Site icon Vistara News

Most Powerful Countries: ವಿಶ್ವದ ಬಲಿಷ್ಠ ರಾಷ್ಟ್ರಗಳ ಪಟ್ಟಿ ಬಿಡುಗಡೆ; ಭಾರತಕ್ಕೆ ಎಷ್ಟನೇ ಸ್ಥಾನ?

world

world

ನ್ಯೂಯಾರ್ಕ್‌: ವಿಶ್ವದ ಪ್ರಬಲ ರಾಷ್ಟ್ರಗಳ (Most Powerful Countries) ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. 2024ರ ಯುಎಸ್‌ ನ್ಯೂಸ್‌ ಪವರ್‌ ರ‍್ಯಾಂಕಿಂಗ್‌ (2024 US News Power Rankings) ಪ್ರಕಾರ ಅಮೆರಿಕ ಮೊದಲ ಸ್ಥಾನದಲ್ಲಿದೆ. ಆ ಮೂಲಕ ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಮುಂದುವರಿದಿದೆ. ತಾಂತ್ರಿಕ ಪ್ರಗತಿ ಮತ್ತು ಆರ್ಥಿಕ ಪ್ರಭಾವದಿಂದಾಗಿ ಚೀನಾ ಎರಡನೇ ಸ್ಥಾನದಲ್ಲಿದೆ.

ಭಾರತಕ್ಕೆ ಎಷ್ಟನೇ ಸ್ಥಾನ?

ಇನ್ನು ಭಾರತ ಮಹತ್ವದ ಪ್ರಗತಿ ಸಾಧಿಸಿದ್ದು, 12ನೇ ಸ್ಥಾನ ಪಡೆದಿದೆ. ದೃಢವಾದ ಆರ್ಥಿಕತೆ, ಬಲವಾದ ಅಂತಾರಾಷ್ಟ್ರೀಯ ಸಂಬಂಧ ಮತ್ತು ಪ್ರಭಾವಶಾಲಿ ಮಿಲಿಟರಿ ಶಕ್ತಿಯ ಕಾರಣದಿಂದ ಭಾರತ ಜಾಗತಿಕವಾಗಿ ಶಕ್ತಿಶಾಲಿ ದೇಸವಾಗಿ ಹೊರ ಹೊಮ್ಮುತ್ತಿದೆ. ವಿಶೇಷ ಎಂದರೆ ವಿಶ್ವದ ಜಿಡಿಪಿಯಲ್ಲಿ ಭಾರತ 5ನೇ ಸ್ಥಾನದಲ್ಲಿದೆ. ಅಮೆರಿಕ, ಚೀನಾ, ಜಪಾನ್‌ ಮತ್ತು ಜರ್ಮನಿ ಮೊದಲ 4 ಸ್ಥಾನವನ್ನು ಹಂಚಿಕೊಂಡಿರುವ ರಾಷ್ಟ್ರಗಳು.

ಮಾನದಂಡವೇನು?

ಈ ಪಟ್ಟಿಯನ್ನು ಪ್ರಮುಖ 5 ಅಂಶಗಳ ಆಧಾರದಲ್ಲಿ ತಯಾರಿಸಲಾಗಿದೆ.

ಒಂದು ದೇಶದ ಜನಸಂಖ್ಯೆಯೂ ಶ್ರೇಯಾಂಕದ ಮೇಲೆ ಪರಿಣಾಮ ಬೀರುತ್ತದೆ. ಜತೆಗೆ ಮಾನವ ಬಂಡವಾಳ, ಶಿಕ್ಷಣ ಮತ್ತು ಜನಸಂಖ್ಯೆಯ ಕೌಶಲ್ಯಗಳು ಸಹ ಮುಖ್ಯವಾಗುತ್ತದೆ.

ಯಾವ ದೇಶಕ್ಕೆ ಯಾವ ಸ್ಥಾನ?

ತಂತ್ರಜ್ಞಾನ, ಹಣಕಾಸು ಮತ್ತು ಮನೋರಂಜನೆಯಂತಹ ವಿವಿಧ ಪ್ರಮುಖ ಕ್ಷೇತ್ರಗಳಲ್ಲಿ ಅಮೆರಿಕ ಗಾಡ ಪ್ರಭಾವ ಬೀರಿರುವುದರಿಂದ ತನ್ನ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ. ಚೀನಾ ಕೃತಕ ಬುದ್ಧಿಮತ್ತೆ, 5ಜಿ ಕೇತ್ರದಲ್ಲಿ ಶಾಧಿಸುತ್ತಿರುವ ಪ್ರಗತಿ, ತಾಂತ್ರಿಕ ಶಕ್ತಿಯಿಂದಾಗಿ ದ್ವಿತೀಯ ಸ್ಥಾನ ತನ್ನದಾಗಿಸಿಕೊಂಡಿದೆ.

ರಷ್ಯಾ ಮೂರನೇ ಅತ್ಯಂತ ಶಕ್ತಿಶಾಲಿ ರಾಷ್ಟ್ರ ಎನಿಸಿಕೊಂಡಿದೆ. ರಾಜಕೀಯ ಪ್ರಭಾವ, ಮಿಲಿಟರಿ ಶಕ್ತಿಯ ಪ್ರಭಾವದಿಂದ ಇದು ತನ್ನ ಮೂರನೇ ಸ್ಥಾನವನ್ನು ಕಾಪಾಡಿಕೊಂಡಿದೆ. ಹಸಿರು ಇಂಧನ ಮತ್ತು ತಂತ್ರಜ್ಞಾನಗಳ ಬಲದಿಂದ ಜರ್ಮನಿ ನಾಲ್ಕನೇ ರ‍್ಯಾಂಕ್‌ ಗಳಿಸಲುವಲ್ಲಿ ಯಶಸ್ವಿಯಾಗಿದೆ. ಇಂಗ್ಲೆಂಡ್‌ ಐದನೇ ಸ್ಥಾನ ಪಡೆದುಕೊಂಡಿದೆ. ಪರಿಸರ ಸ್ನೇಹಿ ಉಪಕ್ರಮಗಳ ಮೇಲೆ ಹೆಚ್ಚಿನ ಗಮನ ಹರಿಸುತ್ತಿರುವುದರಿಂದ ಇಂಗ್ಲೆಂಡ್‌ ಈ ಪಟ್ಟಿಯಲ್ಲಿ 5ನೇ ರ‍್ಯಾಂಕ್‌ ಹೊಂದಿದೆ.

ವಿಶ್ವದ ಬಲಿಷ್ಠ ಟಾಪ್‌ 10 ದೇಶಗಳು

ರ‍್ಯಾಂಕ್‌ದೇಶ
1ಅಮೆರಿಕ
2ಚೀನಾ
3ರಷ್ಯಾ
4ಜರ್ಮನಿ
5ಇಂಗ್ಲೆಂಡ್‌
6ಉತ್ತರ ಕೊರಿಯ
7ಫ್ರಾನ್ಸ್‌
8ಜಪಾನ್‌
9ಸೌದಿ ಅರೇಬಿಯಾ
10ಯುಎಇ
12ಭಾರತ

ಬದಲಾಗುತ್ತಿರುವ ಜಾಗತಿಕ ಶಕ್ತಿ

ಶ್ರೇಯಾಂಕಗಳು ಬದಲಾಗುತ್ತಿರುವ ಜಾಗತಿಕ ಶಕ್ತಿಯನ್ನು ಸೂಚಿಸುತ್ತದೆ. ಚೀನಾದ ತ್ವರಿತ ಪ್ರಗತಿ ಮತ್ತು ಭಾರತದಂತಹ ಉದಯೋನ್ಮುಖ ಆರ್ಥಿಕತೆಗಳು ಜಾಗತಿಕವಾಗಿ ಪ್ರಭಾವ ಬೀರುವುದನ್ನು ಪಟ್ಟಿ ತಿಳಿಸುತ್ತದೆ. ಹಸಿರು ಇಂಧನದತ್ತ ಹೆಚ್ಚಿದ ಗಮನ, ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಸಂಶೋಧನೆಯನ್ನು ಆದ್ಯತೆಯಾಗಿ ಪರಿಗಣಿಸುತ್ತಿರುವುದು ಕೂಡ ಕಂಡು ಬರುತ್ತಿದೆ.

ಇದನ್ನೂ ಓದಿ: Corrupt Countries List: ಅತ್ಯಂತ ಹೆಚ್ಚು ಭ್ರಷ್ಟಾಚಾರ ಹೊಂದಿರುವ ದೇಶಗಳ ಪಟ್ಟಿ ಬಿಡುಗಡೆ; ಭಾರತಕ್ಕೆ ಎಷ್ಟನೇ ಸ್ಥಾನ?

Exit mobile version