ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಕೋವಿಡ್ ಸೋಂಕು ತಗುಲಿದೆ. ಗುರುವಾರ ಅವರ ಕೋವಿಡ್ 19 ಟೆಸ್ಟ್ ಪಾಸಿಟಿವ್ ತೋರಿಸಿದೆ. ಕೊರೊನಾ ವೈರಸ್ ನಿಯಂತ್ರಣದಲ್ಲಿದೆ ಎಂದು ತಿಳಿಯಲಾಗಿದ್ದರೂ, ಹೊಸ ರೂಪಾಂತರಿಗಳು ಮತ್ತೆ ಆಕ್ರಮಣ ಮಾಡುತ್ತಿರುವುದನ್ನು ಇದು ಸಾಬೀತುಪಡಿಸಿದೆ.
ಜೋ ಬೈಡೆನ್ ಅವರು ಲಘುವಾದ ಕೋವಿಡ್ ಲಕ್ಷಣಗಳನ್ನು ಹೊಂದಿದ್ದಾರೆ. ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡುವ ಆಂಟಿವೈರಲ್ ಔಷಧ ಪ್ಯಾಕ್ಸ್ಲೋವಿಡ್ ಅನ್ನು ತೆಗೆದುಕೊಳ್ಳುತ್ತಿದ್ದಾರೆ. ಬೈಡೆನ್ ಶ್ವೇತಭವನದಲ್ಲಿ ಪ್ರತ್ಯೇಕವಾಗಿದ್ದು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಹೇಳಿದ್ದಾರೆ.
ಬೈಡೆನ್ ಅವರು ಕೊರೊನಾ ಲಸಿಕೆಯ ಮೂರು ಡೋಸ್‌ಗಳನ್ನು ಹಾಕಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನೂ ಕೋವಿಡ್ ಬಾಧಿಸಿತ್ತು. ಬೈಡೆನ್ ಅವರ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನೂ ಕೋವಿಡ್ ಬಾಧಿಸಿತ್ತು. ಆಗಿನ್ನೂ ಸೂಕ್ತ ಲಸಿಕೆಗಳಿಲ್ಲದೆ, ಟ್ರಂಪ್ ಅವರು ಹೆಚ್ಚಿನ ತೊಂದರೆ ಅನುಭವಿಸಿದ್ದರು.
ಇದನ್ನೂ ಓದಿ: G7 Summit | ಮೋದಿ ಇದ್ದಲ್ಲಿಗೆ ಬಂದು ಮಾತನಾಡಿಸಿದ ಬೈಡೆನ್; ವಿಡಿಯೋ ವೈರಲ್