ಬೆಂಗಳೂರು: ಬೆಂಗಳೂರಿನ ಮಾರತಹಳ್ಳಿ ಪಣತ್ತೂರು ಕೆರೆಗೆ ಇಳಿದ (Drowned In Water) ಯುವಕನೊರ್ವ ನಾಪತ್ತೆ ಆಗಿದ್ದಾನೆ. ರೀಲ್ಸ್ ಮಾಡಲು ಮೂವರು ಸ್ನೇಹಿತರು ಕೆರೆ ಬಳಿ ಬಂದಿದ್ದರು. ಈ ವೇಳೆ ರೀಲ್ಸ್ ಮಾಡಲು ಇಬ್ಬರು ಕೆರೆ ಇಳಿದು ಈಜಿಕೊಂಡು ಹೋಗಿದದರು. ಇತ್ತ ದಡದಲ್ಲಿ ನಿಂತು ಒಬ್ಬ ವಿಡಿಯೋ ಮಾಡುತ್ತಿದ್ದ.
ಈಜಲು ಹೋದ ಇಬ್ಬರಲ್ಲಿ ಓರ್ವ ನೋಡು ನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿದ್ದಾನೆ. ನಿನ್ನೆ ಭಾನುವಾರ ಸಂಜೆ 4.20ಕ್ಕೆ ಘಟನೆ ನಡೆದಿದೆ. ಇಬ್ಬರು ಯುವಕರು ಒಟ್ಟಿಗೆ ನೀರಿಗೆ ಹಾರಿ ಈಜುತ್ತಾ ಹೋಗಿದ್ದಾರೆ. ಕೆರೆ ಮಧ್ಯದಲ್ಲಿ ಹೋದಾಗ ಯುವಕನಿಗೆ ಈಜಲು ಕಷ್ಟವಾಗಿದೆ. ವಾಪಸ್ ಹಿಂದಿರುಗಲು ಪ್ರಯತ್ನಿಸಿದ್ದಾನೆ. ಆದರೆ ಏಕಾಏಕಿ ನೀರಿನಲ್ಲಿ ಮುಳುಗಿದ್ದಾನೆ. ಮತ್ತೊಬ್ಬ ಈಜಿ ದಡ ದಾಟಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ದೌಡಾಯಿಸಿದ್ದು, ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ: Road Accident : ಬೈಕ್‌ಗೆ ಕಾರು ಡಿಕ್ಕಿ; ಪೋಷಕರ ಕಣ್ಣೆದುರೆ ಹಾರಿ ಬಿದ್ದ 5 ವರ್ಷದ ಮಗು ದಾರುಣ ಸಾವು
ಮೈಸೂರಿನಲ್ಲಿ ನದಿಗೆ ಹಾರಿ ಯುವಕ ಆತ್ಮಹತ್ಯೆ
ನದಿಗೆ ಹಾರಿ ಯುವಕನೊರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನಲ್ಲಿ ಘಟನೆ ನಡೆದಿದೆ. ನರಸೀಪುರ ಪಟ್ಟಣದ ಕಬಿನಿ ಮೇಲ್ಸೇತುವೆ ಬಳಿ ಕೇತಳ್ಳಿಗ್ರಾಮದ ಮಲ್ಲಿಕಾರ್ಜುನ್ ನದಿಗೆ ಹಾರಿದವರು.
ಕೇತಳ್ಳಿ ಗ್ರಾಮದ ಮಲ್ಲೇಶ್ ಎಂಬುವರ ಪುತ್ರ ಮಲ್ಲಿಕಾರ್ಜುನ್ ಮೊಬೈಲ್, ಬಟ್ಟೆಯನ್ನು ಸೇತುವೆ ಮೇಲೆ ಇಟ್ಟು ನದಿಗೆ ಹಾರಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ನರಸೀಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ, ನುರಿತ ಈಜುಗಾರರಿಂದ ಯುವಕನ ಶವಕ್ಕಾಗಿ ತೀವ್ರ ಶೋಧ ನಡೆಸಿದ್ದಾರೆ. ಟಿ ನರಸೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಾವಣಿಯ ಸಿಮೆಂಟ್ ಬಿದ್ದು ಅಂಗನವಾಡಿ ಮಕ್ಕಳಿಗೆ ಗಾಯ
ಅಂಗನವಾಡಿ ಚಾವಣಿಯ ಸಿಮೆಂಟ್ ಬಿದ್ದು ನಾಲ್ಕು ಮಕ್ಕಳಿಗೆ ಗಾಯವಾಗಿದೆ. ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊಪ್ಪಳದ ಗಂಗಾವತಿಯ 6 ನೇ ವಾರ್ಡ್‌ನ ಮಹೆಬೂಬ್ ನಗರದ 11 ನೇ ಅಂಗನವಾಡಿ ಕೇಂದ್ರದಲ್ಲಿ ಘಟನೆ ನಡೆದಿದೆ. ಅಂಗನವಾಡಿಯಲ್ಲಿ 20ಕ್ಕೂ ಹೆಚ್ಚು ಮಕ್ಕಳು ಇದ್ದರು.
ಇದರಲ್ಲಿ ನಾಲ್ವರ ತಲೆ ಮತ್ತು ಕಾಲುಗಳಿಗೆ ಗಾಯವಾಗಿದೆ. ಅಮನ್, ಮನ್ವಿತ್, ಮರ್ದಾನ್ ಹಾಗೂ ಸುರಕ್ಷಾ ಗಾಯಗೊಂಡ ಮಕ್ಕಳು. ಗಂಗಾವತಿ ತಾಲೂಕು ಆಸ್ಪತ್ರೆಗೆ ನಗರಸಭೆ ಅಧ್ಯಕ್ಷ ಮತ್ತು ಸದಸ್ಯರು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂಗನವಾಡಿ ಕಟ್ಟಡ ನಿರ್ಮಿಸಿ 7 ವರ್ಷದಲ್ಲೇ ಚಾವಣಿ ಉದುರಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ