Site icon Vistara News

ನೀರಿನ ದರ ಏರಿಕೆ: ರಾಜಧಾನಿ ಜನರಿಗೆ ನೀರಿನ ಬರೆ ಎಳೆಯಲು ಸಿದ್ಧವಾದ ಜಲಮಂಡಳಿ

ಬೆಂಗಳೂರು: ಕೊರೋನಾ ಭೀಕರತೆ ನಂತರ ಇನ್ನೇನು ಚೇತರಿಸಿಕೊಳ್ಳುತ್ತಿರುವ ಸಮಾಜಕ್ಕೆ ಈಗಾಗಲೆ ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ದರ ಏರಿಕೆ ಬಿಸಿಯ ನಡುವೆ ನೀರಿನ ದರ ಏರಿಕೆಗೂ ಸಜ್ಜಾಗಬೇಕಾದ ಪರಿಸ್ಥಿತಿ ಬಂದೊದಗಿದೆ.

ಈಗಾಗಲೆ ವಿದ್ಯುತ್‌ ಮೀಟರ್‌ ಮೇಲಿನ ಠೇವಣಿ ಹೆಚ್ಚಿಸಲು ಬೆಸ್ಕಾಂ ಮುಂದಾಗಿದೆ. ಇದರ ಬೆನ್ನಲ್ಲೇ ಬೆಂಗಳೂರಿಗರಿಗೆ ಮತ್ತೊಂದು ಮೆಗಾ ಶಾಕ್ ಕೊಡಲು ಬೆಂಗಳೂರು ಜಲಮಂಡಳಿ(BWSSB) ಸಜ್ಜಾಗಿದೆ. ನೀರಿನ ದರ ಏರಿಕೆ ಮಾಡಬೇಕು ಎಂದು ಸರ್ಕಾರಕ್ಕೆ BWSSB ಪ್ರಸ್ತಾವನೆ ಸಲ್ಲಿಕೆ ಮಾಡಿದೆ. ಈಗ ಇರುವ ನೀರಿನ ದರಗಳಲ್ಲಿ 5% ಏರಿಕೆ ಮಾಡಬೇಕೆಂದು ಸರ್ಕಾರಕ್ಕೆ ಕೋರಿಕೆ ಸಲ್ಲಿಸಿರುವ ಬೆಸ್ಕಾಂ, ಮುಂದಿನ ವಾರದಲ್ಲಿ ಸರ್ಕಾರದಿಂದ ಲಭಿಸುವ ಪ್ರತಿಕ್ರಿಯೆಗಾಗಿ ಕಾಯುತ್ತಿದೆ.

ಇದನ್ನೂ ಓದಿ | ಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್!: ವಿದ್ಯುತ್‌ ಮೀಟರ್‌ ಠೇವಣಿ ಹೆಚ್ಚಿಸಿದ ಬೆಸ್ಕಾಂ

ವಾಣಿಜ್ಯ ಬಳಕೆ ಸೇರಿದಂತೆ ಎಲ್ಲಾ ಆರ್ಥಿಕ ವಲಯದ ದರದಲ್ಲಿ 8% ಏರಿಕೆ ಮಾಡಲು ಪ್ರಸ್ತಾವಿಸಲಾಗಿದೆ. ಆದರೆ ಕೈಗಾರಿಕಾ ಬಳಕೆ ಹಾಗೂ ಈಜುಕೊಳಗಳ ಬಳಕೆಗಳ ದರದಲ್ಲಿ ಹೆಚ್ಚುವರಿ ದರದ ನಿಗದಿ ಸಾಧ್ಯತೆ ಇದೆ.

ಗೃಹ ಬಳಕೆ ಮೇಲೆ 5% ವಾಟರ್ ಬಿಲ್ ಏರಿಕೆ!

ಬೆಂಗಳೂರಿನಲ್ಲಿ ಸದ್ಯ ಪ್ರತಿ ಸಾವಿರ ಲೀಟರ್ ಗೆ ₹7 ದರವಿದೆ. ಈ ದರಕ್ಕೆ 5% ಏರಿಕೆಯಾದರೆ ₹7.35 ಆಗಲಿದೆ. ಅಂದರೆ ಪ್ರತಿ ಸಾವಿರ ಲೀಟರ್‌ಗೆ 35 ಪೈಸೆ ಏರಿಕೆ ಆಗಲಿದೆ. ಮೊದಲ 8 ಸಾವಿರ ಲೀಟರ್ ಗೆ ₹56, ಇದಕ್ಕೆ 5% ಏರಿಕೆಯಾದರೆ ₹58.80 ಆಗಲಿದೆ. ಅಂದರೆ ₹2.80 ಹೆಚ್ಚಳ ಆಗಲಿದೆ.

ಕೈಗಾರಿಕಾ ಬಳಕೆ‌ ಮೇಲೆ 8% ವಾಟರ್ ಬಿಲ್

ಕೈಗಾರಿಕಾ ಬಳಕೆಗೆ ಸದ್ಯ ಪ್ರತಿ ಸಾವಿರ ಲೀಟರ್ ಗೆ ₹90 ಇದೆ. ಈ ದರಕ್ಕೆ 8% ಏರಿಕೆಯಾದರೆ 97.20 ಆಗಲಿದೆ. ಅಂದರೆ ₹7.20 ಹೆಚ್ಚಳ ಆಗಲಿದೆ.

2013ರಲ್ಲಿ ಜಲಮಂಡಳಿ ನೀರಿನ ದರ ಏರಿಕೆ ಮಾಡಿತ್ತು. ಅದಾಗಿ 9 ವರ್ಷಗಳಾಯಿತು, ಇದೀಗ ದರ ಏರಿಸುವ ಪ್ರಸ್ತಾವನೆ ಸಲ್ಲಿಸಿದೆ. ಮುಂದಿನ ವಾರ ಸರ್ಕಾರ ಈ ಬಗ್ಗೆ ತಮ್ಮ ಅಂತಿಮ ನಿರ್ಧಾರ ಪ್ರಕಟ ಮಾಡಲಿದೆ.

ಈಗಿರುವ ಗೃಹ ಬಳಕೆಯ ನೀರಿನ ದರ !
• 1,000 Ltr : ₹7 (0 to 8,000 Ltr ವರೆಗೆ)
• 1,000 Ltr : ₹11 (8,001 to 25,000 Ltr ವರೆಗೆ)
• 1,000 Ltr : ₹26 (25,001 to 50,000 Ltr ವರೆಗೆ)
• 1,000 Ltr : ₹45 (50,000 ಮೇಲ್ಪಟ್ಟಂತೆ Ltrಗೆ)

ಈಗಿರುವ ವಾಣಿಜ್ಯ ಬಳಕೆಯ ನೀರಿನದ ದರ !
• 1,000 Ltr : ₹50 (0 to 10,000 Ltr ವರೆಗೆ)
• 1,000 Ltr : ₹57 (10,001 to 25,000 Ltr ವರೆಗೆ)
• 1,000 Ltr : ₹65 (25,001 to 50,000 Ltr ವರೆಗೆ)
• 1,000 Ltr : ₹76 (50,001 to 75,000 Ltr ವರೆಗೆ)
• 1,000 Ltr : ₹86 (75,000 ಮೇಲ್ಪಟ್ಟಂತೆ Ltrಗೆ)

• ಕೈಗಾರಿಕಾ ಬಳಕೆಯ ನೀರಿನದ ದರ : 1,000 Ltrಗೆ ₹90
• ಈಜುಕೊಳಕ್ಕೆ ಬಳಕೆಯ ನೀರಿನ ದರ : 1,000 Ltrಗೆ ₹90

Exit mobile version