Site icon Vistara News

Modi In Mangalore | ಡಬಲ್‌ ಎಂಜಿನ್‌ ಸರ್ಕಾರ ಎಲ್ಲಿ ಎನ್ನುವವರು ಕಣ್ತೆರೆದು ನೋಡಿ: ಸಿಎಂ ಬೊಮ್ಮಾಯಿ

ಮಂಗಳೂರು: ಕರ್ನಾಟಕದಲ್ಲಿ ಡಬಲ್‌ ಎಂಜಿನ್‌ ಸರ್ಕಾರದಿಂದ ಏನೇನು ಕಾರ್ಯವಾಗುತ್ತದೆ ಎಂದು ಪ್ರಶ್ನಿಸುವವರಿಗೆ ಮಂಗಳೂರಿನಲ್ಲಿ ಕೈಗೊಳ್ಳಲಾಗುತ್ತಿರುವ ಯೋಜನೆಗಳೇ ಉತ್ತರ ಎಂದು ಪ್ರತಿಪಕ್ಷಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

ಮಂಗಳೂರಿನ ಗೋಲ್ಡ್‌ಫಿಂಚ್‌ ಮೈದಾನದಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಧಾನಿ ಮೋದಿ ಉಪಸ್ಥಿತಿಯಲ್ಲಿ ನೆರೆದಿದ್ದ ಸಾವಿರಾರು ಜನರನ್ನುದ್ದೇಶಿಸಿ ಬೊಮ್ಮಾಯಿ ಮಾತನಾಡಿದರು.

ಕರಾವಳಿ ಅಭಿವೃದ್ಧಿಯಲ್ಲಿ ಇದು ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ. ಆಮದು ರಫ್ತು ಹೆಚ್ಚಳವಾಗಬೇಕಾದರೆ ನಮ್ಮ ಬಂದರುಗಳು ಬಲಿಷ್ಠವಾಗಬೇಕು ಎಂಬ ಕನಸು ಇಂದು ನನಸಾಗುತ್ತಿದೆ. ನವಮಂಗಳೂರು ಬಂದರಿನ ಸಾಮರ್ಥ್ಯ ನಾಲ್ಕು ಪಟ್ಟು ಹೆಚ್ಚಾಗುತ್ತಿದೆ. ಕರಾವಳಿ ಪ್ರದೇಶದ ಮೂಲಕ ಕರ್ನಾಟಕದ ಸಮಗ್ರ ಅಭಿವೃದ್ಧಿ ಆಗುತ್ತದೆ ಎಂದರು.

ಡಬಲ್‌ ಎಂಜಿನ್‌ ಸರ್ಕಾರ ಇದ್ದರೆ ಏನಾಗಿದೆ ಎಂದು ಅನೇಕರು ಪ್ರಶ್ನೆ ಕೇಳುತ್ತಾರೆ. ಈ ರೀತಿ ಕೇಳಿವವರಿಗೆಲ್ಲ ಮಂಗಳೂರಿನಲ್ಲಿ ಇಂದು ನಡೆಯುತ್ತಿರುವ ಕಾರ್ಯಕ್ರಮವೇ ಉತ್ತರ. ಅಂಥವರು ಇಲ್ಲಿ ಕಣ್ತೆರೆದು ನೋಡಬೇಕು. ಡಬಲ್‌ ಇಂಜಿನ್‌ ಸರ್ಕಾರದ ಕಾರಣಕ್ಕೇ ಸಾಗರಮಾಲಾ ಯೋಜನೆಯಲ್ಲಿ ೧೮ ಯೋಜನೆಗಳನ್ನು ಮುಗಿಸಿ ೧೯ನೇ ಯೋಜನೆಗೆ ಮುಂದಾಗಿದ್ದೇವೆ. ಕರಾವಳಿ ಪ್ರದೇಶದಲ್ಲಿ ಈ ಅಭಿವೃದ್ಧಿಗೆ ಮೋದಿಯವರ ನೇತೃತ್ವದ ಡಬಲ್‌ ಎಂಜಿನ್‌ ಸರ್ಕಾರವೇ ಕಾರಣ ಎಂದು ಸಿಎಂ ಹೇಳಿದರು.

ಇದನ್ನೂ ಓದಿ | Modi in Mangalore | ವಿಕಾಸವೋ, ವಿನಾಶವೋ? ಮೋದಿಜಿ ಉತ್ತರ ಕೊಡಿ, ಸಿದ್ದರಾಮಯ್ಯ ಸರಣಿ ಪ್ರಶ್ನಾ ದಾಳಿ

ಸಿಆರ್‌ಜಡ್‌ ನಿಯಮಾವಳಿಗೆ ಮೂವತ್ತು ವರ್ಷದ ಹೋರಾಟವಿತ್ತು. ಸಿಆರ್‌ಜಡ್‌ ಮಾಸ್ಟರ್‌ ಪ್ಲಾನ್‌ ಅನ್ನು ಒಪ್ಪಿಗೆ ಮಾಡಿ ಆದೇಶವನ್ನು ನೀಡಲಾಗಿದೆ, ಇದಕ್ಕೆ ಮೋದಿಯವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಇದು ಡಬಲ್‌ ಇಂಜಿನ್‌ ಸರ್ಕಾರದ ಸಾಧನೆ. ಕಾರವಾರದ ಮಾಜಾಳಿ ಪೋರ್ಟ್‌ಗೆ ಅನುಮೋದನೆ ಸಿಕ್ಕಿದೆ, ಇದೂ ಡಬಲ್‌ ಎಂಜಿನ್‌ ಸರ್ಕಾರದ ಸಾಧನೆ. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಲ್ಲಿ ಮೀನುಗಾರರಿಗೆ ಅನುಕೂಲವಾಗಲು ಡೀಪ್‌ ಸೀ ಫಿಷಿಂಗ್‌ಗೆ ಅನುಮತಿಯನ್ನು ನೀಡಲಾಗಿದೆ. ಡಬಲ್‌ ಎಂಜಿನ್‌ ಸರ್ಕಾರ ಕರ್ನಾಟಕವನ್ನಷ್ಟೇ ಅಲ್ಲ, ಭಾರತವನ್ನೂ ಮುನ್ನಡೆಸುತ್ತಿದೆ. ಕರ್ನಾಟಕದ ಅಭಿವೃದ್ಧಿಯ ಮೂಲಕ ಭಾರತದ ಅಭಿವೃದ್ಧಿಯಾಗುತ್ತದೆ ಎಂದು ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ | INS Vikrant | ಸ್ವದೇಶಿ ನಿರ್ಮಿತ ಐಎನ್​ಎಸ್​ ವಿಕ್ರಾಂತ್​​ ಇಂದಿನಿಂದ ಕಾರ್ಯಾರಂಭ; ಪ್ರಧಾನಿ ಮೋದಿಯಿಂದ ಚಾಲನೆ

Exit mobile version