Site icon Vistara News

karnataka Weather : ದೂರ ಸರಿದ ಮಳೆ; ಬೆಂಗಳೂರಲ್ಲಿ 39ರ ಗಡಿದಾಟಲಿದೆ ಗರಿಷ್ಠ ಉಷ್ಣಾಂಶ! 15 ಜಿಲ್ಲೆಗಳಿಗೆ ಅಲರ್ಟ್‌

karnataka weather Forecast

ಬೆಂಗಳೂರು: ರಾಜ್ಯಾದ್ಯಂತ ಮಳೆಯು ದೂರ ಸರಿದಿದ್ದು, ಒಣಹವೆ (Karnataka Weather forecast) ಆವರಿಸಿದೆ. ರಾಜಧಾನಿ ಬೆಂಗಳೂರಲ್ಲಿ (temperature rising) ದಾಖಲೆಯ ಪ್ರಮಾಣದಲ್ಲಿ ಗರಿಷ್ಠ ಉಷ್ಣಾಂಶ ಏರಿಕೆ ಆಗುತ್ತಿದೆ. ಮಾರ್ಚ್‌ನಲ್ಲಿ ಹಳೆಯ ಎಲ್ಲ ದಾಖಲೆ ಮುರಿದಿದ್ದ ಬೆಂಗಳೂರಲ್ಲಿ ಇದೀಗ ಏಪ್ರಿಲ್‌ 28ರಂದು ಗರಿಷ್ಠ ಉಷ್ಣಾಂಶವು 39 ಡಿ.ಸೆಗೆ ಏರಿಕೆ ಆಗಲಿದೆ ಎಂದು ಹವಾಮಾನ ಇಲಾಖೆ (Bengaluru weather) ಮಾಹಿತಿ ನೀಡಿದೆ. ತಾಪಮಾನ (Bengaluru temperature) ಏರಿಕೆಯಿಂದ ಜನರು ಪರಿತಪಿಸುವಂತಾಗಿದೆ

ಕೂಲ್‌ ಸಿಟಿ (Cool city Bengaluru) ಎಂದು ಕರೆಸಿಕೊಳ್ಳುವ ಬೆಂಗಳೂರು ಹಾಟ್‌ ಸಿಟಿಯಾಗಿ (Bengaluru temperature) ಬದಲಾಗುತ್ತಿದೆ. ಬೆಂಗಳೂರಿನಲ್ಲೀಗ ದಾಖಲೆಯಲ್ಲಿ ಹೆಚ್ಚುತ್ತಿರುವ ತಾಪಮಾನದಿಂದ (Temperature Warning) ಸಿಟಿ ಜನರು ತತ್ತರಿಸಿ ಹೋಗಿದ್ದಾರೆ. ಬಿಸಿಲನಾಡು ಎಂದು ಕರೆಸಿಕೊಳ್ಳುವ ಉತ್ತರ ಒಳನಾಡಿನ ಜಿಲ್ಲೆಗಳಿಗೂ ರಾಜಧಾನಿ ಬೆಂಗಳೂರು ಅಕ್ಷರಶಃ ಸೆಡ್ಡು ಹೊಡೆಯುತ್ತಿದೆ.

ಮಾರ್ಚ್‌ ಬಳಿಕ ಏಪ್ರಿಲ್‌ ಮೊದಲ ವಾರದಲ್ಲೇ ಬೆಂಗಳೂರಿನಲ್ಲಿ ದಾಖಲೆಯ ಮಟ್ಟದಲ್ಲಿ ಗರಿಷ್ಠ ತಾಪಮಾನವು (Bengaluru heatwave) ದಾಖಲಾಗಿತ್ತು. ಇದೀಗ ಏಪ್ರಿಲ್‌ ಅಂತ್ಯದಲ್ಲೂ ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಹಗಲಿನಲ್ಲಿ ತಾಪಮಾನ 38 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ ಕಂಡಿದೆ. ಇದರಿಂದಾಗಿ ಬಿಸಿಲ ಬೇಗೆಗೆ ತೇವಾಂಶದ ಕೊರತೆಯಿಂದಾಗಿ ಒಣ ಹವೆ (Bengaluru heat) ಮುಂದುವರಿದಿದೆ. ಇಷ್ಟೊಂದು ತಾಪಮಾನದಲ್ಲಿ ಜನರು ತಿರುಗಾಡಿದರೆ ಖಂಡಿತವಾಗಿಯೂ ಅನಾರೋಗ್ಯಕ್ಕೆ ತುತ್ತಾಗಲಿದ್ದಾರೆ.

ಇದನ್ನೂ ಓದಿ: Home Remedy For Cracked Heels: ಒಡೆದ ಹಿಮ್ಮಡಿಗಳಿಗೆ ಕರ್ಪೂರದ ಎಣ್ಣೆ ಪರಿಣಾಮಕಾರಿ

ಹೀಟ್‌ ವೇವ್‌ ಶಾಕ್‌

ರಾಜ್ಯದಲ್ಲಿ ಏ.28ರಂದು ಒಣಹವೆ ಮುಂದುವರಿಯಲಿದೆ. ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹೀಟ್‌ ವೇವ್‌ ಹೆಚ್ಚಾಗಲಿದೆ. ಹೀಗಾಗಿ ಈ 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದ್ದು, ಮುನ್ನೆಚ್ಚರಿಕೆಯನ್ನು ವಹಿಸುವಂತೆ ಸೂಚಿಸಲಾಗಿದೆ. ಜತೆಗೆ ಮುಂದಿನ 5 ದಿನಗಳಲ್ಲಿ ರಾಜ್ಯದಲ್ಲಿ ಗರಿಷ್ಠ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗುವ ಸಾಧ್ಯತೆ ಇದೆ.

ಇನ್ನೂ ಶುಕ್ರವಾರದಂದು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಒಣಹವೆ ಇತ್ತು. ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 42.2 ಡಿ.ಸೆ ದಾಖಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version