ಬೆಂಗಳೂರು: ರಾಜ್ಯದ ಜನರಲ್ಲಿ ಆತಂಕ ಮೂಡಿಸಿ 16 ದಿನ ಪೊಲೀಸರನ್ನು ಹೈರಾಣಾಗಿಸಿ ಸಿಕ್ಕಿಬಿದ್ದ ಆ್ಯಸಿಡ್ ನಾಗೇಶ್ ರೋಚಕ ಸತ್ಯ ಇದೀಗ ಬಯಲಾಗಿದೆ. ಆ್ಯಸಿಡ್ ನಾಗನ ಪತ್ತೆಗಾಗಿ ಮಾಡಿದ ಪೊಲೀಸರು ಮಾಡಿದ ಕಸರತ್ತು ಒಂದೆರೆಡಲ್ಲ. ಫೋನ್, ಎಟಿಎಂ ಕಾರ್ಡ್, ಫೋನ್ ಪೇ ಇಂಟರ್‌ನೆಟ್ ಕಾಲ್ ಬಳಸದೆ ಖಾಕಿಗೆ ಸಕತ್ ಚಳ್ಳೆ ಹಳ್ಳನ್ನೆ ತ್ತಿನ್ನಿಸಿದ್ದ ಆ್ಯಸಿಡ್‌ನಾಗ. ಇನ್ನೇನು ನಾಗ ಬದುಕಿದ್ದಾನ ಅಥವಾ ಎಲ್ಲಾದರೂ ಸತ್ತೋಗಿದ್ದಾನ ಎಂಬ ಅನುಮಾನಗಳೂ ಮೂಡಿದ್ದವು. ಇದೇ ಕಾರಣಕ್ಕೆ ಕಾಮಕ್ಷಿಪಾಳ್ಯ ಪೊಲೀಸರು ಬೇಸಿಕ್ ಪೊಲೀಸಿಂಗ್ ಮೊರೆ ಹೋಗಿದ್ದರು.
ಈ ಬೇಸಿಕ್ ಪೊಲೀಸಿಂಗ್‌ನಲ್ಲಿ ಟೆಕ್ನಿಕಲ್ ಆದಾರ ಇಲ್ಲದೆ ಫೋಟೊ ಹಿಡಿದು ಹುಡುಕಿದರು. ಕರಪತ್ರ ಹಂಚೋದು, ಮಾಧ್ಯಮ ಪ್ರಕಟಣೆ ಹೊರಡಿಸೋದು, ಭಿತ್ತಿ ಪತ್ರ ಅಂಟಿಸೋದು ಹೀಗೆ ಅಕ್ಕಪಕ್ಕದ ಜಿಲ್ಲೆ ರಾಜ್ಯದಲ್ಲಿ ಖುದ್ದು ಪೊಲೀಸರು ತೆರಳಿ ಹುಡುಕಾಟ ನಡಿಸಿದರು. ಇದೇ ಬೇಸಿಕ್ ಪೊಲೀಸಿಂಗ್‌ನಿಂದ ಆ್ಯಸಿಡ್‌ನಾಗನ ಬಂಧನವಾಗಿದೆ. ತಿರುವಣ್ಣಮಲೈ ಸೇರಿದಂತೆ ಹಲವು ಕಡೆ ಪೊಲೀಸರು ಬಿತ್ತಿ ಪತ್ರ ಅಂಟಿಸಿದ್ದರು. ಬಿತ್ತಿ ಪತ್ರ ನೋಡಿ ಪೊಲೀಸರಿಗೆ ಸ್ಥಳೀಯರು ಮಾಹಿತಿಯನ್ನು ಕೂಡ ಕೊಟ್ಟಿದ್ದರು. ಭಾತ್ಮಿದಾರರ ಮಾಹಿತಿಯಿಂದ ಆರೋಪಿಯನ್ನ ಖೇಡ್ಡಾಕ್ಕೆ ಕೇಡವಿತ್ತು ಖಾಕಿ ಪಡೆ.
ಇದನ್ನೂ ಓದಿ | Acid Attack | ಪಾಪ ತೊಳೆಯಲು ದೇವಸ್ಥಾನದಲ್ಲಿ ಅಡಗಿದ್ದ ಆ್ಯಸಿಡ್ ನಾಗೇಶ್ ಅರೆಸ್ಟ್
ಖಾಕಿ ಪಡೆ ಕಸರತ್ತು
ಇತ್ತೀಚಿನ ವರ್ಷಗಳಲ್ಲಿ ಪೊಲೀಸರು ಕಳ್ಳರನ್ನು ಪತ್ತೆ ಮಾಡಲು ಟೆಕ್ನಾಲಜಿ ಮೊರೆ ಹೋಗಿದ್ದಾರೆ. ಬಹಳಷ್ಟು ಕಳ್ಳರು ಮೊಬೈಲ್ ಕರೆ, ಲೊಕೇಷನ್ ಆಧಾರದಲ್ಲೆ ಸಿಕ್ಕಿ ಬೀಳುತ್ತಾರೆ. ಹಾಗಾಗಿ ಪೊಲೀಸರು, ಸಾಂಪ್ರದಾಯಿಕವಾಗಿ ಬಳಸುತ್ತಿದ್ದ ತಂತ್ರಗಳತ್ತ ಗಮನ ಕಡಿಮೆ ಕೊಡುತ್ತಾರೆ. ಬಾತ್ಮೀದಾರರನ್ನು ಇಟ್ಟುಕೊಳ್ಳುವುದು, ಸಾರ್ವಜನಿಕ ಸ್ಥಳಗಳಲ್ಲಿ Wanted ಪೋಸ್ಟರ್ ಅಂಟಿಸೋದೆಲ್ಲ ಈಗ ಅತ್ಯಂತ ಕಡಿಮೆ. ಇದನ್ನೆಲ್ಲ ತಿಳಿದುಕೊಂಡಿದ್ದ ನಾಗೇಶ್, ಟೆಕ್ನಿಕಲಿ ಯಾವ ಡೀಟೇಲ್ಸ್‌ಗಳನ್ನೂ ಉಳಿಸಿರಲಿಲ್ಲ. ಹದಿನಾರು ದಿನಗಳಿಂದ ಮೊಬೈಲ್‌ನತ್ತ ತಿರುಗಿಯೂ ನೋಡಲಿಲ್ಲ. ಹೀಗಾಗಿ ಪೊಲೀಸರ ಟೆಕ್ನಾಲಜಿ ಮಾರ್ಗ ಬಂದಾಗಿತ್ತು. ಹಾಗಾಗಿ ಈ ಬಾರಿ ಪೊಲೀಸರು ಹೆಚ್ಚು ಬೆವರು ಹರಿಸಬೇಕಾಯಿತು. ಆರೋಪಿ ಪತ್ತೆಗಾಗಿ ಖಾಕಿ ಮಾಡಿದ ಕಸರತ್ತು ಒಂದೆರಡಲ್ಲ. ದಾಳಿಯ ಬಳಿಕ ತಿರುಪತಿಗೆ ಹೋಗಿದ್ದಾನೆ ಅನ್ನೊ ಮಾಹಿತಿ ಸಿಕಿತ್ತು, ತಡ ಮಾಡದ ಪೊಲೀಸರು ಪ್ರತಿ ಲಾಡ್ಜ್ ಗು ಕರಪತ್ರ ಹಂಚಿದ್ದರು. ಆರೋಪಿ ಆ್ಯಸಿಡ್ ನಾಗನಿಗಾಗಿ ತಿರುಪತಿಯಲ್ಲೆ 900 ಲಾಡ್ಜ್ ಚೆಕ್ ಮಾಡಿದ್ದರು.
ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದನಂತೆ
ಕೆರೆಗೆ ಹಾರಿ Suicide ಮಾಡಿಕೊಳ್ಳುವುದಾಗಿ ನಿರ್ಧಾರ ಕೂಡ ಮಾಡಿದ್ದ ಎನ್ನುವ ಅಂಶ ತಿಳಿದುಬಂದಿದೆ. ದಾಳಿ ಮಾಡಿದ ತಕ್ಷಣ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಸಾಗಿತ್ತು. ಆಮೇಲೆ ಅದೇಕೊ ಮನಸ್ಸು ಬದಲಾಯಿಸಿದೆ ಎಂದಿದ್ದಾನೆ. ಆಗ, ಕಾನೂನು ಪ್ರಕಾರ ಏನಾದರೂ ಬಚಾವಾಗಲು ಅವಕಾಶ ಇದೆಯಾ ಎಂದು ಹುಡುಕಾಡಿದ್ದಾನೆ. ಕೂಡಲೆ ಕೋರ್ಟ್‌ಬಳಿ ಹೋಗಿ ಅಲ್ಲಿ ವಕೀಲರನ್ನು ಅಂಗಲಾಚಿದ್ದಾನೆ. ಇವನ ಅವತಾರ, ಕೈಗೆ ಆಗಿದ್ದ ಗಾಯ ನೋಡಿ ಯಾರೂ ಪ್ರಕರಣ ತೆಗೆದುಕೊಳ್ಳಲು ಮುಂದೆ ಬಂದಿಲ್ಲ. ವಕೀಲರು ನನ್ನನ್ನು ಬಚಾವು ಮಾಡುವುದಿಲ್ಲ, ಇನ್ನೇನಿದ್ದರೂ ದೇವರ ಮೊರೆ ಹೋಗೋದೇ ಲೇಸು ಎಂದು ನಿರ್ಧಾರ ಮಾಡಿದ್ದಾನೆ.
ತನ್ನ ಬೈಕ್ ಅಲ್ಲೆ ಬಿಟ್ಟು ಆಟೋ ಹತ್ತಿ ಹೊಸಕೋಟೆವರೆಗೂ ಹೋಗಿದ್ದಾನೆ. ಅಲ್ಲಿಂದ ತಿರುಪತಿಗೆ ಹೋಗೋಣ ಅಂತಾ ಬಸ್ ಹತ್ತಿದ್ದಾನೆ. ತಿರುಪತಿ ತೆರಳಲು ಮಾಲೂರು ಬಸ್ ಹತ್ತಿದ್ದ ನಾಗ, ನಂತರ ಮನಸ್ಸು ಬದಲಿಸಿ ಮಾರ್ಗ ಮಧ್ಯೆ ಇಳಿದಿದ್ದಾನೆ. ನಂತರ ಕೃಷ್ಣಗಿರಿ ಬಸ್ ಹತ್ತಿ ತಿರುವಣ್ಣಾಮಲೈಗೆ ಹೋಗಿದ್ದಾನೆ. ತಿರುವಣ್ಣಾಮಲೈನಿಂದ ರಮಣಾಶ್ರಮ ಕಡೆಗೆ ಹೋಗಿ ಅಲ್ಲೇ ಈಶ್ವರ ದೇವಸ್ಥಾನದಲ್ಲಿ ಬೀಡುಬಿಟ್ಟಿದ್ದಾನೆ.
ಆ್ಯಸಿಡ್ ಖಾಕಿ ಎದುರು ಬಾಯ್ಬಿಟ್ಟ ಸ್ಫೋಟಕ ಸತ್ಯ
ಆ್ಯಸಿಡ್ ಯಾಕೆ ಹಾಕಿದ್ದು ಎಂದು ಪ್ರಶ್ನೆ ಮಾಡಿದ್ದ ಪೊಲೀಸರಿಗೆ, ಪಾಪಿ ಆ್ಯಸಿಡ್ ನಾಗ, ಆ್ಯಸಿಡ್ ಹಾಕೋಕೆ ಯುವತಿಯೇ ಕಾರಣ ಎಂದಿದ್ದಾನೆ. ನಾನು ಆ್ಯಸಿಡ್ ಹಾಕಬಾರದು ಅಂತಲೇ ಇದ್ದೇ. ಹಿಂದಿನ ದಿನ ಸುಮ್ಮನೆ ಬಾಯಿ ಮಾತಿಗೆ, ಆ್ಯಸಿಡ್ ಹಾಕ್ತೀನಿ ಎಂದಿದ್ದೆ. ಆದರೆ ಅವಳು ನನ್ನನ್ನ ಅಣ್ಣ ಅಂದುಬಿಟ್ಟಳು. ಈ ವಿಷಯವನ್ನು ಆಕೆಯ ತಂದೆಗೆ ಹೇಳಿಬಿಟ್ಟಳು. ಅವರ ತಂದೆ ನನ್ನ ಅಣ್ಣನಿಗೆ ಹೇಳಿದರು. ನನ್ನ ಅಣ್ಣ ನನಗೆ ಬೈದಿದ್ದ. ಇದರಿಂದ ಆ್ಯಸಿಡ್ ಹಾಕಿಯೇ ಬಿಡೋಣ ಎಂದು ನಿರ್ಧರಿಸಿಬಿಟ್ಟಿದ್ದೆ ಎಂದು ಪೊಲೀಸರಿಗೆ ಹೇಳಿದ್ದಾನೆ.
ಜೈಲಲ್ಲೂ ಊಟ, ದೇವಸ್ಥಾನದಲ್ಲೂ ಊಟ
ಇಷ್ಟಾದ್ರೂ ಕೂಡ ಆ್ಯಸಿಡ್ ನಾಗ ಖಡಕ್ ಆಗೇ ಪೊಲೀಸರಿಗೆ ಉತ್ತರಿಸಿದ್ದಾನೆ. ನೀವು ಹುಡುಕುತ್ತಾ ಇರುತ್ತೀರ ಅಂತಾ ಗೊತ್ತಿತ್ತು ಸರ್. ಮೂರ್ ಹೊತ್ತು ಊಟವನ್ನು ಜೈಲಲ್ಲಿದ್ರೂ ಹಾಕ್ತಾರೆ. ಧ್ಯಾನ ಮಾಡ್ಕೊಂಡ್ ಭಿಕ್ಷೆ ಬೇಡಿಕೊಂಡು ಬದುಕಿದರೆ ಆಯ್ತು ಅಂತಾ ನಿರ್ಧಾರ ಮಾಡಿದ್ದೆ.
ತಿರುಮಣ್ಣಾಮಲೈಗೆ ಹೋಗಿ ಜೀವನ ಮಾಡ್ಬೇಕು ಅನ್ಕೊಂಡೆ. ಅಣ್ಣ ಅಂತಾ ಹುಡುಗಿ ಕರೆದಾಗ ತಿರುವಣ್ಣಾಮಲೈಗೆ ಹೋಗುವ ನಿರ್ಧಾರ ಮಾಡಿದ್ದೆ. ಆ್ಯಸಿಡ್ ತಂದಿಟ್ಟುಕೊಂಡಿದ್ದೆ But ಬೇಡ ತಿರುವಣ್ಣಾಮಲೈಗೆ ಹೋಗೋಣ ಅಂತಾ ತೀರ್ಮಾನ ಮಾಡಿದ್ದೆ.
ಹುಡುಗಿ ಮನೆಯವರದ್ದೇ ತಪ್ಪಂತೆ
ಅವಳನ್ನು ಮದುವೆ ಆಗೋಣ ಎಮದು ಏಳು ವರ್ಷದಿಂದ ಕಾಯುತ್ತಾ ಇದ್ದೀನಿ. ಇದನ್ನು ಅವಳಿಗೆ ಹೇಳಿದ್ದೆ. ನನ್ನ ಅಣ್ಣ ಅಂದುಬಿಟ್ಲು. ನನಗೆ ಮದುವೆ ಸೆಟ್ಟಾಗಿದೆ ಅಂದುಬಿಟ್ಲು. ಇದ್ರಿಂದ ನನಗೆ ಕೋಪ ಬಂದಿತ್ತು. ಅವತ್ತೇ ಆ್ಯಸಿಡ್ ಖರೀದಿ ಕೂಡ ಮಾಡಿದ್ದೆ. ಆದರೆ ಹಾಕಬೇಕು ಅನ್ಕೊಂಡಿರಲಿಲ್ಲ. ಇವನು ಆ್ಯಸಿಡ್ ಹಾಕ್ತಾನಂತೆ ಅಂತಾ ಹುಡುಗಿ ಮನೆಯವರು ಹುಯಿಲೆಬ್ಬಿಸಿದರು. ಹೇಗೋ ಇವರು ಅಪಪ್ರಚಾರ ಮಾಡ್ತಾವ್ರೆ ಅಂತಾ ಆಸಿಡ್ ಹಾಕ್ದೆ ಎಂದು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.
ಇದನ್ನೂ ಓದಿ | ಆ್ಯಸಿಡ್ ದಾಳಿ ಆರೋಪ ಸಾಬೀತಾದರೆ 10 ವರ್ಷ ಜೈಲು, ಆದರೆ, ಈಗ ಜಾಮೀನು ಸಿಗಲೂಬಹುದು