ನವದೆಹಲಿ: ವಯಸ್ಸು ಕೇವಲ ಒಂದು ಸಂಖ್ಯೆ ಮಾತ್ರ ಎಂಬುದನ್ನು ಇದೀಗ 101 ವರ್ಷದ ಫ್ರೆಂಚ್ ಯೋಗ ಶಿಕ್ಷಕಿ (French Yoga Teacher) ಸಾಬೀತು ಪಡಿಸಿದ್ದಾರೆ. ವಯಸ್ಸಿನ ಮಿತಿ ನಿಯಮಗಳನ್ನು ಮೀರಿ ಸುಮಾರು ನಾಲ್ಕು ದಶಕಗಳ ಕಾಲ ಯೋಗಕ್ಕೆ ಅವರು ನೀಡಿರುವ ಅಸಾಧಾರಣ ಕೊಡುಗೆಯನ್ನು ಗೌರವಿಸಿ ಶಾರ್ಲೆಟ್ ಚಾಪಿನ್ (Charlotte Chopin) ಅವರಿಗೆ ಭಾರತದ (India) ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ( Padma Shri award) ಅನ್ನು ನೀಡಿ ಗೌರವಿಸಲಾಯಿತು.
ನವದೆಹಲಿಯ (new delhi) ರಾಷ್ಟ್ರಪತಿ ಭವನದಲ್ಲಿ ( Rashtrapati Bhawan) ಗುರುವಾರ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಹಸಿರು ಸೀರೆಯನ್ನು ಧರಿಸಿದ ಶಾರ್ಲೆಟ್ ಚಾಪಿನ್ ವೇದಿಕೆಯತ್ತ ನಡೆದು ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಯೋಗ ಕ್ಷೇತ್ರದಲ್ಲಿ ಶಾರ್ಲೆಟ್ ಚಾಪಿನ್ ಅವರ ಪ್ರಯತ್ನವನ್ನು ಶ್ಲಾಘಿಸಿ ರಾಷ್ಟ್ರಪತಿಯವರ ಕಚೇರಿಯು ಎಕ್ಸ್ ನಲ್ಲಿ ಟ್ವೀಟ್ ಮಾಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಯೋಗ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಶಾರ್ಲೆಟ್ ಚಾಪಿನ್ ಅವರಿಗೆ ಪ್ರದಾನ ಮಾಡಿದರು. ಅವರು ಪ್ರಸಿದ್ಧ ಫ್ರೆಂಚ್ ಯೋಗ ಶಿಕ್ಷಕಿಯಾಗಿದ್ದಾರೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಯೋಗವನ್ನು ಕಲಿಸುತ್ತಿದ್ದಾರೆ ಮತ್ತು 101ನೇ ವಯಸ್ಸಿನಲ್ಲಿ ಯೋಗ ಶಿಕ್ಷಕರಾಗಿ ಸಕ್ರಿಯರಾಗಿದ್ದಾರೆ ಎಂದು ಟ್ವೀಟ್ ನಲ್ಲಿ ತಿಳಿಸಲಾಗಿದೆ.
President Droupadi Murmu presents Padma Shri in the field of Yoga to Smt. Charlotte Chopin. She is a renowned French yoga teacher. Smt. Chopin has been teaching yoga for more than four decades and is still active as a yoga teacher at the age of 101. pic.twitter.com/Z30g1HEC0M
— President of India (@rashtrapatibhvn) May 9, 2024
ಶಾರ್ಲೆಟ್ ಚಾಪಿನ್ ಯಾರು?
ಚಾಪಿನ್ ಫ್ರಾನ್ಸ್ ಮೂಲದವರಾಗಿದ್ದು, ಪ್ರಸ್ತುತ ಯೋಗ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲಾ ವಯಸ್ಸಿನ ಮಿತಿಯ ಮಾನದಂಡಗಳನ್ನು ಮೀರಿ ಚಾಪಿನ್ ಅವರು 50 ವರ್ಷ ವಯಸ್ಸಿನ ಅನಂತರ ಯೋಗವನ್ನು ಕಲಿತರು. 1982 ರಲ್ಲಿ ಫ್ರಾನ್ಸ್ ನಲ್ಲಿ ಕಲಿಸಲು ಪ್ರಾರಂಭಿಸಿದರು. ಅವರು ದೇಶದಲ್ಲಿ ಯೋಗದ ಅಲೆಯನ್ನು ಸೃಷ್ಟಿಸಿದರು. ಇದು ಪ್ರಸಿದ್ಧ ಫಿಟ್ನೆಸ್ ಅಭ್ಯಾಸವನ್ನು ಮಾಡಿದರು. ಅವರು ಫ್ರೆಂಚ್ ಟಿವಿ ಶೋ, ‘ಫ್ರಾನ್ಸ್ ಗಾಟ್ ಇನ್‌ಕ್ರೆಡಿಬಲ್ ಟ್ಯಾಲೆಂಟ್’ ನಲ್ಲಿ ಕಾಣಿಸಿಕೊಂಡರು.
ಇದನ್ನೂ ಓದಿ: K.S. Rajanna: ಛಲಬಿಡದ ಸಾಧಕನಿಗೆ ಪದ್ಮಶ್ರೀ ಗರಿ; ಅಂಗವೈಕಲ್ಯ ಮೆಟ್ಟಿನಿಂತ ಕನ್ನಡಿಗನಿಗೆ ದೇಶದ ನಮನ- ವೀಡಿಯೋ ವೈರಲ್
2023ರ ಜುಲೈನಲ್ಲಿ ಅವರು ಬಾಸ್ಟಿಲ್ ಡೇ ಪರೇಡ್‌ನಲ್ಲಿ ಪಾಲ್ಗೊಳ್ಳಲು ಫ್ರೆಂಚ್ ಪ್ರವಾಸದಲ್ಲಿದ್ದಾಗ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೊದಲ ಬಾರಿಗೆ ಪ್ಯಾರಿಸ್‌ನಲ್ಲಿ ಭೇಟಿಯಾದರು. ಯೋಗ ಕ್ಷೇತ್ರದಲ್ಲಿ ಅವರ ಅಸಾಧಾರಣ ಕೆಲಸದಿಂದ ಪ್ರಭಾವಿತರಾದ ಪ್ರಧಾನಿ, ಯೋಗದಲ್ಲಿ ಚಾಪಿನ್ ಅವರ ಆಳವಾದ ನಂಬಿಕೆ ಮತ್ತು ಫ್ರಾನ್ಸ್‌ನಲ್ಲಿ ಯೋಗವನ್ನು ಉತ್ತೇಜಿಸಲು ಅವರ ಪ್ರಯತ್ನಗಳನ್ನು ಶ್ಲಾಘಿಸಿದರು.
ಯೋಗವು ಸಂತೋಷವನ್ನು ತರುತ್ತದೆ ಮತ್ತು ಸಮಗ್ರ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ ಎಂದು ಜುಲೈನಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದಾಗ ಚಾಪಿನ್ ಹೇಳಿದ್ದರು.