Site icon Vistara News

Actor Darshan: ನಟ ದರ್ಶನ್‌ ಗ್ಯಾಂಗ್‌ಗೆ ಸೆ.12ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ; ಕೋರ್ಟ್‌ಗೆ ಡಿಜಿಟಲ್‌ ಎವಿಡೆನ್ಸ್‌ ಸಲ್ಲಿಸಿದ ತನಿಖಾಧಿಕಾರಿಗಳು

actor darshan and gang

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಮತ್ತು ಗ್ಯಾಂಗ್‌ಗೆ (Actor Darshan)ಸೆಪ್ಟೆಂಬರ್ 12 ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ 24ನೇ ಎಸಿಎಂಎಂ ಕೋರ್ಟ್‌ ಆದೇಶ ಹೊರಡಿಸಿದೆ.

ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ನಟ ದರ್ಶನ್‌ನನ್ನು ಬಳ್ಳಾರಿ ಜೈಲಿನಿಂದ, ಪವಿತ್ರಾಗೌಡ ಮತ್ತಿತರನ್ನು ಪರಪ್ಪನ ಅಗ್ರಹಾರದಿಂದ ಹಾಗೂ ಮೈಸೂರು, ಬಳ್ಳಾರಿ, ಶಿವಮೊಗ್ಗ, ಧಾರವಾಡ, ಬೆಳಗಾವಿ, ಕಲಬುರುಗಿ, ವಿಜಯಪುರದ ಜೈಲಿನಿಂದ ಒಟ್ಟು 17 ಆರೋಪಿಗಳನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ಇದೀಗ ಸೆ.12ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿರುವುದರಿಂದ ದರ್ಶನ್ ಗ್ಯಾಂಗ್‌ಗೆ ಸೆರೆವಾಸ ಮುಂದುವರಿದಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧಿಯಾಗಿರುವ ನಟ ದರ್ಶನ್‌ ಗ್ಯಾಂಗ್‌ನ ನ್ಯಾಯಾಂಗ ಬಂಧನ ಸೆ.9ರಂದು ಅಂತ್ಯವಾದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಕೋರ್ಟ್‌ಗೆ ಹಾಜರು ಪಡಿಸಲಾಯಿತು. ನ್ಯಾಯಾಧೀಶರು ಎಲ್ಲ ಆರೋಪಿಗಳ ಹಾಜರಾತಿ ಪಡೆದುಕೊಂಡರು. ಈ ವೇಳೆ ಚಾರ್ಜ್ ಶೀಟ್ ನೀಡಲು ಸರ್ಕಾರಿ ವಕೀಲರು ಕಾಲಾವಕಾಶ ಕೋರಿದರು.

ಆರೋಪಿಗಳ ಪರ ವಕೀಲರಿಗೆ ವೈಯಕ್ತಿಕವಾಗಿ ಚಾರ್ಜ್ ಶೀಟ್‌ ನೀಡಿ ಎಂದು ನ್ಯಾಯಾಧೀಶರು ಸೂಚನೆ ನೀಡಿದರು. ಆರೋಪಿಗಳು ಒಂದೊಂದು ಜೈಲಿನಲ್ಲಿದ್ದಾರೆ, ಹೀಗಾಗಿ ಆರೋಪಿಗಳ ಕೈಗೆ ಚಾರ್ಜ್ ಶೀಟ್ ಸಲ್ಲಿಸಿದರೆ ಜಾಮೀನು ಪ್ರಕ್ರಿಯೆಗೆ ತಡವಾಗುತ್ತದೆ. ಆರೋಪಿಗಳು ವಿಡಿಯೋ ಕಾನ್ಪರೆನ್ಸ್‌ನಲ್ಲಿದ್ದಾರೆ. ಅವರನ್ನು ಕೇಳಿ ಅವರ ಸೂಚನೆ ಮೇರೆಗೆ ಚಾರ್ಜ್ ಶೀಟ್ ನೀಡುವಂತೆ ವಕೀಲರು ಮನವಿ ಮಾಡಿದರು.

ಪುಟ್ಟಸ್ವಾಮಿ ,ನಂದೀಶ್, ರಾಘವೆಂದ್ರ, ಜಗದೀಶ್, ಪವನ್, ಅನುಕುಮಾರ್, ಧನರಾಜ್ ,ರವಿಶಂಕರ್, ವಿನಯ್, ಪ್ರದೂಷ್, ನಾಗರಾಜು ಹಾಗೂ ಲಕ್ಷ್ಮಣ್, ದೀಪಕ್ ಕುಮಾರ್, ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ನಾಯಕ್ ಪರ ವಕೀಲರು ಯಾರೆಂದು ನ್ಯಾಯಾಧೀಶರು ಕೇಳಿದರು. ಈ ವೇಳೆ ನಟ ದರ್ಶನ್‌ ಸಿ.ವಿ. ನಾಗೇಶ್‌ ವಕೀಲರು ಎಂದು ಉತ್ತರಿಸಿದರು. ಇದಕ್ಕೂ ಮೊದಲು ರಿಮ್ಯಾಂಡ್ ಕಾಪಿಯೊಂದಿಗೆ ತನಿಖಾಧಿಕಾರಿ ಎಸಿಪಿ‌ ಚಂದನ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಇದನ್ನೂ ಓದಿ; Actor Darshan : ರೇಣುಕಾಸ್ವಾಮಿಯ ಎದೆ ಮೇಲೆ ಕಾಲಿಟ್ಟು, ಕಿವಿ ಹೊಸಕಿ, ಮರ್ಮಾಂಗ ತುಳಿದ್ರಾ! ನಟ ದರ್ಶನ್‌ ತಪ್ಪೊಪ್ಪಿಗೆ!

ಕೋರ್ಟ್‌ಗೆ ಡಿಜಿಟಲ್‌ ಎವಿಡೆನ್ಸ್‌ ಸಲ್ಲಿಕೆ

ನ್ಯಾಯಾಲಯಕ್ಕೆ ಹಾಜರಾದ ಎಸ್‌ಪಿಪಿ ಪ್ರಸನ್ನ ಕುಮಾರ್, ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಟಲ್ ಎವಿಡೆನ್ಸ್ ಹಾರ್ಡ್ ಡಿಸ್ಕ್ , ಪೆನ್ ಡ್ರೈವ್‌ ಅನ್ನು ಸಲ್ಲಿಕೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. ತನಿಖಾಧಿಕಾರಿ ಎಸಿಪಿ‌ ಚಂದನ್ ಪೆನ್ ಡ್ರೈವ್, ಸಿಡಿ, ಡಿವಿಡಿ, ಹಾರ್ಡ್ ಡಿಸ್ಕ್ ಕಂ ಪೆನ್ ಡ್ರೈವ್ ಸೇರಿ ಒಟ್ಟು 60 ಡಿಜಿಟಲ್ ಎವಿಡೆನ್ಸ್‌ಗಳನ್ನು ಕೋರ್ಟ್‌ಗೆ ಸಲ್ಲಿಸಿದರು.

ಈ ವೇಳೆ ಚಾರ್ಜ್ ಶೀಟ್‌ನ ಆರೋಪಿಗಳ ಪ್ರತಿ ತೆಗೆದುಕೊಂಡು ಬಂದಿದ್ದಾರಾ ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದಾಗ, ಎಸ್‌ಪಿಪಿ ಪ್ರಸನ್ನ ಕುಮಾರ್ ಎರಡು ದಿನಗಳಲ್ಲಿ ನೀಡುತ್ತೇವೆ ಎಂದರು. ಆಗ ಆರೋಪಿಗಳ ಪರ ವಕೀಲರು ‌ ಡಿಜಿಟಲ್ ಎವಿಡೆನ್ಸ್ ತಡವಾಗಿ ಬೇಕಾದರೂ ನೀಡಲಿ, ಆದರೆ ಚಾರ್ಜ್ ಶೀಟ್ ಇವತ್ತು ನೀಡಲಿ ಎಂದು ಮನವಿ ಮಾಡಿದರು. ಹೀಗಾಗಿ ಪೇಪರ್ ಚಾರ್ಜ್ ಶೀಟ್ ಅನ್ನು ಇವತ್ತು ನೀಡಿ, ಡಿಜಿಟಲ್ ಎವಿಡೆನ್ಸ್‌ ಅನ್ನು ಎರಡು ವಾರಗಳಲ್ಲಿ ಆರೋಪಿಗಳ ಕಾಪಿ ನೀಡುವಂತೆ ಎಸ್‌ಪಿಪಿ ಪ್ರಸನ್ನ ಕುಮಾರ್‌ಗೆ ನ್ಯಾಯಾಧೀಶರು ಸೂಚನೆ ನೀಡಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version