Site icon Vistara News

Murder Case: ರಾಣಿಯಂತಿದ್ದವಳು ಶೆಡ್‌ಗೆ ಬಂದು ಜೀವ ತೆತ್ತಳು; ಪ್ರೀತಿಸಿದ ರೀಲ್ಸ್‌ ಸುಂದರಿಯ ಪ್ರಾಣ ತೆಗೆದ ಗಂಡ

murder case belagavi reels

ಬೆಳಗಾವಿ: ಇದು ಪ್ರೀತಿಸಿ (Love Marriage) ಮದುವೆಯಾಗಿ, ಗರ್ಭಿಣಿಯೂ ಆಗಿ ಗಂಡನಿಂದಲೇ ಜೀವ ಕಳೆದುಕೊಂಡ (Murder Case) ರೀಲ್ಸ್‌ ಸುಂದರಿಯ (Instagram Reels) ಕತೆ. ತವರು ಮನೆಯಲ್ಲಿ ರಾಣಿಯಂತಿದ್ದವಳು ತಗಡು ಹೊದೆಸಿದ ಗಂಡನ ಶೆಡ್‌ ಮನೆಗೆ ಬಂದು, ಅಲ್ಲಿ ವರದಕ್ಷಿಣೆ ಕಿರುಕುಳಕ್ಕೆ (Dowry harassment) ಒಳಗಾಗಿ ಜೀವ ತೆತ್ತಿದ್ದಾಳೆ.

ಮಂಜುಳಾ ಅಲಿಯಾಸ್ ನಯನಾ (23) ಅನುಮಾನಾಸ್ಪದ ಸಾವಿಗೆ ಈಡಾದ ಯುವತಿ. ಬೆಳಗಾವಿ ಹೊರ ವಲಯದ ಮಚ್ಚೆ ಗ್ರಾಮದಲ್ಲಿ ಘಟನೆ ನಡೆದಿದೆ. ಮೂಲತಃ ಮೈಸೂರಿನವಳಾದ ಯುವತಿ, ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುತ್ತ ಅದನ್ನು ಹಂಚಿಕೊಳ್ಳುತ್ತಿದ್ದಳು. ಈಕೆಯನ್ನು ಬೆಳಗಾವಿಯ ಬೋರೇಶ್‌ ಎಂಬ ಯುವಕ ಪ್ರೀತಿಯಲ್ಲಿ ಬೀಳಿಸಿಕೊಂಡಿದ್ದ. ಇನ್‌ಸ್ಟಾಗ್ರಾಮ್‌ನಲ್ಲೇ ಪ್ರೀತಿ ಬೆಳೆದು, ಬೋರೇಶ್‌ನನ್ನು ಅರಸಿ ಮೈಸೂರಿನಿಂದ ಬೆಳಗಾವಿಗೆ ಮಂಜುಳಾ ಬಂದಿದ್ದಳು. ಪೋಷಕರ ವಿರೋಧದ ನಡುವಯೂ ಆತನನ್ನು ಮದುವೆಯಾಗಿದ್ದಳು.

ಒಂದು ವರ್ಷದ ಹಿಂದೆ ಈಕೆ ಮದುವೆ ಮಾಡಿಕೊಂಡಿದ್ದು, ಇದೀಗ ಮೂರು ತಿಂಗಳ ಗರ್ಭಿಣಿಯಾಗಿದ್ದಳು. ತವರು ಮನೆಯಲ್ಲಿ ರಾಣಿಯಂತಿದ್ದವಳು ಗಂಡನ ಜೊತೆ ತಗಡು ಹೊದೆಸಿದ ಶೆಡ್‌ನಲ್ಲಿ ಸಹಜೀವನ ನಡೆಸುತ್ತಿದ್ದಳು. ಹೀಗೆ ತನಗಾಗಿ ಸರ್ವಸ್ವವನ್ನೇ ಕೊಟ್ಟಾಕೆಯ ಜೀವವನ್ನೇ ಬೋರೇಶ್‌ ತೆಗೆದಿದ್ದಾನೆ. ಗಂಡ ಬೋರೇಶ್ ಮತ್ತು ಕುಟುಂಬಸ್ಥರು ಈಕೆಯ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ನಯನಾ ಕುಟುಂಬಸ್ಥರು ಆರೋಪಿಸಿದ್ದಾರೆ.

ಒಬ್ಬಳೇ ಮಗಳನ್ನು ಕಳೆದುಕೊಂಡು ಕುಟುಂಬಸ್ಥರು ಮಗಳ ಮುಖ ನೋಡಲೆಂದು ಮೈಸೂರಿಂದ ಓಡೋಡಿ ಬಂದಿದ್ದರೆ, ಬೋರೇಶ್‌ ಮತ್ತು ಕುಟುಂಬದವರು ತಲೆ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಮೂರು ತಿಂಗಳ ಗರ್ಭಿಣಿ ಅನ್ನುವುದನ್ನೂ ನಿರ್ಲಕ್ಷಿಸಿ ಕೊಲೆ ಮಾಡಿದ್ದಾನೆ ಎಂದು ಮೃತಳ ತಂದೆತಾಯಿ ಆರೋಪಿಸಿದ್ದಾರೆ. ವರದಕ್ಷಿಣೆ ಕಿರುಕುಳ, ಕೊಲೆ ಸೆಕ್ಷನ್ ಅಡಿಯಲ್ಲಿ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಅಪಘಾತ; ಡಿವೈಡರ್‌ಗೆ ಕಾರು ಡಿಕ್ಕಿಯಾಗಿ 2 ಸಾವು

ಮಂಡ್ಯ: ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಇಬ್ಬರು ಸಾವಿಗೀಡಾಗಿ, ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿರುವ ದುರ್ಘಟನೆ ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಘಟಿಸಿದೆ.

ಬೆಂಗಳೂರು- ಮೈಸೂರು ಹೆದ್ದಾರಿಯ ನಡುವಿನ, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ರುದ್ರಾಕ್ಷಿಪುರ ಗ್ರಾಮದಲ್ಲಿ ಅಪಘಾತ ನಡೆದಿದೆ. ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಹಾಗೂ ಪುತ್ರ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೆಂಗಳೂರಿನ ಬಗಲಕುಂಟೆ ನಿವಾಸಿಗಳಾದ ಕಲಾ (40), ಪುತ್ರ ದರ್ಶನ್ (21) ಮೃತಪಟ್ಟವರು.

ಕಾರಿನ ಹಿಂಬದಿಯಲ್ಲಿದ್ದ ಪುತ್ರಿ ಮೇಘನ ಹಾಗೂ ಅಳಿಯ ಮಂಜುನಾಥ್ ಅವರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಮಿಮ್ಸ್ ಶವಗಾರಕ್ಕೆ ಮೃತ ದೇಹಗಳನ್ನು ರವಾನಿಸಲಾಗಿದ್ದು, ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Fraud Case : ‌ಸಿಸಿಬಿ ಬಲೆಗೆ ಬಿದ್ದ ಖತರ್ನಾಕ್‌ ನಯ ವಂಚಕ; ಡಿಸಿ, ಜಡ್ಜ್‌ ಹೆಸರು ಬಳಸಿ ಲಕ್ಷ ಲಕ್ಷ ಲೂಟಿ

Exit mobile version