ವಾಷಿಂಗ್ಟನ್: ಅಮೆರಿಕದ ಶಿಕ್ಷಕರೊಬ್ಬರು (American Teacher) ತಮ್ಮ ಹಿತ್ತಲಿನಲ್ಲಿ ಬೃಹತ್ ಗಾತ್ರದ ಕುಂಬಳ ಕಾಯಿಯನ್ನು (Big Pumpkin) ಬೆಳೆದು ಎಲ್ಲರ ಗಮನ ಸೆಳೆದಿದ್ದಾರೆ. ಈ ಕುಂಬಳ ಕಾಯಿ ಸುಮಾರು 1247 ಕಿಲೋ ಗ್ರಾಮ್ ತೂಗುತ್ತದೆ! ಈ ಬೃಹತ್ ಕುಂಬಳಕಾಯಿಗೆ ಅವರು ಅಮೆರಿಕದ ಬಾಸ್ಕೆಟ್ ಬಾಲ್ ದಂತಕತೆ ಮೈಕೆಲ್ ಜೋರ್ಡನ್(Michael Jordan) ಎಂದು ನಾಮಕರಣ ಮಾಡಿದ್ದಾರೆ. ಅಂದ ಹಾಗೆ, ಈ ಗಜಗಾತ್ರದ ಕುಂಬಳಕಾಯಿ ಬೆಳೆದವರು ಅಮೆರಿಕದ ಮಿನ್ನೇಸೋಟ (Minnesota teacher) ರಾಜ್ಯದ ಟ್ರಾವಿಸ್ ಗಿಂಜರ್ (Travis Gienger) ಅವರು. ಅನೋಕಾ ಟೆಕ್ನಿಕಲ್ ಕಾಲೇಜಿನಲ್ಲಿ ತೋಟಗಾರಿಕೆಯನ್ನು ಕಲಿಸುವ ಟ್ರಾವಿಸ್ ಗಿಂಜರ್ ಅವರು, ಕ್ಯಾಲಿಫೋರ್ನಿಯಾದ ಹಾಫ್ ಮೂನ್ ಬೇನಲ್ಲಿ 50 ನೇ ವಿಶ್ವ ಚಾಂಪಿಯನ್‌ಶಿಪ್ ಕುಂಬಳಕಾಯಿ ಪ್ರದರ್ಶನಕ್ಕಾಗಿ ಈ ಬೃಹತ್ ಕುಂಬಳಕಾಯಿ ಬೆಳೆದಿದ್ದಾರೆ. ಇದು ವಿಶ್ವದಲ್ಲಿ ಅತಿ ತೂಕದ ಕುಂಬಳಕಾಯಿ ಎಂಬ ದಾಖಲೆಯನ್ನು ಮಾಡಿದೆ(Viral News).
A new world 🎃 record! The winner of the 50th annual Half Moon Bay World Championship Pumpkin Weigh-Off.
— Ian Cull (@NBCian) October 9, 2023
2749 pounds. Defending champ Travis Gienger from Minnesota wins again. pic.twitter.com/TSvimsUzBQ
ತಾವು ಬೆಳೆದ ಕುಂಬಳ ಕಾಯಿಗೆ ಯಾಕೆ ಮೈಕೆಲ್ ಜೋರ್ಡನ್ ಅವರು ಹೆಸರಿಟ್ಟೆ ಎಂಬುದನ್ನು ಟ್ರಾವಿಸ್ ಅವರು ಬಹಿರಂಗ ಪಡಿಸಿದ್ದಾರೆ. ” ಈ ಕುಂಬಳಕಾಯಿಯನ್ನು ಮೈಕೆಲ್ ಜೋರ್ಡನ್ ಎಂದು ಕರೆಯುತ್ತಿದ್ದೇವೆ. ಯಾಕೆಂದರೆ, ಇದು 2023 ಮೈಕೆಲ್ ಜೋರ್ಡನ್ ವರ್ಷ. ಅವರು ಸಾರ್ವಕಾಲಿಕ ಶ್ರೇಷ್ಠ ಬ್ಯಾಸ್ಕೆಟ್‌ಬಾಲ್ ಆಟಗಾರರಾಗಿದ್ದಾರೆ. ಹಾಗಾಗಿ, ಕುಂಬಳ ಕಾಯಿಗೆ ಅವರ ಹೆಸರು ಇಟ್ಟಿದ್ದೇನೆ” ಗಿಂಚರ್ ಅವರು ತಿಳಿಸಿದ್ದಾರೆ. ಕುಂಬಳಕಾಯಿ ಬೆಳೆಯಲು ಪ್ರಾರಂಭಿಸಿದಾಗ ಅದು “ಬ್ಯಾಸ್ಕೆಟ್‌ಬಾಲ್ ರೀತಿಯಲ್ಲಿ” ಇತ್ತು. ಹಾಗಾಗಿ, ಇದೊಂದು ಸಂಪೂರ್ಣ ಬಾಸ್ಕೆಟ್ ಬಾಲ್ ರೀತಿಯ ಕುಂಬಳಕಾಯಿ ಎಂದು ಅವರು ಭಾವಿಸಿದ್ದರು.
ಆದರೆ, ಬೆಳೆಯುತ್ತಾ ಮೈಕೆಲ್ ಜೋರ್ಡನ್(ಕುಂಬಳಕಾಯಿ) ಬೃಹತ್ ಗಾತ್ರಕ್ಕೆ ತಿರುಗಿತು. ಈ ಕುಂಬಳಕಾಯಿ ಸುಮಾರು 2,110 ಬಾಸ್ಕೆಟ್‌ಬಾಲ್‌ಗಳಿಗೆ ಅಥವಾ ಸುಮಾರು 275 ಸಾಮಾನ್ಯ ಕುಂಬಳಕಾಯಿಗಳಿಗೆ ಸಮನಾದ ಬೃಹತ್, ಕಿತ್ತಳೆ ಕುಂಬಳಕಾಯಿಯಾಗಿ ಬೆಳೆದಿದೆ.
ಈ ಸುದ್ದಿಯನ್ನೂ ಓದಿ: Pumpkin Seeds Benefits: ಕುಂಬಳಕಾಯಿ ಬೀಜ ಆರೋಗ್ಯಕ್ಕೆ ಪೂರಕ
ಈ ಬೃಹತ್ ಗಾತ್ರದ ಕುಂಬಳಕಾಯಿಯನ್ನು ಬೆಳೆಯಲು ಗಿಂಜರ್ ಅವರು ಸುಮಾರು 15,000 ಡಾಲರ್ ವೆಚ್ಚ ಮಾಡಿದ್ದಾರೆ. ಕುಂಬಳಕಾಯಿ ಪ್ರದರ್ಶನದಲ್ಲಿ ಭಾಗವಹಿಸಲು ಕಳೆದವಾರ ಈ ಬೃಹತ್ ಗಾತ್ರದ ಕುಂಬಳಕಾಯಿಯನ್ನು ಬಹಳ ಎಚ್ಚರಿಕೆಯೊಂದಿಗೆ ಅವರು ಮಿನ್ನೇಸೋಟದಿಂದ ಕ್ಯಾಲಿಫೋರ್ನಿಯಾಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ಎಸ್‌ಎಫ್‌ಗೇಟ್ ವರದಿ ಮಾಡಿದೆ. 43 ವರ್ಷದ ಗಿಂಜರ್ ಅವರು ತಮ್ಮ ಹದಿಹರೆಯದ ದಿನಗಳಿಂದಲೂ ಕುಂಬಳಕಾಯಿಯನ್ನು ಬೆಳೆಯುತ್ತಿದ್ದಾರೆ. ಇದು ಅವರು ಕುಟುಂಬದ ಸಂಪ್ರದಾಯವಾಗಿದೆ.
ಇತ್ತೀಚಿನ ನಾಲ್ಕು ಕುಂಬಳಕಾಯಿ ತೂಕದಲ್ಲಿ ಅವರು ಮೂರು ಜಯ ಸಾಧಿಸಿದ್ದಾರೆ. ಪ್ರಸ್ತುತ ಟ್ರಾವಿಸ್ 30 ಸಾವಿರ ಡಾಲರ್ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಮುಂಬರುವ ವರ್ಷದಲ್ಲಿ ಇನ್ನೂ ದೊಡ್ಡ ಕುಂಬಳಕಾಯಿಯನ್ನು ಬೆಳೆಸಲು ಅವರು ಗೆಲುವುಗಳನ್ನು ಬಳಸಿಕೊಳ್ಳಲು ಉದ್ದೇಶಿಸಿದ್ದಾರೆ ಎಂದು ಅವರು ಎಸ್ಎಫ್‌ಗೇಟ್ ವರದಿ ಮಾಡಿದೆ.