Starbucks CEO: ಸಿಕ್ರೆ ಇಂಥಾ ಕೆಲ್ಸ ಸಿಗ್ಬೇಕಪ್ಪಾ! 1600 ಕಿ.ಮೀ ದೂರ ಆಫೀಸ್‌..ದಿನಾ ಓಡಾಡೋಕೆ ಕಂಪನಿ ಜೆಟ್‌! ಈತ ಪುಣ್ಯವಂತನೇ ಸರಿ - Vistara News

ವಿದೇಶ

Starbucks CEO: ಸಿಕ್ರೆ ಇಂಥಾ ಕೆಲ್ಸ ಸಿಗ್ಬೇಕಪ್ಪಾ! 1600 ಕಿ.ಮೀ ದೂರ ಆಫೀಸ್‌..ದಿನಾ ಓಡಾಡೋಕೆ ಕಂಪನಿ ಜೆಟ್‌! ಈತ ಪುಣ್ಯವಂತನೇ ಸರಿ

Starbucks CEO: ಸ್ಟಾರ್‌ ಬಕ್ಸ್‌ ಸಂಸ್ಥೆಯ ಹೊಸ ಸಿಇಒ ಆಗಿ ಬ್ರಿಯಾನ್‌ ನಿಕೋಲ್‌(Brian Niccol) ಅವರು ಇತ್ತೀಚೆಗಷ್ಟೇ ನೇಮಕಗೊಂಡಿದ್ದಾರೆ. ಕ್ಯಾಲಿಫೋರ್ನಿಯಾ ನಿವಾಸಿ ನಿಕೋಲ್‌, ಕಂಪನಿಯ ಪ್ರಧಾನಿ ಕಚೇರಿ ಇರುವ ಸೀಟಲ್‌ಗೆ ಸ್ಥಳಾಂತರಗೊಳ್ಳಲು ಒಪ್ಪಿಲ್ಲ. ಸೀಟಲ್‌ನಿಂದ ಕ್ಯಾಲಿಫೋರ್ನಿಯಾಗೆ ಇರುವುದು ಬರೋಬ್ಬರಿ 1600 ಕಿ.ಮೀ. ಹೀಗಾಗಿ ಅವರ ಪ್ರಯಾಣಕ್ಕೆಂದು ಆಫೀಸ್‌ ವಿಮಾನವೊಂದನ್ನು ನಿಯೋಜಿಸಿದೆ. ವಾರದಲ್ಲಿ ಮೂರು ದಿನ ಕಂಪನಿಯ ಜೆಟ್‌ನಲ್ಲಿಯೇ ನಿಕೋಲ್‌ ಕಚೇರಿಗೆ ಹೋಗಿ ಬರುತ್ತಿದ್ದಾರೆ ಎಂದರೆ ನಂಬಲೇಬೇಕು.

VISTARANEWS.COM


on

Starbucks CEO
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ತಮ್ಮ ಉದ್ಯೋಗಿಗಳು ನೆಲೆಸಿರುವ ಸ್ಥಳ ಸ್ವಲ್ಪ ದೂರದಲ್ಲಿದ್ದರೂ ರಿಲೊಕೇಟ್‌ ಆಗುವಂತೆ ಹಲವು ಕಂಪನಿಗಳು ತಾಕೀತು ಮಾಡುತ್ತವೆ. ಇನ್ನು ತಾವು ಕೆಲವು ಮಾಡುವ ಕಂಪನಿ ಸ್ವಲ್ಪ ದೂರದಲ್ಲಿದ್ದರೂ ಒಂದೂ ಕ್ಯಾಬ್‌ ವ್ಯವಸ್ಥೆ ಮಾಡಿ ಇಲ್ಲವೇ ವರ್ಕ್‌ ಫ್ರಂ ಹೋಂ ವ್ಯವಸ್ಥೆ ಮಾಡಿಕೊಡಿ ಎಂದು ಹಲವು ಉದ್ಯೋಗಿಗಳು ಮನವಿ ಮಾಡಿಕೊಳ್ಳುವುದನ್ನು ನಾವು ಕಂಡಿದ್ದೇವೆ. ಆದರೆ ಖ್ಯಾತ ಸ್ಟಾರ್‌ ಬಕ್ಸ್‌ ಸಂಸ್ಥೆಯ ಹೊಸ ಸಿಇಒ(Starbucks CEO) ನಿತ್ಯ ಆಫೀಸ್‌ ಹೋಗ್ಬೇಕಂದ್ರೆ ಅವರು ಪ್ರಯಾಣಿಸಬೇಕಾಗಿರುವುದು ಹತ್ತು ಇಪ್ಪತ್ತು ಕಿಲೋಮೀಟರ್‌ ಅಲ್ಲ. ಬರೋಬ್ಬರಿ 1600ಕಿ.ಮೀ.

ಸ್ಟಾರ್‌ ಬಕ್ಸ್‌ ಸಂಸ್ಥೆಯ ಹೊಸ ಸಿಇಒ ಆಗಿ ಬ್ರಿಯಾನ್‌ ನಿಕೋಲ್‌(Brian Niccol) ಅವರು ಇತ್ತೀಚೆಗಷ್ಟೇ ನೇಮಕಗೊಂಡಿದ್ದಾರೆ. ಕ್ಯಾಲಿಫೋರ್ನಿಯಾ ನಿವಾಸಿ ನಿಕೋಲ್‌, ಕಂಪನಿಯ ಪ್ರಧಾನಿ ಕಚೇರಿ ಇರುವ ಸೀಟಲ್‌ಗೆ ಸ್ಥಳಾಂತರಗೊಳ್ಳಲು ಒಪ್ಪಿಲ್ಲ. ಸೀಟಲ್‌ನಿಂದ ಕ್ಯಾಲಿಫೋರ್ನಿಯಾಗೆ ಇರುವುದು ಬರೋಬ್ಬರಿ 1600 ಕಿ.ಮೀ. ಹೀಗಾಗಿ ಅವರ ಪ್ರಯಾಣಕ್ಕೆಂದು ಆಫೀಸ್‌ ವಿಮಾನವೊಂದನ್ನು ನಿಯೋಜಿಸಿದೆ. ವಾರದಲ್ಲಿ ಮೂರು ದಿನ ಕಂಪನಿಯ ಜೆಟ್‌ನಲ್ಲಿಯೇ ನಿಕೋಲ್‌ ಕಚೇರಿಗೆ ಹೋಗಿ ಬರುತ್ತಿದ್ದಾರೆ ಎಂದರೆ ನಂಬಲೇಬೇಕು.

ಕಳೆದ ವಾರ ನಿಕೋಲ್‌ ಅವರ ಆಫರ್‌ ಲೆಟರ್‌ ಬಹಿರಂಗ ಆಗಿತ್ತು. ಅದು ಈಗ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗುತ್ತಿದೆ. ಇನ್ನು ಈ ವಿಚಾರಕ್ಕೆ ಅನೇಕರು ಅನೇಕ ರೀತಿಯಲ್ಲಿ ರಿಯಾಕ್ಟ್‌ ಮಾಡಿದ್ದಾರೆ. ಇದು ದೊಡ್ಡ ದೊಡ್ಡ ಕಂಪೆನಿಗಳ ಬೂಟಾಟಿಕೆ ಪ್ರದರ್ಶನ ಎಂದಿದ್ದಾರೆ. ಇತ್ತೀಚೆಗಷ್ಟೇ ಸ್ಟಾರ್‌ಬಕ್ಸ್‌ ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ತೊಡೆದುಹಾಕಲು ವಿಶ್ವದಾದ್ಯಂತ ಅಂಗಡಿಗಳಲ್ಲಿ ಕಾಗದದ ಸ್ಟ್ರಾಗಳನ್ನು ಪರಿಚಯಿಸುವ ಮೂಲಕ ಬಹಳ ಸುದ್ದಿಯಾಗಿತ್ತು.

ನಿಕೋಲ್‌ ಆಫರ್‌ ಲೆಟರ್‌ನಲ್ಲೇನಿತ್ತು?

ಆಫರ್ ಲೆಟರ್ ಪ್ರಕಾರ 50 ವರ್ಷದ ನಿಕೋಲ್ ಅವರು ಸ್ಟಾರ್‌ಬಕ್ಸ್‌ನ CEO ಆಗಿ ವಾರ್ಷಿಕವಾಗಿ $1.6 ಮಿಲಿಯನ್ ಮೂಲ ವೇತನ ಪಡೆಯುತ್ತಿದ್ದಾರೆ. ಅವರು ಪ್ರಸ್ತುತ ವಾಷಿಂಗ್ಟನ್‌ನ ಸಿಯಾಟಲ್‌ನಲ್ಲಿರುವ ಕಂಪನಿಯ ಪ್ರಧಾನ ಕಚೇರಿಗೆ ಸ್ಥಳಾಂತರಗೊಳ್ಳುವ ಅಗತ್ಯವಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ. ಬದಲಾಗಿ, ಅವನು ತನ್ನ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಲು ಅಗತ್ಯವಿರುವಂತೆ ಕಂಪನಿಯ ಪ್ರಧಾನ ಕಚೇರಿಗೆ (ಮತ್ತು ಇತರ ವ್ಯಾಪಾರ ಪ್ರಯಾಣದಲ್ಲಿ ತೊಡಗಿಸಿಕೊಳ್ಳಲು)” ತನ್ನ ನಿವಾಸದಿಂದ ಪ್ರಯಾಣಿಸಲು ಒಪ್ಪಿಕೊಳ್ಳಬೇಕು. ಅದಕ್ಕಾಗಿ ಪ್ರೈವೇಟ್‌ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆಫರ್‌ ಲೆಟರ್‌ನಲ್ಲಿ ಉಲ್ಲೇಖಿಸಲಾಗಿದೆ.
ಸ್ಟಾರ್‌ಬಕ್ಸ್‌ನ ಹೈಬ್ರಿಡ್ ಕೆಲಸದ ನೀತಿಯ ಪ್ರಕಾರ ನಿಕೋಲ್ ವಾರಕ್ಕೆ ಕನಿಷ್ಠ ಮೂರು ಬಾರಿ ಸಿಯಾಟಲ್ ಕಚೇರಿಯಿಂದ ಕೆಲಸ ಮಾಡುವ ನಿರೀಕ್ಷೆಯಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ: Saarthi AI: ಕೆಲ್ಸ ಕಳ್ಕೊಂಡ ಕೋಪಕ್ಕೆ ಬಾಸ್‌ನ ಪಾಸ್‌ಪೋರ್ಟ್‌, ವೀಸಾಕ್ಕೆ ಕನ್ನ- ಉದ್ಯೋಗಿಯ ಕಿತಾಪತಿಗೆ ಬೆಂಗಳೂರು ಸಿಇಒ ಹೈರಾಣ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

PM Modi Poland Visit: ಪೋಲೆಂಡ್‌ಗೆ ಬಂದಿಳಿದ ಪ್ರಧಾನಿ ಮೋದಿ- ಗುಜರಾತಿ ನೃತ್ಯದ ಮೂಲಕ ಭರ್ಜರಿ ಸ್ವಾಗತ

PM Modi Poland Visit: ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಪೋಲೆಂಡ್‌ನಲ್ಲಿ ಬಂದಿಳಿದೆ. ಇಲ್ಲಿನ ವಿವಿಧ ಕಾರ್ಯಕ್ರಮಗಳನ್ನು ಎದುರು ನೋಡುತ್ತಿದ್ದೇನೆ. ಈ ಭೇಟಿಯು ಭಾರತ-ಪೋಲೆಂಡ್ ಸ್ನೇಹವನ್ನು ಬಲಪಡಿಸುತ್ತದೆ ಮತ್ತು ನಮ್ಮ ರಾಷ್ಟ್ರಗಳ ಜನರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಬರೆದಿದ್ದಾರೆ.

VISTARANEWS.COM


on

PM Modi Poland Visit
Koo

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಇಂದು ಸಂಜೆ ಪೋಲೆಂಡ್‌(Poland)ಗೆ ಭೇಟಿ ನೀಡಿದ್ದಾರೆ(PM Modi Poland Visit). 45 ವರ್ಷಗಳ ನಂತರ ಮಧ್ಯ ಯುರೋಪಿಯನ್ ದೇಶಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ನಾಯಕರಾಗಿದ್ದಾರೆ. ಭಾರತ ಮತ್ತು ಪೋಲೆಂಡ್ ತಮ್ಮ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆ ಪ್ರಧಾನಿ ಪೋಲೆಂಡ್​ನ ವಾರ್ಸಾಗೆ ಭೇಟಿ ಕೊಟ್ಟಿದ್ದಾರೆ.

ಇನ್ನು ಪೋಲೆಂಡ್‌ಗೆ ಬಂದಿಳಿಯುತ್ತಿದ್ದಂತೆ ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಪೋಲೆಂಡ್‌ನಲ್ಲಿ ಬಂದಿಳಿದೆ. ಇಲ್ಲಿನ ವಿವಿಧ ಕಾರ್ಯಕ್ರಮಗಳನ್ನು ಎದುರು ನೋಡುತ್ತಿದ್ದೇನೆ. ಈ ಭೇಟಿಯು ಭಾರತ-ಪೋಲೆಂಡ್ ಸ್ನೇಹವನ್ನು ಬಲಪಡಿಸುತ್ತದೆ ಮತ್ತು ನಮ್ಮ ರಾಷ್ಟ್ರಗಳ ಜನರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಬರೆದಿದ್ದಾರೆ.

ಗುಜರಾತಿ ನೃತ್ಯದ ಮೂಲಕ ಮೋದಿಗೆ ಸ್ವಾಗತ

ಪೋಲೆಂಡ್​ನ ವಾರ್ಸಾದಲ್ಲಿರುವ ಹೋಟೆಲ್​ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಟೆಲ್‌ನಲ್ಲಿ ಭಾರತೀಯ ಡಯಾಸ್ಪೊರಾ ಸದಸ್ಯರು ಸ್ವಾಗತಿಸಿದ್ದಾರೆ. ಈ ವೇಳೆ ಭಾರತೀಯ ಸಾಂಪ್ರದಾಯಿಕ ನೃತ್ಯವನ್ನು ಪ್ರದರ್ಶಿಸುವ ಮೂಲಕ ಪೋಲೆಂಡ್​ನ ನೃತ್ಯ ಕಲಾವಿದರು ನರೇಂದ್ರ ಮೋದಿಯವರಿಗೆ ಭರ್ಜರಿ ಸ್ವಾಗತ ಕೋರಿದ್ದಾರೆ. ದೂರದ ಪೋಲೆಂಡ್​ನಲ್ಲಿ ಭಾರತೀಯ ಸಂಸ್ಕೃತಿಯ ಅನಾವರಣವನ್ನು ಕಂಡು ಖುಷಿಯಿಂದ ಮೋದಿ ಚಪ್ಪಾಳೆ ತಟ್ಟಿ, ಕಲಾವಿದರಿಗೆ ಶಹಬ್ಬಾಸ್ ಹೇಳಿದ್ದಾರೆ.

ಇದನ್ನೂ ಓದಿ: PM Narendra Modi: ಕೆಂಪುಕೋಟೆಯ ಕಾರ್ಯಕ್ರಮಕ್ಕೆ ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ

Continue Reading

ವಿದೇಶ

MBA Course: ವಿದೇಶಗಳಲ್ಲಿ ಬಜೆಟ್ ಫ್ರೆಂಡ್ಲಿ ಎಂಬಿಎ ಕೋರ್ಸ್‌‌ಗೆ ಯಾವ ದೇಶ ಬೆಸ್ಟ್?

ವಿದೇಶಗಳಲ್ಲಿ ಎಂಬಿಎ (MBA Course) ಮಾಡಬೇಕು ಎಂದು ಕನಸು ಕಾಣುವವರು ಇದಕ್ಕಾಗಿ ಎಷ್ಟು ಖರ್ಚಾಗುತ್ತದೆ ಎಂಬುದನ್ನು ತಿಳಿದು ಯಾವ ದೇಶ, ಯಾವ ವಿಶ್ವವಿದ್ಯಾನಿಲಯ ಎಂದು ಆಯ್ಕೆ ಮಾಡಬಹುದು. ಇಲ್ಲವಾದರೆ ಓದಿಗೆಂದು ಹೋಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವಿದೇಶದಲ್ಲಿ ಎಂಬಿಎ ಮಾಡುವ ಕನಸಿದ್ದರೆ ಎಲ್ಲಿ ಎಷ್ಟು ಖರ್ಚಾಗುತ್ತೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ. ಇದು ನಿಮಗೆ ಸಾಕಷ್ಟು ಪ್ರಯೋಜನಕಾರಿ ಆಗಬಹುದು.

VISTARANEWS.COM


on

By

MBA Course
Koo

ಸಾಗರೋತ್ತರ ವಿಶ್ವವಿದ್ಯಾಲಯದಲ್ಲಿ (foreign university) ಎಂಬಿಎ ಅಧ್ಯಯನ (MBA Course) ಮಾಡಲು ಯೋಜಿಸುತ್ತಿದ್ದರೆ ಅದಕ್ಕಾಗಿ ತಗಲುವ ಖರ್ಚು ವೆಚ್ಚಗಳು ಪರಿಗಣಿಸಬೇಕಾದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ವಿದೇಶದಲ್ಲಿ ಎಂಬಿಎ ಅಧ್ಯಯನ ಮಾಡಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ (indian student) ಮೂರು ಜನಪ್ರಿಯ ತಾಣಗಳಿವೆ. ಯುಎಸ್ ಎ (USA), ಕೆನಡಾ (canada) ಮತ್ತು ಆಸ್ಟ್ರೇಲಿಯಾ (australia).

ಎಂಬಿಎ ಅಥವಾ ಎಂಎಸ್‌ನಂತಹ ಉನ್ನತ ಅಧ್ಯಯನಕ್ಕೆ ಹೋಗಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಯುಎಸ್ ಅತ್ಯಂತ ಜನಪ್ರಿಯ ತಾಣವಾಗಿದೆ ಎಂಬ ಅಂಶವನ್ನು ಅಲ್ಲಗಳೆಯುವಂತಿಲ್ಲ. ಆರ್ಥಿಕ ವೆಚ್ಚವನ್ನು ಕಡಿಮೆ ಮಾಡಲು ಬಯಸುವವರು ಕೆನಡಾ ಅಥವಾ ಆಸ್ಟ್ರೇಲಿಯಾದಂತಹ ಇತರ ಸ್ಥಳಗಳು ಪ್ರಮುಖ ಆಯ್ಕೆಯಾಗುತ್ತವೆ.
ಈ ದೇಶಗಳ ಯಾವುದೇ ಉನ್ನತ ವಿಶ್ವವಿದ್ಯಾನಿಲಯಗಳಲ್ಲಿ ಎಂಬಿಎಗಾಗಿ ಅಧ್ಯಯನ ಮಾಡುವಾಗ ಒಬ್ಬನು ಭರಿಸಬೇಕಾದ ವೆಚ್ಚದ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

2022 ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಅಂಕಿಅಂಶಗಳ ಪ್ರಕಾರ, 4.65 ಲಕ್ಷಕ್ಕೂ ಹೆಚ್ಚು ಯುಎಸ್‌ನಲ್ಲಿ, 1.83 ಲಕ್ಷ ಕೆನಡಾ, ಆಸ್ಟ್ರೇಲಿಯಾದಲ್ಲಿ ಒಂದು ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿ (ಯುಕೆ) 55,000 ಕ್ಕಿಂತ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಓದುತ್ತಿದ್ದಾರೆ.


ಅಮೆರಿಕ

ಸ್ಟ್ಯಾನ್‌ಫೋರ್ಡ್, ವಾರ್ಟನ್, ಹಾರ್ವರ್ಡ್, ಎಂಐಟಿ, ಕೊಲಂಬಿಯಾ ಸೇರಿದಂತೆ ಅಮೆರಿಕದಲ್ಲಿ ಅಧ್ಯಯನಕ್ಕೆ ಸಾಕಷ್ಟು ಅವಕಾಶಗಳಿವೆ.

ಒಂದು ವರ್ಷದ ಬೋಧನಾ ಶುಲ್ಕವು ಸ್ಟ್ಯಾನ್‌ಫೋರ್ಡ್‌ನಲ್ಲಿ ಸುಮಾರು 69 ಲಕ್ಷ ರೂ. ಆಗುತ್ತದೆ ಮತ್ತು ಒಟ್ಟಾರೆ ವೆಚ್ಚವು 1.09 ಕೋಟಿ ರೂ. ಆಗಲಿದೆ. ಇದರಲ್ಲಿ ಜೀವನ ವೆಚ್ಚ 15.91 ಲಕ್ಷ,, ವಸತಿ 17.49 ಲಕ್ಷ, ವೈದ್ಯಕೀಯ ವಿಮೆ 6.38 ಲಕ್ಷ ಮತ್ತು ಆರೋಗ್ಯ ಶುಲ್ಕ 65,604 ರೂ. ಸೇರಿವೆ. ಹೀಗೆ ಎರಡು ವರ್ಷಗಳ ಎಂಬಿಎ ವೆಚ್ಚವು ಸರಿಸುಮಾರು 2.18 ಕೋಟಿ ರೂ. ಆಗಲಿದೆ.

F1 ವೀಸಾದಲ್ಲಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ತರಗತಿಗಳು ನಡೆಯುತ್ತಿರುವಾಗ ವಾರಕ್ಕೆ 20 ಗಂಟೆಗಳವರೆಗೆ ಮತ್ತು ತರಗತಿಗಳು ಇಲ್ಲದೇ ಇದ್ದಾಗ ವಾರಕ್ಕೆ 40 ಗಂಟೆಗಳವರೆಗೆ ಕೆಲಸ ಮಾಡಬಹುದು. ಅಧ್ಯಯನ ಪೂರ್ಣಗೊಂಡ ಮೇಲೆ ವಿದ್ಯಾರ್ಥಿಗಳು ಒಪಿಟಿ ಐಚ್ಛಿಕ ಪ್ರಾಯೋಗಿಕ ತರಬೇತಿಯ ಅಡಿಯಲ್ಲಿ ಒಂದು ವರ್ಷದೊಳಗೆ ತಾಯ್ನಾಡಿಗೆ ಹಿಂದಿರುಗಲು ಅರ್ಹರಾಗಿರುತ್ತಾರೆ.

ಒಪಿಟಿ ತಾತ್ಕಾಲಿಕ ಉದ್ಯೋಗವಾಗಿದೆ. F1 ವಿದ್ಯಾರ್ಥಿಯ ಪ್ರಮುಖ ಅಧ್ಯಯನದ ಕ್ಷೇತ್ರಕ್ಕೆ ನೇರವಾಗಿ ಸಂಬಂಧಿಸಿದೆ. ಒಪಿಟಿಗೆ ಅರ್ಹರಾಗಿರುವ ವಿದ್ಯಾರ್ಥಿಗಳು 12 ತಿಂಗಳ ಒಪಿಟಿ ದೃಢೀಕರಣವನ್ನು ಪಡೆಯಲು ಅರ್ಜಿ ಸಲ್ಲಿಸಬಹುದು.
ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ಕ್ಷೇತ್ರಗಳಲ್ಲಿ ಪದವಿ ಅಧ್ಯಯನ ಮಾಡಿದ್ದರೆ ಅನಂತರ ಕೆಲವು ಷರತ್ತುಗಳನ್ನು ಪೂರೈಸುವ ಮೂಲಕ ಒಪಿಟಿ ಅಧಿಕಾರದ 24 ತಿಂಗಳ ವಿಸ್ತರಣೆಗೆ ಅರ್ಜಿ ಸಲ್ಲಿಸಬಹುದಾಗಿದೆ.

MBA Course:
MBA Course:


ಕೆನಡಾ

ಉತ್ತರ ಅಮೆರಿಕ ಖಂಡದಲ್ಲಿರುವ ನೆಲೆಗೊಂಡಿರುವ ನೆರೆಯ ರಾಷ್ಟ್ರ ಕೆನಡಾವು ಭಾರತೀಯ ವಿದ್ಯಾರ್ಥಿಗಳಿಗೆ ಹಾಟ್‌ಸ್ಪಾಟ್ ಆಗಿದೆ. ಕೆನಡಾದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಕ್ವೀನ್ಸ್ ವಿಶ್ವವಿದ್ಯಾಲಯ, ಟೊರೊಂಟೊ ವಿಶ್ವವಿದ್ಯಾಲಯ, ವಾಟರ್‌ಲೂ ವಿಶ್ವವಿದ್ಯಾಲಯ, ಯಾರ್ಕ್ ವಿಶ್ವವಿದ್ಯಾಲಯ, ಮೆಕ್‌ಗಿಲ್ ವಿಶ್ವವಿದ್ಯಾಲಯಗಳು ಸೇರಿವೆ.
ಮೆಕ್‌ಗಿಲ್ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ಭಾರತೀಯ ವಿದ್ಯಾರ್ಥಿಗೆ ವರ್ಷಕ್ಕೆ ಸುಮಾರು ಬೋಧನಾ ಶುಲ್ಕ 85 ಲಕ್ಷ ಮತ್ತು ಅಂತಾರಾಷ್ಟ್ರೀಯ ಅಧ್ಯಯನ ಪ್ರವಾಸಕ್ಕೆ 2.51 ಲಕ್ಷ ರೂ. ವೆಚ್ಚವಾಗುತ್ತದೆ. ಜೀವನ ವೆಚ್ಚಕ್ಕೆ ಸುಮಾರು 2 ಲಕ್ಷ ರೂ. ಬೇಕಾಗಬಹುದು.

ವಿದ್ಯಾರ್ಥಿಗಳು ವಾರಕ್ಕೆ 20 ಗಂಟೆಗಳವರೆಗೆ ಕೆಲಸ ಮಾಡಲು ಅನುಮತಿಸಲಾಗಿದೆ. ಸ್ನಾತಕೋತ್ತರ ಪದವಿಯ ಉದ್ದವು ಎರಡು ವರ್ಷಗಳಿಗಿಂತ ಕಡಿಮೆಯಿದ್ದರೂ ಸಹ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು 3 ವರ್ಷದ ಪದವಿ ಅನಂತರದ ಕೆಲಸದ ಪರವಾನಗಿಗಾಗಿ ಅರ್ಜಿ ಸಲ್ಲಿಸಬಹುದು. ಆದರೆ ಅಭ್ಯರ್ಥಿಯು ಎಲ್ಲಾ ಇತರ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು.


ಆಸ್ಟ್ರೇಲಿಯಾ

ಅಮೆರಿಕ ಅಥವಾ ಕೆನಡಾದಲ್ಲಿ ಅಧ್ಯಯನ ಮಾಡಲು ಸಾಧ್ಯವಾಗದವರು ಆಸ್ಟ್ರೇಲಿಯಾವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಯಾಕೆಂದರೆ ಇಲ್ಲಿ ಜೀವನ ವೆಚ್ಚ, ಅಧ್ಯಯನದ ವೆಚ್ಚ ಕಡಿಮೆ ಇರುತ್ತದೆ.

ಎಂಬಿಎಗಾಗಿ ಆಸ್ಟ್ರೇಲಿಯಾದ ಉನ್ನತ ವಿಶ್ವವಿದ್ಯಾಲಯಗಳಲ್ಲಿ ಮೆಲ್ಬೋರ್ನ್ ವಿಶ್ವವಿದ್ಯಾಲಯ, ಕ್ವೀನ್ಸ್‌ಲ್ಯಾಂಡ್, ಸಿಡ್ನಿ, ಪಶ್ಚಿಮ ಆಸ್ಟ್ರೇಲಿಯಾ, ಕ್ಯಾನ್‌ಬೆರಾ, ವೊಲೊಂಗೊಂಗ್ ಮತ್ತು ವಿಕ್ಟೋರಿಯಾ ವಿಶ್ವವಿದ್ಯಾಲಯ ಸೇರಿವೆ.
ವರ್ಷಕ್ಕೆ ಸಿಡ್ನಿ ವಿಶ್ವವಿದ್ಯಾನಿಲಯದಲ್ಲಿ 46 ಲಕ್ಷ ಗಿದೆ. 1.5 ವರ್ಷದ ಎಂಬಿಎಗಾಗಿ ಒಟ್ಟು ವೆಚ್ಚವು 92 ಲಕ್ಷವಾಗಿದೆ. 1.5 ವರ್ಷಗಳ ಜೀವನ ವೆಚ್ಚ 30.16 ಲಕ್ಷ ರೂ. ಆಗುತ್ತದೆ.

ಇದನ್ನೂ ಓದಿ: NIRF 2024 Rank: ದೇಶದ ಟಾಪ್‌ 10 ಮೆಡಿಕಲ್‌ ಕಾಲೇಜುಗಳಲ್ಲಿ ನಿಮ್ಹಾನ್ಸ್‌ ನಂ.4; ಫಾರ್ಮಸಿಯಲ್ಲಿ ರಾಜ್ಯದ 2 ಕಾಲೇಜುಗಳಿಗೆ ಸ್ಥಾನ

ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಪ್ರತಿ ಹದಿನೈದು ದಿನಗಳ ಕಾಲ 48 ಗಂಟೆಗಳವರೆಗೆ ಕೆಲಸ ಮಾಡಲು ಅನುಮತಿಸಲಾಗಿದೆ. ಅಂದರೆ ವಿಶ್ವವಿದ್ಯಾನಿಲಯವು ಅಧಿವೇಶನದಲ್ಲಿದ್ದಾಗ ಪ್ರತಿ ವಾರ 24 ಗಂಟೆಗಳು.
ಅಧ್ಯಯನದ ಅನಂತರ ಒಬ್ಬರು ಪೋಸ್ಟ್ ಸ್ಟಡಿ ವರ್ಕ್ ಪರ್ಮಿಟ್‌ಗೆ ಅರ್ಜಿ ಸಲ್ಲಿಸಬಹುದು.ಈ ವೀಸಾಕ್ಕಾಗಿ ಅರ್ಜಿದಾರರು ಕಳೆದ 6 ತಿಂಗಳುಗಳಲ್ಲಿ ವಿದ್ಯಾರ್ಥಿ ವೀಸಾವನ್ನು ಹೊಂದಿರಬೇಕು ಮತ್ತು 35 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.

Continue Reading

Latest

World’s Oldest Bus Driver: ಇವರು ವಿಶ್ವದ ಅತ್ಯಂತ ಹಿರಿಯ ಬಸ್ ಚಾಲಕ! ವಯಸ್ಸು ಎಷ್ಟು ನೋಡಿ!

World’s Oldest Bus Driver: ಅಮೆರಿಕದ ಮಿನ್ನೆಸೋಟದ 94 ವರ್ಷದ ಜಿಮ್ ಒಪೆಗಾರ್ಡ್ ವಿಶ್ವದ ಅತ್ಯಂತ ಹಿರಿಯ ಬಸ್ ಚಾಲಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ತಮ್ಮ ಜೀವನದ ಅರ್ಧಕ್ಕಿಂತ ಹೆಚ್ಚು ಕಾಲವನ್ನು ಅವರು ಬಸ್ಸುಗಳನ್ನು ಓಡಿಸುವುದರಲ್ಲೇ ಕಳೆದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಪ್ರಸ್ತುತ ನಾರ್ತ್ಸ್ಟಾರ್ ಬಸ್‌ಲೈನ್ಸ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ, ಸ್ಕೂಲ್ ಬಸ್ ಓಡಿಸುವ ಮೂಲಕ ಶಾಲಾ ಮಕ್ಕಳಿಗೆ ನೆರವಾಗುತ್ತಿದ್ದಾರೆ. ಮೂರು ಮೊಮ್ಮಕ್ಕಳನ್ನು ಹೊಂದಿರುವ ಜಿಮ್ ಅವರು ತನ್ನ ಈ ಕೆಲಸವನ್ನು ಖುಷಿಯಿಂದ ನಿರ್ವಹಿಸುತ್ತಿದ್ದಾರೆ.

VISTARANEWS.COM


on

World's Oldest Bus Driver
Koo


ಅಮೆರಿಕದ ಮಿನ್ನೆಸೋಟದ 94 ವರ್ಷದ ವ್ಯಕ್ತಿಯೊಬ್ಬರು ವಿಶ್ವದ ಅತ್ಯಂತ ಹಿರಿಯ ಬಸ್ ಚಾಲಕ (World’s Oldest Bus Driver) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರನ್ನು ಜಿಮ್ ಒಪೆಗಾರ್ಡ್ ಎಂದು ಗುರುತಿಸಲಾಗಿದೆ ಮತ್ತು ಅವರಿಗೆ ಈಗ 94 ವರ್ಷ ವಯಸ್ಸಾಗಿದೆ. ತಮ್ಮ ಜೀವನದ ಅರ್ಧಕ್ಕಿಂತ ಹೆಚ್ಚು ಕಾಲವನ್ನು ಅವರು ಬಸ್ಸುಗಳನ್ನು ಓಡಿಸುವುದರಲ್ಲೇ ಕಳೆದಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಅವರು 65 ನೇ ವಯಸ್ಸಿನಲ್ಲಿ ನಿವೃತ್ತರಾಗುವ ಮೊದಲು ಸಿಟಿ ಬಸ್ ಚಾಲಕನಾಗಿ 20 ವರ್ಷಗಳ ವೃತ್ತಿಜೀವನವನ್ನು ನಡೆಸಿದರು. ಆದರೆ ನಿವೃತ್ತಿ ನಂತರ ಅವರಿಗೆ ಜೀವನ ಬೋರ್ ಎನಿಸಿದೆ.

ಹಾಗಾಗಿ ಅವರು ಪ್ರಸ್ತುತ ನಾರ್ತ್‍ಸ್ಟಾರ್ ಬಸ್‌ಲೈನ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ, ಸ್ಕೂಲ್ ಬಸ್ ಓಡಿಸುವ ಮೂಲಕ ಶಾಲಾ ಮಕ್ಕಳಿಗೆ ನೆರವಾಗುತ್ತಿದ್ದಾರೆ. ಮೂರು ಮೊಮ್ಮಕ್ಕಳನ್ನು ಹೊಂದಿರುವ ಜಿಮ್ ಅವರು ತನ್ನ ಈ ಕೆಲಸವನ್ನು ಖುಷಿಯಿಂದ ನಿರ್ವಹಿಸುತ್ತಿದ್ದಾರೆ, ಏಕೆಂದರೆ ಅದು ಅವರನ್ನು ಕಾರ್ಯನಿರತರಾಗಿರುವಂತೆ ಮಾಡುತ್ತದೆ. ಮತ್ತು ಆಫ್ರಿಕಾದಲ್ಲಿ ತನ್ನ ಮಗಳು ಸ್ಥಾಪಿಸಿದ ಕ್ರೈಸ್ತ ಆಶ್ರಮಕ್ಕೆ ಹಣವನ್ನು ನೀಡಲು ಈ ಕೆಲಸ ನೆರವಾಗುತ್ತದೆ. ಅವರ ಮ್ಯಾನೇಜರ್ ಪ್ರಕಾರ, ಜಿಮ್ ಅವರು ಒಬ್ಬ ಒಳ್ಳೆಯ ಚಾಲಕ. ಅವರು ಅತ್ಯಂತ ಸುರಕ್ಷಿತವಾಗಿ ಬಸ್ ಚಲಾಯಿಸುತ್ತಾರೆ ಮತ್ತು ಎಂದಿಗೂ ತಡಮಾಡುವುದಿಲ್ಲ. ಆದರೆ ಅವರ ವಯಸ್ಸಿನ ಕಾರಣದಿಂದಾಗಿ, ಅವರು ಪ್ರತಿ ವರ್ಷ ದೈಹಿಕ ಪರೀಕ್ಷೆ ಮತ್ತು ಡ್ರೈವಿಂಗ್ ಸಾಮರ್ಥ್ಯದಲ್ಲಿ ಉತ್ತೀರ್ಣರಾಗಬೇಕು ಎಂದು ತಿಳಿಸಿದ್ದಾರೆ. ಅಲ್ಲದೇ ಜಿಮ್ ಅವರು ಆರೋಗ್ಯಕರವಾದ ದೇಹವನ್ನು ಹೊಂದಿದ್ದಾರೆ. ಅವರು ಆರೋಗ್ಯ ಪೂರಕಗಳನ್ನು ತೆಗೆದುಕೊಳ್ಳುವ ಮೂಲಕ ಮತ್ತು ಪ್ರತಿದಿನ 45 ನಿಮಿಷಗಳ ಕಾಲ ವ್ಯಾಯಾಮ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ ಎಂದು ಅವರು ಜಿಮ್ ಬಗ್ಗೆ ಮಾಹಿತಿ ನೀಡಿದ್ದಾರೆ.

ನಿವೃತ್ತಿಯ ನಂತರ ಜಿಮ್ ಎರಡು ಉದ್ಯೋಗಗಳನ್ನು ನಿರ್ವಹಿಸುತ್ತಾರೆ. ಒಂದು ಇಂಟರ್ ಸಿಟಿ ಕೋಚ್‍ಗಳನ್ನು ಓಡಿಸುವುದು ಮತ್ತು ಇನ್ನೊಂದು ಶಾಲಾ ಬಸ್ ಓಡಿಸುವುದು. ಆದರೆ ಈ ನಡುವೆ ಅವರು ತಮ್ಮ 84ನೇ ವಯಸ್ಸಿನಲ್ಲಿ ಬಿದ್ದು ಕುತ್ತಿಗೆ ಮುರಿತಕ್ಕೆ ಒಳಗಾಗಿದ್ದರು. ನಂತರ ಅವರು ಚೇತರಿಸಿಕೊಳ್ಳಲು ನಾಲ್ಕೂವರೆ ತಿಂಗಳುಗಳನ್ನು ಕಳೆದರು, ಆಮೇಲೆ ಅವರನ್ನು ಇಂಟರ್ ಸಿಟಿ ಕೋಚ್‍ ಕಂಪೆನಿ ಕೈಬಿಟ್ಟ ಕಾರಣ ಶಾಲಾ ಬಸ್ ಚಾಲಕನಾಗಿ ಮಾತ್ರ ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ. “ನಾನು ಕೆಲಸ ಮಾಡಲು ಇಷ್ಟಪಡುತ್ತೇನೆ, ವಿಶೇಷವಾಗಿ ಶಾಲಾ ಬಸ್ ಓಡಿಸುವುದು ನನಗೆ ತುಂಬಾ ಇಷ್ಟ” ಎಂದು ಜಿಮ್ ಹೇಳಿದ್ದಾರೆ.

ಇದನ್ನೂ ಓದಿ:ಅಶ್ಲೀಲ ಚಿತ್ರ ತೋರಿಸಿ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಶಿಕ್ಷನ ಬಂಧನ

ಜಿಮ್ ಅವರು ಬಸ್ ಡ್ರೈವ್ ಮಾಡುವುದು ಮಾತ್ರವಲ್ಲ ಮಕ್ಕಳನ್ನು ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಅವರ ಕೆಲಸದ ವೇಳಾಪಟ್ಟಿಯಲ್ಲಿ ಬೆಳಿಗ್ಗೆ ಮೂರು ಗಂಟೆಗಳ ಡ್ರೈವ್ ಮಾಡುವುದು, ನಂತರ ಮೂರು ಗಂಟೆಗಳ ಕಾಲ ವಿರಾಮ ಮಾಡಿ ನಂತರ ಮಧ್ಯಾಹ್ನ ಇನ್ನೂ ನಾಲ್ಕು ಗಂಟೆಗಳ ಡ್ರೈವ್ ಮಾಡುತ್ತಾರೆ. ವಿರಾಮದ ಸಮಯದಲ್ಲಿ, ಅವರು ಹಿರಿಯ ಸಹಕಾರಿ ವಸತಿಯಲ್ಲಿ ಇರುತ್ತಾರೆ.

Continue Reading

ಪ್ರಮುಖ ಸುದ್ದಿ

PM Modi US Visit : ಸೆಪ್ಟೆಂಬರ್‌ನಲ್ಲಿ ಅಮೆರಿಕ ಪ್ರವಾಸ ಮಾಡಲಿದ್ದಾರೆ ಮೋದಿ; ಅಮೆರಿಕ ಚುನಾವಣೆ ನಡುವೆ ಕುತೂಹಲ ಮೂಡಿಸಿದೆ ಅವರ ಭೇಟಿ

PM Modi US Visit : ಭಾರತೀಯ-ಅಮೆರಿಕನ್ ಡಯಾಸ್ಪೊರಾ ಅಸೋಸಿಯೇಷನ್ (ಐಎಡಿಎ) ಈ ಸಮುದಾಯ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಇದು “ಪ್ರಜಾಪ್ರಭುತ್ವ, ಅಂತರ್ಗತ ಆರ್ಥಿಕ ಅಭಿವೃದ್ಧಿ ಮತ್ತು ಪರಸ್ಪರ ಗೌರವದ ಹಂಚಿಕೆಯ ಮೌಲ್ಯಗಳನ್ನು” ಮುನ್ನಡೆಸಲು ಭಾರತ-ಯುಎಸ್ ಸಹಕಾರವನ್ನು ಉತ್ತೇಜಿಸುವ ಲಾಭರಹಿತ ಸಂಸ್ಥೆಯಾಗಿದೆ. ದೇಣಿಗೆಗಳ ಮೂಲಕ ವೆಚ್ಚಗಳನ್ನು ಭರಿಸಲಾಗುತ್ತದೆ.

VISTARANEWS.COM


on

PM Modi to visits US
Koo

ನವದೆಹಲಿ: ವಿಶ್ವಸಂಸ್ಥೆಯ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 22 ರಂದು ನ್ಯೂಯಾರ್ಕ್‌‌ಗೆ (PM Modi US Visit) ತೆರಳಲಿದ್ದಾರೆ. ಅವರು ಅಲ್ಲಿನ ಪ್ರಮುಖ ಸಮುದಾಯ ಕಾರ್ಯಕ್ರವೊಂದನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ‘ಮೋದಿ ಆ್ಯಂಡ್‌ ಯುಎಸ್: ಪ್ರೋಗ್ರೆಸ್‌ ಟುಗೆದರ್’ ಎಂಬ ಥೀಮ್ ಹೊಂದಿರುವ ಕಾರ್ಯಕ್ರಮವು ಭಾರತ ಹಾಗೂ ಅಮೆರಿಕ ನಡುವಿನ ಸಾಂಸ್ಕೃತಿಕ ಸಂಬಂಧವನ್ನು ಬಿಂಬಿಸುವ ಉದ್ದೇಶದ್ದು. ಜಗತ್ತು ಒಂದು ಕುಟುಂಬ, ವಿಭಿನ್ನತೆಯೇ ಅದರ ಮೂಲಾಧಾರ. ಉತ್ತಮ ಜಗತ್ತಿನ ನಿರ್ಮಾಣಕ್ಕಾಗಿ ಜನ ಕಲ್ಯಾಣವೇ ಧ್ಯೇಯ ಎಂಬುವ ಶೀರ್ಷಿಕೆಯನ್ನೂ ಈ ಕಾರ್ಯಕ್ರಮ ಹೊಂದಿದೆ.

ಭಾರತೀಯ-ಅಮೆರಿಕನ್ ಡಯಾಸ್ಪೊರಾ ಅಸೋಸಿಯೇಷನ್ (ಐಎಡಿಎ) ಈ ಸಮುದಾಯ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಇದು “ಪ್ರಜಾಪ್ರಭುತ್ವ, ಅಂತರ್ಗತ ಆರ್ಥಿಕ ಅಭಿವೃದ್ಧಿ ಮತ್ತು ಪರಸ್ಪರ ಗೌರವದ ಹಂಚಿಕೆಯ ಮೌಲ್ಯಗಳನ್ನು” ಮುನ್ನಡೆಸಲು ಭಾರತ-ಯುಎಸ್ ಸಹಕಾರವನ್ನು ಉತ್ತೇಜಿಸುವ ಲಾಭರಹಿತ ಸಂಸ್ಥೆಯಾಗಿದೆ. ದೇಣಿಗೆಗಳ ಮೂಲಕ ವೆಚ್ಚಗಳನ್ನು ಭರಿಸಲಾಗುತ್ತದೆ.

ಈ ಬೆಳವಣಿಗೆಯ ಬಗ್ಗೆ ಮಾಹಿತಿ ಇರುವವರೊಬ್ಬರು ವಿವರ ನೀಡಿ, ಈ ಸಭೆಯಲ್ಲಿ ಸುಮಾರು 15,000 ಜನರು ಭಾಗವಹಿಸುವ ನಿರೀಕ್ಷೆಯಿದೆ. ಇದು ಅಮೆರಿಕದಲ್ಲಿ ಮೋದಿ ಭಾಷಣ ಮಾಡಿದ ಹಿಂದಿನ ಸಂದರ್ಭಗಳಿಗೆ ಹೋಲಿಸಿದರೆ ವಿಭಿನ್ನವಾಗಿದೆ. ವಲಸಿಗರು ಮತ್ತು ಅವರ ಭವಿಷ್ಯ ಮತ್ತು ಭಾರತದೊಂದಿಗಿನ ಸಂಬಂಧಗಳನ್ನು ಹೆಚ್ಚಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಅಮೆರಿಕದ ಚುನಾವಣಾ ಋತುವಿನ ಮಧ್ಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದ ಹೊರತಾಗಿಯೂ ಇದು ರಾಜಕೀಯೇತರ ಕಾರ್ಯಕ್ರಮವಾಗಿದೆ. ಈ ಬಾರಿ ಯಾವುದೇ ಚುನಾಯಿತ ಅಧಿಕಾರಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ಮೋದಿ ಅಮೆರಿಕದಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮೋದಿ ಮಾತನಾಡುತ್ತಿರುವುದು ಇದು ಐದನೇ ಬಾರಿ. 2014ರಲ್ಲಿ, ಅವರು ನ್ಯೂಯಾರ್ಕ್‌‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌‌ನಲ್ಲಿ ಭಾಷಣ ಮಾಡಿದ್ದರು ಅಲ್ಲಿ ಸಾವಿರಾರು ಭಾರತೀಯ-ಅಮೆರಿಕನ್ನರು ಮತ್ತು ಕಾಂಗ್ರೆಸ್ ಪ್ರತಿನಿಧಿಗಳು ಮತ್ತು ಸೆನೆಟರ್‌ಗಳು ಸೇರಿದಂತೆ ಡಜನ್‌‌ಗಟ್ಟಲೆ ಚುನಾಯಿತ ಅಧಿಕಾರಿಗಳು ಭಾಗವಹಿಸಿದ್ದರು. 2015 ರಲ್ಲಿ, ಅವರು ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌‌ನಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದರು. ಸಿಲಿಕಾನ್ ವ್ಯಾಲಿಯ ಟೆಕ್ ಸಮುದಾಯವೇ ಈ ಕಾರ್ಯಕ್ರಮದಲ ಆಕರ್ಷಣೆಯಾಗಿತ್ತು. 2017ರಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಸಣ್ಣ ಕಾರ್ಯಕ್ರಮವೊಂದರಲ್ಲಿ ಮೋದಿ ಸಮುದಾಯ ಸಂಘಟನೆಗಳ ನಾಯಕರೊಂದಿಗೆ ಮಾತನಾಡಿದ್ದರು. 2019 ರಲ್ಲಿ, ಕಳೆದ ಅಧ್ಯಕ್ಷೀಯ ಚುನಾವಣೆಗೆ ಒಂದು ವರ್ಷ ಮೊದಲು, ಮೋದಿ ಮತ್ತು ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೂಸ್ಟನ್‌‌ನಲ್ಲಿ ಭಾರತೀಯ-ಅಮೆರಿಕನ್ನರ ಅತಿದೊಡ್ಡ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಈ ಕಾರ್ಯಕ್ರಮ ರಾಜಕೀಯವಾಗಿ ಟೀಕೆಗೆ ಒಳಗಾಯಿತು.

ಇದನ್ನೂ ಓದಿ: Bharat Bandh today : ಇಂದು ಭಾರತ್ ಬಂದ್‌; ಯಾವೆಲ್ಲಾ ಸೇವೆ ಇರುತ್ತೆ? ಏನಿರೋದಿಲ್ಲ? ಇಲ್ಲಿದೆ ಕಂಪ್ಲೀಟ್‌ ಡೀಟೆಲ್ಸ್‌

ಕಳೆದ ವರ್ಷ ಯುಎಸ್‌ಗೆ ಅಧಿಕೃತ ಭೇಟಿ ನೀಡಿದಾಗ 8000 ಭಾರತೀಯ-ಅಮೆರಿಕನ್ನರು ಶ್ವೇತಭವನದಲ್ಲೇ ಮೋದಿಗೆ ಸ್ವಾಗತ ನೀಡಿದ್ದರು. ಕೆನಡಿ ಸೆಂಟರ್‌ನಲ್ಲಿ ಭಾರತೀಯ- ಅಮೆರಿಕನ್ ವೃತ್ತಿಪರರೊಂದಿಗೆ ಮಾತನಾಡಿದ್ದರು. ವಾಷಿಂಗ್ಟನ್ ಡಿಸಿಯ ರೇಗನ್ ಕೇಂದ್ರದಲ್ಲಿ ಮತ್ತೊಂದು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದರು.

ಈ ಬಾರಿ ಅಮೆರಿಕದ ಚುನಾವಣೆ ಬಲವಾದ ಭಾರತೀಯ-ಅಮೆರಿಕನ್ ಆಯಾಮವನ್ನು ಹೊಂದಿರುವ ಸಮಯದಲ್ಲಿ ಮೋದಿಯವರ ಕಾರ್ಯಕ್ರಮ ಬಂದಿದೆ. ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ಕಪ್ಪು-ಅಮೆರಿಕನ್ ಮತ್ತು ಭಾರತೀಯ-ಅಮೆರಿಕನ್ ಎಂದು ಗುರುತಿಸಿಕೊಂಡಿದ್ದಾರೆ. ಅವರ ತಾಯಿ ತಮಿಳು ಮತ್ತು 1958 ರಲ್ಲಿ ಭಾರತದಿಂದ ವಲಸೆ ಹೋಗಿದ್ದರು ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಜೆ.ಡಿ.ವ್ಯಾನ್ಸ್ ಅವರ ಪತ್ನಿ ಉಷಾ ವ್ಯಾನ್ಸ್ ಆಂಧ್ರಪ್ರದೇಶದ ವಲಸಿಗರ ಪುತ್ರಿ. ರಾಜಕೀಯ ವಿಜ್ಞಾನಿಗಳಾದ ದೇವೇಶ್ ಕಪೂರ್, ಮಿಲನ್ ವೈಷ್ಣವ್ ಮತ್ತು ಸುಮಿತ್ರಾ ಬದ್ರಿನಾಥನ್ ನಡೆಸಿದ 2020 ರ ಸಮೀಕ್ಷೆಯ ಪ್ರಕಾರ, ಭಾರತೀಯ-ಅಮೆರಿಕನ್ ಸಮುದಾಯವು ಬಹುಪಾಲು ಡೆಮಾಕ್ರಟ್‌ ಪಕ್ಷದ ಪರವಾಗಿದ್ದಾರೆ.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ತಮ್ಮ ಅಧಿಕಾರಾವಧಿಯ ಕೊನೆಯ ವರ್ಷದಲ್ಲಿ ಆಯೋಜಿಸಿರುವ ಪ್ರಮುಖ ಕಾರ್ಯಕ್ರಮವಾದ ಶೃಂಗಸಭೆಯಲ್ಲಿ ಭಾಗವಹಿಸುವುದು ಮೋದಿಯವರ ಭೇಟಿಯ ಅಧಿಕೃತ ಉದ್ದೇಶ. ಜಿ 20 ಅಧ್ಯಕ್ಷ ಸ್ಥಾನ ಸೇರಿದಂತೆ ಇತ್ತೀಚಿನ ವರ್ಷಗಳಲ್ಲಿ ಭಾರತದ ಆಕಾಂಕ್ಷೆಗಳನ್ನು ಗುಟೆರೆಸ್ ಬೆಂಬಲಿಸಿದ್ದಾರೆ. ಕಳೆದ ತಿಂಗಳು ಯುಎನ್ ಬಿಡುಗಡೆ ಮಾಡಿದ ಸಾಮಾನ್ಯ ಚರ್ಚೆಯ ಭಾಷಣಕಾರರ ತಾತ್ಕಾಲಿಕ ಪಟ್ಟಿಯ ಪ್ರಕಾರ, ಮೋದಿ ಸೆಪ್ಟೆಂಬರ್ 26 ರಂದು ಯುಎನ್ ಜನರಲ್ ಅಸೆಂಬ್ಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Continue Reading
Advertisement
Census
ದೇಶ4 mins ago

Census: ಮುಂದಿನ ತಿಂಗಳಿಂದ ಜನಗಣತಿ ಆರಂಭ ಸಾಧ್ಯತೆ; ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ

Air store Released
ದೇಶ32 mins ago

Air store released: ಪೋಖ್ರಾನ್‌ ಬಳಿ ತಪ್ಪಿದ ಭಾರೀ ಅವಘಡ; ಏಕಾಏಕಿ ಏರ್‌ಸ್ಟೋರ್‌ ರಿಲೀಸ್‌ ಮಾಡಿದ ಯುದ್ಧ ವಿಮಾನ

Indian hockey team
ಕ್ರೀಡೆ45 mins ago

Indian hockey team: ಭುವನೇಶ್ವರದಲ್ಲಿ ಭಾರತೀಯ ಹಾಕಿ ತಂಡದಿಂದ ರೋಡ್ ಶೋ

Fetus In Baby
ವಿಜ್ಞಾನ2 hours ago

Fetus In Baby: ಏಳು ತಿಂಗಳ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆ!

CEAT Cricket Awards
ಕ್ರೀಡೆ2 hours ago

CEAT Cricket Awards: ವರ್ಷದ ಅತ್ಯುತ್ತಮ ಏಕದಿನ ಬ್ಯಾಟರ್​ ಪ್ರಶಸ್ತಿ ಗೆದ್ದ ವಿರಾಟ್​ ಕೊಹ್ಲಿ

Pharma Company Blast
ದೇಶ2 hours ago

Pharma Company Blast: ಫಾರ್ಮಾ ಕಂಪನಿಯಲ್ಲಿ ಭಾರೀ ಬ್ಲಾಸ್ಟ್‌- 17ಮಂದಿ ಬಲಿ; ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಭೀತಿ

Starbucks CEO
ವಿದೇಶ2 hours ago

Starbucks CEO: ಸಿಕ್ರೆ ಇಂಥಾ ಕೆಲ್ಸ ಸಿಗ್ಬೇಕಪ್ಪಾ! 1600 ಕಿ.ಮೀ ದೂರ ಆಫೀಸ್‌..ದಿನಾ ಓಡಾಡೋಕೆ ಕಂಪನಿ ಜೆಟ್‌! ಈತ ಪುಣ್ಯವಂತನೇ ಸರಿ

Viral News
ಕ್ರಿಕೆಟ್3 hours ago

Viral News: ಸಿದ್ಧಿ ವಿನಾಯಕನ ಸನ್ನಿಧಿಯಲ್ಲಿ ಟಿ20 ವಿಶ್ವಕಪ್​ ಟ್ರೋಫಿಗೆ ಪೂಜೆ ಸಲ್ಲಿಸಿದ ರೋಹಿತ್​ ಶರ್ಮ, ಜಯ್​ ಶಾ

ಕರ್ನಾಟಕ3 hours ago

Almatti Dam: ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ

Danish Kaneria
ಕ್ರಿಕೆಟ್3 hours ago

Danish Kaneria: ರಕ್ಷಾ ಬಂಧನ ಆಚರಿಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌