ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಈಗಾಗಲೆ ಕೋರ್ಟ್ ಪ್ರಕ್ರಿಯೆಗಳು ಶುರುವಾಗಿದೆ. ಈ ಸಂದರ್ಭದಲ್ಲಿ ಸಹಜವಾಗಿಯೇ ವಾದ-ಪ್ರತಿವಾದಗಳು ಜೋರಾಗಿದೆ. ಆದರೆ ಈಗ ಪ್ರಮುಖವಾದ ಎವಿಡೆನ್ಸ್ ಒಂದು ನೈಜನಾ ಅಥವಾ ಸುಳ್ಳಾ ಎಂಬ ಪ್ರಶ್ನೆಗಳು ಉದ್ಭವವಾಗಿದೆ. ಎಲ್ಲಾ ಕೋರ್ಟ್ ಕಲಾಪಗಳಲ್ಲಿ ನಡೆಯುವಂತೆ ಈ ಪ್ರಕರಣದಲ್ಲೂ ಕೂಡ ಮುಂದುವರೆದಿದೆ. ಮೊನ್ನೆಯಷ್ಟೆ ಪೊಲೀಸರು ಕಲೆ ಹಾಕಿದ್ದ ವಸ್ತ್ರಗಳು, ಅದರ ಮೇಲಿನ ರಕ್ತದ ಕಲೆಗಳೆಲ್ಲೂ ಸುಳ್ಳು ಸಾಕ್ಷಿಯಾಗಿದೆ ಎಂದು ನಟ ದರ್ಶನ್ (Actor Darshan) ಪರ ವಕೀಲರು ವಾದ ಮಂಡಿಸಿದ್ದರು. ಈಗ ಅದೊಂದು ಫೋಟೊ ಮೇಲೂ ಆರೋಪ ಶುರುವಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದರೂ ಮತ್ತಷ್ಟು ಸಾಕ್ಷಿಗಳ ಬಗ್ಗೆ ಧೃಡತೆ ಪತ್ರಗಳು ಇನ್ನೂ ಪೊಲೀಸರ ಕೈ ಸೇರಿಲ್ಲ. ಹೀಗಾಗಿ ಈಗ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖ ಮಾಡಿರುವ ಹಾಗೂ ಲಗತ್ತಿಸಿರುವ ರೇಣುಕಾಸ್ವಾಮಿಯ ಫೋಟೊಗಳ ಬಗ್ಗೆ ದರ್ಶನ್ ಪರ ವಕೀಲರು ಅನುಮಾನ ವ್ಯಕ್ತಪಡಿಸಿದ್ದಾರೆ. ಮೊಬೈಲ್‌ಗಳನ್ನು ರಿಟ್ರೀವ್ ಮಾಡಿದಾಗ ಕೃತ್ಯದ ಸಂಧರ್ಭದಲ್ಲಿ ತೆಗೆದಿದ್ದ ರೇಣುಕಾಸ್ವಾಮಿ ಕೈ ಮುಗಿದು ಕೂತಿರುವ ಫೋಟೊ ಹಾಗು ಸಾವನ್ನಪ್ಪಿದ ಬಳಿಕ ಶವವನ್ನು ಮಲಗಿಸಿದ್ದ ಫೋಟೋ ಸಿಕ್ಕಿತ್ತು.
ಇದನ್ನೂ ಓದಿ: Actor Darshan : ದರ್ಶನ್ ಬೇಲ್ ಭವಿಷ್ಯ! ಹೈದರಾಬಾದ್ CFSLನಲ್ಲೇ ಇರುವ ನಟನ ಐಫೋನ್‌ನಲ್ಲಿ ಅಡಗಿದ್ಯಾ ಸತ್ಯ?
ಈ ಫೋಟೋ ಕೃತ್ಯದ ಸಂದರ್ಭದಲ್ಲಿ ತೆಗೆಯಲಾಗಿದೆ ಎಂದು ಸಾಕ್ಷಿಯನ್ನಾಗಿ ಮಾಡಿಕೊಳ್ಳಲಾಗಿತ್ತು. ಆದರೆ ಈ ಫೋಟೊಗಳು ಆರ್ಟಿಫಿಷಲ್ ಇಂಟಲಿಜೆನ್ಸ್‌ನಿಂದ ಸೃಷ್ಟಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಇದರ ಅಸಲಿಯತ್ತು ತಿಳಿಯಲು ಪೊಲೀಸರು ಈಗ ರಿಪೋರ್ಟ್ ಬೇಗನೇ ಕೊಡುವಂತೆ ಎಫ್‌ಎಸ್‌ಎಲ್ ಮೊರೆ ಹೋಗಿದ್ದಾರೆ.
ಈಗಾಗಲೆ ಕಲೆ ಹಾಕಿರುವ ಸಾಕ್ಷಿಗಳಲ್ಲಿ ಈ ಫೋಟೊ ಪ್ರಮುಖ ಸಾಕ್ಷಿ ಎನಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇದರ ದೃಢೀಕೃತ ವರದಿ ಅವಶ್ಯಕತೆ ಇದೆ. ಸದ್ಯ ಇಲ್ಲಿಯವರೆಗೂ ಫೋಟೊ ಹಾಗೂ ರಿಟ್ರೀವ್ ಮಾಡಿದ್ದ ವರದಿಯನ್ನು ಮಾತ್ರ ಚಾರ್ಜ್ ಶೀಟ್‌ನಲ್ಲಿ ಸಲ್ಲಿಕೆ ಮಾಡಲಾಗಿತ್ತು. ಎಫ್ ಎಸ್ ಎಲ್ ವರದಿ ಬಂದ ಬಳಿಕ ಅಡಿಷನಲ್ ಚಾರ್ಜ್ ಶೀಟ್‌ಅನ್ನು ಪೊಲೀಸರು ಸಲ್ಲಿಕೆ ಮಾಡಲಿದ್ದಾರೆ. ಸದ್ಯ ಕೋರ್ಟ್ ಟ್ರಯಲ್ ನಡೆಯುತ್ತಿದ್ದು, ಯಾವ್ಯಾವ ಸಾಕ್ಷಿಗಳು ಈ ಕೇಸ್‌ಲ್ಲಿ ಪ್ರಮುಖ ಪಾತ್ರ ವಹಿಸುತ್ತೆ ಎಂಬುದನ್ನು ಕಾದು ನೋಡಬೇಕಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ