Site icon Vistara News

ಖಾಸಗಿ ಆಸ್ಪತ್ರೆಗಳ ಬಿಲ್‌ ಪಾವತಿಸಿದ ಆರೋಗ್ಯ ಇಲಾಖೆ: ಕೋವಿಡ್‌ ಚಿಕಿತ್ಸೆ ಪಡೆದವರೆಷ್ಟು ಗೊತ್ತಾ?

Covid 19

ಬೆಂಗಳೂರು: ಕಣ್ಣಿಗೆ ಕಾಣದ ವೈರಸ್‌ ರಾಜ್ಯಕ್ಕೆ ಕಾಲಿಟ್ಟಾಗ ಅಕ್ಷರಶಃ ಆರೋಗ್ಯ ಇಲಾಖೆ ನಲುಗಿ ಹೋಗಿತ್ತು. ಹೊಸ ವೈರಸ್‌ ಕಾಣಿಸಿಕೊಂಡಾಗ ಮೊದ ಮೊದಲು ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗಿತ್ತು.

ಇದನ್ನೂ ಓದಿ | ಕೋವಿಡ್‌ ನಿಯಮ ಉಲ್ಲಂಘನೆ: ಕಾಂಗ್ರೆಸ್‌ ನಾಯಕರ ವಿರುದ್ಧ ಚಾರ್ಜ್‌ ಶೀಟ್‌ಗೆ ಕೋರ್ಟ್‌ ತಡೆ

ಆದರೆ ಯಾವಾಗ ಸೋಂಕಿತರ ಸಂಖ್ಯೆ ಕೈಮೀರಿ ಹೋಯಿತೋ ಖಾಸಗಿ ಆಸ್ಪತ್ರೆಗಳ ಮೊರೆ ಹೋಗಬೇಕಾಯಿತು. ಕೋವಿಡ್ ಚಿಕಿತ್ಸೆಗಾಗಿ ಕೆಲ ಖಾಸಗಿ ಆಸ್ಪತ್ರೆಗಳನ್ನು ಪೂರ್ಣಪ್ರಮಾಣದಲ್ಲಿ ಸರ್ಕಾರ ಬಳಸಿಕೊಂಡಿತ್ತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದ ಅಧಿಸೂಚನೆ ಮೇರೆಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಜೊತೆ ಕೆಲ ಖಾಸಗಿ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿತ್ತು. ಸರ್ಕಾರಿ ಆಸ್ಪತ್ರೆಯಿಂದ ಶಿಫಾರಸು ಪಡೆದ ಸೋಂಕಿತನಿಗೆ ಖಾಸಗಿ ಆಸ್ಪತ್ರೆ ಚಿಕಿತ್ಸೆ ಉಚಿತವಾಗಿತ್ತು. ಬಳಿಕ ಖಾಸಗಿ ಆಸ್ಪತ್ರೆಗಳು ಪ್ರತಿ ರೋಗಿಯ ವೆಚ್ಚವನ್ನು ಸರ್ಕಾರಕ್ಕೆ ಸಲ್ಲಿಸಬೇಕಿತ್ತು.

ಇದೀಗ ಖಾಸಗಿ ಆಸ್ಪತ್ರೆಗಳಿಗೆ ನೀಡಬೇಕಾದ ಎಲ್ಲ ಬಾಕಿ ಮೊತ್ತವನ್ನು ಇಲಾಖೆ ಪಾವತಿ ಮಾಡಿದೆ. ಕೋವಿಡ್‌ ಮೊದಲ, ಎರಡನೇ ಹಾಗೂ ಮೂರನೇ ಅಲೆಯಲ್ಲಿ 2,39,736 ಸೋಂಕಿತರು ಚಿಕಿತ್ಸೆ ಪಡೆದಿದ್ದರು. 2020ರ ಮಾರ್ಚ್‌ನಿಂದ 2021ರ ಮಾರ್ಚ್‌ನ ಮೊದಲ ಅಲೆಯಲ್ಲಿ 1,17,930 ಸೋಂಕಿತರು ಚಿಕಿತ್ಸೆ ಪಡೆದಿದ್ದು 391.26 ಕೋಟಿ ರೂ. ಪಾವತಿಸಿದೆ. 2021ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 1,14,690 ಸೋಂಕಿತರು ಚಿಕಿತ್ಸೆಗಾಗಿ 376.76 ಕೋಟಿ ಹಾಗೂ ಮೂರನೇ ಅಲೆಯಲ್ಲಿ 2022ರ ಜನವರಿಯಿಂದ ಮಾರ್ಚ್‌ವರೆಗೆ 7,116 ಸೋಂಕಿತರು ಚಿಕಿತ್ಸೆ ಪಡೆದಿದ್ದು ಇದಕ್ಕಾಗಿ 11.80 ಕೋಟಿ ರೂ ಪಾವತಿ ಮಾಡಲಾಗಿದೆ.

ಕೊರೊನಾ ಚಿಕಿತ್ಸೆಗೆ ದರ ನಿಗದಿ ಹೀಗಿತ್ತು

ಜನರಲ್ ವಾರ್ಡ್- 5,200 ರೂ

ಐಸೋಲೇಷನ್ – 7,000 ರೂ

ಐಸೋಲೇಷನ್ ವಿತ್ ವೆಂಟಿಲೇಟರ್- 10,000 ರೂ

Exit mobile version