ವಾಷಿಂಗ್ಟನ್: ಅಮೆರಿಕದ ಭಾರತೀಯ ರಾಯಭಾರ ಕಚೇರಿಯಾಗಿರುವ ಇಂಡಿಯಾ ಹೌಸ್‌ನಲ್ಲಿ ಭಾನುವಾರ ಸಂಭ್ರಮದ ವಾತಾವರಣವಿತ್ತು. ಶ್ವೇತಭವನದ ವಿಶೇಷ ಪ್ರತಿನಿಧಿಗಳು, ಡೆಮಾಕ್ರಟಿಕ್ ಮತ್ತು ರಿಪಬ್ಲಿಕ್ ಪಕ್ಷದ ಪ್ರಮುಖ ನೇತಾರರು ಇಂಡಿಯಾ ಹೌಸ್‌ಗೆ ಆಗಮಿಸಿ, ಭಾರತೀಯ ಸಾಂಸ್ಕೃತಿಕ ವೈವಿಧ್ಯತೆಯ ಸಂಭ್ರಮದಲ್ಲಿ ಪಾಲ್ಗೊಂಡರು ಮತ್ತು ಭಾರತ-ಅಮೆರಿಕ ಸಂಬಂಧಗಳನ್ನು ಹೊಗಳಿದರು. ತರಣಜಿತ್ ಸಿಂಗ್ ಸಂಧು ಅಮೆರಿಕದಲ್ಲಿರುವ ಭಾರತೀಯ ರಾಯಭಾರಿಯಾಗಿದ್ದಾರೆ. ಅಮೆರಿಕದ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೋನಾಥನ್ ಫಿನರ್ ಅವರು ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ನಾಯಕತ್ವವನ್ನು ಕೊಂಡಾಡಿದರು.
ಈ ಸಮಾರಂಭದಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರನ್ನು ಪ್ರತಿನಿಧಿಸಿದ್ದ ಫಿನರ್, ಇತ್ತೀಚೆಗೆ ಬಾಲಿಯಲ್ಲಿ ನಡೆದ ಜಿ20 ಶೃಂಗದಲ್ಲಿ ಒಮ್ಮತ ನಿರ್ಧಾರಕ್ಕೆ ಬರಲು ಮೋದಿ ಅವರು ತೋರಿದ ನಾಯಕತ್ವವನ್ನು ಕೊಂಡಾಡಿದರು. ಜಾಗತಿಕ ಅಜೆಂಡಾವನ್ನು ಜಾರಿ ಮಾಡಲು ಜೋ ಬೈಡೆನ್ ನೋಡುವ ಜಾಗತಿಕ ನಾಯಕರ ಪೈಕಿ ಮೋದಿ ಅಗ್ರಗಣ್ಯರಾಗಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.
ಇದೇ ವೇಳೆ, ಅಮೆರಿಕದ ಸರ್ಜನ್ ಜನರಲ್ ವಿವೇಕ ಮೂರ್ತಿ ಅವರು ತಮ್ಮ ಮೂಲ ಹಾಗೂ ಇಂಡಿಯಾ-ಅಮೆರಿಕ ಆರೋಗ್ಯ ಸಹಭಾಗಿತ್ವದ ಭವಿಷ್ಯದ ಬಗ್ಗೆ ಮಾತನಾಡಿದರು. ಮೇರಿಲ್ಯಾಂಡ್ ಹೊಸ ಗವರ್ನರ್ ಅರುಣಾ ಮಿಲ್ಲರ್ ಅವರು ಈ ವೇಳೆ ಮಾತನಾಡಿ, ಮಹಾತ್ಮ ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್ ಪ್ರಭಾವದ ಬಗ್ಗೆ ಹೇಳಿಕೊಂಡರು.
ಇದನ್ನೂ ಓದಿ | Biden Salutes Modi | ಜಿ20 ಸಭೆ ವೇಳೆ ಮೋದಿಗೆ ಅಮೆರಿಕ ಅಧ್ಯಕ್ಷ ಬೈಡೆನ್ ಸೆಲ್ಯೂಟ್, ಫೋಟೊ ವೈರಲ್