ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renukaswamy case) ಬಳ್ಳಾರಿ ಜೈಲಲ್ಲಿರೋ ನಟ ದರ್ಶನ್‌ಗೆ (Actor Darshan) ಬಿಟ್ಟು ಬಿಡದೆ ಬೆನ್ನು ನೋವು ಕಾಡುತ್ತಿದೆ ಎನ್ನಲಾಗಿದೆ. ಬೆನ್ನು ನೋವಿಗಾಗಿ ಬಿಮ್ಸ್ ಆಸ್ಪತ್ರೆ ವೈದ್ಯರಿಂದ ತಪಾಸಣೆ ನಡೆದಿದ್ದು, ಚಿಕಿತ್ಸೆಗೆ ಸೂಚನೆ ನೀಡಲಾಗಿದೆ. ಹೀಗಿದ್ದರೂ ಚಿಕಿತ್ಸೆಗೆ ಒಪ್ಪದೆ ನಟ ದರ್ಶನ್ ನೋವಿನಲ್ಲೇ ಇದ್ದಾನೆ. ಎಮ್‌ಆರ್‌ಐ ಸ್ಕ್ಯಾನ್, ಸಿಟಿ ಸ್ಕ್ಯಾನೂ ಯಾವುದು ಬೇಡ ,ನಾನೂ ಎಲ್ಲೂ ಹೋಗಲ್ಲ ಅಂತಿದ್ದರಂತೆ. ವೈದ್ಯರು ನಟ ದರ್ಶನ್‌ಗೆ ಆಪರೇಷನ್ ಮಾಡುವ ಅಗತ್ಯವಿದೆ ಎಂದಿದ್ದಾರೆ. ಆದರೂ ಒಪ್ಪದೆ ಚಿಕಿತ್ಸೆಗೆ ನಿರಾಕರಿಸುತ್ತಿದ್ದರಂತೆ.
ಇಷ್ಟು ಬೆನ್ನು ನೋವಿಗೆ ಯಾತನೆ ಅನುಭವಿಸಿದ್ದರೂ ಚಿಕಿತ್ಸೆ ಬೇಡ ಅಂತಿರೋದ್ಯಾಕೆ ಎಂದು ಜೈಲಾಧಿಕಾರಿಗಳು ಪ್ರಶ್ನಿಸಿದ್ದಾರೆ. ಈ ಬಗ್ಗೆ ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಬಳ್ಳಾರಿ ಜೈಲಾಧಿಕಾರಿಗಳು ತಂದಿದ್ದಾರೆ. ಮುಂದಿನ ಬಾರಿ ಕುಟುಂಬಸ್ಥರು ಬಂದಾಗ ಚಿಕಿತ್ಸೆ ಬಗ್ಗೆ ಗಮನಕ್ಕೆ ತರಲು ಸೂಚನೆ ನೀಡಲಾಗಿದೆ. ಆರೋಗ್ಯದ ವಿಚಾರದಲ್ಲಿ ಯಾವುದೇ ಸಮಸ್ಯೆ ಬರದೆ ಎಚ್ಚರ ವಹಿಸಲು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ನಾಳೆ ನಿರ್ಧಾರವಾಗಲಿದೆ ಆರು ಮಂದಿಯ ಭವಿಷ್ಯ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಸೇರಿ ಆರು ಮಂದಿಯ ಜಾಮೀನು ಭವಿಷ್ಯ ಸೋಮವಾರ ನಿರ್ಧಾರವಾಗಲಿದೆ. ಅ.14ರಂದು ಸಿಸಿಹೆಚ್ 57 ಕೋರ್ಟ್ ತೀರ್ಪಿನತ್ತ ಎಲ್ಲರ ಚಿತ್ತ ಮೂಡಿದೆ. ನಟ ದರ್ಶನ್ ಜಾಮೀನು ಭವಿಷ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
A2 ನಟ ದರ್ಶನ್, A1 ಪವಿತ್ರಾಗೌಡ, A8 ರವಿಶಂಕರ್, A11 ನಾಗರಾಜ್ ಹಾಗೂ A12 ಲಕ್ಷ್ಮಣ್, A13 ದೀಪಕ್ ಜಾಮೀನು ಭವಿಷ್ಯ ನಿರ್ಧರವಾಗಲಿದೆ. ಈಗಾಗಲೇ ಎಸ್‌ಪಿಪಿ ದೀಪಕ್ ಮತ್ತು ರವಿಶಂಕರ್‌ಗೆ ಜಾಮೀನು ನೀಡಬಹುದು ಎಂದಿದ್ದಾರೆ. ಆದರೆ ದರ್ಶನ್ ಸೇರಿ ನಾಲ್ವರ ಜಾಮೀನಿಗೆ ಎಸ್‌ಪಿಪಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೊಲೆಯಲ್ಲಿ ಭಾಗಿಯಾದ ಸಾಕ್ಷ್ಯಗಳ ಬಗ್ಗೆ ಸಂಪೂರ್ಣ ಉಲ್ಲೇಖಿಸಲಾಗಿದೆ. ದರ್ಶನ್ ಪರವಾಗಿ ವಕಾಲತ್ತು ವಹಿಸಿರುವ ಹಿರಿಯ ವಕೀಲ ಸಿವಿ ನಾಗೇಶ್‌ರಿಂದ ಸಾಕ್ಷ್ಯಗಳೇ ಇಲ್ಲವೆಂಬಂತೆ ವಾದಿಸಿದ್ದಾರೆ. ಪವಿತ್ರಾಗೌಡ ಪರವಾಗಿ ಟಾಮಿ ಸೆಬಾಸ್ಟಿಯನ್ ವಾದಿಸಿದ್ದರು. ಇತ್ತ ಕೋರ್ಟ್ ತೀರ್ಪು, ಅತ್ತ ಜೈಲಲ್ಲಿ ಆರೋಪಿಗಳಿಗೆ ಟೆನ್ಷನ್ ಶುರುವಾಗಿದೆ.