ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗೌರಿ-ಗಣೇಶ ಹಬ್ಬದ ಸಂಭ್ರಮಕ್ಕೆ ಹೆಣ್ಣು ಮಕ್ಕಳಿಗೆ ನಾನಾ ವಿನ್ಯಾಸದ ಟ್ರೆಡಿಷನಲ್ ಲುಕ್ ನೀಡುವ ಉದ್ದ ಲಂಗದ ಡಿಸೈನರ್‌ವೇರ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಫೆಸ್ಟಿವ್ ಸೀಸನ್‌ನ ಕಿಡ್ಸ್ ಫ್ಯಾಷನ್‌ನಲ್ಲಿ (Gowri Ganesha kids fashion), ಇದೀಗ ಹೆಣ್ಣು ಮಕ್ಕಳಿಗೆಂದೇ ಹಳೆಯ ಕಾನ್ಸೆಪ್ಟ್ ಹೊಸ ಶೈಲಿಯಲ್ಲಿ ಬಗೆಬಗೆಯ ಉದ್ದ ಲಂಗದ ಡಿಸೈನರ್‌ವೇರ್‌ಗಳು ಕಾಲಿಟ್ಟಿವೆ. ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಸಜ್ಜಾಗಿವೆ.
ಹಳೆಯ ಫ್ಯಾಷನ್‌ವೇರ್‌ಗೆ ಹೊಸ ರೂಪ
ಉದ್ದ ಲಂಗದ ಕಾನ್ಸೆಪ್ಟ್ ತೀರಾ ಹಳೆಯದು. ಈ ಹಳೆಯ ಕಾನ್ಸೆಪ್ಟ್ ನಮ್ಮ ಟ್ರೆಡಿಷನಲ್ ಲುಕ್ ಸಾಥ್ ನೀಡುತ್ತದೆ ಎಂಬ ಕಾರಣಕ್ಕೆ ಡಿಸೈನರ್‌ಗಳು ಇದೇ ಕಾನ್ಸೆಪ್ಟ್‌ಗೆ ನಾನಾ ರೂಪ ನೀಡಿದ್ದಾರೆ. ಇದು ಫ್ಯಾಷನ್ ಲೋಕದಲ್ಲಿ ಹಿಟ್ ಕೂಡ ಆಗಿದೆ. ಮಾರುಕಟ್ಟೆಯಲ್ಲಿ ಈ ಹೊಸ ರೂಪದ ಉದ್ದ ಲಂಗಗಳು ಲೆಕ್ಕವಿಲ್ಲದಷ್ಟು ಪ್ರಿಂಟ್ಸ್ ಹಾಗೂ ಶೇಡ್‌ಗಳಲ್ಲಿ ಬಿಡುಗಡೆಗೊಂಡಿದ್ದು, ಬೇಡಿಕೆ ಕೂಡ ಮೊದಲಿಗಿಂತ ಹೆಚ್ಚಾಗಿದೆ ಎನ್ನುತ್ತಾರೆ ಕಿಡ್ಸ್ ಫ್ಯಾಷನ್ ಸೆಂಟರ್‌ವೊಂದರ ಮಾಲೀಕರು. ಅವರ ಪ್ರಕಾರ, ಇದೀಗ ಈ ಕಾನ್ಸೆಪ್ಟ್‌ನ ಡ್ರೆಸ್‌ಗಳು ಯಾವ ಮಟ್ಟಿಗೆ ಪಾಪುಲರ್ ಆಗಿವೆ ಎಂದರೇ, ಪುಟ್ಟ ಕಂದಮ್ಮಗಳಿಂದಿಡಿದು ಟಿನೇಜ್ ಹೆಣ್ಣು ಮಕ್ಕಳ ಫ್ಯಾಷನ್‌ನಲ್ಲೂ ಪಾಪುಲರ್ ಆಗಿದೆ ಎನ್ನುತ್ತಾರೆ.
ಹಳ್ಳಿಯ ಡ್ರೆಸ್‌ಕೋಡ್‌ಗೆ ಸಿಕ್ಕಿದ ಮಾನ್ಯತೆ
ಉದ್ದ ಲಂಗ ನಮ್ಮ ಸ್ಥಳೀಯ ಲೋಕಲ್ ಭಾಷೆಯಲ್ಲಿ ಕರೆಯುವ ಹೆಸರು. ಇದನ್ನು ಕೊಂಚ ಸ್ಟೈಲಾಗಿ ಹಾಗೂ ಫ್ಯಾಷೆನಬಲ್ ಆಗಿ ತೋರ್ಪಡಿಸಿದಾಗ ಅದು ಲೆಹೆಂಗಾದ ರೂಪ ತೆಳೆಯುತ್ತದೆ ಎನ್ನುತ್ತಾರೆ ಡಿಸೈನರ್, ರಾಜಿ. ಅವರ ಪ್ರಕಾರ, ನಮ್ಮ ರಾಜ್ಯದ ಹಳ್ಳಿಗಳಲ್ಲಿ ಈ ಡ್ರೆಸ್‌ಕೋಡ್ ಮೊದಲಿನಿಂದಲೂ ಇತ್ತು. ಆದರೆ, ಸಿಂಪಲ್ ಆಗಿತ್ತು. ಇದೀಗ ಇದೇ ಉಡುಪು ಫ್ಯಾಷನೆಬಲ್ ಆಗಿ ಪರಿವರ್ತನೆಯಾಗಿದೆ ಎನ್ನುತ್ತಾರೆ.
ಟ್ರೆಂಡ್‌ನಲ್ಲಿರುವ ಉದ್ದ ಲಂಗದ ಡ್ರೆಸ್
ಕ್ರಾಪ್ ಬ್ಲೌಸ್ ಇರುವಂತಹ ಉದ್ದ ಲಂಗ, ಲೆಹೆಂಗಾದಂತೆ ಕಾಣುವ ಡಿಸೈನರ್ ಉದ್ದ ಲಂಗ, ಪ್ರಿಂಟೆಡ್ ಚಿತ್ತಾರವಿರುವ ಉದ್ದ ಲಂಗ, ಕಾಂಟ್ರಾಸ್ಟ್ ಶೇಡ್‌ನ ಉದ್ದ ಲಂಗ ಬ್ಲೌಸ್ ಸೇರಿದಂತೆ ನಾನಾ ಬಗೆಯವು ಸದ್ಯ ಟ್ರೆಂಡಿಯಾಗಿವೆ.
ಹೆಣ್ಣು ಮಕ್ಕಳ ಉದ್ದ ಲಂಗದ ಆಯ್ಕೆ ಹೇಗೆ?
- ಎತ್ತರಕ್ಕೆ ತಕ್ಕ ಉದ್ದ ಲಂಗದ ಉಡುಪನ್ನು ಆಯ್ಕೆ ಮಾಡಿ.
- ಆದಷ್ಟೂ ಕಲರ್ಫುಲ್ ಇರುವಂತಹದ್ದನ್ನು ಖರೀದಿಸಿ.
- ಮಕ್ಕಳಿಗೆ ಇಷ್ಟವಾಗುವಂತಹ ಡಿಸೈನ್ದ್ದನ್ನು ಕೊಳ್ಳಿ.
- ಸಾಫ್ಟ್ ಫ್ಯಾಬ್ರಿಕ್ನ ಉದ್ದ ಲಂಗಕ್ಕೆ ಪ್ರಾದಾನ್ಯತೆ ನೀಡಿ.
- ಟ್ರೆಂಡಿಯಾಗಿರುವುದನ್ನು ಖರೀದಿಸಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Ganesh Chaturthi: ಪರಿಸರ ಪ್ರೇಮಿಗಳಿಗಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಇಕೋ ಫ್ರೆಂಡ್ಲಿ ಗೌರಿ-ಗಣೇಶ