ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಅರ್ಜಿ ಸಂಬಂಧ ನ್ಯಾಯಾಲಯದ ಒಂದಷ್ಟು ಕಾರ್ಯವಿಧಾನಗಳು ಬಾಕಿ ಇರುವ ಕಾರಣ ಮತ್ತಷ್ಟು ದಿನಗಳವರೆಗೆ ದರ್ಶನ್ ಗ್ಯಾಂಗ್‌ಗೆ (Actor Darshan) ಜೈಲೇ ದಿಕ್ಕು . ಜಾಮೀನು ಅರ್ಜಿಗೆ ರಜೆ ದಿನಗಳೇ ಅಡ್ಡಿಯಾಗಿದೆ.
ಚಾರ್ಜ್ ಶೀಟ್ ಸಲ್ಲಿಕೆಯಾದ ಬಳಿಕ ಮೂರು ದಿನಗಳ ಕಾಲ ನ್ಯಾಯಾಲಯವು ದರ್ಶನ್ ಆ್ಯಂಡ್ ಗ್ಯಾಂಗ್‌ಗೆ ನ್ಯಾಯಾಂಗ ಬಂಧನ ಆದೇಶ ನೀಡಿತ್ತು. ನಿನ್ನೆ ಗುರುವಾರ ಕೂಡ ಒಂದು ದಿನ ಜ್ಯೂಡಿಷಿಯಲ್ ಕಷ್ಟಡಿಗೆ ಒಳಪಡಿಸಲಾಗಿತ್ತು. ಇಂದು ಶುಕ್ರವಾರ ಮತ್ತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾತಿ ಪಡೆದ ಕೋರ್ಟ್ ಸೆ.17ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇದನ್ನೂ ಓದಿ: Nagamangala Case : ನಾಗಮಂಗಲ ಗಲಭೆ; ದುಷ್ಕರ್ಮಿಗಳ ಕೃತ್ಯಕ್ಕೆ ಬೀದಿಗೆ ಬಿದ್ದ ಕುಟುಂಬಗಳು
ಚಾರ್ಜ್ ಶೀಟ್ ಸಲ್ಲಿಕೆಯಾದ ಬಳಿಕ ಗಣೇಶ ಹಬ್ಬ ಹಾಗು ರಜಾದಿನಗಳು ಬ್ಯಾಕ್ ಟು ಬ್ಯಾಕ್ ಬಂದ ಹಿನ್ನೆಲೆಯಲ್ಲಿ ಚಾರ್ಜ್ ಶೀಟ್ ಕೂಡ ಆರೋಪಿಗಳ ಕೈ ಸೇರಿರಲಿಲ್ಲ . ಸೋಮವಾರ ಆರೋಪಿಗಳಿಗೆ ಚಾರ್ಜ್ ಶೀಟ್ ಸಿಕ್ಕಿದರೂ ಮುಖ್ಯವಾಗಿ ಬೇಕಾದ ಟೆಕ್ನಿಕಲ್ ಎವಿಡೆನ್ಸ್‌ಗಳು ಹಾಗು ಅದರ ವರದಿ ಸಿಕ್ಕಿರಲಿಲ್ಲ, ಈಗಲೂ ಸಿಕ್ಕಿಲ್ಲ. ಇದೆಲ್ಲಾವೂ ಜಾಮೀನು ಅರ್ಜಿ ಸಲ್ಲಿಕೆ ಮಾಡಲು ವಿಳಂಬವಾಗುತ್ತಿದೆ.
ಇನ್ನು ಚಾರ್ಜ್ ಶೀಟ್ ಹಾಗೂ ಡಿಜಿಟಲ್ ಎವಿಡೆನ್ಸ್ ವರದಿಗಳನ್ನು ಅನಾಲೈಝ್ ಮಾಡಿದ ಬಳಿಕವಷ್ಟೇ ಮೂವ್ ಆಗಬಹುದು. ಅದಾದ ಬಳಿಕ ಈ ಪ್ರಕರಣವನ್ನು ಸೆಷನ್ ಕೋರ್ಟ್‌ಗೆ ವರ್ಗಾವಣೆಯಾಗಿ, ಅಲ್ಲಿ ನ್ಯಾಯಾಲಯದ ಅನುಮತಿ ಪಡೆದು ಜಾಮೀನು ಅರ್ಜಿ ಸಲ್ಲಿಕೆ ಮಾಡಬೇಕು. ಇನ್ನು ಇದೇ ವೇಳೆ ದರ್ಶನ್ ಪರ ವಕೀಲ ಆದಷ್ಟು ಬೇಗ ವರದಿಗಳನ್ನು ನೀಡಬೇಕು ಜಾಮೀನು ಸಲ್ಲಿಕೆ ಮಾಡುವುದು ಆರೋಪಿಯ ಫಂಡಮೆಂಟಲ್ ರೈಟ್ಸ್ ಎಂದು ವಾದ ಮಂಡಿಸಿದರು. ಸದ್ಯ ನಾಲ್ಕು ದಿನಗಳಲ್ಲಿ ಕೋರ್ಟ್‌ನ ಪೆಂಡಿಂಗ್ ಕೆಲಸಗಳು ಕ್ಲಿಯರ್ ಆದರೆ ಜಾಮೀನು ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ಅಲ್ಲಿವರೆಗೂ ಕೊಲೆ ಆರೋಪಿಗಳಿಗೆ ಜೈಲೇ ಗತಿಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ