅಥವಾ ವೃತ್ತಿಯ ಸಂದರ್ಭಗಗಳಲ್ಲಿ ಇದನ್ನು ನಿಭಾಯಿಸುವುದು ಕಷ್ಟವಾಗಬಹುದು. ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು, ಜೀರ್ಣಾಂಗಗಳ ಆರೋಗ್ಯ ನಿಭಾಯಿಸುವುದು, ಆಗಾಗ ನೀರು ಕುಡಿಯುವುದು- ಇಂಥವೆಲ್ಲ ಬಾಯಿಯ ದುರ್ಗಂಧ ನಿವಾರಣೆಯಲ್ಲಿ ಮುಖ್ಯವಾದವು. ಜೊತೆಗೆ ಮೌತ್‌ವಾಷ್‌ ಬಳಕೆ ಸಹ ಈ ಸಮಸ್ಯೆಗೆ ಸಮರ್ಥ ಪರಿಹಾರವನ್ನು ಒದಗಿಸಬಲ್ಲದು.

ಒಸಡಿನ ಸಮಸ್ಯೆ ದೂರ

ಕೆಲವು ಮೌತ್‌ವಾಷ್‌ಗಳು ಬ್ಯಾಕ್ಟೀರಿಯ ವಿರೋಧಿ ಸಾಮರ್ಥ್ಯವನ್ನು ಹೊಂದಿರುತ್ತವೆ. ಇಂಥವುಗಳ ನಿಯಮಿತ ಬಳಕೆಯಿಂದ ಒಸಡಿನ ಸೋಂಕುಗಳನ್ನು ಮಟ್ಟ ಹಾಕಬಹುದು. ಪ್ಲೇಕ್‌ಗಳು ನಿರ್ಮಾಣವಾಗಿ ಒಸಡಿನ ಆರೋಗ್ಯಕ್ಕೆ ಸವಾಲೊಡ್ಡುವ ಸಾಧ್ಯತೆ ಇರುತ್ತದೆ. ಇವುಗಳಿಗೂ ಕೆಲವು ಮೌತ್‌ವಾಷ್‌ಗಳು ಪರಿಹಾರ ಒದಗಿಸಬಲ್ಲವು.

ಉಪಯೋಗ ಸುಲಭ

ಮನೆಯಲ್ಲಿದ್ದರೂ, ಪ್ರಯಾಣದಲ್ಲಿದ್ದರೂ ಇವುಗಳನ್ನು ಕೊಂಡೊಯ್ಯುವುದು ಮತ್ತು ಬಳಸುವುದು ಸುಲಭ. ಫ್ಲೋಸಿಂಗ್‌ನಂಥ ಕ್ರಮಗಳು ಸಮಯ ಬೇಡುತ್ತವೆ. ಮಾತ್ರವಲ್ಲ, ವಿಮಾನದಲ್ಲಿ, ಟ್ರೇನ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಇದನ್ನು ಮಾಡಲೂ ಸಾಧ್ಯವಿಲ್ಲ. ಆದರೆ ಮೌತ್‌ವಾಷ್‌ ಬಳಕೆಗೆ ಅಂಥ ಯಾವುದೇ ಅಡೆ-ತಡೆಗಳಿಲ್ಲ; ಇದರ ಬಳಕೆ ಅತಿ ಸುಲಭ.

ಹೆಚ್ಚುವರಿ ರಕ್ಷಣೆ

ಫ್ಲೂರೈಡ್‌ ಹೊಂದಿರುವ ಮೌತ್‌ವಾಷ್‌ಗಳು ಬಾಯಿಯ ಆರೋಗ್ಯದ ವಿಚಾರದಲ್ಲಿ ಹೆಚ್ಚುವರಿ ರಕ್ಷಣೆಯನ್ನು ಒದಗಿಸುತ್ತವೆ. ದಂತಗಳ ಎನಾಮಲ್‌ ರಕ್ಷಣೆ ಮಾಡಿ, ಒಡಸುಗಳನ್ನು ಸುರಕ್ಷಿತವಾಗಿ ಇರಿಸಿ, ಹಲ್ಲುಗಳ ಬೇರನ್ನು ಭದ್ರ ಮಾಡುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ, ಹಲ್ಲುಗಳು ಹುಳುಕಾಗಿ, ಕುಳಿಯಾಗದಂತೆ ರಕ್ಷಣೆ ನೀಡುತ್ತವೆ. ಒಟ್ಟಾರೆಯಾಗಿ ಬಾಯಿಯ ಆರೋಗ್ಯಕ್ಕೆ ಇದೊಂದು ಒಳ್ಳೆಯ ಆಯ್ಕೆ.

ಮಿತಿಗಳಿಲ್ಲವೇ?

ಹಾಗೆಂದು ಮೌತ್‌ವಾಷ್‌ ಬಳಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲವೇ? ಅದನ್ನು ಬಳಸಿದಾಗ ಆಗುವುದೆಲ್ಲ ಒಳ್ಳೆಯದು ಎಂದು ತೀರ್ಮಾನಿಸಲು ಸಾಧ್ಯವೇ? ಎಂದು ಕೇಳಿದರೆ, ಹಾಗೇನಿಲ್ಲ. ಅದರಲ್ಲೂ ಸಮಸ್ಯೆಗಳು ಇಲ್ಲದಿಲ್ಲ. ಬಾಯಿಯ ಸರ್ವರೋಗಗಳಿಗೆ ಇದೊಂದೇ ಮದ್ದು ಎಂದು ಖಂಡಿತಕ್ಕೂ ಭಾವಿಸುವಂತಿಲ್ಲ. ಹಾಗಾದರೆ ಮೌತ್‌ವಾಷ್‌ ಬಳಸುವುದರಲ್ಲಿ ಇರುವಂಥ ಸಮಸ್ಯೆಗಳೇನು? ಯಾವುದರ ಬಗ್ಗೆ ಗಮನ ನೀಡಬೇಕು ಇದನ್ನು ಬಳಸುವಾಗ?

ಆಲ್ಕೋಹಾಲ್‌ ಕಿರಿಕಿರಿ

ಬಹಳಷ್ಟು ಮೌತ್‌ವಾಷ್‌ಗಳು ಆಲ್ಕೋಹಾಲ್‌ ಅಂಶವನ್ನು ಹೊಂದಿರುತ್ತವೆ. ಇದು ಬಾಯಿ ಒಣಗಿದಂತೆ ಮಾಡಿ, ಕಿರಿಕಿರಿ ಉಂಟುಮಾಡಬಹುದು. ದೀರ್ಘಕಾಲ ಇಂಥ ಮೌತ್‌ವಾಷ್‌ ಬಳಸುವುದರಿಂದ, ಈ ಸಮಸ್ಯೆಗಳು ಹೆಚ್ಚುತ್ತವೆ. ಹಾಗಾಗಿ ಸೂಕ್ಷ್ಮ ಒಸಡುಗಳು ಇರುವವರಿಗೆ ಮತ್ತು ಗರ್ಭಿಣಿಯರಿಗೆ ಆಲ್ಕೋಹಾಲ್‌ ಇಲ್ಲದಂಥ ಮೌತ್‌ವಾಷ್‌ ಬಳಕೆಯನ್ನು ವೈದ್ಯರು ಶಿಫಾರಸು ಮಾಡುತ್ತಾರೆ.

ಸಮಸ್ಯೆ ತಿಳಿಯದು

ಬಾಯಿಯ ದುರ್ಗಂಧದ ಸಮಸ್ಯೆಗಳನ್ನು ಮೌತ್‌ವಾಷ್‌ಗಳು ತಡೆಯುವುದು ಹೌದಾದರೂ ಅದು ತಾತ್ಕಾಲಿಕ. ಬಾಯಿಯ ದುರ್ಗಂಧಕ್ಕೆ ಮೂಲ ಕಾರಣವೇನು ಎಂಬುದನ್ನು ಹುಡುಕಿ, ಅದನ್ನು ಪರಿಹರಿಸಿಕೊಳ್ಳುವುದು ಮುಖ್ಯ. ಹಲ್ಲುಗಳು ಹುಳುಕಾಗಿವೆಯೇ ಅಥವಾ ಜೀರ್ಣಾಂಗಗಳ ಸಮಸ್ಯೆಯಿಂದ ಹೀಗಾಗುತ್ತಿದೆಯೇ- ಅಂತೂ ಕಾರಣವೇನು ಎಂಬುದನ್ನು ಪತ್ತೆ ಮಾಡುವುದು ಅಗತ್ಯ. ಹಾಗಾಗಿ ಸಮಸ್ಯೆಗಳನ್ನು ಮೌತ್‌ವಾಷ್‌ ತಾತ್ಕಾಲಿಕವಾಗಿ ಮಾತ್ರವೇ ನಿವಾರಣೆ ಮಾಡಬಲ್ಲದು.

ಬಿಡುವಂತಿಲ್ಲ

ಮೌತ್‌ವಾಷ್‌ಗಳ ಬಳಕೆಯ ನೆವದಿಂದ ನಿತ್ಯದ ಸ್ವಚ್ಛತೆಯ ಅಭ್ಯಾಸಗಳನ್ನು ಬಿಡುವಂತಿಲ್ಲ. ಅಂದರೆ ನಿಯಮಿತವಾಗಿ ಬ್ರಷ್‌ ಮಾಡುವುದು, ಫ್ಲೋಸ್‌ ಮಾಡುವುದು, ಊಟ-ತಿಂಡಿಯ ನಂತರ ಬಾಯಿಗೆ ನೀರು ಹಾಕಿ ಮುಕ್ಕಳಿಸುವುದು- ಇವೆಲ್ಲ ಅಗತ್ಯ ಅಭ್ಯಾಸಗಳು. ಎಂದೋ ಪ್ರಯಾಣದ ಸಂದರ್ಭದಲ್ಲಿ ಬ್ರಷ್‌ ಮಾಡುವುದಕ್ಕೆ ಅನುಕೂಲವಿಲ್ಲ ಎನ್ನುವಾಗ ಮಾತ್ರವೇ ಮೌತ್‌ವಾಷ್‌ ಬಳಕೆಯನ್ನು ಪರ್ಯಾಯ ಆಗಿಸಿಕೊಳ್ಳಬಹುದೇ ಹೊರತು, ಸದಾ ಅಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version