ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಕೇಸ್‌ನಲ್ಲಿ ನಟ ದರ್ಶನ್ (Actor Darshan) ಆ್ಯಂಡ್ ಗ್ಯಾಂಗ್ ಜೈಲುಪಾಲಾಗಿದೆ. ನಟ ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯು ಅ.10ರಂದು ನಡೆಯಿತು. ಸುದೀರ್ಘವಾಗಿ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಜಾಮೀನು ಅರ್ಜಿ ವಿಚಾರಣೆಯ ಆದೇಶವನ್ನು ಅ.14ಕ್ಕೆ ಕಾಯ್ದಿರಿಸಿದೆ. ಈ ಮೂಲಕ ದರ್ಶನ್ ಜಾಮೀನು ಭವಿಷ್ಯ ಮೂರು ದಿನ ಮುಂದಕ್ಕೆ ಹೋಗಿದ್ದು, ದಚ್ಚು ಜೈಲುವಾಸದಲ್ಲಿ ಇರುವಂತಾಗಿದೆ.
ಆರೋಪಿಗಳ ಜಾಮೀನು ಅರ್ಜಿಗಳಿಗೆ ಗುರುವಾರ (ಅ.10) ಆಕ್ಷೇಪಣೆ ಮಾಡಿ ಎಸ್‌ಪಿಪಿ ಪ್ರಸನ್ನಕುಮಾರ್ ವಾದಿಸಿದರು. ದರ್ಶನ್ ಪರ ಸುದೀರ್ಘ ವಾದ ಮಂಡಿಸಿದ್ದ ಸಿ.ವಿ ನಾಗೇಶ್ ವಾದಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್ ಕೌಂಟರ್ ಕೊಟ್ಟರು. ದರ್ಶನ್ ವಿರುದ್ಧ ತನಿಖಾಧಿಕಾರಿಗಳು ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿದ್ದಾರೆ ಎಂದು ದರ್ಶನ್ ಪರ ಸಿ.ವಿ ನಾಗೇಶ್ ಆರೋಪಿಸಿದ್ದರು. ಇದೆಲ್ಲದಕ್ಕೂ ಪ್ರಸನ್ನ ಕುಮಾರ್ ಒಂದೊಂದಾಗಿ ಎದುರೇಟು ಕೊಟ್ಟರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ