Site icon Vistara News

Diwali 2023: ದೀಪಾವಳಿ ಕುರಿತಾದ ಗೂಗಲ್‌ನಲ್ಲಿ ನಾನಾ ಪ್ರಶ್ನೆ! ಪಟ್ಟಿ ಮಾಡಿದ ಸಿಇಒ ಸುಂದರ್ ಪಿಚ್ಚೈ

Sundar Pichai

ನವದೆಹಲಿ: ಎಲ್ಲರಿಗೂ ದೀಪಾವಳಿ (Diwali 2023) ಹಬ್ಬದ ಶುಭಾಶಯಗಳನ್ನು (Diwali Wishes) ತಿಳಿಸಿರುವ ಅಲ್ಫಾಬೆಟ್ ಸಿಇಒ (Alphabet CEO) ಹಾಗೂ ಭಾರತೀಯ ಮೂಲದ ಸುಂದರ್ ಪಿಚ್ಚೈ (Sundar Pichai) ಅವರು ಬೆಳಕಿನ ಹಬ್ಬದ ಕುರಿತು ಜಗತ್ತಿನ ನಾನಾ ಸ್ತರದ ಜನರು ಹೊಂದಿರುವ ಕುತೂಹಲದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಸರ್ಚ್ ಎಂಜಿನ್ ದೈತ್ಯ ಗೂಗಲ್‌ನಲ್ಲಿ ದೀಪಾವಳಿ ಹಬ್ಬದ ಕುರಿತು ಬಳಕೆದಾರರು ಕೇಳಲಾದ ಪ್ರಶ್ನೆಗಳನ್ನು ಪಟ್ಟಿ ಕೂಡ ಮಾಡಿದ್ದಾರೆ.

ಗೂಗಲ್ ಸರ್ಚ್ ಇಂಜಿನ್‌ನಲ್ಲಿ ದೀಪಾವಳಿಯ ಟಾಪ್ ಟ್ರೆಂಡಿಂಗ್ ಪ್ರಶ್ನೆಗಳು ಹೀಗಿವೆ….

1-ಭಾರತೀಯರು ದೀಪಾವಳಿಯನ್ನು ಏಕೆ ಆಚರಿಸುತ್ತಾರೆ?
2-ದೀಪಾವಳಿ ಹಬ್ಬದ ವೇಳೆ ರಂಗೋಲಿಯನ್ನು ಏಕೆ ಬಿಡಲಾಗುತ್ತದೆ?
3.ದೀಪಾವಳಿ ಹಬ್ಬಕ್ಕೆ ದೀಪಗಳನ್ನು ಏಕೆ ಬೆಳಗಲಾಗುತ್ತದೆ?
4.ದೀಪಾವಳಿ ದಿನ ಲಕ್ಷ್ಮೀ ಪೂಜೆ ಏಕೆ ಮಾಡುತ್ತಾರೆ?
5.ದೀಪಾವಳಿ ದಿನ ಜನರು ಎಣ್ಣೆ ಸ್ನಾನ ಏಕೆ ಮಾಡುತ್ತಾರೆ?

ದೀಪಾವಳಿಯು ಭಾರತದಾದ್ಯಂತ ಮತ್ತು ಪ್ರಪಂಚದ ಅನೇಕ ಭಾಗಗಳಲ್ಲಿ ಉತ್ಸಾಹದಿಂದ ಆಚರಿಸುವ ಹಬ್ಬವಾಗಿದೆ. ಪ್ರಸಕ್ತ ವರ್ಷ ನವೆಂಬರ್ 12ರಿಂದ ಮೂರು ದಿನಗಳ ಕಾಲ ದೀಪಾವಳಿಯನ್ನು ಆಚರಿಸಲಾಗುತ್ತದೆ. “ಬೆಳಕುಗಳ ಹಬ್ಬ” ಎಂದು ಕರೆಯಲಾಗುವ ದೀಪಾವಳಿಯು ರಾತ್ರಿಯ ಆಕಾಶವನ್ನು ಮಾತ್ರವಲ್ಲದೆ ನಮ್ಮ ಹೃದಯವನ್ನೂ ಬೆಳಗಿಸುತ್ತದೆ, ಸಂತೋಷವನ್ನು ಸಂಕೇತಿಸುತ್ತದೆ , ಸಂಪತ್ತು, ಸಮೃದ್ಧಿಯನ್ನು ಹೆಚ್ಚಿಸುತ್ತದೆ.

ಹಿಂದೂ ಸಂಸ್ಕೃತಿಯ ಆಳದಲ್ಲಿ ಬೇರೂರಿರುವ ದೀಪಾವಳಿಯ ಮೂಲವನ್ನು ಕಾರ್ತಿಕ ಚಂದ್ರನ ಮಾಸದಲ್ಲಿ ಗುರುತಿಸಬಹುದು. ಈ ಹಬ್ಬದ ಕುರಿತು ಭಾರತದ ಪ್ರಾಚೀನ ಗ್ರಂಥಗಳು ಮತ್ತು ದಂತಕಥೆಗಳಲ್ಲಿ ಪ್ರಸ್ತಾಪವಾಗಿರುವುದನ್ನು ಕಾಣಬಹುದು. ರಾವಣನನ್ನು ಸೋಲಿಸಿದ ನಂತರ ರಾಮನು ತನ್ನ ರಾಜ್ಯವಾದ ಅಯೋಧ್ಯೆಗೆ ಹಿಂದಿರುಗಿದ ದಿನ ಎಂದು ನಂಬಲಾಗಿದೆ. ಅವರು ಹಿಂದಿರುಗಿದ ಸಂತೋಷದಿಂದ ಅಯೋಧ್ಯೆಯ ಜನರು, ಅವರ ಮಾರ್ಗವನ್ನು ಬೆಳಗಿಸಲು ದೀಪಗಳನ್ನು ಬೆಳಗಿಸಿದರು. ಇದೇ ಮುಂದೆ ದೀಪಾವಳಿಯ ಸಮಯದಲ್ಲಿ ದೀಪಗಳನ್ನು ಬೆಳಗಿಸುವ ಸಂಪ್ರದಾಯವಾಗಿ ಬೆಳೆಯಿತು ಎನ್ನಲಾಗಿದೆ.

ಭಾರತೀಯ ಸಂಸ್ಕೃತಿಯಲ್ಲಿ ದೀಪಾವಳಿಯು ಭಾರೀ ಪ್ರಾಮುಖ್ಯತೆಯನ್ನು ಹೊಂದಿದೆ. ಏಕೆಂದರೆ ಇದು ಕತ್ತಲೆಯ ಮೇಲೆ ಬೆಳಕಿನ ವಿಜಯ ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದನ್ನು ಪ್ರತಿನಿಧಿಸುತ್ತದೆ. ವ್ಯಕ್ತಿಗಳು ತಮ್ಮ ಮನೆಗಳು ಮತ್ತು ಹೃದಯಗಳನ್ನು ಶುದ್ಧೀಕರಿಸುವ ಸಮಯ, ದ್ವೇಷಗಳನ್ನು ಬಿಡಲು ಮತ್ತು ಹೊಸದಾಗಿ ಪ್ರಾರಂಭಿಸಲು ಇದು ನೆಚ್ಚಿನ ಸಮಯವಾಗಿದೆ. ಈ ಸಂದರ್ಭದಲ್ಲಿ ಕುಟುಂಬಗಳು ಒಟ್ಟಿಗೆ ಸೇರುತ್ತವೆ, ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತವೆ ಮತ್ತು ದಾನ ಕಾರ್ಯಗಳಲ್ಲಿ ತೊಡಗುತ್ತವೆ. ಮೂಲಭೂತವಾಗಿ, ಇದು ಕತ್ತಲೆಯ ಸಮಯದಲ್ಲಿಯೂ ಸಹ, ಭರವಸೆ ಮತ್ತು ಒಳ್ಳೆಯತನದ ಬೆಳಕು ಮೇಲುಗೈ ಸಾಧಿಸಬಹುದು ಎಂಬ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ.

ಈ ಸುದ್ದಿಗಳನ್ನೂ ಓದಿ:
Deepavali 2023: ಈ ದೀಪಾವಳಿಗೆ ಪರ್ಫೆಕ್ಟ್‌ ಲಡ್ಡುಗಳನ್ನು ಮಾಡಬೇಕೇ? ಹಾಗಿದ್ದರೆ, ಈ ತಪ್ಪುಗಳನ್ನು ಮಾಡಬೇಡಿ!
Deepavali 2023: ಲಕ್ಷ್ಮೀಪೂಜೆಯನ್ನು ದೀಪಾವಳಿಯ ಅಮಾವಾಸ್ಯೆಯಂದೇ ಮಾಡುವುದೇಕೆ?
Deepavali 2023: ಅಂಧಕಾರದ ವಿರುದ್ಧ ಪ್ರಕಾಶದ ವಿಜಯ, ತಮಸೋಮಾ ಜ್ಯೋತಿರ್ಗಮಯ…
Deepavali 2023: ದೀಪಾವಳಿಯಂದು ಅಭ್ಯಂಗ ಸ್ನಾನ ಮಾಡುವುದೇಕೆ? ಇದರ ಪ್ರಯೋಜನ ತಿಳಿದಿರಲಿ
Deepavali 2023: ದೀಪಾವಳಿ ಹಬ್ಬದಲ್ಲಿ ದೀಪದ ಮಹತ್ವ ಏನು?

Exit mobile version