Site icon Vistara News

Physical Abuse: ಐವರಿಂದ ಗ್ಯಾಂಗ್‌ರೇಪ್‌; ಸಹಾಯಕ್ಕಾಗಿ ಅಂಗಲಾಚುತ್ತಿರುವ ಮಹಿಳೆಯ ವಿಡಿಯೋ ವೈರಲ್‌

physical abuse

ಪ್ಯಾರಿಸ್‌: ಬಹುನಿರೀಕ್ಷಿತ ಒಲಿಂಪಿಕ್ಸ್‌ಗೂ ಮುನ್ನ ಪ್ಯಾರಿಸ್‌ನಲ್ಲಿ ಭೀಕರ ಘಟನೆಯೊಂದು ಪ್ರಪಂಚದ ಗಮನ ಸೆಳೆದಿದೆ. ಪ್ಯಾರಿಸ್‌ನಲ್ಲಿ ಆಸ್ಟ್ರೇಲಿಯಾದ ಮಹಿಳೆಯೊಬ್ಬಳ ಮೇಲೆ ಐವರು ಕಿಡಿಗೇಡಿಗಳು ಸಾಮೂಹಿಕ ಅತ್ಯಾಚಾರ(Physical Abuse) ಎಸಗಿರುವ ಘಟನೆ ವರದಿಯಾಗಿದೆ. ಜುಲೈ 19ರ ಮಧ್ಯರಾತ್ರಿಯಲ್ಲಿ ನಡೆದ ಘೋರ ಕೃತ್ಯದ ಬಗ್ಗೆ ಫ್ರೆಂಚ್ ಪ್ರಾಸಿಕ್ಯೂಟರ್‌ಗಳು ತನಿಖೆ ನಡೆಸುತ್ತಿದ್ದಾರೆ. ಇನ್ನು ದೌರ್ಜನ್ಯಕ್ಕೊಳಗಾದ ಮಹಿಳೆ ಘಟನೆ ಬಳಿಕ ಸಹಾಯಕಕ್ಕಾಗಿ ಅಂಗಲಾಚುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್‌(Viral Video) ಆಗುತ್ತಿದೆ.

ವಿಡಿಯೋದಲ್ಲೇನಿದೆ?

ಮಹಿಳೆ ಅಂಗಡಿಯೊಳಗೆ ಓಡಿ ಬಂದು ಅಲ್ಲಿದ್ದ ಸಿಬ್ಬಂದಿಗೆ ಸಹಾಯ ಮಾಡುವಂತೆ ಬೇಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ಕಬಾಬ್‌ ಅಂಗಡಿ ಪ್ಯಾರಿಸ್‌ನ 18 ನೇ ಅರೋಂಡಿಸ್‌ಮೆಂಟ್‌ನಲ್ಲಿ ಬೌಲೆವರ್ಡ್ ಡಿ ಕ್ಲಿಚಿ, ಮೌಲಿನ್ ರೂಜ್‌ಗೆ ಹತ್ತಿರದಲ್ಲಿದೆ. ಆಕೆಗೆ ಸಾಂತ್ವನ ಹೇಳಲು ಸಿಬ್ಬಂದಿ ಮತ್ತು ಗ್ರಾಹಕರು ಆಕೆಯ ಸುತ್ತಲೂ ನೆರೆದಿರುವುದು ಕಂಡುಬರುತ್ತದೆ. ಶೀಘ್ರದಲ್ಲೇ, ಒಬ್ಬ ವ್ಯಕ್ತಿ ಕಬಾಬ್ ಅಂಗಡಿಯನ್ನು ಪ್ರವೇಶಿಸಿದನು, ಮತ್ತು ಮಹಿಳೆ ಅವನನ್ನು ತನ್ನ ಮೇಲೆ ದಾಳಿ ನಡೆಸಿದವರಲ್ಲಿ ಒಬ್ಬ ಎಂದು ಗುರುತಿಸಿದಳು. ಅಲ್ಲಿದ್ದ ಜನ ಆತನನ್ನು ಚೆನ್ನಾಗಿ ಥಳಿಸಿ ಓಡಿಸಿದ್ದಾರೆ. ನಂತರ, ಅಗ್ನಿಶಾಮಕ ಸಿಬ್ಬಂದಿ ಮಹಿಳೆಗೆ ತುರ್ತು ನೆರವು ನೀಡಿದರು ಮತ್ತು ನಂತರ ಸಂತ್ರಸ್ತೆಯನ್ನು ಆಸ್ಪತ್ರೆಗೆ ಕರೆದೊಯ್ದರು.

ವರದಿಗಳ ಪ್ರಕಾರ, ಮಹಿಳೆಯು ಮೌಲಿನ್ ರೂಜ್ ಬಳಿ ಮದ್ಯಪಾನ ಮಾಡುತ್ತಿದ್ದಾಗ ಆಫ್ರಿಕನ್‌ ಪುರುಷರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಪ್ಯಾರಿಸ್‌ನಲ್ಲಿರುವ ಆಸ್ಟ್ರೇಲಿಯಾದ ರಾಯಭಾರ ಕಚೇರಿಯು ಫ್ರೆಂಚ್ ರಾಜಧಾನಿಯಲ್ಲಿ ಹಲ್ಲೆಗೊಳಗಾದ ನಾಗರಿಕರಿಗೆ ಕಾನ್ಸುಲರ್ ನೆರವು ನೀಡಲು ಪ್ರಯತ್ನಿಸಿದೆ ಎಂದು ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರಗಳು ಮತ್ತು ವ್ಯಾಪಾರ ಇಲಾಖೆ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.

“ಇದು ತುಂಬಾ ಆಘಾತಕಾರಿ ಅನುಭವ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಸಹಾಯವನ್ನು ಒದಗಿಸಲು ಸಿದ್ಧರಾಗಿದ್ದೇವೆ” ಎಂದು ಹೇಳಿಕೆ ತಿಳಿಸಿದೆ. ಸಂತ್ರಸ್ತೆಯ ಗೌಪ್ಯತೆಯನ್ನು ರಕ್ಷಿಸಲು ಇದು ಯಾವುದೇ ಇತರ ಮಾಹಿತಿಯನ್ನು ಒದಗಿಸಿಲ್ಲ.

ವಾರಾಂತ್ಯದಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು 25 ವರ್ಷದ ಆಸ್ಟ್ರೇಲಿಯನ್ ಮಹಿಳೆ ಮಾಡಿದ ಆರೋಪಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಪ್ಯಾರಿಸ್ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ. ಇನ್ನು ಇದೇ ಶುಕ್ರವಾರ ಸೀನ್ ನದಿ ದಡದಲ್ಲಿ ಒಲಂಪಿಕ್ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ ಸಿಗಲಿದೆ. ಆಗಸ್ಟ್ 11 ರವರೆಗೆ ನಡೆಯುವ ಒಲಿಂಪಿಕ್ಸ್‌ಗಾಗಿ ನಗರದಲ್ಲಿ ಪ್ರತಿದಿನ 35,000 ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ.

ಇದನ್ನೂ ಓದಿ: Donald Trump: ಅಮೆರಿಕವೂ ಐರನ್ ಡೋಮ್ ಕ್ಷಿಪಣಿ ತಯಾರಿಸಲಿದೆ; ಡೊನಾಲ್ಡ್‌ ಟ್ರಂಪ್‌ ಸೂಚನೆ

Exit mobile version