ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗಣೇಶನ ಹಬ್ಬದ ಸೀಸನ್‌ನಲ್ಲಿ ಕೈ ಬೆರಳುಗಳನ್ನು ಸುಂದರವಾಗಿಸಬಲ್ಲ ನಾನಾ ಬಗೆಯ ಗಣೇಶನ ಚಿತ್ತಾರ ಮೂಡಿಸಿರುವ ಕೃತಕ ಪ್ರೆಸ್ ಆನ್ ನೇಲ್‌ಗಳು (Festival Nail Art) ಬಿಡುಗಡೆಗೊಂಡಿವೆ. ಯುವತಿಯರನ್ನು ಸೆಳೆದಿವೆ.
ಏನಿದು ಪ್ರೆಸ್ ಆನ್ ನೇಲ್ಸ್?
ಥೇಟ್ ಉಗುರಗಳಂತೆ ಕಾಣುವ ಈ ಪ್ರೆಸ್ ಆನ್ ನೇಲ್‌ಗಳು ಇದೀಗ ನಾನಾ ಡಿಸೈನ್‌ನಲ್ಲಿ ಆಕಾರದಲ್ಲಿ ಎಲ್ಲಾ ನೇಲ್ ಬಾರ್‌ಗಳಲ್ಲೂ ಲಭ್ಯ. ಅಷ್ಟೇಕೆ! ಸಾಮಾನ್ಯ ಫ್ಯಾನ್ಸಿ ಶಾಪ್‌ಗಳಲ್ಲೂ ಲಭ್ಯ. ಇಡೀ ಎರಡೂ ಕೈಗಳ 10 ಕೃತಕ ಉಗುರುಗಳು ಒಂದೇ ಪ್ಯಾಕ್‌ನಲ್ಲಿ ದೊರೆಯುತ್ತವೆ. ಇದಕ್ಕೆ ಪೂರಕ ಎಂಬಂತೆ, ಈ ಹಬ್ಬದ ಸೀಸನ್‌ನಲ್ಲಿ ಗಣೇಶನ ನಾನಾ ಚಿತ್ತಾರವಿರುವ ಪ್ರೆಸ್ ಆನ್ ನೇಲ್‌ಗಳು ಪ್ಯಾಕೆಟ್‌ಗಳಲ್ಲಿ ರಿಟೇಲ್‌ನಲ್ಲಿ ದೊರೆಯುತ್ತಿವೆ. ಇನ್ನು ನೇಲ್ ಆರ್ಟ್ ಡಿಸೈನರ್‌ಗಳು ಕೂಡ ಸಾದಾ ಪ್ರೆಸ್ ಆನ್ ನೇಲ್‌ಗಳ ಮೇಲೆ ಗಣೇಶನ ವಿವಿಧ ಆಕಾರಗಳನ್ನು ಚಿತ್ರಿಸಿ, ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದಾರೆ.
ಆನ್‌ಲೈನ್‌ನಲ್ಲಿ ಉಗುರಿನ ಮೇಲೆ ಗಣೇಶನ ಚಿತ್ತಾರ
ಆನ್‌ಲೈನ್‌ನಲ್ಲಿರುವ ಬ್ಯೂಟಿ ಬ್ಲಾಗ್‌ಗಳು ಹಾಗೂ ಬ್ಯೂಟಿ ಪೇಜ್‌ಗಳಲ್ಲೂ ಈ ಗಣೇಶನ ಚಿತ್ತಾರವಿರುವ ಪ್ರೆಸ್ ಆನ್ ನೇಲ್‌ಗಳನ್ನು ಕಾಣಬಹುದು. ಅಷ್ಟೇ ಏಕೆ, ಕಸ್ಟಮೈಸ್ ಮಾಡಿಕೊಡುತ್ತೆವೆ ಎಂಬ ಜಾಹೀರಾತುಗಳನ್ನು ನೋಡಬಹುದು. ಆ ಮಟ್ಟಿಗೆ ಇದೀಗ ಕಸ್ಟಮೈಸ್ ಮಾಡಿ ಕೊಡುವ ನೇಲ್ ಆರ್ಟ್ ಕಲಾವಿದರು ಅಥವಾ ನೇಲ್ ಆರ್ಟ್ ಡಿಸೈನರ್‌ಗಳ ಬ್ಲಾಗ್‌ಗಳು ಹಾಗೂ ವೆಬ್‌ಸೈಟ್‌ಗಳು ಬ್ಯೂಟಿ ಪ್ರಿಯರನ್ನು ಸೆಳೆಯುತ್ತವೆ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ ಮಾಯಾ. ಅವರ ಪ್ರಕಾರ, ನೇಲ್ ಆರ್ಟ್ ಆಯಾ ಹಬ್ಬಕ್ಕೆ ತಕ್ಕಂತೆ ಥೀಮ್ ಮೂಲಕ ಬದಲಾಗುವುದು ಇಂದು ಸಾಮಾನ್ಯವಾಗಿದೆ ಎನ್ನುತ್ತಾರೆ.
ಗಣಪನ ನಾನಾ ಮುಖಗಳು
ಈ ನೇಲ್ ಆರ್ಟ್‌ನಲ್ಲಿ ಓಂಕಾರದೊಳಗೆ ಗಣಪ, ಗಣಪನ ಸೊಂಡಿಲು, ಮೋದಕ, ಕಡುಬು, ಅಲಂಕಾರ ಹೀಗೆ ನಾನಾ ಬಗೆಯ ಡಿಸೈನ್‌ಗಳನ್ನು ಕಾಣಬಹುದು.
ಗಣಪನ ನೇಲ್ ಆರ್ಟ್ ಪ್ರಿಯರಿಗೆ ಸಲಹೆ
- ದೇವರಿಗೆ ಇರುವ ಭಕ್ತಿ ಚಿತ್ರದ ಮೂಲಕ ಅತಿರೇಕವಾಗಬಾರದು.
- ನೋಡಲು ಆಕರ್ಷಕವಾಗಿರಬೇಕೇ ಹೊರತು ಆಭಾಸ ಉಂಟುಮಾಡಬಾರದು.
- ಕೈಗಳಿಗೆ ಮಾತ್ರ ಈ ನೇಲ್ಆರ್ಟ್ ಸೀಮಿತವಾಗಬೇಕು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Festive Fashion: ಹಬ್ಬದ ಟ್ರೆಡಿಷನಲ್ ಲಂಗ ದಾವಣಿಗೂ ಸಿಕ್ತು ಕೋ ಆರ್ಡ್ ಸೆಟ್ ಲುಕ್!