ಬೆಂಗಳೂರು: ಮೇ 29 ರಂದು ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಕೂಡಿದ ಮಳೆಯಾಗುವ (Karnataka weather Forecast) ಸಾಧ್ಯತೆಯಿದೆ. ಮಲೆನಾಡು ಭಾಗದಲ್ಲಿ ಮಧ್ಯಮ ಮಳೆಯಾದರೆ, ಕರಾವಳಿಯಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗುವ (Heavy Rain alert) ಸಾಧ್ಯತೆ ಇದೆ. ಕೆಲವೆಡೆ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ (Rain News) ಸಾಧ್ಯತೆಯಿದೆ.
ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮಿಂಚು ಮತ್ತು 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.
ದಕ್ಷಿಣ ಒಳನಾಡಿನ ಬೆಂಗಳೂರು ನಗರದಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಕೋಲಾರ, ರಾಮನಗರ, ಮಂಡ್ಯ, ಮೈಸೂರು ಮತ್ತು ತುಮಕೂರಿನಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಉಳಿದೆಡೆ ಒಣಹವೆ ಇರಲಿದೆ.
ಉತ್ತರ ಒಳನಾಡಿನ ರಾಯಚೂರು, ಗದಗ, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರದಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಉಳಿದ ಭಾಗಗಳಲ್ಲಿ ಒಣ ಹವೆ ಮೇಲುಗೈ ಸಾಧಿಸಲಿದೆ.
ಮಲೆನಾಡಿನ ಹಾಸನ ಮತ್ತು ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಉಡುಪಿ, ಉತ್ತರ ಕನ್ನಡ ಚದುರಿದಂತೆ ಸಾಧಾರಣ ಮಳೆಯಾಗಲಿದೆ.
ಬೆಂಗಳೂರಲ್ಲಿ ಗುಡುಗು ಸಹಿತ ಮಳೆ
ರಾಜಧಾನಿ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 31 ಡಿಗ್ರಿ ಸೆಲ್ಸಿಯಸ್ ಮತ್ತು 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇದನ್ನೂ ಓದಿ: Love Case : ಪ್ರೀತಿಸಿದವಳೇ ಬೇಕೆಂದ ಪ್ರೇಮಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ರಾ ಯುವತಿ ಕುಟುಂಬಸ್ಥರು!
ಸೀಸನ್ ಎಂಡ್ ಫ್ಯಾಷನ್‌ಗೆ ಕಾಲಿಟ್ಟ ಸಮುದ್ರದ ಅಲೆ ಬಿಂಬಿಸುವ ವೆವಿ ಡ್ರೆಸ್!
ಇನ್ನೇನೂ ಸಮ್ಮರ್ ಸೀಸನ್ (Summer dress fashion) ಮುಗಿಯುವ ಹಂತದಲ್ಲಿದೆ. ಆಗಲೇ ವೆವಿ ಡ್ರೆಸ್‌ಗಳು ಎಂಟ್ರಿ ನೀಡಿವೆ. ಹೌದು. ನೋಡಿದಾಕ್ಷಣ ಮನೋಲ್ಲಾಸ ತುಂಬುವಂತಹ ಉತ್ಸಾಹ ಮೂಡಿಸುವ ಡಿಫರೆಂಟ್ ಲುಕ್ ನೀಡುವ ನಾನಾ ಶೇಡ್‌ನ ವೆವಿ ಡ್ರೆಸ್‌ಗಳು ಫ್ಯಾಷನ್ ಲೋಕಕ್ಕೆ ಕಾಲಿಟ್ಟಿವೆ.
ಏನಿದು ವೆವಿ ಡ್ರೆಸ್?
ಅರರೆ, ಏನಿದು ವೆವಿ ಡ್ರೆಸ್ ಎಂದು ಯೋಚಿಸುತ್ತಿದ್ದೀರಾ! ಹೆಸರೇ ಹೇಳುವಂತೆ, ಇವು ಬೀಚ್‌ನಲ್ಲಿ ಸಮುದ್ರದ ಅಲೆಗಳನ್ನು ಬಿಂಬಿಸುವಂತಹ ಪ್ರಿಂಟ್ಸ್ ಇರುವಂತಹ ಸಮ್ಮರ್ ಡ್ರೆಸ್‌ಗಳಿವು. ನೋಡಲು ಬೀಚ್ ಲುಕ್ ಪ್ಲಸ್ ಹಾಲಿ ಡೇ ಪಾರ್ಟಿ ಲುಕ್ ನೀಡುವಂತಹ ಉಡುಗೆಗಳಿವು. ಅಷ್ಟೇಕೆ! ಲಂಚ್-ಬ್ರಂಚ್ ಪಾರ್ಟಿಗಳಲ್ಲೂ ಕಾಣಬಹುದಾದ ಹೈ ಫ್ಯಾಷನ್ ಉಡುಪುಗಳಿವು. ಇವುಗಳ ಪ್ರಿಂಟ್ಸ್ ಅಲೆಗಳಂತೆ ಇರುವುದರಿಂದ ಇವನ್ನು ವೆವಿ ಡ್ರೆಸ್‌ಗಳೆಂದು ಕರೆಯಲಾಗುತ್ತದೆ. ನಾನಾ ಹೈ ಫ್ಯಾಷನ್ ಬ್ರಾಂಡ್‌ಗಳಲ್ಲಿ ಇವು ಬಿಡುಗಡೆಗೊಂಡಿವೆ. ಸೆಲೆಬ್ರೆಟಿಗಳು ಮಾತ್ರವಲ್ಲ, ಸ್ಟೈಲಿಶ್ ಹುಡುಗಿಯರನ್ನು ಸವಾರಿ ಮಾಡತೊಡಗಿವೆ ಎಂದು ವಿವರಿಸುತ್ತಾರೆ ಸ್ಟೈಲಿಸ್ಟ್‌ಗಳು.
ಶಾರ್ವರಿ ವೆವಿ ಡ್ರೆಸ್
ಬಾಲಿವುಡ್‌ನಲ್ಲಿ ಇನ್ನೂ ಅತಿ ಹೆಚ್ಚಾಗಿ ಕಂಡು ಬರದ ಉಡುಪುಗಳಲ್ಲಿ ಈ ವೆವಿ ಡ್ರೆಸ್ ಕೂಡ ಸೇರಿದೆ. ಯಾಕೆಂದರೇ, ಈ ಉಡುಪು ಈ ಜನರೇಷನ್ ನಟಿಯರ ಲಿಸ್ಟ್ನಲ್ಲಿದೆ. ಇದಕ್ಕೆ ಪೂರಕ ಎಂಬಂತೆ, ಬಾಲಿವುಡ್ ನಟಿ ಶಾರ್ವರಿ ಸಮುದ್ರದ ಅಲೆಗಳನ್ನು ನೆನಪಿಸುವ ಪಿಸ್ತಾ ಮಿಂಟ್ ಗ್ರೀನ್ ಶೇಡ್ ಮಿಕ್ಸ್ ಇರುವಂತಹ ವೆವಿ ಡ್ರೆಸ್‌ನಲ್ಲಿ ಕಾಣಿಸಿಕೊಂಡು ಫ್ಯಾಷನ್ ಲೋಕದಲ್ಲಿ ಟ್ರೆಂಡ್ ಸೆಟ್ ಮಾಡಿದ್ದಾರೆ. ಸದ್ಯ, ಇತರೇ ಯಾವುದೇ ನಟಿಯರು ಪ್ರಯೋಗಿಸದ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡಿರುವ ಹೆಗ್ಗಳಿಕೆ ಇವರದು. ವೆವಿ ಡ್ರೆಸ್‌ನಂತಹ ಸಮ್ಮರ್ ಡ್ರೆಸ್ ಇದೆಯಾ! ಒಮ್ಮೆ ನಾವು ಕೂಡ ಧರಿಸೋಣಾ! ಎಂಬ ಟೀನೇಜ್ ಹುಡುಗಿಯರ ಫ್ಯಾಷನ್ ಚಾಯ್ಸ್‌ಗೆ ಹೊಸ ಶೇಡ್‌ಗಳು ಆಕರ್ಷಿಸುತ್ತಿವೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕಿ ಜಿಯಾ. ಅವರ ಪ್ರಕಾರ, ವೆವಿ ಡ್ರೆಸ್‌ಗಳು ಯಂಗ್ ಲುಕ್ ನೀಡುತ್ತವಂತೆ. ಹಾಗಾಗಿ ಆನ್‌ಲೈನ್‌ನಲ್ಲಿ ಇದೀಗ ಇವುಗಳ ಖರೀದಿ ಹೆಚ್ಚಾಗಿದೆ ಎನ್ನುತ್ತಾರೆ.
ವೆವಿ ಡ್ರೆಸ್‌ಗಳ ಟ್ರೆಂಡ್
ಸಾಗರ ಹಾಗೂ ಸಮುದ್ರ ಅಲೆಗಳ ನ್ಯಾಚುರಲ್ ಶೇಡ್ಸ್, ಪೀಚ್ ಹಾಗೂ ಕೇಸರಿ ಶೇಡ್‌ಗಳ ನೈಜವೆನಿಸದ ಪ್ರಿಂಟ್ಸ್‌ನ ವೆವಿ ಡ್ರೆಸ್‌ಗಳು, ಅಸ್ಸೆಮ್ಮಿಟ್ರಿಕಲ್ ವೆವಿ ಡ್ರೆಸ್‌ಗಳು ಅದರಲ್ಲೂ, ವೈಟ್ & ಸೀ ಬ್ಲ್ಯೂ , ರಾಯಲ್ ಬ್ಲ್ಯೂ ವೆವಿ ಡ್ರೆಸ್‌ಗಳು ಅತಿ ಹೆಚ್ಚಾಗಿ ಬೇಡಿಕೆ ಪಡೆದುಕೊಂಡಿವೆ.
- ಸಮ್ಮರ್ ಪಾರ್ಟಿಗೆ ಹಾಗೂ ಔಟಿಂಗ್ಗೆ ಮ್ಯಾಚ್ ಆಗುತ್ತವೆ.
- ಹೆಚ್ಚು ಆಕ್ಸೆಸರೀಸ್ ಧರಿಸುವ ಅಗತ್ಯವಿಲ್ಲ.
- ಮಿನಿಮಲ್ ಮೇಕಪ್ ಆಕರ್ಷಕವಾಗಿ ಕಾಣಿಸುತ್ತದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ