ಮಂಡ್ಯ: ಈ ವೀಕೆಂಡ್ ಏನಾದರೂ ಬೆಂಗಳೂರಿನಿಂದ ಮೈಸೂರಿಗೆ ಹಾಗೂ ಮೈಸೂರಿನಿಂದ ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದೂವರೆ ಎರಡು ಗಂಟೆಯಲ್ಲಿ ಕ್ರಮಿಸಿಬಿಡಬಹುದು ಎಂದು ಅಂದಾಜು ಹಾಕಿಕೊಂಡಿದ್ದರೆ ಎಚ್ಚರ. ಈ ಮಾರ್ಚ್ 12ರ ಭಾನುವಾರದಂದು ಬೆಂಗಳೂರು-ಮೈಸೂರು ದಶಪಥ ರಸ್ತೆಯಲ್ಲಿ ಸಂಚಾರವನ್ನು ಬಂದ್ ಮಾಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Modi) ಅವರು ಹೆದ್ದಾರಿ ಉದ್ಘಾಟನೆಗಾಗಿ ಆಗಮಿಸಲಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಡಳಿತ ಈ ಆದೇಶವನ್ನು ಹೊರಡಿಸಿದೆ.
ಅಂದು ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದ್ದು, ಆ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮಾ.12ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6ರ ವರೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ. ಎಚ್.ಎನ್. ಗೋಪಾಲಕೃಷ್ಣ ಆದೇಶದಲ್ಲಿ ತಿಳಿಸಿದ್ದಾರೆ.
ಮಾರ್ಗ ಬದಲಾವಣೆ ಹೇಗಿದೆ?
1-ಮೈಸೂರು-ಬೆಂಗಳೂರಿಗೆ ಬನ್ನೂರು-ಮಳವಳ್ಳಿ-ಹಲಗೂರು ಕನಕಪುರ ಮಾರ್ಗವಾಗಿ ಸಂಚಾರ
2-ಮೈಸೂರು-ತುಮಕೂರಿಗೆ ಮೈಸೂರು-ಶ್ರೀರಂಗಪಟ್ಟಣ-ಪಾಂಡವಪುರ-ನಾಗಮಂಗಲ ಮಾರ್ಗವಾಗಿ ಸಂಚಾರ
3-ತುಮಕೂರು-ಮೈಸೂರಿಗೆ ಬೆಳ್ಳೂರು ಕ್ರಾಸ್-ನಾಗಮಂಗಲ-ಶ್ರೀರಂಗಪಟ್ಟಣದ ಮಾರ್ಗವಾಗಿ ಸಂಚಾರ
4-ಬೆಂಗಳೂರು-ಮೈಸೂರಿಗೆ ಚನ್ನಪಟ್ಟಣ, ಹಲಗೂರು-ಮಳವಳ್ಳಿ-ಕಿರಗಾವಲು ಮಾರ್ಗವಾಗಿ ಸಂಚಾರ
5-ಬೆಂಗಳೂರು-ಮಹದೇಶ್ವರ ಬೆಟ್ಟಕ್ಕೆ ಚನ್ನಪಟ್ಟಣ-ಹಲಗೂರು-ಮಳವಳ್ಳಿ-ಕೊಳ್ಳೆಗಾಲದ ಮಾರ್ಗವಾಗಿ ಸಂಚಾರ
ಇದನ್ನೂ ಓದಿ: Shivamogga terror : ಕುಕ್ಕರ್ ಬ್ಲಾಸ್ಟ್ ಆರೋಪಿ ಶಾರಿಕ್‌ನನ್ನು ಶಿವಮೊಗ್ಗಕ್ಕೆ ಕರೆತಂದ ಎನ್‌ಐಎ ಪೊಲೀಸರು
ಮಾರ್ಗ ಬದಲಾವಣೆ ಆದೇಶ ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದ್ದು, ಆದೇಶವನ್ನು ಉಲ್ಲಂಘಿಸಿದರೆ ಅಂಥವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.