ಬೆಂಗಳೂರು: ಮುಂದಿನ 48 ಗಂಟೆಯಲ್ಲಿ ರಾಜ್ಯದಲ್ಲಿ ಒಣ ಹವೆ (Dry Weather) ಇರಲಿದೆ. ಕಳೆದ ಎರಡು ದಿನಗಳಿಂದ ಮಲೆನಾಡಿನ ಪ್ರತ್ಯೇಕ ಕಡೆಗಳಲ್ಲಿ ಮಳೆ ಸುರಿದಿತ್ತು. ಇದೀಗ ಮಳೆಯು (Rain News) ಮಾಯವಾಗಿದ್ದು, ತಾಪಮಾನ ಏರಿಕೆ ಆಗುವ ಮುನ್ಸೂಚನೆಯನ್ನು (Karnataka Weather Forecast) ನೀಡಲಾಗಿದೆ. ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಹಲವು ಭಾಗಗಳಲ್ಲಿ ಗರಿಷ್ಠ ಉಷ್ಣಾಂಶ ಹೆಚ್ಚಾಗಲಿದೆ.
ತಾಪಮಾನದ ಮುನ್ಸೂಚನೆ
ಒಳನಾಡಿನ ಕೆಲವು ಕಡೆಗಳಲ್ಲಿ ಅವುಗಳೆಂದರೆ ಬಾಗಲಕೋಟೆ, ಧಾರವಾಡ, ಗದಗ, ಕಲಬುರಗಿ ಹಾಗೂ ಕೊಪ್ಪಳ, ಬೆಂಗಳೂರು, ಹಾಸನ, ಕೋಲಾರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ.
ಇನ್ನೆರಡು ದಿನಗಳು ಬೆಂಗಳೂರು ಮಂಕು
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇನ್ನೆರಡು ದಿನಗಳು ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಗರಿಷ್ಠ ಉಷ್ಣಾಂಶ 35 ಇದ್ದರೆ ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇದನ್ನೂ ಓದಿ: Kidnap Case : ಜೂಜಿನ ಚಟಕ್ಕೆ ಬಿದ್ದು ಕಿಡ್ನ್ಯಾಪ್ ಆಟವಾಡಿದ ಯುವಕ
ಕಲಬುರಗಿಯಲ್ಲಿ ತಾಪಮಾನ ಹೆಚ್ಚಳ
ರಾಜ್ಯಾದ್ಯಂತ ಗುರುವಾರ ಒಣ ಹವೆ ಇತ್ತು. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಗರಿಷ್ಠ ಉಷ್ಣಾಂಶ 39.4 ಡಿ.ಸೆ ಕಲಬುರಗಿಯಲ್ಲಿ ದಾಖಲಾಗಿತ್ತು. ಅತೀ ಕನಿಷ್ಠ ಉಷ್ಣಾಂಶ 17.4 ಡಿ.ಸೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ದಾಖಲಾಗಿದೆ. ಚಿಕ್ಕಮಗಳೂರಲ್ಲಿ ಸರಾಸರಿ ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಯಾದಗಿರಿಯಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 40.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಹಾಸನ ಮತ್ತು ಉತ್ತರ ಕನ್ನಡ, ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಸಿಯಸ್‌ನಿಂದ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಹಾವೇರಿ, ರಾಯಚೂರು, ಯಾದಗಿರಿ, ಕಲಬುರಗಿಯ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ 42 ಡಿಗ್ರಿ ಸೆಲ್ಸಿಯಸ್‌ನಿಂದ 44 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ದಾಖಲಾಗಿತ್ತು.
Summer Fashion: ಬೇಸಿಗೆಗೆ ಬಂತು ವೈವಿಧ್ಯಮಯ ಕಾಟನ್ ವೆಸ್ಟರ್ನ್ ವೇರ್ಸ್ ಫ್ಯಾಷನ್!
ವೆಸ್ಟರ್ನ್ ಸ್ಟೈಲಿಂಗ್‌ಗೆ ಸಾಥ್ ನೀಡುವ ಕಾಟನ್ ಔಟ್‌ಫಿಟ್‌ಗಳು ಬೇಸಿಗೆಯ ಫ್ಯಾಷನ್‌ಗೆ (Summer Fashion) ಎಂಟ್ರಿ ನೀಡಿವೆ. ನೋಡಲು ಸಿಂಪಲ್ ಆಗಿರುವ ಈ ಔಟ್‌ಫಿಟ್‌ಗಳು ಕಾಲೇಜು ಹುಡುಗಿಯರಿಂದ ಹಿಡಿದು, ಉದ್ಯೋಗಸ್ಥ ಮಹಿಳೆಯರು ಧರಿಸಬಹುದಾದ ವೈವಿಧ್ಯಮಯ ಡಿಸೈನ್‌ಗಳಲ್ಲಿ ಆಗಮಿಸಿವೆ.
ಆರಾಮದಾಯಕ ಉಡುಪುಗಳಿವು
“ಸಮ್ಮರ್ ಸೀಸನ್‌ನಲ್ಲಿ ಭಾರಿ ಡಿಸೈನ್‌ನ ಎಥ್ನಿಕ್ ಉಡುಪುಗಳನ್ನು, ಪ್ರತಿದಿನ ಧರಿಸುವುದು ಹಾಗೂ ಕ್ಯಾರಿ ಮಾಡುವುದು ಅಸಾಧ್ಯ. ಅದರಲ್ಲೂ ಎರಡೆರಡು ಲೇಯರ್ ಇರುವಂತಹ ಉಡುಪುಗಳನ್ನು ಧರಿಸಿ, ಕೆಲಸ ಮಾಡುವುದು , ಕಾಲೇಜಿಗೆ ತೆರಳುವುದು ಉಸಿರುಗಟ್ಟಿಸುತ್ತದೆ. ಈ ಸೀಸನ್‌ಗೆ ಒಪ್ಪುವಂತಹ ತೀರಾ ಸಿಂಪಲ್ ಡಿಸೈನ್ ಹಾಗೂ ಗಾಳಿಯಾಡುವಂತಹ ಉಡುಪುಗಳನ್ನು ಧರಿಸುವಂತೆ ಮನ ಬಯಸುತ್ತದೆ. ಇಂತಹವರಿಗೆಂದೇ ಫ್ಯಾಷನ್ ಲೋಕವು ಕಾಟನ್ ಫ್ಯಾಬ್ರಿಕ್‌ನಲ್ಲಿ ವೆಸ್ಟರ್ನ್ ಸ್ಟೈಲ್‌ನ ಔಟ್‌ಫಿಟ್‌ಗಳನ್ನು ಬಿಡುಗಡೆಗೊಳಿಸಿದೆ. ಇವು ಗಾಳಿಯಾಡುವುದರೊಂದಿಗೆ ಆರಾಮದಾಯಕ ಎನಿಸುತ್ತವೆ” ಎನ್ನುತ್ತಾರೆ ಸ್ಟೈಲಿಸ್ಟ್ ಜೀವನ್. ಅವರ ಪ್ರಕಾರ, ಕಾಟನ್ ಫ್ಯಾಬ್ರಿಕ್‌ನಲ್ಲಿ ಊಹೆಗೂ ಮೀರಿದ ವೆಸ್ಟರ್ನ್ ಔಟ್‌ಫಿಟ್‌ಗಳು ಈ ಬಾರಿ ಕಾಲಿಟ್ಟಿವೆ ಎನ್ನುತ್ತಾರೆ.
ಟ್ರೆಂಡಿಯಾಗಿರುವ ಕಾಟನ್ ವೆಸ್ಟರ್ನ್ವೇರ್ಸ್
ಕಾಟನ್ ಕ್ರಾಪ್ ಟಾಪ್, ಶಾರ್ಟ್ ಅಸ್ಸೆಮ್ಮಿಟ್ರಿಕಲ್ ಶರ್ಟ್, ಟೀ ಶರ್ಟ್ ಶೈಲಿಯ ಟಾಪ್, ವಿ ನೆಕ್ ಟಾಪ್ಸ್, ಸ್ಲಿವ್‌ಲೆಸ್ ಟಾಪ್ಸ್, ಪೆಪ್ಲಮ್ ಶೈಲಿಯವು. ಸಾದಾ ವಿನ್ಯಾಸದ ಕೀ ಹೋಲ್ ಟಾಪ್ಸ್, ಮಲ್‌ಮಲ್ ಕಾಟನ್ ಟಾಪ್ಸ್, ಟ್ಯಾಂಕ್ ಟಾಪ್ಸ್, ಸ್ಕಟ್ರ್ಸ್, ಶಾಟ್ರ್ಸ್, ಡಿವೈಡರ್ಸ್, ಕೇಪ್ರೀಸ್. ಫ್ರಾಕ್ಸ್, ಮಿನಿ ಫ್ರಾಕ್ಸ್, ಮಿಡಿ, ಕೋ ಆರ್ಡ್ ಸೆಟ್ ಶಾಟ್ರ್ಸ್ ಸೇರಿದಂತೆ ನಾನಾ ಬಗೆಯ ಕಾಟನ್ ವೆಸ್ಟರ್ನ್ ವೇರ್‌ಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಅದರಲ್ಲೂ ಲೈಟ್ ಶೇಡ್‌ನವು, ಪಾಸ್ಟೆಲ್ ಕಲರ್‌ನವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪಟ್ರ್ಸ್.
ಮಿಕ್ಸ್ ಮ್ಯಾಚ್ ಮಾಡಿ ನೋಡಿ
ಒಂದೇ ರೀತಿಯ ಡ್ರೆಸ್ ಧರಿಸಿ ಬೋರಾಗಿದ್ದಲ್ಲಿ, ಕಾಟನ್ ಔಟ್‌ಫಿಟ್‌ಗಳನ್ನು ಮಿಕ್ಸ್ ಮಾಡಿಯೂ ಧರಿಸಬಹುದು. ಉದಾಹರಣೆಗೆ., ಶಾಟ್ರ್ಸ್ ಸ್ಕರ್ಟ್‌ಗೆ ಕ್ರಾಪ್ ಟಾಪ್, ಲಾಂಗ್ ಸ್ಕರ್ಟ್‌ಗೆ ಟ್ಯಾಂಕ್ ಕಾಟನ್ ಟಾಪ್, ಸ್ಲಿವ್‌ಲೆಸ್ ಟಾಪ್‌ಗೆ ಪ್ಯಾಂಟ್, ವಿ ನೆಕ್ ಟಾಪ್‌ಗೆ ಮಿಡಿ ಹೀಗೆ ನಾನಾ ಶೈಲಿಯಲ್ಲಿ ಮ್ಯಾಚ್ ಮಾಡಿ ಡಿಫರೆಂಟ್ ಲುಕ್ ನೀಡಬಹುದು.
ಕಾಟನ್ ವೆಸ್ಟರ್ನ್ ವೇರ್ಸ್ ಪ್ರಿಯರು ಗಮನಿಸಬೇಕಾದ್ದು
- ಕಾಟನ್ನಲ್ಲೆ ಹಲವು ಬಗೆಯವು ದೊರೆಯುತ್ತವೆ ಎಂಬುದು ತಿಳಿದಿರಲಿ.
- ಈ ಸೀಸನ್‌ನಲ್ಲಿ ಹೆಚ್ಚು ಬೆವರುವುದರಿಂದ ಆದಷ್ಟೂ ಈ ಡ್ರೆಸ್ಗಳೊಂದಿಗೆ ಕಡಿಮೆ ಆಕ್ಸೆಸರೀಸ್ ಧರಿಸಿ.
- ಔಟಿಂಗ್ಗೆ ಹೋಗುವಾಗ ಈ ಉಡುಪುಗಳು ಬೆಸ್ಟ್ ಸೆಲೆಕ್ಷನ್ ಎನ್ನಬಹುದು.
- ಕೊಳ್ಳುವಾಗ ನಿರ್ವಹಣೆಯ ಬಗ್ಗೆಯೂ ತಿಳಿದುಕೊಳ್ಳಿ.
- ಪಾಸ್ಟೆಲ್ ಶೇಡ್‌ನವು ಸೀಸನ್ ಟ್ರೆಂಡ್ನಲ್ಲಿವೆ ಎಂಬುದನ್ನು ಮರೆಯಬೇಡಿ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ