ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder) ಕೇಸ್‌ನಲ್ಲಿ A15 ಆರೋಪಿ ಕಾರ್ತಿಕ್ ಅಲಿಯಾಸ್ ಕಪ್ಪೆ, A16 ಕೇಶವಮೂರ್ತಿ, A17 ನಿಖಿಲ್ ನಾಯಕ್‌ಗೆ ಷರತ್ತು ಬದ್ಧ ಜಾಮೀನು ಮಂಜೂರಾಗಿದೆ. ನಟ ದರ್ಶನ್ ಹಾಗೂ ಪವಿತ್ರಾ ಪರ ವಕೀಲರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಾಲಯವು ಮುಂದೂಡಿದೆ.
ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.27 ಕ್ಕೆ ಮುಂದೂಡಿಕೆ ಮಾಡಲಾಗಿದೆ. ಆಕ್ಷೇಪಣೆ ಸಲ್ಲಿಸಲು ಎಸ್‌ಪಿಪಿ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಅರ್ಜಿ ವಿಚಾರಣೆಯನ್ನು ಮುಂದೂಡಿದ್ದಾರೆ. 57ನೇ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾ. ಜೈಶಂಕರ್ ಆದೇಶ ಹೊರಡಿಸಿದ್ದಾರೆ. ನಟಿ ಪವಿತ್ರಗೌಡ ಜಾಮೀನು ಅರ್ಜಿ ವಿಚಾರಣೆಯನ್ನು ಸೆ. 25ಕ್ಕೆ ಮುಂದೂಡಲಾಗಿದೆ.
ತುಮಕೂರು ಜೈಲ್ಲಿನಲ್ಲಿರುವ ಆರೋಪಿ ಕೇಶವ್ ಮೂರ್ತಿ ಎರಡು ದಿನಗಳ ನಂತರ ಬಿಡುಗಡೆ ಆಗುವ ಸಾಧ್ಯತೆ ಇದೆ. ಜಾಮೀನು ಆದೇಶ ಪ್ರತಿ ಹೈ ಕೋರ್ಟ್‌ನಿಂದ 24 ನೇ ACMMಗೆ ಬರಬೇಕು. ಆ ನಂತರ 24 ನೇ ACMM ನಲ್ಲಿ ಜಾಮೀನು ಷರತ್ತು ಪೂರೈಸಬೇಕು. ಬಳಿಕ ಬಿಡುಗಡೆ ಆದೇಶ ಪ್ರತಿ ತುಮಕೂರು ಜೈಲ್ಲಿಗೆ ತಲುಪಿದ ನಂತರ ಬಿಡುಗಡೆ ಮಾಡಲಾಗುತ್ತದೆ. ಕೇಶವಮೂರ್ತಿ ಪರ ವಕೀಲ ರಂಗನಾಥ್ ರೆಡ್ಡಿ ಜಾಮೀನು ಅರ್ಜಿ ಸಂಬಂಧ ವಾದ ಮಂಡಿಸಿದ್ದರು. ಹೈಕೋರ್ಟ್ ನ್ಯಾ. ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠದಿಂದ ಜಾಮೀನು ಮಂಜೂರಾಗಿದೆ.