ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renukaswamy Murder) ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾದ ಬೆನ್ನಲ್ಲೆ ಮತ್ತಷ್ಟು ರಹಸ್ಯಗಳ ಬೆಳಕಿಗೆ ಬರುತ್ತಿವೆ. ಇದರಲ್ಲಿ ಪವಿತ್ರಗೌಡ ಹಾಗೂ ದರ್ಶನ್ (Actor Darshan) ಇಡೀ ಪ್ರಕರಣದಲ್ಲಿ ಮಾತನಾಡಿರುವುದು ಕೇವಲ 16 ಸೆಕೆಂಡ್ ಮಾತ್ರವಂತೆ! ಇಷ್ಟಕ್ಕೂ ಅವರಿಬ್ಬ ನಡುವೆ ನಡೆದ ಸಂಭಾಷಣೆ ಏನು ಎನ್ನುವ ಮಾಹಿಯಿ ಇಲ್ಲಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನೆದಿನೇ ಡೆವಿಲ್ ಗ್ಯಾಂಗ್ ಪ್ರದರ್ಶಿಸಿರುವ ಮೃಗೀಯ ವರ್ತನೆ ಒಂದು ಕಡೆ ಬಹಿರಂಗವಾಗುತ್ತಿದೆ. ಮತ್ತೊಂದೆಡೆ ರೇಣುಕಾಸ್ವಾಮಿ ಕೊಲೆಗೂ ಮೊದಲು, ನಂತರ ಏನೆಲ್ಲಾ ಪಿತೂರಿ, ಸಂಭಾಷಣೆ ನಡಿತು ಎನ್ನುವುದು ಆರೋಪಿಗಳ ಮೊಬೈಲ್ ರಿಟ್ರೀವ್ ವೇಳೆ ಬಯಲಿಗೆ ಬಂದಿದೆ. ಅದರಲ್ಲಿ ರೇಣುಕಾಸ್ವಾಮಿ ಕೊಲೆಗೂ ಮೊದಲು- ಕೊಲೆ ನಂತರ ಪವಿತ್ರಗೌಡ ಹಾಗೂ ದರ್ಶನ್ ವಾಟ್ಸಾಪ್ ಕಾಲ್‌ನಲ್ಲಿ 16 ಸೆಕೆಂಡ್ ಮಾತನಾಡಿರುವುದು ಬೆಳಕಿಗೆ ಬಂದಿದೆ.
ಭೀಕರ ಹಲ್ಲೆ, ಕೊಲೆ ಬಗ್ಗೆ ವೈದ್ಯಕೀಯ ವರದಿ ಕೇಳಿದ ಪೊಲೀಸರು!
ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಇದುವರೆಗೂ ಆರು ಪ್ರಮುಖ ವೈದ್ಯಕೀಯ ರಿಪೋರ್ಟ್‌ಗಳು ಪೊಲೀಸರ ಕೈ ಸೇರಿವೆ. ಆರು ರಿಪೋರ್ಟ್‌ಗಳು ಆರೋಪಿಗಳಿಗೆ ವಿರುದ್ಧವಾಗಿಯೇ ಇದ್ದು, ಆತಂಕ ಉಂಟು ಮಾಡಿದೆ. ಹಾಗಾದರೆ ಪೊಲೀಸರು ಕೇಳಿದ್ದ ಆರು ವರದಿ ಯಾವ್ಯಾವುದು..
1.ಮರಣೋತ್ತರ ಪರೀಕ್ಷೆಯ ಅಭಿಪ್ರಾಯ ವರದಿ
2.ಮೃತದೇಹದ ಮೇಲೆ ಉಂಟಾದ ಗಾಯಗಳ ವಿವರ
3.ಎಫ್ಎಸ್ಎಲ್ ಹಾಗೂ ಡಿಎನ್ಎ ಮ್ಯಾಚಿಂಗ್ ರಿಪೋರ್ಟ್
4.ತಲೆ ಮೇಲಿನ ಗಾಯದ ರೀತಿ ಬಗ್ಗೆ ವರದಿ
5.ಶೂ ಅಥವಾ ಚಪ್ಪಲಿಯಿಂದ ಎದೆಭಾಗಕ್ಕೆ ತುಳಿದ ಬಗ್ಗೆ ವರದಿ
6.ಶೂ ಅಥವಾ ಚಪ್ಪಲಿಯಿಂದ ಮಾರ್ಮಾಂಗಕ್ಕೆ ಒದ್ದ ಬಗ್ಗೆ ವರದಿ
ಈ ಆರು ವಿಚಾರಗಳ ಬಗ್ಗೆ ವೈದ್ಯರಿಂದ ಅಭಿಪ್ರಾಯ ವರದಿ ಪಡೆದ ಪೊಲೀಸರು, ಅವುಗಳ ವರಿದಿಗಳನ್ನು ಪಡೆದಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ರೇಣುಕಾಸ್ವಾಮಿ ದೇಹದ ಮೇಲಿನ 39 ಗಾಯಗಳ ಬಗ್ಗೆ ಉಲ್ಲೇಖ ಆಗಿದೆ. ತಲೆ, ಕಿವಿ, ಕಣ್ಣು, ಎದೆ, ಬೆನ್ನು, ಕೈ ಮೇಲಿನ ಗಾಯಗಳ ಬಗ್ಗೆ ವರದಿಯಲ್ಲಿ ಇದೆ. ಎಫ್ಎಸ್ಎಲ್ ಹಾಗೂ ಡಿಎನ್ಎ ಮ್ಯಾಚಿಂಗ್ ವರದಿ ಕೂಡ ಬಂದಿದ್ದು, ಆರೋಪಿಗಳ ಬಟ್ಟೆ, ಶೂ, ಚಪ್ಪಲಿಗಳ ಮೇಲೆ ಡಿಎನ್ಎ ಮ್ಯಾಚ್ ಆಗಿದೆ. ತಲೆ ಮೇಲಿನ ಗಾಯದ ಬಗ್ಗೆ ಪ್ರತ್ಯೇಕ ವರದಿ ನೀಡಿದ್ದಾರೆ. ಇದರ ಜತೆಗೆ ಶೂನಿಂದ ಮಾರ್ಮಾಂಗಕ್ಕೆ ಒದ್ದಿದ್ದ ಬಗ್ಗೆಯೂ ವರದಿ ನೀಡಿದ್ದು ಇದೆಲ್ಲ ಆರೋಪಿಗಳಿಗೆ ಮುಂದೆ ಸಂಕಷ್ಟ ತರುವುದು ಪಕ್ಕ.
ಇದನ್ನೂ ಓದಿ: DK Shivakumar :ಮುಡಾ ಕೇಸ್ ಡೈವರ್ಟ್‌ಗೆ ದರ್ಶನ್ ಫೋಟೊ ರಿಲೀಸ್; ಪ್ರಲ್ಹಾದ್ ಜೋಶಿ ಆರೋಪಕ್ಕೆ ಡಿಸಿಎಂ ಡಿಕೆಶಿ ಟಾಂಗ್
ಬಲವಂತವಾಗಿ ಬಿರಿಯಾನಿ ತಿನ್ನಿಸಿದ ಡೆವಿಲ್ ಗ್ಯಾಂಗ್
ಇನ್ನು ಚಾರ್ಜ್ ಶೀಟ್‌ನಲ್ಲಿ ಡೆವಿಲ್ ಗ್ಯಾಂಗ್ ಅಮಾನವೀಯ ಹಲ್ಲೆ ನಡೆಸುವ ಜತೆಗೆ ವಿಕೃತಿ ಮೆರೆದಿದ್ದಾರೆ. ಕಿಡ್ನ್ಯಾಪ್ ಮಾಡಿಕೊಂಡ ಬಳಿಕ ರೇಣುಕಾಸ್ವಾಮಿಗೆ ಬಲವಂತವಾಗಿ ಬಿರಿಯಾನಿ ತಿನ್ನಿಸಿದ್ದಾರೆ. ನಾನು ಜಂಗಮ ನಾನ್ ವೆಜ್ ತಿನ್ನಲ್ಲ ಅಂತ ಹೇಳಿದರೂ ಊಟಕ್ಕೆ ಬೆಲೆ ಕೊಡೋ ಎಂದು ಭಯ ಪಡಿಸಿ, ಬೇಡ ಬೇಡ ಅಂದರು ಚಿಕನ್ ಬಿರಿಯಾನಿ ತಿನ್ನಿಸಿ ಕ್ರೌರ್ಯ ಮೆರೆದಿರುವುದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಕೊಲೆಗೂ ಮುನ್ನ ರಾಬ್ರಿ ಮಾಡಿದ ಡಿ ಗ್ಯಾಂಗ್
ಮತ್ತೊಂದೆಡೆ ರೇಣುಕಾಸ್ವಾಮಿ ಕಿಡ್ನಾಪ್ ಹೊತ್ತಲ್ಲಿ ಸುಲಿಗೆ ಮಾಡಿದ್ದಾರೆ. ಮಾರ್ಗ ಮಧ್ಯೆ ರೇಣುಕಾಸ್ವಾಮಿಯ ರಾಬರಿ ಮಾಡಿದ್ದ ಎ4 ಆರೋಪಿ ರಾಘವೇಂದ್ರ ರೇಣುಕಾಸ್ವಾಮಿಯ ಚೈನ್, ರಿಂಗ್, ವಾಚ್ ಮತ್ತು ಲಿಂಗದ ಕರಡಿಕೆ ಸುಲಿಗೆ ಮಾಡಿರೋದು ಸಹ ಉಲ್ಲೇಖಿಸಲಾಗಿದೆ.
ಪತಿಗೆ ಜಾಮೀನು ಕೊಡಿಸಲು ಪರದಾಡುತ್ತಿರು ವಿಜಯಲಕ್ಷ್ಮೀ
ಇವೆಲ್ಲ ಒಂದು ಕಡೆಯಾದರೆ ಮತ್ತೊಂದೆಡೆ ಚಾರ್ಜ್ ಶೀಟ್ ಸಲ್ಲಿಕೆಯಾಗುತ್ತಿದ್ದಂತೆ ವಕೀಲರ ಜತೆ ಚರ್ಚೆ ಮಾಡಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೋಮವಾರ ಜಾಮೀನು ಅರ್ಜಿ ಸಲ್ಲಿಕೆಗೆ ನಿರ್ಧಾರ ಮಾಡಿದ್ದಾರೆ. ಅದಂತೆ ಬಳ್ಳಾರಿ ಜೈಲಿಗೆ ಹೋದ ಪತ್ನಿ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್ ಜಾಮೀನು ವಕಾಲತ್ತಿಗೆ ಸಹಿ ಪಡೆದಿದ್ದಾರೆ. ಸದ್ಯ ಕೋರ್ಟ್ ನಲ್ಲಿ ಸಿಸಿ ನಂಬರ್ ಆಗಿದ್ದು, ಆರೋಪಿಗಳ ಪರ ವಕೀಲರಿಗೆ ಸೋಮವಾರ ಚಾರ್ಜ್ ಶೀಟ್ ಪ್ರತಿ ಸಿಗಲಿದೆ. ಬಳಿಕ ಅದನ್ನು ಪರಿಶೀಲನೆ ನಡೆಸಿ ಸೋಮವಾರ ಅಥವಾ ಮಂಗಳವಾರ ನಟ ದರ್ಶನ್ ಜಾಮೀನು ಕೋರಿ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಹಾಕುವ ಸಾಧ್ಯತೆ ಇದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ