ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರಗಳ ನಡುವಣ ಸಂಘರ್ಷ ಈ ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿಯುವ ನಿಟ್ಟಿನಲ್ಲಿ ಸಾಗಿರುವುದು ಆರೋಗ್ಯಕರ ಪ್ರಜಾಪ್ರಭುತ್ವದ ಸುಗಮ ಕಾರ್ಯನಿರ್ವಹಣೆಗೆ ಮಾರಕ ಮತ್ತು ಒಕ್ಕೂಟ ವ್ಯವಸ್ಥೆಗೆ ಪೂರಕವಲ್ಲದ ಬೆಳವಣಿಗೆ.
ಕಳೆದ ಒಂಭತ್ತು ವರ್ಷದ ಹಿಂದೆ ಬೆಂಳೂರು ಜಲಮಂಡಳಿ ನೀರಿನ ದರ ಏರಿಕೆ ಮಾಡಿತ್ತು. ಇದೀಗ ಎಲ್ಲ ಗೃಹಬಳಕೆ ನೀರಿನ ಮೇಲೆ 5%ಹೆಚ್ಚಳ ಮಾಡುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ.
ಲೆ | ಜೆನರಲ್ ಮನೋಜ್ ಪಾಂಡೆ ಮುಂದಿನ ಸೇನಾ ಮುಖ್ಯಸ್ಥರಾಗಿ ಕಾರ್ಯಪ್ರವೃತ್ತರಾಗಲಿದ್ದಾರೆ. ಮನೋಜ್ ಪಾಂಡೆ ಸೇನಾ ಮುಖ್ಯಸ್ಥರ ಸ್ಥಾನಕ್ಕೆ ಏರಿದ ಮೊದಲ ಇಂಜಿನಿಯರ್.
RBI ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಲು ಇಂದೇ ಕೊನೇದಿನವಾಗಿದೆ. 300ಕ್ಕೂ ಅಧಿಕ ಉದ್ಯೋಗ ಅವಕಾಶಗಳಿವೆ.
2011ರಲ್ಲಿ ದೇಶದಲ್ಲಿ ಕಡುಬಡತನದ ಪ್ರಮಾಣ 22.5% ಇತ್ತು. ಆದರೆ 2019ರಲ್ಲಿ 10.2%ಕ್ಕೆ ಕುಸಿದಿದೆ ಎಂದು ವಿಶ್ವಬ್ಯಾಂಕ್ನ ಸಂಶೋಧನಾ ವರದಿಯೊಂದು ತಿಳಿಸಿದೆ.
ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಜ್ ಪಕ್ಷದ ಉಪಾಧ್ಯಕ್ಷೆ ಮರಿಯಮ್ ನವಾಜ್ ಷರೀಫ್, ಭಾರತವನ್ನು ಕಂಡರೆ ಅಷ್ಟೊಂದು ಪ್ರೀತಿಯಿದ್ದರೆ ಅವರು ಭಾರತಕ್ಕೆ ಹಿಂದಿರುಗಿ ಹೋಗಲಿ ಎಂದಿದ್ದಾರೆ.
ಆರ್ಥಿಕ ಮತ್ತು ರಾಜಕೀಕಯ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾಗೆ ಭಾರತ ಸುಮಾರು 76 ಸಾವಿರ ಟನ್ ಪೆಟ್ರೋಲ್ ಮತ್ತು ಡೀಸೆಲ್ ಸರಕು ಒದಗಿಸಿದೆ.