Site icon Vistara News

ಬಂಡೆಮಠ ಸ್ವಾಮೀಜಿ ಮತ್ತೊಂದು ಖಾಸಗಿ ವಿಡಿಯೋ ಲೀಕ್

swamiji suicide

ರಾಮನಗರ: ಆತ್ಮಹತ್ಯೆ ಮಾಡಿಕೊಂಡಿರುವ ಬಂಡೆಮಠದ ಸ್ವಾಮಿಜಿಯವರ ಎರಡನೇ ವಿಡಿಯೋ ಲೀಕ್ ಆಗಿದ್ದು, ಅದರಲ್ಲಿ ಸ್ವಾಮೀಜಿ ಹಾಗೂ ಯುವತಿಯ ನಡುವೆ ನಡೆದಿರುವ ಶೃಂಗಾರ ಸಂಭಾಷಣೆ ಪತ್ತೆಯಾಗಿದೆ.

ಮೊಬೈಲ್‌ನಲ್ಲಿ ಕೆಲವು ಶೃಂಗಾರ ವಿಡಿಯೋ ತೋರಿಸಿ ಅದರಂತೆ ಮುದ್ದಾಡೋಣ ಎಂದು ಯುವತಿಯೊಂದಿಗೆ ಸ್ವಾಮೀಜಿ ಮಾತುಕತೆ ನಡೆಸಿದ್ದಾರೆ. ಎರಡು ಮೊಬೈಲ್ ಬಳಕೆ ಮಾಡುತ್ತಿದ್ದ ಬಸವಲಿಂಗ ಸ್ವಾಮೀಜಿ, ವಿಡಿಯೋಗಳನ್ನು ಒಂದು ಮೊಬೈಲ್‌ನಲ್ಲಿ ತೋರಿಸಿ ಮತ್ತೊಂದು ಮೊಬೈಲ್‌ನಲ್ಲಿ ವಿಡಿಯೋ ಕಾಲ್ ಮಾಡುತ್ತಿದ್ದರು.

ಪ್ರಸ್ತುತ ಈ ವಿಡಿಯೋ ಕಾಲ್‌ನಲ್ಲಿ ಸ್ವಾಮೀಜಿ ಜತೆ ಭಾಗಿಯಾಗಿರುವ, ಇದನ್ನು ಇಟ್ಟುಕೊಂಡು ಸ್ವಾಮೀಜಿಯನ್ನು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಮಹಿಳೆಗಾಗಿ ಹುಡುಕಾಟ ನಡೆಯುತ್ತಿದೆ.

ಇದನ್ನೂ ಓದಿ | Seer suicide| ಬಂಡೇಮಠ ಶ್ರೀ ಆತ್ಮಹತ್ಯೆಗೆ ಖಾಸಗಿ ವಿಡಿಯೊ ಕಾರಣ? ಮಹಿಳೆ, ಗ್ಯಾಂಗ್‌ನಿಂದ ಬ್ಲ್ಯಾಕ್‌ಮೇಲ್‌

Exit mobile version