Site icon Vistara News

Karnataka Weather : ನಾಲ್ಕು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌; ಹಗುರ ಮಳೆ ಸಾಧ್ಯತೆ

Karnataka Weather

ಬೆಂಗಳೂರು: ರಾಜ್ಯಾದ್ಯಂತ ಶುಷ್ಕ ವಾತಾವರಣ (Dry Weather) ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (karnataka Weather Forecast) ನೀಡಿದೆ. ಇದರ ಜತೆ ಜತೆಗೆ ಮಲೆನಾಡಿನ ಕೊಡಗು ಮತ್ತು ಉತ್ತರ ಒಳನಾಡಿನ ಬೆಳಗಾವಿಯಲ್ಲಿ ಪ್ರತ್ಯೇಕವಾಗಿ ಹಗುರದಿಂದ ಮಳೆಯಾಗುವ (Rain News) ಸಾಧ್ಯತೆಯಿದೆ.

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಒಳನಾಡಿನ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಸೇರಿ ಉತ್ತರಒಳನಾಡಿನ ಹಾವೇರಿಯಲ್ಲಿ ಪ್ರತ್ಯೇಕವಾಗಿ ಭಾಗಶಃ ಮೋಡ ಕವಿದ ವಾತಾವರಣವಿದೆ. ಕೆಲವೊಮ್ಮೆ ಸಾಧಾರಣದಿಂದ ಮಳೆಯಾಗುವ ಸಾಧ್ಯತೆ ಇದೆ. ವಿಜಯಪುರ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.

ಹೀಟ್‌ ವೇವ್‌

ಮುಂದಿನ 3 ದಿನಗಳಲ್ಲಿ ಉತ್ತರ ಒಳನಾಡಿನ ಕಲಬುರಗಿ, ಬಾಗಲಕೋಟೆ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಶಾಖ ತರಂಗ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಜತೆಗೆ ಕರ್ನಾಟಕದ ದಕ್ಷಿಣ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಗರಿಷ್ಠ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ. ಹಾಗೇ ಉತ್ತರ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಗರಿಷ್ಠ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ

ಯೆಲ್ಲೋ ಅಲರ್ಟ್: ಬಾಗಲಕೋಟೆ, ಕಲಬುರಗಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ಇದನ್ನೂ ಓದಿ: Namma Metro: ಅಡಚಡಣೆಗಾಗಿ ಕ್ಷಮಿಸಿ; ಮೆಟ್ರೋ ಕಾಮಗಾರಿಗಾಗಿ ಈ ರೂಟ್‌ನಲ್ಲಿ 1 ವರ್ಷ ವಾಹನ ಓಡಾಟವಿಲ್ಲ

Drink Water In Summer: ಬೇಸಿಗೆಯಲ್ಲಿ ನೀರು ಎಷ್ಟು ಮತ್ತು ಹೇಗೆ ಕುಡಿಯಬೇಕೆನ್ನುವುದು ತಿಳಿದಿರಲಿ

ಬೇಸಿಗೆ ಬಂದಿದೆ. ಜ್ಯೂಸು, ನೀರು, ಎಳನೀರು, ಬಗೆಬಗೆಯ ಆಕರ್ಷಕ ತಣ್ಣಗಿನ ದ್ರವಾಹಾರಗಳು ನಮ್ಮನ್ನು ಸೆಳೆಯುತ್ತವೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಟ್ಟಿರಲು, ದೇಹಕ್ಕೆ ಸರಿಯಾದ ನೀರು ಪೂರೈಕೆ ಮಾಡಲು, ಹೆಚ್ಚಿನ ದ್ರವಾಹಾರ ಸೇವನೆ ಅಗತ್ಯವಾದರೂ, ನಾವು ಏನನ್ನು ಹೇಗೆ, ಎಷ್ಟು ಕುಡಿಯುತ್ತೇವೆ ಎಂಬುದು ಬಹಳ ಮುಖ್ಯ. ನೀರನ್ನು ಕುಡಿಯುವುದರಲ್ಲಿಯೂ ಕೂಡಾ ಎಷ್ಟು ಹೇಗೆ ಕುಡಿಯಬೇಕು ಎಂಬ ಬಗ್ಗೆ ನಮಗೆ ತಿಳುವಳಿಕೆ ಬೇಕು. ಬನ್ನಿ, ಬೇಸಿಗೆಯಲ್ಲಿ ನೀರು ಹೇಘೆ ಎಷ್ಟು ಕುಡಿಯಬೇಕು (Drink Water In Summer) ಎಂಬಿತ್ಯಾದಿ ವಿವರಗಳನ್ನು ತಿಳಿಯೋಣ.

ನಿಮ್ಮಗೆಷ್ಟು ನೀರು ಬೇಕು ಎಂಬುದು ಗೊತ್ತಿರಲಿ

ದಿನಕ್ಕೆ ಆರರಿಂದ ಎಂಟು ಲೋಟ ನೀರು ಕುಡಿಯುವುದು ಅತ್ಯಂತ ಮುಖ್ಯ ಎಂದು ಸಾಮಾನ್ಯವಾಗಿ ಎಲ್ಲರೂ ನೀಡುವ ಸಲಹೆಯನ್ನು ನೀವು ಕೇಳಿರಬಹುದು. ಇದು ಸುಳ್ಳಲ್ಲ. ನಿಜವೇ. ಆದರೂ, ಪ್ರತಿಯೊಬ್ಬರ ನೀರಿನ ಅವಶ್ಯಕತೆಯೂ ಭಿನ್ನ. ನಿಮ್ಮ ಆರೋಗ್ಯ, ನಿಮ್ಮ ಲಿಂಗ, ಪರಿಸರ, ನೀವು ಮಾಡುವ ಕೆಲಸ, ಸೇರಿದಂತೆ ಬಹಳಷ್ಟು ವಿಚಾರಗಳು ನಿಮ್ಮ ನೀರಿನ ಅವಶ್ಯಕತೆಯ ಮೇಲೆ ಹೊಂದಿಕೊಂಡಿದೆ. ನಿಮ್ಮ ದೇಹ ಎಷ್ಟು ನೀರು ಬಯಸುತ್ತದೆಯೋ, ಅಷ್ಟು ನೀರನ್ನು ತಾನೇತಾನಾಗಿ ಅದು ಕೇಳುತ್ತದೆ. ಹಾಗಾಗಿ, ನೀರಿನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ದೇಹ ಬಯಸಿದಾಗ ನೀರು ಕುಡಿಯಿರಿ.

ಅತಿಯಾಗಿ ನೀರು ಕುಡಿಯಬೇಡಿ

ನೀರು ಎಷ್ಟು ಕುಡಿದರೂ ಒಳ್ಳೆಯದೇ ಎಂಬುದು ನಿಮ್ಮ ತಪ್ಪು ಅಭಿಪ್ರಾಯ. ಅತಿಯಾದ ನೀರೂ ಕೂಡಾ ದೇಹಕ್ಕೆ ಒಳ್ಳೆಯದಲ್ಲ. ಅತಿಯಾದ ನೀರಿನ ಸೇವನೆಯಿಂದ ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚು ದ್ರವ ದೇಹಕ್ಕೆ ಸೇರ್ಪಡೆಯಾಗುತ್ತದೆ. ಹೆಚ್ಚು ನೀರು ಕುಡಿಯುವುದರಿಂದ ದೇಹದ ರಕ್ತದ ಪರಿಮಾಣ ಹೆಚ್ಚಾಗುತ್ತದೆ. ಜೊತೆಗೆ ಕಿಡ್ನಿಯ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಹೆಚ್ಚಿನ ನೀರನ್ನು ಫಿಲ್ಟರ್‌ ಮಾಡಲು ಕಿಡ್ನಿ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ಅಗತ್ಯಕ್ಕಿಂತ ಹೆಚ್ಚು ನೀರು ಕುಡಿಯಬೇಡಿ. ಬಾಯಾರಿಕೆ ಆಗುವವರೆಗೆ ಕಾಯಬೇಡಿ: ಬಾಯಾರಿಕೆಯಾದಾಗ ಒಂದೇ ಉಸಿರಿನಲ್ಲಿ ಗಟಗಟನೆ ನೀರು ಕುಡಿಯುತ್ತೇವೆ. ಹೀಗೆ ಕುಡಿಯುವುದರಿಂದ ನೀರಿನ ಜೊತೆಗೆ ಗಾಳಿಯೂ ಹೆಚ್ಚು ದೇಹ ಸೇರುತ್ತದೆ. ಗ್ಯಾಸ್‌, ಹೊಟ್ಟೆ ಉಬ್ಬರಿಸುವುದು, ತಲೆನೋವು, ತಲೆಸುತ್ತುವುದು ಇತ್ಯಾದಿ ಸಮಸ್ಯೆಗಳಾಗುವ ಸಂಭವ ಇದೆ. ನಿಮಗೆ ಬಾಯಾರಿಕೆಯಾಗಿವ ಮೊದಲೇ ನೀರು ಕುಡಿಯಿರಿ.

ಹೊರಗಿದ್ದಾಗ ಹೆಚ್ಚು ಕುಡಿಯಿರಿ

ನೀವು ಮನೆಯಿಂದ ಹೊರಗೆ ಇದ್ದಾಗ, ಬಿಸಿಲಿನಲ್ಲಿದ್ದಾಗ ನೀರು ಕುಡಿಯಿರಿ. ಇದರಿಂದ ನಿರ್ಜಲೀಕರಣದ ಸಮಸ್ಯೆ ಬಾರದು. ನೀರು ಕುಡಿಯುವುದರಿಂದ ದೇಃಕ್ಕೆ ಮತತೆ ನೀರು ದೊರಕಿ, ದೇಹ ಸಮತೋಲನದಲ್ಲಿರುತ್ತದೆ. ಉಪ್ಪಿನ ಅಂಶ ಸಮತೋಲನಕ್ಕೆ ಬರುತ್ತದೆ. ಎಲೆಕ್ಟ್ರೋಲೈಟ್‌, ಎಳನೀರು, ನಿಂಬೆ ಪಾನಕ ಇತ್ಯಾದಿಗಳನ್ನು ಕುಡಿಯುವ ಮೂಲಕ ದೇಹವನ್ನು ಸದಾ ಹೈಡ್ರೇಟೆಡ್‌ ಆಗಿ ಇರಿಸಬಹುದು.

ಸರಿಯಾದ ದ್ರವಾಹಾರ ಸೇವಿಸಿ

ಕುಡಿಯುವ ವಿಚಾರಕ್ಕೆ ಬಂದಾಗ ಶಿಸ್ತನ್ನು ಪಾಲಿಸಿ. ಎಷ್ಟೋ ಬಗೆಯ ಮಾಕ್‌ಟೇಲ್‌ಗಳು, ಕಾಕ್‌ಟೇಲ್‌ಗಳು, ಬಗೆಬಗೆಯ ಆಕರ್ಷಕ ಜ್ಯೂಸ್‌ಗಳು ಎಲ್ಲವೂ ನೀರಿಗಿಂತ ಹೆಚ್ಚು ಆಕರ್ಷಕವಾಗಿ ಕಾಣಬಹುದಾದರೂ ದೇಹಕ್ಕೆ ನೀರೇ ಅತ್ಯುತ್ತಮ ದ್ರವಾಹಾರ ಆಯ್ಕೆ. ಕೋಲಾ, ಸೋಡಾ, ಐಸ್ಡ್‌ ಟೀ, ಕೋಲ್ಡ್‌ ಕಾಫಿ, ಚಿಲ್ಡ್‌ ಬೀರ್‌ ಇತ್ಯಾದಿಗಳು ತಕ್ಷಣಕ್ಕೆ ಹಾಯೆನಿಸಿದರೂ, ಒಳ್ಳೆಯ ದ್ರವಾಹಾರಗಳಲ್ಲ. ಹೆಚ್ಚು ಸಕ್ಕರೆ ಹಾಕಿದ ಇಂತಹ ದ್ರವಾಹಾರಗಳಿಂದಲೂ ನಿರ್ಜಲೀಕರಣದ ಸಮಸ್ಯೆ ಬರುವ ಸಂಭವ ಇವೆ!

ಕುಳಿತು ನೀರು ಕುಡಿಯಿರಿ

ಗಡಿಬಿಡಿಯಲ್ಲಿ ನೀರು ಕುಡಿಯುವುದಕ್ಕಿಂತ ಕುಳಿತು ನಿಧಾನವಾಗಿ ನೀರು ಕುಡಿಯುವುದು ಒಳ್ಳೆಯ ಕ್ರಮ. ನಮ್ಮ ದೇಹ ನೀರನ್ನು ಸಮರ್ಪಕವಾಗಿ ಬಳಸಬೇಕೆಂದರೆ ನಾವು ಕುಳಿತು ನೀರು ಕುಡಿಯಬೇಕು. ಇದರಿಂದ ನೀರು ರಕ್ತಕ್ಕೇ ಸೇರುವಾಗ ತೆಳುವಾಗುತ್ತದೆ, ಅಷ್ಟೇ ಅಲ್ಲ, ನೀರು ಅಂಗಾಂಶಗಳಿಗೆ ಸೇರಿ ಉರಿಯೂತದಂತಹ ಸಮಸ್ಯೆ ಬರುವ ಸಂಭವ ಹೆಚ್ಚು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ‌

Exit mobile version