ಬಿಹಾರ (ಸೀತಾಮಡಿ): ದರ್ಭಾಂಗಾದ ಬೆಹರಾ ಗ್ರಾಮದ ಯುವಕನಿಗೆ ನಾಲ್ವರು ಸೇರಿ ಚೂರಿಯಿಂದ ಇರಿದಿದ್ದರು. ವಿವಾದಿತ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರ ವಿಡಿಯೊ ನೋಡಿದ್ದಕ್ಕಾಗಿ ಈ ರೀತಿ ಇರಿಯಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಎಫ್‌ಐಆರ್‌ನಲ್ಲಿ ಮಾತ್ರ ಈ ಬಗ್ಗೆ ಉಲ್ಲೇಖಗಳೇ ಇಲ್ಲ!
ಅಂಕಿತ್ ಝಾ ಎಂಬ ಯುವಕನ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿ ಇಬ್ಬರನ್ನು ಈಗಾಗಲೇ ಬಂಧಿಸಿದ್ದರೆ, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ. ಈ ಬಗ್ಗೆ ಎಫ್‌ಐಆರ್ ದಾಖಲು ಮಾಡಲಾಗಿದೆ. ಆದರೆ ಅದರಲ್ಲಿ ನೂಪುರ್ ಶರ್ಮಾ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ಈ ಬಗ್ಗೆ ಹಲ್ಲೆಗೊಳಗಾದ ವ್ಯಕ್ತಿಯ ಹೇಳಿಕೆ ಏನು?
ನೂಪುರ್ ಶರ್ಮಾ ವಿಡಿಯೊವನ್ನು ಪಾನ್ ಅಂಗಡಿಯಲ್ಲಿ ಕುಳಿತು ನನ್ನ ಮೊಬೈಲ್ ನಲ್ಲಿ ನೋಡುತ್ತಿದ್ದೆ. ಆಗ ಮೊಹಮ್ಮದ್ ಬಿಲಾಲ್ ನೇತೃತ್ವದಲ್ಲಿ ನಾಲ್ವರು ನನ್ನ ಬಳಿಗೆ ಬಂದು, ಕೋಪದಿಂದ ಹಲ್ಲೆ ಮಾಡಿದ್ದಾರೆ. ನನ್ನನ್ನು ನಿಂದಿಸುವ ಮೊದಲು ನನ್ನ ಸೊಂಟಕ್ಕೆ ಚಾಕುವಿನಿಂದ ಆರು ಬಾರಿ ಇರಿದಿದ್ದಾರೆ ಎಂದು ಅಂಕಿತ್ ಝಾ ಪೋಲಿಸರ ಮುಂದೆ ಹೇಳಿದ್ದಾರೆ.
ಮತ್ತೊಂದೆಡೆ, ಇಬ್ಬರು ಸ್ನೇಹಿತರು ಪಾನ್ ಅಂಗಡಿಯಲ್ಲಿ ಪಾನ್ ತಿನ್ನುತ್ತಿದ್ದಾಗ ಆ ಅಂಗಡಿಯಲ್ಲಿ ಮಾರಾಟವಾಗುವ ಗಾಂಜಾ ಬಗ್ಗೆ ಅವರ ನಡುವೆ ವಾಗ್ವಾದ ನಡೆದಿದೆ. ಈ ಹಿನ್ನೆಲೆಯಲ್ಲಿ ಹಲ್ಲೆ ನಡೆದಿದೆ ಎಂದು ಡಿಎಸ್ಪಿ ವಿನೋದ್ ಕುಮಾರ್ ಹೇಳಿದ್ದಾರೆ.
ನೂಪುರ್ ಶರ್ಮಾ ಅವರ ವೀಡಿಯೊನಿಂದಾಗಿನೇ ಅಂಕಿತ್ ಝಾ ಮೇಲೆ ಹಲ್ಲೆ ನಡೆದಿದೆ ಎಂದು ಅವರ ಕುಟುಂಬ ಆರೋಪಿಸಿದೆ. “ಹಲ್ಲೆ ಮಾಡಿದವರಿಗೂ ನನ್ನ ಮಗನಿಗೂ ಯಾವುದೇ ವೈಯಕ್ತಿಕ ದ್ವೇಷ ಇರಲಿಲ್ಲ. ನನ್ನ ಮಗನಿಗೆ ಅವರ ಪರಿಚಯವೇ ಇರಲಿಲ್ಲ. ಇದರಲ್ಲಿ ನೂಪುರ್ ಶರ್ಮಾ ಅವರ ಹೆಸರನ್ನು ಬಳಸಬೇಡಿ. ನಮಗೆ ನ್ಯಾಯ ಬೇಕು” ಎಂದು ಮನೋಜ್ ಆರೋಪಿಸಿದ್ದಾರೆ.
ಇದನ್ನೂ ಓದಿ| ಅರೆಸ್ಟ್ ಮಾಡದಂತೆ ನೂಪುರ್ ಶರ್ಮಾ ಅರ್ಜಿ, ಇಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ