ಬೆಂಗಳೂರು: ಮೇ 9ರಂದು 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಗೊಂಡಿದೆ. ವಿದ್ಯಾರ್ಥಿಗಳು ಈ ಬಾರಿಯ ಪರೀಕ್ಷೆಯಲ್ಲಿ ಫೇಲ್ ಆಗಿಬಿಟ್ಟವಿ, ಕಡಿಮೆ ಅಂಕ ಬಂತಲ್ಲ ಎಂದು ಬೇಜಾರಾಗುವ ಅವಶ್ಯಕತೆ ಇಲ್ಲ. ಯಾಕೆಂದರೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವಿದ್ಯಾರ್ಥಿಗಳಿಗೆ (SSLC Result 2024) ಗುಡ್‌ನ್ಯೂಸ್ ನೀಡಿದೆ.
ಅಂದಹಾಗೇ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಈಗಾಗಲೇ ಎಸ್‌ಎಸ್‌ಎಲ್‌ಸಿ 1, 2, 3ರ ಹೊಸ ಪರೀಕ್ಷಾ ಮಾದರಿಯನ್ನು ಪರಿಚಯಿಸಿದೆ. ಇದರ ಕ್ರಮವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ 1ರಲ್ಲಿ ಅನುತೀರ್ಣರಾಗಿದ್ದರೆ ಅಥವಾ ಕಡಿಮೆ ಅಂಕ ಪಡೆದು ಜಸ್ಟ್ ಪಾಸ್ ಆಗಿದ್ದರೆ ಅಂತಹ ವಿದ್ಯಾರ್ಥಿಗಳು ಪರೀಕ್ಷೆ 2ರಲ್ಲಿ ಅಂಕವನ್ನು ಸರಿದೂಗಿಸಿಕೊಳ್ಳಬಹುದಾಗಿದೆ. ಕೇವಲ ಫೇಲ್ ಆದವರು, ಕಡಿಮೆ ಅಂಕ ಬಂದವರು ಮಾತ್ರವಲ್ಲ ಹೆಚ್ಚು ಅಂಕ ಗಳಿಸಲು ಯಾವುದೇ ವಿದ್ಯಾರ್ಥಿಯಾದರು ಪರೀಕ್ಷೆ 2 ಹಾಗೂ 3ರಲ್ಲಿ ಹಾಜರಾಗಬಹುದು. ಇದಕ್ಕಾಗಿ ಶಿಕ್ಷಣ ಇಲಾಖೆಯಿಂದಲೇ ಮುಂದಿನ 1 ತಿಂಗಳಲ್ಲಿ ಪರಿಹಾರ ಬೋಧನೆಯನ್ನು ಆಯೋಜಿಸಲಾಗುತ್ತದೆ. ಇದರಿಂದಾಗಿ ಪರೀಕ್ಷೆ 2-3ಕ್ಕೆ ಉತ್ತಮವಾಗಿ ಸಿದ್ಧರಾಗಲು ಸಹಾಯವಾಗುತ್ತದೆ.
ಎಸ್‌ಎಸ್‌ಎಲ್‌ಸಿಯ ಮೊದಲನೇ ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿಯು ಫೇಲ್ ಆಗಿದ್ದರೆ, ಆ ವಿದ್ಯಾರ್ಥಿಯ ಫಲಿತಾಂಶವನ್ನು NC ಎಂದು ತೋರಿಸಲಾಗುತ್ತದೆ. NC ಅಂದರೆ Not Completed ಎಂದು ಪ್ರಕಟಿಸಲಾಗುತ್ತದೆ. ಈ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ 2-3ರಲ್ಲಿ ಬರೆದ ಪರೀಕ್ಷೆಗಳ ಪೈಕಿ ಗಳಿಸಿದ ಗರಿಷ್ಠ ಅಂಕಗಳ ಆಧಾರದ ಮೇಲೆ ಅಂತಿಮ ಫಲತಾಂಶವನ್ನು ಪ್ರಕಟಿಸಲಾಗುತ್ತದೆ. ಈ ಮೂಲಕ ಕಡಿಮೆ ಬಂದ ಫಲಿತಾಂಶವನ್ನು ಉತ್ತಮಗೊಳಿಸಿ ವಿದ್ಯಾರ್ಥಿಗಳಿಗೆ ಎರಡೆರಡು ಬಾರಿ ಅವಕಾಶ ಕೊಟ್ಟು ಅವರ ಏಳಿಗೆಗೆ ಇದು ಸಹಕಾರಿ ಆಗಲಿದೆ.
ಇದನ್ನೂ ಓದಿ: SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್, ಉಡುಪಿ ಫಸ್ಟ್, ಯಾದಗಿರಿ ಲಾಸ್ಟ್
ಎಸ್‌ಎಸ್‌ಎಲ್‌ಸಿ ರಿಸಲ್ಟ್; ಫಸ್ಟ್ ಬೆಂಚ್‌ಗೆ ಬಂದ ಉಡುಪಿ; ಲಾಸ್ಟ್ ಬೆಂಚ್‌ನಲ್ಲೇ ಉಳಿದ ಯಾದಗಿರಿ!
ಬೆಂಗಳೂರು: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ (SSLC Exam Result 2024) ಫಲಿತಾಂಶವನ್ನು ಗುರುವಾರ (ಮೇ 9) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶ ಕುಸಿತ (SSLC Result 2024) ಕಂಡಿದೆ. 2022-23ರಲ್ಲಿ 83.89% ಇದ್ದರೆ, ಈ ಬಾರಿ 73.40% ಮಂದಿ ಪಾಸ್, ಶೇಕಡಾ 10.49% ರಷ್ಟು ಫಲಿತಾಂಶ ಕುಸಿತವಾಗಿದೆ. ಕಳೆದ ವರ್ಷ ಮೊದಲ ಸ್ಥಾನವನ್ನು ಚಿತ್ರದುರ್ಗ, ಎರಡನೇ ಸ್ಥಾನವನ್ನು ಮಂಡ್ಯ , ಮೂರನೇ ಸ್ಥಾನವನ್ನು ಹಾಸನ ಹಾಗೂ ಕೊನೆ ಸ್ಥಾನವನ್ನು ಯಾದಗಿರಿ ಪಡೆದಿತ್ತು. ಈ ವರ್ಷವೂ ಫಲಿತಾಂಶದಲ್ಲಿ ಯಾದಗಿರಿಯು ಕೊನೆ ಸ್ಥಾನವನ್ನೇ ಗಳಿಸಿದ್ದು, ಶೇಕಡಾವಾರು 50.59ರಷ್ಟು ಫಲಿತಾಂಶ ಬಂದಿದೆ. ಇನ್ನೂ ಉಡುಪಿ ಜಿಲ್ಲೆ ಕಳೆದ ಬಾರಿ 14ಕ್ಕೆ ಸ್ಥಾನದಲ್ಲಿತ್ತು, ಆದರೆ ಈ ಬಾರಿ ಶೇ.94ರಷ್ಟು ಫಲಿತಾಂಶದೊಂದಿಗೆ ಮೊದಲ ಸ್ಥಾನವನ್ನು ಗಳಿಸಿದೆ. ದಕ್ಷಿಣ ಕನ್ನಡ ಎರಡನೇ ಹಾಗೂ ಶಿವಮೊಗ್ಗ ಮೂರನೇ ಸ್ಥಾನ ಗಳಿಸಿದೆ.
ಜಿಲ್ಲೆಗಳ ಶೇಕಡಾವಾರು ಫಲಿತಾಂಶ ಇಂತಿದೆ
1) ಉಡುಪಿ- 94%
2) ದಕ್ಷಿಣ ಕನ್ನಡ-92.12%
3) ಶಿವಮೊಗ್ಗ -88.67%
4) ಕೊಡಗು- 88.67%
5) ಉತ್ತರ ಕನ್ನಡ-86.54%
6) ಹಾಸನ-86.28%
7) ಮೈಸೂರು-85.5%
8) ಶಿರಸಿ-84.64%
9)ಬೆಂಗಳೂರು ಗ್ರಾಮಾಂತರ-83.67%
10) ಚಿಕ್ಕಮಗಳೂರು-83.39%
11) ವಿಜಯಪುರ- 79.82%
12) ಬೆಂಗಳೂರು ದಕ್ಷಿಣ-79%
13) ಬಾಗಲಕೋಟೆ-77.92%
14)ಬೆಂಗಳೂರು ಉತ್ತರ- 77.09%
15) ಹಾವೇರಿ-75.85%
16) ತುಮಕೂರು-75.16%
17)ಗದಗ- 74.76%
18)ಚಿಕ್ಕಬಳ್ಳಾಪುರ- 73.61%
19)ಮಂಡ್ಯ-73.59%
20) ಕೋಲಾರ-73.57%
21)ಚಿತ್ರದುರ್ಗ-72.85%
22) ಧಾರವಾಡ-72.67%
23) ದಾವಣಗೆರೆ- 72.48%
24) ಚಾಮರಾಜನಗರ-71.59%
25) ಚಿಕ್ಕೋಡಿ-69.82%
26) ರಾಮನಗರ-69.53%
27) ವಿಜಯನಗರ-65.61%
28) ಬಳ್ಳಾರಿ-64.99%
29) ಬೆಳಗಾವಿ-64.93%
30) ಮಧುಗಿರಿ-62.44%
31) ರಾಯಚೂರು- 61.2%
32) ಕೊಪ್ಪಳ- 61.16%
33) ಬೀದರ್- 57.52%
34) ಕಲಬುರಗಿ- 53.04%
35) ಯಾದಗಿರಿ- 50.59%
2023ರ ಜಿಲ್ಲಾವಾರು ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೀಗಿತ್ತು
ಚಿತ್ರದುರ್ಗ -96.8%.
ಮಂಡ್ಯ-96.74%.
ಹಾಸನ-96.68%.
ಬೆಂಗಳೂರು ಗ್ರಾಮಾಂತರ-96.48%.
ಚಿಕ್ಕಬಳ್ಳಾಪುರ-96.15%.
ಕೋಲಾರ-94.6%.
ಚಾಮರಾಜನಗರ -94.32%.
ಮಧುಗಿರಿ- 93.23%.
ಕೊಡಗು-93.19%.
ವಿಜಯನಗರ- 91.41%.
ವಿಜಯಪುರ- 91.23%.
ಚಿಕ್ಕೋಡಿ – 91.07%.
ಉತ್ತರಕನ್ನಡ – 90.53%.
ದಾವಣಗೆರೆ- 90.43%.
ಕೊಪ್ಪಳ- 90.27%.
ಮೈಸೂರು ಜಿಲ್ಲೆ- 89.75%.
ಚಿಕ್ಕಮಗಳೂರು-89.69%.
ಉಡುಪಿ- 89.49%.
ದಕ್ಷಿಣ ಕನ್ನಡ- 89.47%.
ತುಮಕೂರು- 89.43%.
ರಾಮನಗರ- 89.42%.
ಹಾವೇರಿ – 89.11%.
ಶಿರಸಿ- 87.39%.
ಧಾರವಾಡ-86.55%.
ಗದಗ-86.51%.
ಬೆಳಗಾವಿ-85.85%.
ಬಾಗಲಕೋಟೆ-85.14%.
ಕಲಬುರಗಿ-84.51%.
ಶಿವಮೊಗ್ಗ-84.04%.
ರಾಯಚೂರು- 84.02%.
ಬಳ್ಳಾರಿ- 81.54%.
ಬೆಂಗಳೂರು ಉತ್ತರ – 80.93%.
ಬೆಂಗಳೂರು ದಕ್ಷಿಣ – 78.95%.
ಬೀದರ್ – 78.73%.
ಯಾದಗಿರಿ- 75.49%.
ಮಾಧ್ಯಮವಾರು ಫಲಿತಾಂಶ
ಕನ್ನಡ – 69.34%
ಆಂಗ್ಲ – 88.29%
ಉರ್ದು – 63.49%
ಮರಾಠಿ – 69.32%
ತೆಲುಗು – 75.59%
ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ವಿವರ
625ಕ್ಕೆ 625 ಅಂಕವನ್ನು ಒಬ್ಬ ವಿದ್ಯಾರ್ಥಿ ಮಾತ್ರ ಪಡೆದುಕೊಂಡಿದ್ದಾರೆ. 624 ಅಂಕಗಳನ್ನು 7 ಮಂದಿ, 623 ಅಂಕಗಳನ್ನು 14 ಮಂದಿ ಹಾಗೂ 622 ಅಂಕಗಳನ್ನು 21 ಮಂದಿ, 621 ಅಂಕಗಳನ್ನು 44 ಮಂದಿ, 620 ಅಂಕಗಳನ್ನು 64 ಮಂದಿ ಅಂಕಗಳನ್ನು ಪಡೆದಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ