ನವ ದೆಹಲಿ: ದೇಶದಲ್ಲಿ ರುಪೇ ಡೆಬಿಟ್ ಕಾರ್ಡ್ ಹಾಗೂ ಕಡಿಮೆ ಮೌಲ್ಯದ ಯುಪಿಐ ಹಣಕಾಸು ವರ್ಗಾವಣೆಗಳನ್ನು ಉತ್ತೇಜಿಸಲು 2,600 ಕೋಟಿ ರೂ.ಗಳ ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ.( Rupay debit card) ಈ ಕುರಿತ ಪ್ರಸ್ತಾಪವನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.
ವ್ಯಕ್ತಿಯಿಂದ ವ್ಯಾಪಾರಿಗೆ (Person-to-merchant) ಯುಪಿಐ ಮೂಲಕ ಹಣ ಪಾವತಿಗೆ ಇನ್ಸೆಂಟಿವ್ ಸಿಗಲಿದೆ. ರುಪೇ ಡೆಬಿಟ್ ಕಾರ್ಡ್ ಬಳಕೆಗೂ ಉತ್ತೇಜನ ಸಿಗಲಿದೆ.
ವ್ಯಾಪಾರಿಗಳ ಜತೆಗೆ ಯುಪಿಐ ಕ್ಯುಆರ್ ಕೋಡ್ ವ್ಯವಸ್ಥೆ ಅಳವಡಿಸುವ ಬ್ಯಾಂಕ್‌ಗಳಿಗೆ ಇನ್ಸೆಂಟಿವ್ ಸಿಗಲಿದೆ. ಪ್ರಸ್ತುತ ಯುಪಿಐ ಅಥವಾ ರುಪೇ ಡೆಬಿಟ್ ಕಾರ್ಡ್ ಮೂಲಕ ಹಣ ಸ್ವೀಕರಿಸುವಾಗ ವ್ಯಾಪಾರಿಗಳಿಗೆ ಯಾವುದೇ ಶುಲ್ಕ ತಗಲುವುದಿಲ್ಲ.