Site icon Vistara News

Karnataka Weather: ಬೀದರ್‌ಗೆ ಮಳೆ ಅಲರ್ಟ್‌; ಕಾದ ಕೆಂಡವಾದ ಉತ್ತರ ಕರ್ನಾಟಕ

women enjoying in rain and dancing

ಬೆಂಗಳೂರು: ಉತ್ತರ ಕರ್ನಾಟಕವು (Dry Weather) ಈಗ ಕಾದ ಕೆಂಡವಾಗಿದೆ. ಹಗಲು ಬಿಸಿಲಿನ ಕಾಟವಾದರೆ, ರಾತ್ರಿ ಬಿಸಿ ಗಾಳಿಗೆ ಜನರು ಬೆವರುವಂತಾಗಿದೆ. ಈ ವಾತಾವರಣಕ್ಕೆ ಹಗಲಿರುಳು ಪರಿತಪ್ಪಿಸುವಂತಾಗಿದೆ. ಹಿಂಡಿ ಹಿಪ್ಪೆ ಮಾಡುತ್ತಿರುವ ಬಿಸಿಲು ಒಂದೆಡೆಯಾದರೆ ಕೆಲವೆಡೆ ಮಳೆಯು (Rain News) ತಂಪೆರೆಯಲಿದೆ. ಮುಂದಿನ 24 ಗಂಟೆಯಲ್ಲಿ ಶುಷ್ಕ ವಾತಾವರಣ ಇರಲಿದ್ದು, ಮಳೆ ಮುನ್ಸೂಚನೆಯನ್ನು ನೀಡಲಾಗಿದೆ. ಉತ್ತರ ಒಳನಾಡಿನ ಬೀದರ್ ಜಿಲ್ಲೆಯಲ್ಲಿ ಅತೀ ಕಡಿಮೆ ಮಳೆಯಾಗಲಿದೆ. ಉಳಿದ ಭಾಗಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.

ಬೆಂಗಳೂರಲ್ಲಿ 35ರ ಗಡಿದಾಟಿದ ತಾಪಮಾನ

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಬೆಂಗಳೂರಲ್ಲಿ ಕಳೆದ ಒಂದು ವಾರದಿಂದಲೂ ಗರಿಷ್ಟ ತಾಪಮಾನವು 35ರ ಗಡಿ ದಾಟಿದೆ. ಇಂದು ಗರಿಷ್ಠ ಉಷ್ಣಾಂಶ 35 ಮತ್ತು ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಮಂಡ್ಯ-ಮೈಸೂರಿನಲ್ಲೂ ಸೂರ್ಯನ ಪ್ರಖರತೆ

ಒಳನಾಡಿನ ಕೆಲವು ಕಡೆಗಳಲ್ಲಿ ತಾಪಮಾನ ಏರಿಕೆ ಆಗಲಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ ಹಾಗೂ ದಕ್ಷಿಣ ಒಳನಾಡಿನ ಬೆಂಗಳೂರು, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗುವ ಸಾಧ್ಯತೆಯಿದೆ.

ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.

ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌)
ಬೆಂಗಳೂರು ನಗರ: 35 ಡಿ.ಸೆ – 23 ಡಿ.ಸೆ
ಮಂಗಳೂರು: 35 ಡಿ.ಸೆ – 25 ಡಿ.ಸೆ
ಚಿತ್ರದುರ್ಗ: 36 ಡಿ.ಸೆ – 23 ಡಿ.ಸೆ
ಗದಗ: 37 ಡಿ.ಸೆ – 22 ಡಿ.ಸೆ
ಹೊನ್ನಾವರ: 34 ಡಿ.ಸೆ- 22 ಡಿ.ಸೆ
ಕಲಬುರಗಿ: 40 ಡಿ.ಸೆ – 26 ಡಿ.ಸೆ
ಬೆಳಗಾವಿ: 36 ಡಿ.ಸೆ – 19 ಡಿ.ಸೆ
ಕಾರವಾರ: 35 ಡಿ.ಸೆ – 22 ಡಿ.ಸೆ

ಇದನ್ನೂ ಓದಿ: Namma Metro: ಮೆಟ್ರೋ ಮಹಿಳಾ ಸಿಬ್ಬಂದಿಗೆ ಮೈ-ಕೈ ಮುಟ್ಟಿ ಕಿರಿಕಿರಿ; ಸಹಕರಿಸದೇ ಹೋದ್ರೆ ವರ್ಗಾವಣೆ ಬೆದರಿಕೆ

ಬೇಸಿಗೆ ಫ್ಯಾಷನ್‌ಗೆ ಲಗ್ಗೆ ಇಟ್ಟ ಬಣ್ಣಬಣ್ಣದ ಬೀಡ್ಸ್ ಬ್ರೇಸ್ಲೆಟ್ಸ್


ಬಣ್ಣಬಣ್ಣದ ಬೀಡ್ಸ್ ಬ್ರೇಸ್ಲೆಟ್ಸ್ (Beads Bracelet Fashion) ಬೇಸಿಗೆಯ ಆಕ್ಸೆಸರೀಸ್ ಫ್ಯಾಷನ್‌ನಲ್ಲಿ ಲಗ್ಗೆ ಇಟ್ಟಿವೆ. ಕೈಗಳಿಗೆ ಧರಿಸಿದಾಗ ಆಕರ್ಷಕವಾಗಿ ಕಾಣುವ ಇವು ಕ್ರಿಸ್ಟಲ್, ಜೆಮ್ ರಿಪ್ಲಿಕಾ ಬೀಡ್ಸ್‌ನೊಂದಿಗೆ ಸಮಾಗಮಗೊಂಡು ನಾನಾ ಡಿಸೈನ್‌ಗಳಲ್ಲಿ ದೊರೆಯುತ್ತಿವೆ. ವಯಸ್ಸಿನ ಭೇದವಿಲ್ಲದೇ ಹುಡುಗಿಯರ, ಯುವತಿಯರ ಹಾಗೂ ಮಹಿಳೆಯರ ಕೈಗಳನ್ನು ಅಲಂಕರಿಸುತ್ತಿವೆ.

ಟ್ರೆಂಡಿಯಾದ ಬೀಡ್ಸ್ ಬ್ರೇಸ್ಲೆಟ್ಸ್

“ಬೇಸಿಗೆ ಫ್ಯಾಷನ್‌ನಲ್ಲಿ ಆಕ್ಸೆಸರೀಸ್‌ಗಳು ಅತಿ ಹೆಚ್ಚು ಟ್ರೆಂಡಿಯಾಗಿವೆ. ಯಾವುದೇ ತಲೆಬಿಸಿಯಿಲ್ಲದೇ ಆರಾಮವಾಗಿ ಧರಿಸಬಹುದಾದ ಇವು ನಾನಾ ಕಲರ್‌ನಲ್ಲಿ ಕಾಲಿಟ್ಟಿವೆ. ನೋಡಲು ಆಕರ್ಷಕವಾಗಿ ಕಾಣುವ ಇವು ಒಂದೊಂದು ಬಗೆಯಲ್ಲಿ ದೊರೆಯುತ್ತಿರುವುದು ಹಾಗೂ ಉಡುಪಿನ ಮ್ಯಾಚಿಂಗ್‌ಗೆ ತಕ್ಕಂತೆ ಸಿಗುತ್ತಿರುವುದು ಟ್ರೆಂಡಿಯಾಗಲು ಕಾರಣವಾಗಿದೆ. ಯಾವುದೇ ಜಂಜಾಟವಿಲ್ಲದೇ, ಸುಲಭವಾಗಿ ಎಲಾಸ್ಟಿಕ್‌ನಲ್ಲಿ ಮಾಡಲ್ಪಟ್ಟಿರುವ ಈ ಬಣ್ಣಬಣ್ಣದ ಬೀಡ್ಸ್‌ಗಳನ್ನು ಯಾರಾದರೂ ಸುಲಭವಾಗಿ ಕೈಗಳಿಗೆ ಧರಿಸಬಹುದು. ಈ ಸೀಸನ್‌ನ ಆಕ್ಸೆಸರೀಸ್ ಫ್ಯಾಷನ್‌ನಲ್ಲಿ ಸದ್ಯಕ್ಕೆ ಟಾಪ್ ಫೈವ್ ಲಿಸ್ಟ್‌ನಲ್ಲಿವೆ” ಎನ್ನುತ್ತಾರೆ ಆಕ್ಸೆಸರೀಸ್ ಸ್ಟೈಲಿಸ್ಟ್ ರಾಗ. ಅವರ ಪ್ರಕಾರ, ಯಾವುದೇ ವಯಸ್ಸಿನವರು ಧರಿಸಬಹುದಾದ ಈ ಬೀಡ್ಸ್ ಬ್ರೇಸ್ಲೆಟ್‌ಗಳು ಎಥ್ನಿಕ್ ಉಡುಪುಗಳಿಗೆ ಮಾತ್ರವಲ್ಲ, ವೆಸ್ಟರ್ನ್ ಔಟ್‌ಫಿಟ್‌ಗಗೂ ಮ್ಯಾಚ್ ಆಗುತ್ತವೆ ಎನ್ನುತ್ತಾರೆ.

ಏನಿದು ಬೀಡ್ಸ್ ಬ್ರೇಸ್ಲೆಟ್ಸ್

ಬಣ್ಣ ಬಣ್ಣದ ಮಣಿಗಳಿಂದ ಮಾಡಲ್ಪಟ್ಟಿರುವ ಎಲಾಸ್ಟಿಕ್ ಇರುವಂತಹ ಬ್ರೇಸ್ಲೆಟ್‌ಗಳು. ಈ ಹಿಂದೆ ಇವು ಫ್ಯಾಷನ್‌ನಲ್ಲಿದ್ದಾಗ ಕೇವಲ ಕಾಲೇಜು ಹುಡುಗಿಯರು ಧರಿಸುತ್ತಿದ್ದರು. ಇಲ್ಲವೇ ಜಂಕ್ ಜ್ಯುವೆಲರಿ ಪ್ರೇಮಿಗಳು ಧರಿಸುತ್ತಿದ್ದರು. ಇದೀಗ ಇವು ನಾನಾ ಡಿಸೈನ್‌ಗಳಲ್ಲಿ ಅದರಲ್ಲೂ ಮಾನೋಕ್ರೋಮ್ ಹಾಗೂ ಮಿಕ್ಸ್ ಬೀಡ್ಸ್ ಶೇಡ್ಸ್‌ನಲ್ಲಿ ದೊರಕುತ್ತಿರುವುದು ಎಲ್ಲರೂ ಇಷ್ಟಪಡಲು ಕಾರಣವಾಗಿದೆ ಎನ್ನುತ್ತಾರೆ. ಗುಲಾಬಿ, ಲ್ಯಾವೆಂಡರ್, ತಿಳಿ ಕೆಂಪು, ಯೆಲ್ಲೋ, ಪಿಸ್ತಾ ಶೇಡ್, ಪೀಚ್, ಕೇಸರಿ, ಸಿಲ್ವರ್, ಗೋಲ್ಡ್ ಹೀಗೆ ಲೆಕ್ಕವಿಲ್ಲದಷ್ಟು ಕಲರ್‌ನಲ್ಲಿ ಇವು ದೊರಕುತ್ತಿವೆ. ಇವುಗಳ ಅಂಚಿನಲ್ಲಿ ನೇತಾಡುವ ಕಾಮಿಕ್ ಅಥವಾ ಕ್ರೌನ್‌ನಂತಹ ಮಿನಿ ಆಕ್ಸೆಸರೀಸ್‌ಗಳನ್ನು ಜೋಡಣೆ ಮಾಡಿರುವುದು ಹಾಗೂ ಮಿನುಗುವ ಕ್ರಿಸ್ಟಲ್ ಜೋಡಿಸಿರುವುದು ಈ ಬ್ರೇಸ್ಲೆಟ್‌ಗಳ ಸೌಂದರ್ಯಕ್ಕೆ ಕಾರಣವಾಗಿದೆ ಎನ್ನುತ್ತಾರೆ ಕಾಲೇಜಿನ ಹುಡುಗಿಯರಾದ ರಾಶಿ ಹಾಗೂ ರಿಚಾ.

ಬೀಡ್ಸ್ ಬ್ರೇಸ್ಲೆಟ್ ಡಿಟೇಲ್ಸ್

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version