Site icon Vistara News

Acid Attack | ಬೆಂಗ್ಳೂರ್‌ To ತಿರುವಣ್ಣಾಮಲೈ: ಆ್ಯಸಿಡ್‌ ನಾಗನ Travel History

ಆ್ಯಸಿಡ್‌ ನಾಗೇಶ್ Acid Attack

acid Naga

ಬೆಂಗಳೂರು: ಯುವತಿಯ ಮೇಲೆ ಆ್ಯಸಿಡ್‌ ದಾಳಿ ಮಾಡಿ 16 ದಿನ ಕರ್ನಾಟಕ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಇದೀಗ ಜೈಲು ಪಾಲಾಗಿರುವ ಆ್ಯಸಿಡ್‌ ನಾಗನ ಟ್ರಾವೆಲ್‌ ಹಿಸ್ಟರಿಯೇ ಭಯಾನಕವಾಗಿದೆ. Acid Attack ಮಾಡುವ ಅನೇಕ ವರ್ಷಗಳಿಂದ ಯುವತಿಯನ್ನು ಆ್ಯಸಿಡ್‌ ನಾಗ ಲವ್‌ ಮಾಡುತ್ತಿದ್ದ. ಕೆಲ ಸಮಯದ ಬಳಿಕ ಬ್ರೇಕ್ ಅಪ್ ಕೂಡ ಆಗಿತ್ತು. ಇದಾದ ಬಳಿಕ ಮತ್ತೊಂದು ಯುವತಿಯನ್ನು ಲವ್ ಮಾಡುವಂತೆ ಕಾಡಿಸಿದ್ದ. ಪ್ರೀತಿಗೆ ನಿರಾಕರಣೆ ಮಾಡಿದಾಗ ಕೋಪಗೊಂಡಿದ್ದ.

2020ರಲ್ಲಿ ಇದೇ ಯುವತಿಗೆ Acid Attack ಮಾಡಲು ಯತ್ನಿಸಿದ್ದ. ಅದಕ್ಕಾಗಿ ಆಗಲೆ ಆ್ಯಸಿಡ್‌ ತಂದು ಇಟ್ಟುಕೊಂಡಿದ್ದ. ಆದರೆ ಅದೇಕೊ ಕೊನೆ ಕ್ಷಣದಲ್ಲಿ ಆ್ಯಸಿಡ್‌ ಹಾಕುವ ನಿರ್ಧಾರದಿಂದ ಹಿಂದೆ ಸರಿದಿದ್ದ. ತನ್ನನ್ನು ಪ್ರೀತಿ ಮಾಡುವಂತೆ ಆಕೆಗೆ ದಂಬಾಲು ಬಿದ್ದಿದ್ದ.

ಏಪ್ರಿಲ್‌ 28ರಂದು ದಾಳಿ ಮಾಡಿದ ನಂತರ ಅಲ್ಲಿಂದ ಪರಾರಿ ಆಗಿದ್ದ. ಬಳಿಕ ಸುಂಕದಕಟ್ಟೆ, ಕುರುಬರಹಳ್ಳಿ, ಮೋದಿ ರಸ್ತೆ ಮೂಲಕ ಕೋರ್ಟ್‌ ತಲುಪಿದ್ದ. ಬಳಿಕ ತನ್ನ ಪ್ರಕರಣವನ್ನು ವಿಚಾರಣೆ ನಡೆಸುವಂತೆ ವಕೀಲರಲ್ಲಿ ಮನವಿ ಮಾಡಿದ್ದ. ಆದರೆ ವಕೀಲರು ಅದಕ್ಕೆ ನಿರಾಕರಿಸಿದ್ದರು. ತನ್ನ ಬೈಕ್‌ ಅನ್ನು ಅಲ್ಲೆ ಪಾರ್ಕ್‌ ಮಾಡಿದ ನಾಗೇಶ್‌ ಅಲ್ಲಿಂದ ನೇರವಾಗಿ ಕ್ಯಾಬ್ ಮೂಲಕ ಹೊಸಕೋಟೆ ಕಡೆ ಹೋಗಿದ್ದ. ಹೊಸಕೋಟೆ ಬಳಿ ಮೊಬೈಲ್ ಬಿಸಾಡಿ ತಿರುವಣ್ಣಾಮಲೈ ತಲುಪಿದ್ದಾನೆ. ಸಾಯೋ ತನಕ ಅಲ್ಲೇ ಇರುವ ಪ್ಲಾನ್ ಮಾಡಿದ್ದ ನಾಗೇಶ್‌ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ.

Acid Attack ನಂತರ ಕ್ಷಣಕ್ಷಣಕ್ಕೂ ಮನಸ್ಸು ಬದಲು

ಕ್ಷಣಕ್ಕೊಮ್ಮೆ ಮನಸ್ಸು ಬದಲಾಯಿಸುತ್ತಿದ್ದ ನಾಗೇಶ್‌, ಆ್ಯಸಿಡ್‌ ದಾಳಿ ಮಾಡಿದ ನಂತರ ಸ್ನೇಹಿತ ಶಿವಕುಮಾರ್‌ ಜತೆ ಮಾತನಾಡಿದ್ದಾನೆ. ನನಗೆ ಮನಃಶಾಂತಿ ಬೇಕು ಎಂದು ಕೇಳಿದ ನಾಗೇಶ್‌, ನಂತರ ಸಿಟಿ ಬಿಟ್ಟು ಹೋಗಲು ಸಿದ್ಧನಾದ. ಹೊಸಕೋಟೆಗೆ ತೆರಳಿ ಅಲ್ಲಿನ ಕೆರೆಯಲ್ಲಿ ಸಾಯುವ ನಿರ್ಧಾರ ಮಾಡಿದ್ದ. ಆದರೆ ಮನಸ್ಸು ಬದಲಾಯಿಸಿ ತಿರುಪತಿಗೆ ಹೊರಟ. ಮಾರ್ಗಮಧ್ಯೆ ಮತ್ತೆ ಮನಸ್ಸು ಬದಲಾಯಿಸಿ ತಿರುವಣ್ಣಾಮಲೈ ಕಡೆಗೆ ತೆರಳಿದ್ದಾನೆ. ದೇವಾಲಯಕ್ಕೆ ತೆರಳುವ ಮೊದಲು ₹300 ಕೊಟ್ಟು ಕಾವಿ ಬಟ್ಟೆ ಖರೀದಿಸಿದ್ದಾನೆ. ಈ ನಡುವೆ ಒಮ್ಮೆ ಪೊಲೀಸರಿಗೆ ಶರಣಾಗುವ ಚಿಂತನೆಯನ್ನೂ ಮಾಡಿದ್ದಾನೆ. ಮತ್ತೆ ಮನಸ್ಸು ಬದಲಾಯಿಸಿ, ಸಾಯೋವರೆಗೆ ದೇವಸ್ಥಾನದಲ್ಲೆ ಇರುವ ನಿರ್ಧಾರ ಮಾಡಿದ್ದಾನೆ.

ಇದನ್ನೂ ಓದಿ |Acid Attack | ಆ್ಯಸಿಡ್‌ ನಾಗೇಶ್‌ ಬಂಧನಕ್ಕೆ ಕೈಕೊಟ್ಟ Technology: ಪೊಲೀಸರ ಕೈಹಿಡಿದ ಓಲ್ಡ್‌ ಟೆಕ್ನಿಕ್‌

Exit mobile version