ಬೆಂಗಳೂರು: ದರ್ಶನ್ ಆ್ಯಂಡ್ ಗ್ಯಾಂಗ್‌ನಿಂದ (Actor Darshan) ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆ ವೇಳೆ ನಾನೇನು ಮಾಡಿಲ್ಲ ಸರ್,.. ನಮ್ಮ ಹುಡುಗರು ಏನೋ ಮಾಡಿದ್ದಾರೆ ಸರ್ ನನಗೆ ಏನು ಗೊತ್ತಿಲ್ಲ ಎಂದಿದ್ದನಂತೆ. ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತು ದರ್ಶನ್ ತಪ್ಪೊಪ್ಪಿಗೆ ಕುರಿತು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ನಟ ದರ್ಶನ್ ಪ್ರಾರಂಭದ ತನಿಖಾ ಹಂತದಲ್ಲಿ ತಾನೇನು ಮಾಡಿಲ್ಲ ಎನ್ನುತ್ತಿದ್ದರು. ಆದರೆ ಸಾಕ್ಷಿ ಸಮೇತ ಪೊಲೀಸರು ದರ್ಶನ್‌ನ ವಿಚಾರಣೆ ಮಾಡಿದಾಗ ತಪ್ಪೊಪ್ಪಿಗೆ ಮಾಡಿಕೊಂಡಿದ್ದಾರೆ. ಶೂ ಕಾಲಿನಲ್ಲಿ ರೇಣುಕಾ ಸ್ವಾಮಿ ಎದೆ ಮೇಲೆ ಕಾಲಿಟ್ಟಿದ್ದಾಗಿ, ಎಡಗಿವಿಯನ್ನು ಹೊಸಕಿದ್ದು ಹಾಗೂ ಮರ್ಮಾಂಗದ ಮೇಲೆ ಕಾಲಿಟ್ಟು ತುಳಿದ ಬಗ್ಗೆ ತಪ್ಪೊಪ್ಪಿಗೆ ಮಾಡಿದ್ದಾರೆ.
ದರ್ಶನ್ ಹೇಳಿಕೆಗೆ ಪೂರಕವಾಗಿ ರೇಣುಕಾಸ್ವಾಮಿ ಪಕ್ಕೆಲಬು ಮುರಿದಿತ್ತು. ವೃಷಣಕ್ಕು ಹಾನಿಯಾಗಿರೋದು ಮರಣೋತ್ತರ ಪರೀಕ್ಷೆಯಲ್ಲಿ ದೃಢವಾಗಿದೆ. ಜತೆಗೆ ರೇಣುಕಾಸ್ವಾಮಿಗೆ ಒಂಟಿ ವೃಷಣವಿರುವ ಇರುವ ಸಂಗತಿಯು ಬೆಳಕಿಗೆ ಬಂದಿದೆ. ಅದನ್ನು ರೇಣುಕಾಸ್ವಾಮಿಯ ತಾಯಿಯೂ ದೃಢಪಡಿಸಿದ್ದಾರೆ. ಹುಟ್ಟಿನಿಂದಲೇ ಒಂಟಿ ವೃಷಣ ವೈಫಲ್ಯದಿಂದ ರೇಣುಕಾಸ್ವಾಮಿ ಜನಿಸಿದ್ದ. ತನಿಖಾಧಿಕಾರಿಗಳು ಎಲ್ಲವನ್ನೂ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ಧ 11ಸೆಕ್ಷನ್ ಅಡಿ ಕೇಸ್
ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಗಳ ವಿರುದ್ಧ 11 ಸೆಕ್ಷನ್ ಅಡಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. 120B, 364, 384,355,302, 201,143,147,148,149,34 ಸೆಕ್ಷನ್ ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. 120B ಒಳ ಸಂಚು, 364 ಕಿಡ್ನ್ಯಾಪ್ , 384 ಸುಲಿಗೆ, 355 ಒತ್ತಡ ಹಾಕಿ ಹತ್ಯೆ, 302 ಕೊಲೆ, 201 ಸಾಕ್ಷ್ಯನಾಶ, 143 ಕಾನೂನು ಬಾಹಿರ ಸಭೆ, 147 ಗಲಭೆ, 148, ಮಾರಕಾಸ್ತ್ರ ಬಳಕೆ, 149 ಗುಂಪಿನಲ್ಲಿ ಹಲ್ಲೆ ಮಾಡಿರುವುದು, 34 ಗ್ಯಾಂಗ್‌ನ ಉದ್ದೇಶ ಒಂದೆ ಆಗಿತ್ತು. ಕೋರ್ಟ್‌ನ ಅಧಿಕೃತ ವೆಬ್ ಸೈಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ಇದನ್ನೂ ಓದಿ: Renuka swamy murder : ಟೀ ಕುಡಿಯಲು ಹೋದವನು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಲಾಕ್
ನ್ಯಾಯಾಂಗ ಬಂಧನ ಮುಂದುವರಿಯುವ ಸಾಧ್ಯತೆ
ನಟ ದರ್ಶನ್ ಪಾಲಿಗೆ ಸೋಮವಾರ ಬಿಗ್ ಡೇ ಆಗುತ್ತಾ. ಯಾಕೆಂದರೆ ಇಂದು ದರ್ಶನ್‌ಗೆ ಸಂಬಂಧಿಸಿದ ಎರಡು ಕೇಸ್‌ಗಳು ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಸೆ.9ರಂದು ದರ್ಶನ್ ಗ್ಯಾಂಗ್ ನ್ಯಾಯಾಂಗ ಬಂಧನ ಅವಧಿ ಅಂತ್ಯವಾಗಲಿದೆ. ಜತೆಗೆ ಹೈಕೋರ್ಟ್‌ನಲ್ಲಿ ದರ್ಶನ್ ಊಟದ ಅರ್ಜಿ ವಿಚಾರಣೆಯೂ ನಡೆಯಲಿದೆ. ಇದರೊಟ್ಟಿಗೆ ಜಾಮೀನು ಕೋರಿ ದರ್ಶನ್ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಈ ಮೂರು ವಿಚಾರಗಳಿಂದ ನಟ ದರ್ಶನ್‌ಗೆ ಬಿಗ್ ಡೇ ಆಗಿರಲಿದೆ.
ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಅಂತ್ಯವಾಗಲಿದೆ. ಎಲ್ಲ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿದ್ದಾರೆ. ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆಗೆ ಪೊಲೀಸರು ಮನವಿ ಮಾಡಲಿದ್ದಾರೆ.
ಬಳ್ಳಾರಿ ಜೈಲಿನಿಂದ ನಟ ದರ್ಶನ್, ಮೈಸೂರು ಜೈಲಿನಿಂದ ಪವನ್, ರಾಘವೇಂದ್ರ, ನಂದೀಶ್ ಹಾಗೂ ಶಿವಮೊಗ್ಗ ಜೈಲಿನಿಂದ ಜಗದೀಶ್- ಲಕ್ಷ್ಮಣ್, ಧಾರವಾಡ ಜೈಲಿನಿಂದ ಧನರಾಜ್, ವಿಜಯಪುರ ಜೈಲಿನಿಂದ ವಿನಯ್ ಸೇರಿದಂತೆ ಕಲಬುರಗಿ ಜೈಲಿನಿಂದ ನಾಗರಾಜ್, ಬೆಳಗಾವಿ ಜೈಲಿನಿಂದ ಪ್ರದೂಷ್, ಪರಪ್ಪನ ಅಗ್ರಹಾರ ಜೈಲಿನಿಂದ ಪವಿತ್ರಾಗೌಡ, ಅನುಕುಮಾರ್, ದೀಪಕ್ ಹಾಜರಾಗಲಿದ್ದಾರೆ.
ಊಟದ ಅರ್ಜಿ ವಿಚಾರಣೆ
ಇನ್ನು ಮನೆ ಊಟ ಕೋರಿ ದರ್ಶನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯಲಿದೆ. ಈಗಾಗಲೇ ದರ್ಶನ್ ಮನೆ ಊಟದ ಮನವಿಗೆ ಅಧಿಕಾರಿಗಳು ಕೊಕ್ಕೆ ಹಾಕಿದ್ದಾರೆ. ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಂದ ಕೋರ್ಟ್ ಗೆ ವರದಿ ಸಲ್ಲಿಕೆ ಮಾಡಲಿದ್ದಾರೆ.
ಜಾಮೀನು ಅರ್ಜಿ ಸಾಧ್ಯತೆ
ಇಂದು ನಟ ದರ್ಶನ್ ಜಾಮೀನು ಅರ್ಜಿ ಸಲ್ಲಿಕೆ ಸಾಧ್ಯತೆ ಇದೆ. ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ. ಈಗಾಗಲೇ ಪೊಲೀಸರು ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ. ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಜಾಮೀನು ಕೋರಿ ಅರ್ಜಿ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ