Site icon Vistara News

Readymade Bagina Trend: ಗೌರಿ ಹಬ್ಬದ ಪ್ರಯುಕ್ತ ಮಾರುಕಟ್ಟೆಗೆ ಕಾಲಿಟ್ಟ 3 ಶೈಲಿಯ ರೆಡಿಮೇಡ್‌ ಬಾಗಿಣ

Readymade Bagina Trend

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಗೌರಿ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ನಾನಾ ಬಗೆಯ ವೈವಿಧ್ಯಮಯ ರೆಡಿಮೇಡ್‌ ಬಾಗಿಣಗಳು (Readymade Bagina Trend) ಕಾಲಿಟ್ಟಿವೆ. ಬ್ಯುಸಿ ಇರುವ ಉದ್ಯೋಗಸ್ಥ ಮಹಿಳೆಯರಿಗೆ ಮಾತ್ರವಲ್ಲ, ಗೃಹಿಣಿಯರ ಹಬ್ಬದ ಆಚರಣೆಗೂ ಸಾಥ್‌ ನೀಡುತ್ತಿವೆ.

“ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗೌರಿ ಹಬ್ಬದ ಪ್ರಯುಕ್ತ ಹೆಣ್ಣು ಮಕ್ಕಳಿಗೆ ನೀಡುವ ನಾನಾ ಬಗೆಯ ವೆರೈಟಿ ಬಾಗಿಣಕ್ಕೆ ಬೇಡಿಕೆ ಹೆಚ್ಚಾಗಿದೆ. ಗೃಹಿಣಿಯರು ಮಾತ್ರವಲ್ಲ, ಉದ್ಯೋಗಸ್ಥ ಮಹಿಳೆಯರು ಕೂಡ ಹಬ್ಬವನ್ನು ಆಚರಿಸುವುದು ಇತ್ತೀಚೆಗೆ ಹೆಚ್ಚಾಗಿದೆ. ಅವರವರ ಅಭಿರುಚಿಗೆ ತಕ್ಕಂತೆ ನಾನಾ ಬಗೆಯ ರೆಡಿಮೇಡ್‌ ಬಾಗಿಣಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಅವುಗಳಲ್ಲಿ ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳಿಗೆ ಕೊಡುವ ವಿಶೇಷ ಬಾಗಿಣಗಳು ಕೂಡ ಪ್ರತ್ಯೇಕವಾಗಿ ದೊರಕುತ್ತಿವೆ. ಇದು ಮಹಿಳೆಯರಿಗೆ ಹಬ್ಬದ ತಯಾರಿಯಲ್ಲಿ ಕೊಂಚ ಕೆಲಸವನ್ನು ತಗ್ಗಿಸಿದೆ“ ಎನ್ನುತ್ತಾರೆ ಗಾಂಧಿ ಬಜಾರ್‌ನ ಶಾಪ್‌ವೊಂದರ ಮಾರಾಟಗಾರರು.

3 ಬಗೆಯ ಮೊರದ ಬಾಗಿಣ

ಇದೀಗ ಅತಿ ಹೆಚ್ಚು ಬೇಡಿಕೆಯಲ್ಲಿರುವ ಮೊರದ ಬಾಗಿಣದಲ್ಲಿ ಸಿಂಗಾರಗೊಂಡ ಆಕರ್ಷಕ ಡಿಸೈನರ್‌ ಬಾಗಿಣ, ಮಿನಿ ಗೌರಿ ಮುಖವನ್ನು ಎಂಬೋಸಿಂಗ್‌ನಂತೆ ಅಂಟಿಸಿ ಅಲಂಕಾರ ಮಾಡಲಾದ ಬಾಗಿಣ ಮತ್ತು ಮಿನಿ ಬಾಗಿಣಗಳು ಅತಿ ಹೆಚ್ಚು ಮಾರಾಟವಾಗುತ್ತಿವೆ ಎನ್ನುತ್ತಾರೆ ಮೊರದ ಬಾಗಿಣ ಮಾರಾಟಗಾರರು.

ಆಕರ್ಷಕ ಡಿಸೈನರ್‌ ಬಾಗಿಣ

ಅರೇ, ಇದೇನಿದು ಬಾಗಿಣಕ್ಕೂ ಡಿಸೈನರ್‌ ಹೆಸರು ತಗುಲಿ ಹಾಕಿಕೊಂಡಿತಾ! ಎಂದುಕೊಂಡರೇ ಹೌದು. ಈ ಬಗೆಯ ಬಾಗಿಣಗಳು ಸಾಕಷ್ಟು ದಿನಗಳ ಹಿಂದೆಯೇ ಸಿದ್ಧಗೊಂಡಿರುತ್ತವೆ. ಮೊರದ ಮೇಲ್ಭಾಗವನ್ನು ಕಲಾವಿದರು ಅಥವಾ ಮಹಿಳಾ ಕರಕುಶಲ ಕರ್ಮಿಗಳು ನಾನಾ ಬಗೆಯ ಡಿಸೈನ್‌ ಮಾಡಿರುತ್ತಾರೆ. ಝರಿಯಿಂದ ಮೇಲ್ಭಾಗವನ್ನು ವಿನ್ಯಾಸಗೊಳಿಸಿ, ಸೈಡಿನಲ್ಲಿ ಕುಚ್ಚು ಹಾಗೂ ಬೀಡ್ಸ್‌ ಅಂಟಿಸಿ ಸಿಂಗರಿಸಿರುತ್ತಾರೆ. ಹೊಸದಾಗಿ ಮದುವೆಯಾಗಿರುವ ಹೆಣ್ಣು ಮಕ್ಕಳಿಗೆ ಗೌರಿ ಹಬ್ಬದ ದಿನದಂದು ನೀಡಲು ಅತಿ ಹೆಚ್ಚಾಗಿ ಖರೀದಿಸುತ್ತಾರೆ. ಫೋಟೋಶೂಟ್‌ಗೂ ಇವು ಹೆಚ್ಚುಬಳಕೆಯಾಗುತ್ತಿವೆ .

ಗೌರಿ ಮುಖದ ಮೊರದ ಬಾಗಿಣ

ಪುಟ್ಟ ಗೌರಿಯ ಮುಖವನ್ನು ಎಂಬೋಸಿಂಗ್‌ ರೀತಿಯಲ್ಲಿ ಅಂಟಿಸಿ, ರೇಷ್ಮೆ ಬಾರ್ಡರ್‌ನಲ್ಲಿ ನಾನಾ ಬಗೆಯಲ್ಲಿ ಸಿಂಗರಿಸಿ ಸಿದ್ಧಪಡಿಸಿದ ಮೊರದ ಬಾಗಿಣವೇ ಇದು. ಇದು ಕೂಡ ಈ ಬಾರಿ ಸಾಕಷ್ಟು ವೈವಿಧ್ಯಮಯ ಡಿಸೈನ್‌ಗಳಲ್ಲಿ ದೊರೆಯುತ್ತಿವೆ.

ಅಲಂಕಾರಕ್ಕಾಗಿ ಮಿನಿ ಬಾಗಿಣ

ಗೌರಿ ಪೂಜೆಯನ್ನು ಮಾಡುವ ಮಹಿಳೆಯರು ತಾವು ಬಾಗಿಣದ ಅಲಂಕಾರವನ್ನು ಮಾಡುತ್ತಾರೆ. ನೋಡಲು ಕಡಿಮೆ ಜಾಗದಲ್ಲೆ ಇರಿಸಬಹುದಾಗಿರುವ ಈ ಮಿನಿ ಮೊರದ ಬಾಗಿಣದಲ್ಲಿ ಎಲ್ಲವೂ ಪುಟ್ಟ ಪುಟ್ಟ ಸಾಮಗ್ರಿಗಳು ಒಳಗೊಂಡಿರುತ್ತವೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Gowri Ganesha Kids Fashion: ಹಬ್ಬದ ಫ್ಯಾಷನ್‌ನಲ್ಲಿ ಹೆಣ್ಣು ಮಕ್ಕಳಿಗೆ ಬಂತು ಟ್ರೆಡಿಷನಲ್‌ ಉದ್ದ ಲಂಗದ ಡ್ರೆಸ್

Exit mobile version