Site icon Vistara News

Actor Darshan : ನಟ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಅ.9ಕ್ಕೆ ಮುಂದೂಡಿಕೆ; ಬೇಲ್‌ ಸಿಗದಿರಲು ಇದೇ ಕಾರಣ

Actor Darshan and Gang

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಕೇಸ್‌ನಲ್ಲಿ ನಟ ದರ್ಶನ್ (Actor Darshan) ಆ್ಯಂಡ್ ಗ್ಯಾಂಗ್‌ ಜೈಲುಪಾಲಾಗಿದೆ. ಮುಂದೂಡಿಕೆ ಆಗಿದ್ದ ದರ್ಶನ್‌ರ ಜಾಮೀನು ಅರ್ಜಿ ವಿಚಾರಣೆಯು ಮಂಗಳವಾರ ನಡೆಯಿತು. ದರ್ಶನ್ ಜಾಮೀನು ಅರ್ಜಿ ವಿಚಾರಣೆಯಲ್ಲಿ ಎಸ್‌ಪಿಪಿ ಪ್ರಸನ್ನ ಕುಮಾರ್ ಪ್ರತಿ ವಾದ ಆರಂಭಿಸಿದರು. ಬಳಿಕ ಸುದೀರ್ಘ ಆಲಿಸಿದ ಕೋರ್ಟ್‌ ವಿಚಾರಣೆಯನ್ನು ನಾಳೆ ಬುಧವಾರ‌ ಮಧ್ಯಾಹ್ನ 12ಕ್ಕೆ ಮುಂದೂಡಿದೆ. ಎಲ್ಲಾ ಆರೋಪಿಗಳ ಜಾಮೀನು ಅರ್ಜಿಗಳಿಗೆ ಎಸ್‌ಪಿಪಿ ಪ್ರಸನ್ನಕುಮಾರ್‌ ಆಕ್ಷೇಪಣೆ ವಾದ ಮುಂದುವರಿಸಲಿದ್ದಾರೆ.

ಆರೋಪಿ ಪವಿತ್ರಗೌಡ ಮಾಡಿರುವ ಕೃತ್ಯದ ಬಗ್ಗೆ ಪ್ರಸನ್ನ ಕುಮಾರ್ ವಾದ ಶುರು ಮಾಡಿದರು. ಫೆಬ್ರವರಿಯಿಂದಲೇ ರೇಣುಕಾಸ್ವಾಮಿ ಬಗ್ಗೆ ಪವಿತ್ರಗೌಡಗೆ ಗೊತ್ತಿತ್ತು. ತನ್ನ ನಂಬರ್ ಕೊಟ್ಟು ಪವನ್ ಮೂಲಕ ಕಮ್ಯುನಿಕೇಷನ್ ಮಾಡಲು ಪವಿತ್ರಗೌಡ ಹೇಳಿದ್ದರು. ರೇಣುಕಾಸ್ವಾಮಿ ಅಶ್ಲೀಲ ಫೋಟೊ ಕಳಿಸಿ ಹೇಗಿದೆ ಎಂದು ಕೇಳಿದ್ದಾನೆ. ಅದನ್ನು ಬ್ಲಾಕ್ ಮಾಡಬಹುದಿತ್ತು ಅಥವಾ ಪೊಲೀಸರಿಗೆ ದೂರು ನೀಡಬಹುದಿತ್ತು. ಪವನ್ ಮೆಸೇಜ್ ಮಾಡಿ ರೇಣುಕಾಸ್ವಾಮಿಗೆ ಮೆಸೇಜ್‌ ಮಾಡಿ ಎಲ್ಲಿದ್ದೀಯಾ ಅಂತ ಮಾತುಕತೆ ಶುರು ಮಾಡಿದ್ದಾನೆ. ಆಗ ರೇಣುಕಾಸ್ವಾಮಿ ಅಪೋಲೋ ಫಾರ್ಮಸಿ ಎಂದು ಹೇಳಿರ್ತಾರೆ. ಅದಕೆ ಪವಿತ್ರಗೌಡ ಎಡಗೈ ತಂಬ್ ಸಿಂಬಲ್ ಕಳಿಸಿರ್ತಾಳೆ. ಅಷ್ಟೇ ಅಲ್ಲದೇ ಅಖಿಲ ಕರ್ನಾಟಕ ದರ್ಶನ್ ಅಭಿಮಾನಿಗಳ ಸೇನಾ ಅಧಕ್ಷರಿಗೆ ಮಾಹಿತಿ ನೀಡುತ್ತಾನೆ. ಆ ಸೇನೆ ಪ್ಯಾರಲಲ್ ಆಗಿ ಕೆಲಸ ಮಾಡಿದೆ.

ಅಡ್ರೆಸ್ ಹೇಳದೆ ರೇಣುಕಾಸ್ವಾಮಿ ಫೋಟೋ‌ ಕಳಿಸಿದ್ದ. ಇತ್ತ ಎ3 ಪವನ್‌ ರೇಣುಕಾಸ್ವಾಮಿಯ ಫೋಟೋವನ್ನು ಸೈಯದ್ ತೌಸಿಪ್‌ ಎಂಬಾತನಿಗೆ ಕಳಿಸಿ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿರುವ ಅಫೋಲೊ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದನಾ ಎಂದು ಹುಡುಕಾಡಿಸಿದ್ದಾನೆ. ಇದೆಲ್ಲ ಹೇಗೆ ಸಾಧ್ಯ ಎಂದು ಸಿಡಿಆರ್ ಸಂಬಂಧ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದಿಸಿದರು.

ಈ ಪ್ರಕರಣದಲ್ಲಿ ಎಲ್ಲ ಆರೋಪಿಗಳು ಪರಸ್ಪರ ಗೊತ್ತಿರುವವರೆ. ದರ್ಶನ್ ಪರ ವಕೀಲರು ನೇರವಾಗಿ ಕಾಲ್ ಲಿಂಕ್ ಇಲ್ಲ‌ ಎಂದಿದ್ದರು. ಆರೋಪಿಗಳು ಎಷ್ಟು ಬಾರಿ ಫೋನ್ ಸಂಭಾಷಣೆ ನಡೆಸಿದ್ದಾರೆ ಎಂಬ ದಾಖಲೆ ಸಲ್ಲಿಕೆ ಮಾಡಲಾಗಿದೆ. A1,a2,a3 ರಿಂದ A11ರ ಆರೋಪಿ ವರೆಗೆ ಮಾತಾಡಿರುವ ಕಾಲ್ ಡಿಟೇಲ್ಸ್ ಇದೆ. A3,A9 ಹಾಗೂ ಇತರೆ ಆರೋಪಿಗಳು ರೇಣುಕಾಸ್ವಾಮಿ ಜತೆ ನಡೆಸಿರುವ ಫೋನ್‌ ಸಂಭಾಷಣೆಯ ದಾಖಲೆಯೂ ಸಲ್ಲಿಕೆ ಮಾಡಲಾಗಿದೆ. ಈ ಎಲ್ಲಾ ದಾಖಲೆಗಳನ್ನು ನೋಡಿದರೆ ಆರೋಪಿಗಳ ಒಳಸಂಚಿನ ಬಗ್ಗೆ ತಿಳಿಯಬಹುದು. ದರ್ಶನ್ ಸೇನೆಯ ಸದಸ್ಯರು ರೇಣುಕಾಸ್ವಾಮಿಯನ್ನು ಹಿಡಿಯಲು ಹೋಗಿರುತ್ತಾರೆ. ಎಲ್ಲಿದ್ದೀಯ ಎಷ್ಟೊತ್ತಿರ್ತೀಯಾ ಅಂತ ಚಾಟ್ ಮಾಡಿದ್ದಾರೆ. ರೇಣುಕಾಸ್ವಾಮಿ ಸ್ಕೂಟರ್‌ನಲ್ಲಿ ಇದ್ದರೆ, ಆರೋಪಿಗಳು ಆಟೋದಲ್ಲಿ ಇರುತ್ತಾರೆ. A4,A6,A7 ಆರೋಪಿಗಳ ಟವರ್ ಲೋಕೇಷನ್ ಸಿಕ್ಕಿದೆ.

ಜೂನ್ ತನಕ ರೇಣುಕಾಸ್ವಾಮಿ ಗೊತ್ತಿಲ್ಲ ಅಂತಾರೆ, ಫೆ.27 ಕ್ಕೆ ರೇಣುಕಾಸ್ವಾಮಿ ಜತೆ ಚಾಟ್ ಮಾಡಿದ್ದಾರೆ. ಗೌತಮ್ ಹೆಸರಲ್ಲಿ ಪವಿತ್ರಗೌಡಗೆ ಮೆಸೇಜ್ ಬಂದಿದೆ. ರೇಣುಕಾಸ್ವಾಮಿ ಯಾರೆಂದು ಫೆಬ್ರವರಿಯಲ್ಲೇ ಗೊತ್ತಾಗಿದೆ. ಚಿತ್ರದುರ್ಗದಿಂದ ರೇಣುಕಾಸ್ವಾಮಿನ ಕಿಡ್ನ್ಯಾಪ್ ಮಾಡಿಕೊಂಡು ಬಂದಿದ್ದಾರೆ. ಬರುವ ಮಾರ್ಗ ಮಧ್ಯೆ ದುರ್ಗಾ ಬಾರ್‌ನಲ್ಲಿ‌ಮದ್ಯ ಖರೀದಿ‌ ಮಾಡಿದ್ದಾರೆ. ಆರೋಪಿಗಳು ಬರುವ ಮಾರ್ಗದಲ್ಲಿ‌ ಸಿಸಿಟಿವಿ ಸೆರೆಯಾಗಿದೆ. ಎ3 ಆರೋಪಿ ಪವನ್ ನಿರ್ದೇಶನದಂತೆ ಜೂನ್ 8 ರಂದು 1.30ಕ್ಕೆ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದಿದ್ದಾರೆ ಎಂದು ರೇಣುಕಾಸ್ವಾಮಿ ಕಾಣುವ ಸಿಸಿಟಿವಿ ಚಿತ್ರವನ್ನು ಸಲ್ಲಿಕೆ ಮಾಡಿ ಪ್ರತಿವಾದ ಮುಂದುವರಿಸಿದರು.

A8 ಕಾರನ್ನು ಡ್ರೈವ್ ಮಾಡುಕೊಂಡು ಶೆಡ್‌ಗೆ ಬಂದಿದ್ದಾನೆ. ಐ ವಿಟ್ನೆಸ್ ಸೆಕ್ಯೂರಿಟಿ ಗಾರ್ಡ್‌ ಅದಕ್ಕೆ ಸಾಕ್ಷಿಯಾಗಿದ್ದಾನೆ. ಅವರು A4 ಗೆ ಶೆಡ್ ಲೊಕೇಷನ್ ಕಳಿಸಿದ್ದಾರೆ. ತನಿಖೆಯನ್ನು ಮಾಧ್ಯಮಗಳಿಗೆ ಲೀಕ್ ಮಾಡಿದ್ದಾರೆ ಎಂದು ದರ್ಶನ್‌ ಪರ ವಕೀಲರು ಹೇಳ್ತಾರೆ, ಆದರೆ ಆರೋಪಿಗಳ ವಕೀಲರೇ ಮೀಡಿಯಾ ಮುಂದೆ ಹೇಳಿಕೆ ನೀಡಿದ್ದಾರೆ.

ರೇಣುಕಾಸ್ವಾಮಿ ಪವಿತ್ರಗೌಡಗೆ ಕಳಿಸಿರುವ ಮೆಸೇಜ್ ತೋರಿಸಿ ಪ್ರತಿವಾದಿಸಿದ ಪ್ರಸನ್ನ ಕುಮಾರ್, ಖುದ್ದು ಪವಿತ್ರಗೌಡ ನಂಬರ್‌ಗೆ ರೇಣುಕಾಸ್ವಾಮಿ ಮಸೇಜ್‌ ಕಳಿಸಿದ್ದಾನೆ. ಬಳಿಕ ಪವನ್ ನಂಬರ್‌ ಅನ್ನು ನನ್ನ ನಂಬರ್ ಅಂತ ಕೊಟ್ಟಿದ್ದಾಳೆ. A3 ಆರೋಪಿಯಿಂದ A9ರವರೆಗಿನ ಆರೋಪಿಗಳು ಮೊದಲೇ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ. ಅದಕ್ಕೆ ಬಸವರಾಜ, ಸೆಕ್ಯುರಿಟಿ ಗಾರ್ಡ್ ನರೇಂದ್ರ ಸಿಂಗ್ ಕೂಡ ಸಾಕ್ಷಿಯಾಗಿದ್ದಾರೆ. 75,76,79,91 ಸಾಕ್ಷಿಗಳು ಶೆಡ್‌ನಲ್ಲಿ‌ಕೆಲಸ‌ ಮಾಡುವ ಕೆಲಸಗಾರರಾಗಿದ್ದಾರೆ. ಆದರೆ ಈ ಸಾಕ್ಷಿಗಳನ್ನು ಪೊಲೀಸರು ಸೃಷ್ಟಿಸಿರುವ ಸಾಕ್ಷಿಗಳು ಎನ್ನುತ್ತಾರೆ.

ಸ್ಟ್ರೋನಿ ಬ್ರೂಕ್‌ನಲ್ಲಿ ಪ್ಲ್ಯಾನ್‌ ಮಾಡಿರುವ ಬಗ್ಗೆಯೂ ಪ್ರಸ್ತಾಪಿಸಿದ ಪ್ರಸನ್ನಕುಮಾರ್‌, ಸ್ಟ್ರೋನಿ ಬ್ರೂಕ್‌ನಲ್ಲಿ ನಟ ದರ್ಶನ್, ವಿನಯ್ ಎಲ್ಲ ಸೇರಿದ್ದರು. ಇದಕ್ಕೆ ನಟ ಚಿಕ್ಕಣ್ಣ, ಯಶಸ್ ಸೂರ್ಯ‌ ಸಾಕ್ಷಿಗಳಿದ್ದಾರೆ. ಎಲ್ಲರೂ ಸೇರಿ ಪಿತೂರಿ ಮಾಡಿದರೂ ಅನ್ನೋದಕ್ಕೆ ಸಾಕ್ಷಿಇದೆ. ಟೆಕ್ನಿಕಲ್ ಹಾಗೂ ಡಿಜಿಟಲ್ ಎವಿಡೆನ್ಸ್ ಸುಳ್ಳು ಹೇಳಲ್ಲ. ಅಷ್ಟೇ ಅಲ್ಲದೇ ಆರೋಪಿಗಳು ಓಡಾಡಿರುವುದುಕ್ಕೆ ಸಾಕ್ಷಿಗಳಿವೆ. ಶೆಡ್ ಮುಂದಿನ ಸಿಟಿ ಟಿವಿಯಲ್ಲಿ ಚಲನವಲನ ಸೆರೆಯಾಗಿದೆ.

8ನೇ ತಾರೀಖು ಕೆಲಸಕ್ಕೆ ಹೋಗಿದ್ದಾಗಿ ಪುನೀತ್ ಹೇಳಿದ್ದಾನೆ. ಸಾಕ್ಷಿಗಳ ಹೇಳಿಕೆ ತಡವಾಗಿ ದಾಖಲಿಸಿರುವುದಕ್ಕೆ ಪ್ರತಿವಾದಿಸಿದ ಪ್ರಸನ್ನಕುಮಾರ್‌, ಮಧ್ಯಾಹ್ನ 1 ಗಂಟೆಗೆ ಶೆಡ್ ಹೋಗಿದ್ದೆ, ಅಲ್ಲಿ A5, A9 ಇದ್ದರು. ಆಮೇಲೆ ಪವನ್ ಹಾಗೂ ಇತರರು ಬಂದರು. ನಂದೀಶ್ ಹಾಗೂ ಧನರಾಜ್ ಶೆಡ್‌ನಲ್ಲಿದ್ದರು ಎಂದು ಪುನೀತ್ ಹೇಳಿಕೆ ನೀಡಿದ್ದಾನೆ. ದರ್ಶನ್ ಮನೆಯಲ್ಲಿ ಕೆಲಸ ಮಾಡುವವರು ಕಾರಿನಲ್ಲಿದ್ದರು. ರೇಣುಕಾಸ್ವಾಮಿಯನ್ನು ಇಟಿಯೋಸ್ ಕಾರಿನಲ್ಲಿ ಕರೆದುಕೊಂಡು ಬಂದರು. ಆತ ನೋಡಲು ಸಣ್ಣಗೆ ಇದ್ದ, ಆತನ ಮೇಲೆ ಒಂದು ಕಟ್ಟಿಗೆಯಿಂದ 10 ನಿಮಿಷ ಬೆನ್ನು, ಕಾಲಿಗೆ ಹೊಡೆದರು. ಯಾರೆಂದು ಕೇಳಿದಾಗ ಪವಿತ್ರಗೌಡ ಅತ್ತಿಗೆಗೆ ಮೆಸೇಜ್ ಮಾಡುತ್ತಿದ್ದವನು ಅಂದರು. ವಿನಯ್ ರೇಣುಕಾಸ್ವಾಮಿಯನ್ನು ನಾಲ್ಕೈದು ಅಡಿ ಎತ್ತಿ ಬಿಸಾಡಿ ಹಲ್ಲೆ ಮಾಡಿದ್ದಾಗಿ ಪುನೀತ್‌ ಹೇಳಿಕೆ ನೀಡಿದ್ದಾನೆ.

ಪೋಸ್ಟ್ ಮಾರ್ಟಮ್ ಬಗ್ಗೆ ಪ್ರತಿವಾದ ಮಾಡಿದ ಎಸ್ ಪಿಪಿ, 10 ನಿಮಿಷಗಳ ಕಾಲ ಹೊಡೆದಿದ್ದಕ್ಕೆ, ಆತ ಸುಸ್ತಾಗಿ ಬಿದ್ದಿದ್ದ. ನಾನು (ಪುನೀತ್‌) ಹೋಗಿ ಕೇಳಿದಾಗ ನಿನಗೆ ಏನೂ ಗೊತ್ತಿಲ್ಲ ಸುಮ್ಮನೆ ಇರು ಎಂದರು. ಆಗ ಪವಿತ್ರಾಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡುತ್ತಾನೆ ಎಂದು ಹೇಳಿ ಹಲ್ಲೆ ಮಾಡಿದರು. ನಂದೀಶ್‌ ಎತ್ತಿ ಎತ್ತಿ ಕುಕ್ಕಿ ಹಲ್ಲೆ‌ ಮಾಡಿದ್ದರು. ಆಗ ಧನರಾಜ್ ಎಲೆಕ್ಟ್ರಿಕ್ ಶಾಕ್ ಕೊಡುತ್ತಾನೆ. ಆಗ ವಿನಯ್ ಫೋನ್‌ ನೀಡುವಂತೆ ಹೇಳಿದ್ದು, ಕಣ್ಣು, ಬಾಯಿ ಬಿಟ್ಟುಕೊಂಡಿದ್ದ ರೇಣುಕಾಸ್ವಾಮಿ ಫೋಟೋ ಕಳಿಸಿದೆ. ಆಗ ಯಾರೂ ಹೊಡೆಯಬಾರದು ಎಂದು ಹೇಳು ಎಂದಿದ್ದ ವಿನಯ್, ದರ್ಶನ್ ಬರುತ್ತಾರೆ ಯಾರನ್ನೂ ಬಿಡಬೇಡ ಎಂದಿದ್ದರು. ಆಗ ದರ್ಶನ್, ಪವಿತ್ರಾಗೌಡ, ವಿನಯ್ ಬಂದಿದ್ದರು.

ಕಾರಿನಿಂದ ಇಳಿಯುತ್ತಿದ್ದಂತೆ ರೇಣುಕಾಸ್ವಾಮಿ ಎದೆಗೆ ಒದ್ದಿದ್ದ ದರ್ಶನ್‌

ದರ್ಶನ್ ಕಾರಿನಿಂದ ಇಳಿದವರೆ ರೇಣುಕಾಸ್ವಾಮಿ ಎದೆಗೆ ಕಾಲಿನಿಂದ ಹೊಡೆದರು. ಪವಿತ್ರಾಗೌಡ ಚಪ್ಪಲಿಯಿಂದ‌ ಹೊಡೆದರು. ನನ್ನ ಹೆಂಡತಿಗೆ ಮೆಸೇಜ್ ಮಾಡುತ್ತಿಯಾ, ಗೋವಾದಲ್ಲಿ ರೂಂ ಮಾಡುತ್ತೀಯಾ ಎಂದು ಹೇಳಿ ಹೊಡೆದರು. ಕಾರು ಚಾಲಕ ಲಕ್ಷ್ಮಣ್ ಕೂಡ ಹೊಡೆದಿದ್ದ. ಆಗ ದರ್ಶನ್‌ ರೇಣುಕಾಸ್ವಾಮಿಯ ಪ್ಯಾಂಟ್‌ ಅನ್ನು ಬಿಚ್ಚು ಮತ್ತು ಮೆಸೇಜ್ ಓದಿಸು ಎಂದಿದ್ದರು. ಆಗ ಪ್ಯಾಂಟ್ ಬಿಚ್ಚಿಸಿ ಖಾಸಗಿ ಅಂಗಕ್ಕೆ ದರ್ಶನ್ ತುಳಿದರೆ, ವಿನಯ್ ಕಾಲಿನಿಂದ ಹೊಡೆದಿದ್ದರು. ಆಗ ಮತ್ತೆ ದರ್ಶನ್ ಶೂ ಕಾಲಿನಿಂದ ಎದೆಗೆ ಹೊಡೆಯುತ್ತಿದ್ದರು. ನಂತರ ಪವಿತ್ರಾಗೌಡ ಅವರನ್ನು ಮನೆಗೆ ಬಿಟ್ಟು ಬರುವಂತೆ ವಿನಯ್‌ಗೆ ದರ್ಶನ್ ಹೇಳಿದ್ದಾರೆ.

ಮತ್ತೆ ದರ್ಶನ್ ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದಾರೆ. ದರ್ಶನ್ ಹೊರಗೆ ಹೋಗುವಾಗ ಚಿತ್ರದುರ್ಗದಿಂದ ಬಂದ ವ್ಯಕ್ತಿಗಳು ಬಾಸ್ ಬಾಸ್ ಎಂದು ಫೋಟೋ ಕೇಳಿದ್ದಾರೆ. ಫೋಟೋ ತೆಗೆದ ಬಳಿಕ ಹಾಯ್ ಎಂದು ಕಳಿಸಿ ಎಂದು ನನಗೆ ಹೇಳಿದ್ದರು. ಚಿತ್ರದುರ್ಗದಿಂದ ಬಂದವರಿಗೆ ಊಟ ನೀಡುವಂತೆ ಹೇಳಿದ್ದರು. ಆಗ ಚಿತ್ರದುರ್ಗದಿಂದ‌ ಬಂದವ ನೀರು ಕುಡಿಯುತ್ತಿಲ್ಲ ಎಂದು ಹೇಳಿದೆ . ನನಗೆ ಭಯ ಆಯಿತು, ನಾನು ಮನೆಗೆ ಹೋದೆ. ಜಯಣ್ಣಗೆ ಫೋನ್ ಮಾಡಿ ಏನಾಯಿತು ಎಂದು ಹೇಳಿದೆ. ನಂತರ ಮಲೆ‌ಮಾದೇಶ್ವರ ಬೆಟ್ಟಕ್ಕೆ ಹೊರಟಿದ್ದೆ. ಆಗ ವಿನಯ್ ಫೋನ್‌ ಮಾಡಿ ದರ್ಶನ್, ಪವಿತ್ರಾಗೌಡ ಶೆಡ್‌ಗೆ ಬಂದಿದ್ದ ವಿಚಾರ ಯಾರಿಗೂ ಹೇಳದಂತೆ ಹೇಳಿದ್ದರು ಎಂದು ಹೇಳಿಕೆ ನೀಡಿದ್ದಾನೆ.

ಮರಣೋತ್ತರ ಪರೀಕ್ಷೆ ತಡವಾಗಿದ್ದೇಕೆ ಅಂತ ವಾದಿಸಿದ್ದಾರೆ. ದೇಹದ ಹೊರಭಾಗದಲ್ಲಿ 39 ಗಾಯದ ಗುರುತುಗಳಿವೆ, ಏಳು ಕಡೆ ಮೂಳೆ ಮುರಿತವಾಗಿದೆ. ಎಡಗಡೆಯ ರಿಬ್ ಮುರಿದಿದೆ. ಗಂಭೀರ ರಕ್ತಸ್ರಾವವಾಗಿದೆ. ಎಲ್ಲಾ ಗಾಯಗಳು ರೇಣುಕಾಸ್ವಾಮಿ ಸಾವಿನ ಮೊದಲೇ ಆಗಿರುವ ಗಾಯಗಳಾಗಿವೆ. ಸಾವಿನ ಬಳಿಕ ಆದರೆ ಅನುಮಾನ ಇರುತ್ತೆ. ಒಂದೇ ಒಂದು ಗಾಯ ಆಳವಾಗಿದೆ. ಅದು ಶೆಡ್‌ನಲ್ಲಿರುವ ಗಾಡಿಯ ಬಂಪರ್‌ಗೆ ಹೊಡೆದಾಗ ಸಂಭವಿಸಿರುವ ಗಾಯದ ಗುರುತಾಗಿದೆ. ಈ ಸಂಧರ್ಭದಲ್ಲಿ ತೆಗೆದ ಒಂದಷ್ಟು ಫೋಟೊಗಳು ವಿನಯ್ ಮೊಬೈಲ್ ನಲ್ಲಿ ಪತ್ತೆಯಾಗಿವೆ.

ದೇಹದ ಮೇಲಾಗಿರುವ ಗಾಯಗಳಿಗೆ ರೀಸನ್ ನೀಡಲಾಗಿದೆ. ಇನ್ನೂ ಟೈಮ್ ಆಫ್ ಡೆತ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಸಿವಿ ನಾಗೇಶ್ ಪ್ರಶ್ನೆಗೆ ಉತ್ತರ ನೀಡಿದ ಎಸ್ ಪಿಪಿ ಪ್ರಸನ್ನ ಕುಮಾರ್, ದರ್ಶನ್ ಪ್ಯಾಂಟ್ ಬಿಚ್ಚಲು ಹೇಳಿದಕ್ಕೂ ಸಾಕ್ಷಿ ಇದೆ ಎಂದು ವಾದಿಸಿದರು. ಬಳಿಕ ಸುದೀರ್ಘ ಆಲಿಸಿದ ಕೋರ್ಟ್‌ ವಿಚಾರಣೆಯನ್ನು ನಾಳೆ ಬುಧವಾರ‌ ಮಧ್ಯಾಹ್ನ 12ಕ್ಕೆ ಮುಂದೂಡಿದೆ. ಎಲ್ಲಾ ಆರೋಪಿಗಳ ಜಾಮೀನು ಅರ್ಜಿಗಳಿಗೆ ಎಸ್‌ಪಿಪಿ ಪ್ರಸನ್ನಕುಮಾರ್‌ ಆಕ್ಷೇಪಣೆ ವಾದ ಮುಂದುವರಿಸಲಿದ್ದಾರೆ.

A11, A12 ಆರೋಪಿಗಳ ಜಾಮೀನು ಅರ್ಜಿ ಮುಂದೂಡಿಕೆ

ಜತೆಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ11 ಹಾಗೂ ಎ12 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯು ನಡೆಯಿತು. ಲಕ್ಷ್ಮಣ್ ಹಾಗೂ ನಾಗರಾಜು ಸಲ್ಲಿದ್ದ ಜಾಮೀನು ಅರ್ಜಿ ವಿಚಾರಣೆ 57ನೇ ಸೆಷನ್ಸ್ ಕೋರ್ಟ್‌ನಲ್ಲಿ ನಡೆದಿದೆ. ನಾಗರಾಜು ನಟ ದರ್ಶನ್ ಫಾರ್ಮ್ ಹೌಸ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರೆ, ಲಕ್ಷ್ಮಣ್ ದರ್ಶನ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಕ್ತಾಯವಾಗಿದ್ದು, ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಬೇರೆ ಯಾವುದೇ ಕ್ರೈಂಗಳಲ್ಲಿ ಭಾಗಿಯಾಗಿಲ್ಲ. ಜಾಮೀನು ನೀಡಿದರೆ ತಲೆಮರೆಸಿಕೊಳ್ಳುವ ಹುನ್ನಾರವಿಲ್ಲ. ಹೀಗಾಗಿ ಜಾಮೀನು ನೀಡಬೇಕೆಂದು ಲಕ್ಷ್ಮಣ್ ಹಾಗೂ ನಾಗರಾಜ್ ಪರ ವಕೀಲರು ವಾದ ಮಂಡಿಸಿದ್ದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸೆಲೆಬ್ರಿಟಿಗಳು ಇರುವುದರಿಂದ ಸೆನ್ಷೇಷನಲ್ ಆಗಿದೆ. ಜಾಮೀನು ನೀಡುವಾಗ ಆರೋಪಿಗಳು ಪೂರ್ವಗ್ರಹ ಪೀಡಿತ ರಾಗಬಾರದು. ಆರೋಪಿಗಳ ವಿರುದ್ಧ ಕೊಲೆ, ಒಳಸಂಚು ಸಾಮಾನ್ಯ ಉದ್ದೇಶದ ಆರೋಪವಿದೆ. ಜೊತೆಗೆ ಸಾಕ್ಷಿ ನಾಶದ ಆರೋಪವೂ ಇದೆ. ಆರೋಪ ಸಾಬೀತಾಗುವರೆಗೂ ಆರೋಪಿಗಳನ್ನು ಮುಗ್ಧರಾಗಿ ಪರಿಗಣಿಸಬೇಕು.

ಆರೋಪಿಗಳು ಈಗಾಗಲೇ ನಾಲ್ಕು ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಲಕ್ಷ್ಮಣ್ ಹಾಗೂ ನಾಗರಾಜ್ ವಿರುದ್ಧ ಅಪರಾಧ ಹಿನ್ನೆಲೆ ಇಲ್ಲ. ಆರೋಪಿಗಳು ಜಾಮೀನು ಪಡೆಯಲು ಟ್ರೈಪಾರ್ಟ್ ಟೆಸ್ಟ್ ಮುಖ್ಯ ಎಂದು ಲಕ್ಷ್ಮಣ್ ಹಾಗೂ ನಾಗರಾಜ್ ಪರ ವಕೀಲ ಸಂದೇಶ್ ಚೌಟ ವಾದಿಸಿದರು. ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಿದ ವಿಚಾರವಾಗಿಯೂ ಉಲ್ಲೇಖ‌ ಮಾಡಿದ ಸಂದೇಶ್ ಚೌಟ, ಈ ಫೋಟೊಗೆ ಸಂಬಂಧಿಸಿದಂತೆ ಮೂರು ಪ್ರಕರಣ ದಾಖಲು ಮಾಡಲಾಗಿದೆ. ನಂತರ ನಮ್ಮ ಕಕ್ಷಿದಾರರನ್ನು ಬೇರೆ ಬೇರೆ ಜೈಲುಗಳಿಗೆ ರವಾನೆ ಮಾಡಲಾಯಿತು. ಅಲ್ಲಿ ನಮ್ಮ ಕಕ್ಷಿದಾರರು ಸಫರ್ ಆಗುತ್ತಿದ್ದಾರೆ.

ಜೈಲಿನಲ್ಲಿ ಸಿಗರೇಟ್ ಸೇದುವುದು ಅಪರಾಧ ಅಲ್ಲ. ಅಲ್ಲಿ ಧೂಮಪಾನಕ್ಕೆ ಪ್ರತ್ಯೇಕ ಜಾಗ ನೀಡಲು ಜೈಲು ಮ್ಯಾನ್ಯುಲ್ ಸೂಚಿಸುತ್ತದೆ. ಆದರೆ ಇದನ್ನೇ ಮಹಾ ಅಪರಾಧ ಎಂಬಂತೆ ಬಿಂಬಿಸಲಾಗಿದೆ. ಈ ಪ್ರಕರಣದ ಮೂವರು ಆರೋಪಿಗಳ ವಿರುದ್ಧ 201 ಅಡಿಯಲ್ಲಿ ಚಾರ್ಜಸ್ ಮಾಡಲಾಗಿತ್ತು. ಅವರನ್ನು ಇವರೆ ಬಿಡುಗಡೆ ಮಾಡಬಹುದಿತ್ತು. ಆದರೆ ಯಾಕೆ ಜಾಮೀನು ನೀಡಬಹುದಾದ ಪ್ರಕರಣದಲ್ಲಿ, ಮೂರು ತಿಂಗಳಿಗೂ ಅಧಿಕ ಕಾಲ ಯಾಕೆ ಕಂಬಿ ಹಿಂದೆ ಇಡಲಾಗಿತ್ತು. ಜಾಮೀನು ಎಂಬುದು ಎಲ್ಲರ ಹಕ್ಕು. ಇದು ಭಯೋತ್ಪಾದನೆ ಅಲ್ಲ, ದೇಶದ ಭದ್ರತೆಗೆ ಧಕ್ಕೆ ಅಲ್ಲ, ಕ್ರೂರಾತಿ ಕ್ರೂರ ಕ್ರಿಮಿನಲ್ ಹಿನ್ನೆಲೆ ಉಳ್ಳವರು ಅಲ್ಲ. ಹೀಗಾಗಿ ಇವರಿಗೆ ಜಾಮೀನು ನೀಡಬೇಕು. ಜಾಮೀನು ಪರಿಗಣನೆಗೆ ಕೋರ್ಟ್ ಎಂಟು ಅಂಶಗಳನ್ನು ಪರಿಗಣಿಸುತ್ತೆ, ಆ ಎಂಟು ಅಂಶಗಳು ಇವೆ. ಹೀಗಾಗಿ ನಮ್ಮ ಕಕ್ಷಿದಾರರಿಗೆ ಜಾಮೀನು ನೀಡಬೇಕು.

ಅರ್ಜಿದಾರರ ಸುದೀರ್ಘ ವಾದ ಆಲಿಸಿದ್ದ ನ್ಯಾಯಾಧೀಶರು ಬಳಿಕ ಮಧ್ಯಾಹ್ನ 2.45ಕ್ಕೆ ಮುಂದೂಡಿದ್ದರು. ಮಧ್ಯಾಹ್ನದ ನಂತರ ಲಕ್ಷ್ಮಣ್ ಹಾಗೂ ನಾಗರಾಜ್ ಪರ ಸಂದೇಶ್ ಚೌಟ ವಾದ ಮುಂದುವರಿಸಿದರು. ಪೊಲೀಸರು ಸಾಕಷ್ಟು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ರಿಮ್ಯಾಂಡ್ ಅರ್ಜಿಯಲ್ಲಿ ಎಲ್ಲಾ ವಿಚಾರಗಳು ಉಲ್ಲೇಖ ಮಾಡಬೇಕಿತ್ತು. ಆದರೆ ಯಾವುದನ್ನೂ ಸರಿಯಾಗಿ ಉಲ್ಲೇಖ ಮಾಡಿಲ್ಲ. ಕೋಕಾ, ಎನ್‌ಐಎ, ಯುಎಪಿಎ ಕಾಯ್ದೆ ಅಡಿಯಲ್ಲಿ ಸಾಕ್ಷಿಗಳನ್ನು ಮರೆಮಾಚಬಹುದು.

ಆದರೆ ಇವರು ರಿಮ್ಯಾಂಡ್ ಅರ್ಜಿಯಲ್ಲಿ ಸಾಕ್ಷಿಗಳನ್ನು ಉಲ್ಲೇಖ ಮಾಡಿಲ್ಲ. ಆದರೆ ಸಾಕ್ಷಿಗಳ ಹೆಸರನ್ನು ಮುಚ್ಚಿಟ್ಟಾಗ ಸರಿಯಾದ ಕಾರಣ ತಿಳಿಸಬೇಕು. ಅದನ್ನು ಕೋರ್ಟ್ ಪರಿಗಣನೆಗೆ ತೆಗೆದುಕೊಳ್ಳಬೇಕು, ಆದರೆ ಇದ್ಯಾವುದೂ ಆಗಿಲ್ಲ. ಕೋಕಾ ಎನ್‌ಐಎ ಯುಎಪಿಎ ಪ್ರಕರಣಗಳಲ್ಲಿ ಸಾಕ್ಷಿಗಳನ್ನು ಮರೆಮಾಚಬಹುದು. ಆದರೆ ಇವರು ಎಲ್ಲಿಯೂ ಯಾವ ರಿಮ್ಯಾಂಡ್ ಅರ್ಜಿಯಲ್ಲೂ ಸಾಕ್ಷಿಗಳ ಬಗ್ಗೆ ಉಲ್ಲೇಖ ಮಾಡಿಲ್ಲ. ಒಂದು ವೇಳೆ ಸಾಕ್ಷಿಗಳ ಹೆಸರನ್ನು ಮುಚ್ಚಿಟ್ಟಾಗ ಸರಿಯಾದ ಕಾರಣ ತಿಳಿಸಬೇಕು. ಅದನ್ನು ಕೋರ್ಟ್ ಪರಿಗಣನೆಗೆ ತೆಗೆದುಕೊಳ್ಳಬೇಕು. ಪಟ್ಟಣಗೆರೆ ಶೆಡ್‌ನ ಸೆಕ್ಯೂರಿಟಿ‌ ಗಾರ್ಡ್ ಈ ಪ್ರಕರಣದ ಐ ವಿಟ್ನೆಸ್ ಆಗಿದ್ದು, ಎಲ್ಲೂ ಸಹ ಆರೋಪಿ‌ ಲಕ್ಷ್ಮಣ್ ಬಗ್ಗೆ ಹೇಳಿಕೆ ನೀಡಿಲ್ಲ. ಅದು 161 ಹೇಳಿಕೆ ಇರಲಿ ಅಥವಾ 164 ಹೇಳಿಕೆ ಇರಲಿ. ಎಲ್ಲಿಯೂ ಆರೋಪಿ ಲಕ್ಷ್ಮಣ್ ಬಗ್ಗ ಹೇಳಿಕೆ ನೀಡಿಲ್ಲ.

ಸಾಕ್ಷಿಗಳ ಹೇಳಿಕೆ ದಾಖಲು‌ ಮಾಡುವಲ್ಲಿಯೂ ಸಾಕಷ್ಟೂ ತಡ ಆಗಿದೆ. ಪ್ರತ್ಯಕ್ಷದರ್ಶಿಗಳಾದ ಕಿರಣ್, ಮಲ್ಲಿಕಾರ್ಜುನ, ವಿಜಯ್ ಕುಮಾರ್ ಜೂನ್ 15 ಕ್ಕೆ ಪಡೆದಿದ್ದಾರೆ. ನಂತರ ಮಧುಸೂಧನ್, ಪುನೀತ್ ಹೇಳಿಕೆ ದಾಖಲಾಗಿದೆ. ಪುನೀತ್‌ ಸ್ಟಾರ್ ವಿಟ್ನೇಸ್ ಆಗಿದ್ದು, ಘಟನಾ ಸ್ಥಳದಲ್ಲಿ ಇದ್ದ ಎಂಬ ಮಾಹಿತಿ ಇದ್ದರೂ ತಡವಾಗಿ ಹೇಳಿಕೆ ದಾಖಲಿಸಿದ್ಯಾಕೆ.? ಎಂದು ಪ್ರಶ್ನಿಸಿದ್ದರು. ಕೃತ್ಯದಲ್ಲಿ ಯಾವುದೇ ಆರೋಪಿ ಡೆಡ್ಲಿ ವೆಪನ್ ಬಳಸಿಲ್ಲ. ಅಲ್ಲದೇ ಸಂಚು ಮಾಡಿ ಯಾವುದೇ ವೆಪನ್ ತಂದಿಲ್ಲ. ನೈಲಾನ್ ಹಗ್ಗ, ಲಾಠಿ & ವಾಟರ್ ಬಾಟೆಲ್ ಅಷ್ಟೇ. ಈ ಪ್ರಕರಣದಲ್ಲಿ ಈ ಇಬ್ಬರು ಆರೋಪಿಗಳ ವಿರುದ್ಧ ನೇರವಾದ ಯಾವುದೇ ಸಾಕ್ಷಿಗಳಿಲ್ಲ. ಹೀಗಾಗಿ ಜಾಮೀನು ನೀಡಬೇಕು ನಾಗರಾಜ್ ಮತ್ತು ಲಕ್ಷ್ಮಣ್ ಪರವಾಗಿ ಸಂದೇಶ್ ಚೌಟ ವಾದಿಸಿದರು.

ಸಾಕ್ಷಿ ಸೃಷ್ಟಿ, ಇರುವ ಸಾಕ್ಷಿ ನಾಶ, ಸಾಕ್ಷಿಗಳ ತತ್ವಿರುದ್ದ ಮಾಹಿತಿ ನೀಡಲಾಗಿದೆ. ಕೇಸ್ ದಾಖಲಿಸುವುದು ತಡ ಆಗಿದೆ. ಮೃತನ ಸಾವಿನ ಸಮಯ ತಿಳಿದಿಲ್ಲ. ರಿಮ್ಯಾಂಡ್ ಅರ್ಜಿಯಲ್ಲಿ ಸಾಕ್ಷಿಗಳ ಹೆಸರೆಳಿಲ್ಲ. ಕೇಸ್ ಡೈರಿ ಉಲ್ಲೇಖಿಸದೇ ಇರೋದು, ಪೊಲೀಸರಿಗೆ ಮಾಹಿತಿ ಇದ್ದರೂ ತನಿಖೆ ತಡ, ಕೊಲೆಗೆ ಬಳಕೆ ಮಾಡಿದ್ದರೆ ಎನ್ನಲಾದ ವಸ್ತುಗಳಲ್ಲಿ ರಕ್ತ ಮಾದರಿ ಇಲ್ಲ. ಬಂಧನಕ್ಕೆ ಪೊಲೀಸರು ಕಾರಣ ನೀಡಿಲ್ಲ. ಚಾರ್ಜ್ ಶೀಟ್ ನಲ್ಲಿ ಸಾಕಷ್ಟು ತಪ್ಪುಗಳಿವೆ. ಮಾಡಿರುವ ಆರೋಪ ಸುಳ್ಳು ಎಂಬುದಕ್ಕೆ ಸಾಕ್ಷಿ ಇದೆ. ಹೀಗಾಗಿ ನಾಗರಾಜ್ ಹಾಗೂ ಲಕ್ಷ್ಮಣ್ ಗೆ ಜಾಮೀನು ನೀಡುವಂತೆ ಮನವಿ ಮಾಡಿದರು. ಸುದೀರ್ಘ ವಾದ ಆಲಿಸಿದ ನ್ಯಾಯಾಲಯ ನಾಳೆ ಬುಧವಾರಕ್ಕೆ ಲಕ್ಷ್ಮಣ್ ಹಾಗೂ ನಾಗರಾಜ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿತು.

Exit mobile version