Site icon Vistara News

ಸಿಹಿ ಸುದ್ದಿ | ಕೋವಿಶೀಲ್ಡ್‌ ಲಸಿಕೆ ಬಲಿಷ್ಠ ಎಂಬುದು ಸಾಬೀತು, ಜಯದೇವ ಆಸ್ಪತ್ರೆ ಅಧ್ಯಯನ

covishield vaccine

ಬೆಂಗಳೂರು: ಕೋವಿಡ್‌ ವಿರುದ್ಧ ಬಳಸಲಾಗುತ್ತಿರುವ ದೇಸಿ ಲಸಿಕೆ ಬಲಿಷ್ಠ ಪ್ರತಿಕಾಯಗಳನ್ನು ಉತ್ಪಾದಿಸುತ್ತಿದ್ದು, ನಾಲ್ಕನೇ ಡೋಸ್‌ ಅಗತ್ಯವಿಲ್ಲ ಎಂದು ನಗರದಲ್ಲಿ ನಡೆದ ಅಧ್ಯಯನವೊಂದು ಖಚಿತಪಡಿಸಿದೆ.

ಬೆಂಗಳೂರಿನ ಜಯದೇವ ಆಸ್ಪತ್ರೆಯಿಂದ ನಡೆಸಲಾಗಿರುವ ಅಧ್ಯಯನ ಇದನ್ನು ಖಚಿತಪಡಿಸಿದೆ. ಕೋವಿಡ್ ನಾಲ್ಕನೇ ಅಲೆಯ ಭೀತಿ ಬೇಡ ಎಂಬ ಖುಷಿಯ‌ ವಿಚಾರದ ನಡುವೆ ಇದು ಮತ್ತೊಂದು ಗುಡ್ ನ್ಯೂಸ್ ಆಗಿದೆ. BF.7, XXB 1.5 ರೂಪಾಂತರಿಯ ಆಗಮನದ ಹಿನ್ನೆಲೆಯಲ್ಲಿ ಈ ಅಧ್ಯಯನದ ಫಲಿತಾಂಶ ಹೊರಬಿದ್ದಿದೆ.

ಆಸ್ಪತ್ರೆಯ 350 ಸಿಬ್ಬಂದಿಗಳ ಮೇಲೆ ಅಧ್ಯಯನ ನಡೆಸಲಾಗಿದೆ. ಬೂಸ್ಟರ್ ಡೋಸ್ ಹೇಗೆ ವರ್ಕ್ ಆಗಿದೆ, ದೇಹದ ಆಂಟಿಬಾಡಿ ಹೇಗಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸಲಾಗಿತ್ತು. ಅಧ್ಯಯನದಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದ 350 ಸಿಬ್ಬಂದಿಗಳಲ್ಲಿ ಶೇಕಡಾ 99.4 ಮಂದಿಯಲ್ಲಿ ಪ್ರತಿಕಾಯ ಪತ್ತೆಯಾಗಿವೆ. 19ರಿಂದ 60 ವಯಸ್ಸಿನ‌ 148 ಪುರುಷರಲ್ಲಿ 48%, 202 ಮಹಿಳೆಯರಲ್ಲಿ 58% ಆಂಟಿಬಾಡಿ ವೃದ್ಧಿಯಾಗಿತ್ತು.

ರಕ್ತದಲ್ಲಿನ ಪ್ರತಿಕಾಯಗಳನ್ನು ಅಳೆಯುವ ಎಲಿಸಾ ಮಾದರಿ ಬಳಸಿ ಅಧ್ಯಯನ ನಡೆಸಲಾಗಿದೆ. ದೇಹದಲ್ಲಿ ವೃದ್ಧಿಯಾದ ಪ್ರತಿಕಾಯಗಳು ಮುಂದಿನ ಒಂದು ವರ್ಷ ಉಳಿಯುತ್ತವೆ ಎಂದು ಗೊತ್ತಾಗಿದೆ. ಬೂಸ್ಟರ್ ಡೋಸ್ ತೆಗೆದುಕೊಂಡರೆ ಒಂದು ವರ್ಷ ವೈರಸ್‌ನಿಂದ ಪಾರಾಗಬಹುದಾಗಿದ್ದು, ನಾಲ್ಕನೇ ಡೋಸ್ ಅಗತ್ಯವಿಲ್ಲ ಎಂಬುದೂ ತಿಳಿದುಬಂದಿದೆ. ಜಯದೇವ ಆಸ್ಪತ್ರೆಯ ಡಾ.ನವೀನ, ಡಾ.ಕವಿತಾ, ಡಾ.ನಂದಿನಿ ಅವರು ನಡರಸಿರುವ ಅಧ್ಯಯನವಿದಾಗಿದೆ.

ಇದನ್ನೂ ಓದಿ | Covishield Vaccine | ಕೊರೊನಾ ಭೀತಿ ಮಧ್ಯೆಯೇ ಕೇಂದ್ರಕ್ಕೆ ಉಚಿತವಾಗಿ 2 ಕೋಟಿ ಕೋವಿಶೀಲ್ಡ್‌ ಡೋಸ್‌ ನೀಡಲು ಸೀರಂ ತೀರ್ಮಾನ

Exit mobile version