ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಲಾಕ್ ಆಗಿರುವ ನಟ ದರ್ಶನ್ (Actor Darshan) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನುನಿನ್ನೆ ಸೋಮವಾರ ಕೋರ್ಟ್ ವಜಾಗೊಳಿಸಿತು. ದರ್ಶನ್‌ಗೆ ಜಾಮೀನು ನೀಡಲು ನಿರಾಕರಿಸಿದ್ದಕ್ಕೆ ಕೋರ್ಟ್ 9 ಕಾರಣಗಳನ್ನು ನೀಡಿದೆ.
ದರ್ಶನ್ ಜಾಮೀನು ಅರ್ಜಿ ವಜಾಗೊಳಿಸಲು ಪ್ರಮುಖ ಕಾರಣಗಳು!
- -ಐ ವಿಟ್ನೆಸ್ ಹೇಳಿಕೆಗಳು ಕಾನೂನು ಪ್ರಕಾರವಾಗಿವೆ
- -ರೇಣುಕಾಸ್ವಾಮಿ ಮೃತದೇಹದ ಗುರುತು ಪತ್ತೆ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ತಡವಾಗಿಲ್ಲ.
- -ದರ್ಶನ್ ಟ್ರಯಲ್ ಆರಂಭವಾದ ಬಳಿಕ ಆರೋಪಿಗಳ ಹೇಳಿಕೆಯ ಬಗ್ಗೆ ತಿಳಿಯುತ್ತದೆ.
- -ದರ್ಶನ್ ಕ್ರಾಸ್ ಎಕ್ಸಾಮಿನ್ ಮಾಡಿದಾಗ ರಿಕವರಿಯ ಅಂಶಗಳ ಬಗ್ಗೆ ತಿಳಿಯುತ್ತದೆ
- -ಸಿಡಿಆರ್ ನಲ್ಲಿ ಎ೨ ಆರೋಪಿ ದರ್ಶನ್ ಕೃತ್ಯ ನಡೆದ ಸ್ಥಳದಲ್ಲಿರೋದು ಸ್ಪಷ್ಟವಾಗಿದೆ
- -ಈ ಹಂತದಲ್ಲಿ ಸಾಕ್ಷಿಗಳ ಹೇಳಿಕೆ ತಡವಾಗಿದೆ ಅನ್ನೋದಕ್ಕೆ ಪುರಾವೆಗಳಿಲ್ಲ
- -ಡಿ ಎನ್ ಎ ಟೆಸ್ಟ್ ನಲ್ಲಿ ದರ್ಶನ್ ಕೃತ್ಯ ನಡೆದ ಸ್ಥಳದಲ್ಲಿ ಇದ್ದ ಬಗ್ಗೆ ಸ್ಪಷ್ಟಪಡಿಸಿದೆ
- -ಪೋಸ್ಟ್ ಮಾರ್ಟಂ ರಿಪೋರ್ಟ್ ನಲ್ಲಿ ರೇಣುಕಾಸ್ವಾಮಿ ಯ ಕೊಲೆಯ ಕ್ರೂರತೆ ಬಗ್ಗೆ ತಿಳಿಸಿದೆ
- -ಸಮಾಜದಲ್ಲಿ ದರ್ಶನ್ ರೋಲ್ ಮಾಡೆಲ್ ಆಗಿದ್ದು, ಸಾಕಷ್ಟು ಜನ್ರು ಪ್ರಭಾವಿತರಾಗಿರ್ತಾರೆ
ಹತ್ಯೆ ಕೇಸ್ ಆರೋಪಿ ದರ್ಶನ್‌ಗೆ ಮತ್ತಷ್ಟು ದಿನ ಜೈಲುವಾಸವೇ ಫಿಕ್ಸ್ ಆಗಿದೆ. ಜಾಮೀನು ನಿರೀಕ್ಷೆಯಲ್ಲಿದ್ದ ಆರೋಪಿ ದರ್ಶನ್‌ಗೆ ನ್ಯಾಯಾಲಯ ಬಿಗ್ ಶಾಕ್ ನೀಡಿದೆ. ಸ್ಯಾಂಡಲ್‌ವುಡ್ ಜಗ್ಗುದಾದಾನ ಬೇಲ್ ಅರ್ಜಿ ವಜಾಗೊಳಿಸಿರುವ ಕೋರ್ಟ್, ಜಾಮೀನು ನಿರಾಕರಣೆಗೆ ಹಲವು ಕಾರಣ ನೀಡಿದೆ. ವಿಸ್ತಾರ ನ್ಯೂಸ್‌ಗೆ ಬೇಲ್ ರಿಜೆಕ್ಟ್ ಬಗ್ಗೆ ಕೋರ್ಟ್ ಉಲ್ಲೇಖಿಸಿದ ಅಂಶಗಳ ಪಿನ್ ಟು ಪಿನ್ ಮಾಹಿತಿ ಲಭ್ಯವಾಗಿದೆ. ಸದ್ಯ ಜೈಲಲ್ಲಿರುವ ದರ್ಶನ್‌ಗೆ ಜಾಮೀನು ಅನ್ನೋದು ಮರೀಚಿಕೆ ಆಗಿದೆ. ನ್ಯಾಯಾಲಯ ಉಲ್ಲೇಖಿಸಿದ ಅಂಶಗಳ ನೋಡಾದಾದರೆ, ಕೊಲೆ ಕೇಸಲ್ಲಿ ಐ ವಿಟ್ನೆಸ್ ಹೇಳಿಕೆಗಳು ಕಾನೂನು ಪ್ರಕಾರವಾಗಿವೆ ಅಂತಾ ಆದೇಶದಲ್ಲಿ ತಿಳಿಸಲಾಗಿದೆ.
ದರ್ಶನ್ ಪರ ವಕೀಲರ ಆರೋಪದಂತೆ ರೇಣುಕಾಸ್ವಾಮಿ ಮೃತದೇಹ ಗುರುತಿನ ಬಳಿಕ ಮರಣೋತ್ತರ ಪರೀಕ್ಷೆ ತಡವಾಗಿಲ್ಲ, ದರ್ಶನ್ ಟ್ರಯಲ್ ಆರಂಭ ಬಳಿಕ ಆರೋಪಿಗಳ ಹೇಳಿಕೆ ತಿಳಿಯುತ್ತದೆ. ದರ್ಶನ್ ಕ್ರಾಸ್ ಎಕ್ಸಾಮ್ ಮಾಡಿದಾಗ ರಿಕವರಿ ಅಂಶ ತಿಳಿಯುತ್ತದೆ. ಸಿಡಿಆರ್‌ನಲ್ಲಿ ದರ್ಶನ್ ಕೃತ್ಯ ನಡೆದ ಸ್ಥಳದಲ್ಲಿರೋದು ಸ್ಪಷ್ಟವಾಗಿದೆ ಅಂತಾ ಬೇಲ್ ಅರ್ಜಿ ವಜಾಗೊಳಿಸಿದೆ. ಮಾತ್ರವಲ್ಲ ಕೊಲೆ ಕೇಸಲ್ಲಿ ಸಾಕ್ಷಿಗಳ ಹೇಳಿಕೆ ತಡವಾಗಿದೆ ಅನ್ನೋದಕ್ಕೆ ಪುರಾವೆಗಳಿಲ್ಲ, DNA ಟೆಸ್ಟ್‌ನಲ್ಲಿ ದರ್ಶನ್ ಕೃತ್ಯ ನಡೆದ ಸ್ಥಳದಲ್ಲಿ ಇದ್ದ ಬಗ್ಗೆ ಸ್ಪಷ್ಟಪಡಿಸಿದೆ. ಪೋಸ್ಟ್‌ಮಾರ್ಟಂ ವರದಿ ರೇಣುಕಾಸ್ವಾಮಿ ಕೊಲೆಯ ಕ್ರೂರತೆ ತಿಳಿಸಿದೆ ಎಂದಿರುವ ಕೋರ್ಟ್, ದರ್ಶನ್‌ಗೆ ಜಾಮೀನು ನೀಡಲು ನಿರಾಕರಿಸಿದ್ದು, ಬೇಲ್ ಅರ್ಜಿ ವಜಾಗೊಳಿಸಿದೆ.
ಹೈಕೋರ್ಟ್‌ನತ್ತ ದಚ್ಚು-ಪವಿ ಬೇಲ್ ಅರ್ಜಿ?
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ದರ್ಶನ್, ಜಾಮೀನು ಪಡೆದು ಹೊರಬರುವ ದಿನಕ್ಕಾಗಿ ಕಾಯುತ್ತಾ ಇದ್ದರು. ಆದರೆ ಸ್ಯಾಂಡಲ್‌ವುಡ್ ಕಾಟೇರನ ಬೇಲ್ ಕನಸು ನುಚ್ಚು ನೂರಾಯಿತು. ಕಳೆದ ವಾರ ದರ್ಶನ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು 57ನೇ ಸಿಸಿಎಚ್ ಕೋರ್ಟ್ ಪೂರ್ಣಗೊಳಿಸಿತ್ತು. ನಿನ್ನೆ ಬೇಲ್ ಆದೇಶ ಹೊರಬಿದ್ದಿದ್ದು, ದರ್ಶನ್ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಪರ ವಕೀಲರ ತಂಡ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಲು ಸಜ್ಜಾಗಿದ್ದಾರೆ.
ಸೆಷನ್ ಕೋರ್ಟ್‌ನ ಆದೇಶ ಪ್ರತಿ ಸೇರಿಸಿ ಮೇಲ್ಮನವಿ ಅರ್ಜಿ ಸಲ್ಲಿಕೆ ಮಾಡಲು ಸಜ್ಜಾಗಿದ್ದು, ಯಾವುದೇ ಕ್ಷಣದಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು. ಮತ್ತೊಂದೆಡೆ ಸದ್ಯಕ್ಕೆ ಜಾಮೀನು ಸಿಗದಿರೋ ಕಾರಣ ಅನಾರೋಗ್ಯ ಕಾರಣ ನೀಡಿ, ದರ್ಶನ್ ಬೆಂಗಳೂರಿಗೆ ಶಿಫ್ಟ್ ಆಗುವ ಸಾಧ್ಯತೆ ಇದೆ. ಈಗಾಗಲೇ ದರ್ಶನ್ ಕುಟುಂಬಸ್ಥರು ಮೆಡಿಕಲ್ ವರದಿ ಸಿದ್ಧ ಮಾಡಿಕೊಂಡಿದ್ದಾರೆ. ಅನಾರೋಗ್ಯದ ಕಾರಣ ನೀಡಿ ಬೆಂಗಳೂರಿಗೆ ಶಿಫ್ಟ್ ಆಗಲು ಪ್ಲ್ಯಾನ್ ನಡೆದಿದೆ.
ದರ್ಶನ್ ಕಳೆದ ಕೆಲ ದಿನಗಳಿಂದ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ನಡೆಯಲು ಕೂಡ ದರ್ಶನ್‌ಗೆ ಕಷ್ಟ ಆಗುತ್ತಿದೆ ಎನ್ನಲಾಗಿದೆ. ಅನಾರೋಗ್ಯದ ನೆಪದಲ್ಲಾದರೂ ಚಾಲೆಂಜಿಂಗ್ ಸ್ಟಾರ್, ಬೆಂಗಳೂರು ಜೈಲು ಸೇರುವ ಯತ್ನ ನಡೆಸ್ತಿದ್ದಾರೆ ಎನ್ನಲಾಗ್ತಿದೆ. ಈ ಮಧ್ಯೆ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ನಡೆದಿದೆ. ಮತ್ತೊಂದೆಡೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಪವಿತ್ರಾ ಗೌಡಗೂ ಬೇಲ್ ಸಿಕ್ಕಿಲ್ಲ. ಹೀಗಾಗಿ ಜೈಲುಹಕ್ಕಿ, ದರ್ಶನ್ ಗೆಳತಿ ಪವಿತ್ರಾ ಕೂಡ ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ. ಪವಿತ್ರಾ ಗೌಡ ಪರ ವಕೀಲರ ತಂಡ, ಬೇಲ್ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
ಈವರೆಗೆ ಐವರಿಗೆ ಜಾಮೀನು
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳಿಗೆ ನ್ಯಾಯಾಲಯ ಬಿಗ್ ರಿಲೀಫ್ ನೀಡಿದೆ. ಹತ್ಯೆ ಕೇಸ್‌ನ ಎ8 ರವಿಶಂಕರ್ ಹಾಗೂ ಎ13 ದೀಪಕ್‌ಗೆ ಬೇಲ್ ನೀಡಿದ ಕೋರ್ಟ್ ಆದೇಶಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈವರೆಗೆ ಐವರಿಗೆ ಜಾಮೀನು ಸಿಕ್ಕಿದ್ದು, ಇದೀಗ ಮತ್ತಿಬ್ಬರು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಮರ್ಡರ್ ಕೇಸ್‌ನ ಎ8 ಆಗಿರುವ ರವಿಶಂಕರ್ ಕ್ಯಾಬ್‌ವೊಂದರ ಚಾಲಕನಾಗಿರುವ ಹಿನ್ನೆಲೆ ಚಿತ್ರದುರ್ಗದಿಂದ ಬೆಂಗಳೂರಿಗೆ ಸ್ವಾಮಿಯನ್ನು ಕರೆತಂದಿದ್ದ ಅಷ್ಟೇ ಎಂದು ವಕೀಲರು ವಾದ ಮಾಡಿದ್ದು, ಹತ್ಯೆ ಕೇಸಲ್ಲಿ ರವಿಶಂಕರ್ ಒಳಸಂಚು ಮೇಲ್ನೋಟಕ್ಕೆ ಕಾಣದ ಹಿನ್ನೆಲೆ ಬೇಲ್ ನೀಡುವಂತ ಮನವಿ ಕೂಡ ಮಾಡಲಾಗಿತ್ತು.
ಮತ್ತೊಂದೆಡೆ ಎ13 ದೀಪಕ್ ವಿರುದ್ಧ ಸಾಕ್ಷ್ಯ ನಾಶ ಮಾಡಿರುವ ಆರೋಪ ಕೇಳಿ ಬಂದಿತ್ತು. ಆದರೆ ದೀಪಕ್ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದಿರುವ ವಕೀಲರು, ಜಾಮೀನು ಕೋರಿ ಮನವಿ ಮಾಡಿದ್ದು, ಇದಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್ ಕೂಡ ಆಕ್ಷೇಪ ವ್ಯಕ್ತಪಡಿಸದ ಹಿನ್ನೆಲೆ ಜಾಮೀನು ಸಿಕ್ಕಿದ್ದು, ಇಬ್ಬರಿಗೂ ರಿಲೀಫ್ ಸಿಕ್ಕಿದೆ. ಇಬ್ಬರು ಆರೋಪಿಗಳ ವಿರುದ್ಧವೂ ಜಾಮೀನು ನೀಡಬಹುದಾದ ಪ್ರಕರಣ ಹಿನ್ನೆಲೆ ನ್ಯಾಯಾಲಯ ಬೇಲ್ ನೀಡಿದೆ. ಜಾಮೀನು ಪ್ರಕ್ರಿಯೆ ಮುಗಿದ ಬಳಿಕ ಇಬ್ಬರೂ ರಿಲೀಸ್ ಆಗಲಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ