Site icon Vistara News

Starbucks CEO: ಸಿಕ್ರೆ ಇಂಥಾ ಕೆಲ್ಸ ಸಿಗ್ಬೇಕಪ್ಪಾ! 1600 ಕಿ.ಮೀ ದೂರ ಆಫೀಸ್‌..ದಿನಾ ಓಡಾಡೋಕೆ ಕಂಪನಿ ಜೆಟ್‌! ಈತ ಪುಣ್ಯವಂತನೇ ಸರಿ

Starbucks CEO

ನವದೆಹಲಿ: ತಮ್ಮ ಉದ್ಯೋಗಿಗಳು ನೆಲೆಸಿರುವ ಸ್ಥಳ ಸ್ವಲ್ಪ ದೂರದಲ್ಲಿದ್ದರೂ ರಿಲೊಕೇಟ್‌ ಆಗುವಂತೆ ಹಲವು ಕಂಪನಿಗಳು ತಾಕೀತು ಮಾಡುತ್ತವೆ. ಇನ್ನು ತಾವು ಕೆಲವು ಮಾಡುವ ಕಂಪನಿ ಸ್ವಲ್ಪ ದೂರದಲ್ಲಿದ್ದರೂ ಒಂದೂ ಕ್ಯಾಬ್‌ ವ್ಯವಸ್ಥೆ ಮಾಡಿ ಇಲ್ಲವೇ ವರ್ಕ್‌ ಫ್ರಂ ಹೋಂ ವ್ಯವಸ್ಥೆ ಮಾಡಿಕೊಡಿ ಎಂದು ಹಲವು ಉದ್ಯೋಗಿಗಳು ಮನವಿ ಮಾಡಿಕೊಳ್ಳುವುದನ್ನು ನಾವು ಕಂಡಿದ್ದೇವೆ. ಆದರೆ ಖ್ಯಾತ ಸ್ಟಾರ್‌ ಬಕ್ಸ್‌ ಸಂಸ್ಥೆಯ ಹೊಸ ಸಿಇಒ(Starbucks CEO) ನಿತ್ಯ ಆಫೀಸ್‌ ಹೋಗ್ಬೇಕಂದ್ರೆ ಅವರು ಪ್ರಯಾಣಿಸಬೇಕಾಗಿರುವುದು ಹತ್ತು ಇಪ್ಪತ್ತು ಕಿಲೋಮೀಟರ್‌ ಅಲ್ಲ. ಬರೋಬ್ಬರಿ 1600ಕಿ.ಮೀ.

ಸ್ಟಾರ್‌ ಬಕ್ಸ್‌ ಸಂಸ್ಥೆಯ ಹೊಸ ಸಿಇಒ ಆಗಿ ಬ್ರಿಯಾನ್‌ ನಿಕೋಲ್‌(Brian Niccol) ಅವರು ಇತ್ತೀಚೆಗಷ್ಟೇ ನೇಮಕಗೊಂಡಿದ್ದಾರೆ. ಕ್ಯಾಲಿಫೋರ್ನಿಯಾ ನಿವಾಸಿ ನಿಕೋಲ್‌, ಕಂಪನಿಯ ಪ್ರಧಾನಿ ಕಚೇರಿ ಇರುವ ಸೀಟಲ್‌ಗೆ ಸ್ಥಳಾಂತರಗೊಳ್ಳಲು ಒಪ್ಪಿಲ್ಲ. ಸೀಟಲ್‌ನಿಂದ ಕ್ಯಾಲಿಫೋರ್ನಿಯಾಗೆ ಇರುವುದು ಬರೋಬ್ಬರಿ 1600 ಕಿ.ಮೀ. ಹೀಗಾಗಿ ಅವರ ಪ್ರಯಾಣಕ್ಕೆಂದು ಆಫೀಸ್‌ ವಿಮಾನವೊಂದನ್ನು ನಿಯೋಜಿಸಿದೆ. ವಾರದಲ್ಲಿ ಮೂರು ದಿನ ಕಂಪನಿಯ ಜೆಟ್‌ನಲ್ಲಿಯೇ ನಿಕೋಲ್‌ ಕಚೇರಿಗೆ ಹೋಗಿ ಬರುತ್ತಿದ್ದಾರೆ ಎಂದರೆ ನಂಬಲೇಬೇಕು.

ಕಳೆದ ವಾರ ನಿಕೋಲ್‌ ಅವರ ಆಫರ್‌ ಲೆಟರ್‌ ಬಹಿರಂಗ ಆಗಿತ್ತು. ಅದು ಈಗ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗುತ್ತಿದೆ. ಇನ್ನು ಈ ವಿಚಾರಕ್ಕೆ ಅನೇಕರು ಅನೇಕ ರೀತಿಯಲ್ಲಿ ರಿಯಾಕ್ಟ್‌ ಮಾಡಿದ್ದಾರೆ. ಇದು ದೊಡ್ಡ ದೊಡ್ಡ ಕಂಪೆನಿಗಳ ಬೂಟಾಟಿಕೆ ಪ್ರದರ್ಶನ ಎಂದಿದ್ದಾರೆ. ಇತ್ತೀಚೆಗಷ್ಟೇ ಸ್ಟಾರ್‌ಬಕ್ಸ್‌ ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ತೊಡೆದುಹಾಕಲು ವಿಶ್ವದಾದ್ಯಂತ ಅಂಗಡಿಗಳಲ್ಲಿ ಕಾಗದದ ಸ್ಟ್ರಾಗಳನ್ನು ಪರಿಚಯಿಸುವ ಮೂಲಕ ಬಹಳ ಸುದ್ದಿಯಾಗಿತ್ತು.

ನಿಕೋಲ್‌ ಆಫರ್‌ ಲೆಟರ್‌ನಲ್ಲೇನಿತ್ತು?

ಆಫರ್ ಲೆಟರ್ ಪ್ರಕಾರ 50 ವರ್ಷದ ನಿಕೋಲ್ ಅವರು ಸ್ಟಾರ್‌ಬಕ್ಸ್‌ನ CEO ಆಗಿ ವಾರ್ಷಿಕವಾಗಿ $1.6 ಮಿಲಿಯನ್ ಮೂಲ ವೇತನ ಪಡೆಯುತ್ತಿದ್ದಾರೆ. ಅವರು ಪ್ರಸ್ತುತ ವಾಷಿಂಗ್ಟನ್‌ನ ಸಿಯಾಟಲ್‌ನಲ್ಲಿರುವ ಕಂಪನಿಯ ಪ್ರಧಾನ ಕಚೇರಿಗೆ ಸ್ಥಳಾಂತರಗೊಳ್ಳುವ ಅಗತ್ಯವಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ. ಬದಲಾಗಿ, ಅವನು ತನ್ನ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಲು ಅಗತ್ಯವಿರುವಂತೆ ಕಂಪನಿಯ ಪ್ರಧಾನ ಕಚೇರಿಗೆ (ಮತ್ತು ಇತರ ವ್ಯಾಪಾರ ಪ್ರಯಾಣದಲ್ಲಿ ತೊಡಗಿಸಿಕೊಳ್ಳಲು)” ತನ್ನ ನಿವಾಸದಿಂದ ಪ್ರಯಾಣಿಸಲು ಒಪ್ಪಿಕೊಳ್ಳಬೇಕು. ಅದಕ್ಕಾಗಿ ಪ್ರೈವೇಟ್‌ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆಫರ್‌ ಲೆಟರ್‌ನಲ್ಲಿ ಉಲ್ಲೇಖಿಸಲಾಗಿದೆ.
ಸ್ಟಾರ್‌ಬಕ್ಸ್‌ನ ಹೈಬ್ರಿಡ್ ಕೆಲಸದ ನೀತಿಯ ಪ್ರಕಾರ ನಿಕೋಲ್ ವಾರಕ್ಕೆ ಕನಿಷ್ಠ ಮೂರು ಬಾರಿ ಸಿಯಾಟಲ್ ಕಚೇರಿಯಿಂದ ಕೆಲಸ ಮಾಡುವ ನಿರೀಕ್ಷೆಯಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ: Saarthi AI: ಕೆಲ್ಸ ಕಳ್ಕೊಂಡ ಕೋಪಕ್ಕೆ ಬಾಸ್‌ನ ಪಾಸ್‌ಪೋರ್ಟ್‌, ವೀಸಾಕ್ಕೆ ಕನ್ನ- ಉದ್ಯೋಗಿಯ ಕಿತಾಪತಿಗೆ ಬೆಂಗಳೂರು ಸಿಇಒ ಹೈರಾಣ

Exit mobile version