Site icon Vistara News

Karnataka Election 2023: ಡಿ.ಕೆ.ಶಿವಕುಮಾರ್‌ ಸೇರಿ ವಿವಿಧ ಕಾಂಗ್ರೆಸ್‌ ನಾಯಕರಿಂದ ನಾಮಪತ್ರ ಸಲ್ಲಿಕೆ

DK Shivakumar and other Congress leaders file nominations

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ (Karnataka Election 2023) ಕಾವು ಜೋರಾಗಿದೆ. ಚುನಾವಣೆ ದಿನಾಂಕ ನಿಗದಿಯಾಗುತ್ತಿದ್ದಂತೆ ಮೂರು ಪಕ್ಷಗಳು ಭರ್ಜರಿ‌ ಮತ ಬೇಟೆ ಆರಂಭಿಸಿವೆ. ಈ ನಡುವೆ ಸೋಮವಾರ ಕಾಂಗ್ರೆಸ್‌ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಎಂ.ಬಿ. ಪಾಟೀಲ್‌, ಕೆ.ಎಚ್‌. ಮುನಿಯಪ್ಪ. ಸೇರಿದಂತೆ ಕಾಂಗ್ರೆಸ್‌ನ ಘಟಾನುಘಟಿ ನಾಯಕರು ನಾಮಪತ್ರ ಸಲ್ಲಿಸಿದರು. ಯಾರು ಎಲ್ಲಿ ನಾಮಪತ್ರ ಸಲ್ಲಿಸಿದರು ಎಂಬ ಮಾಹಿತಿ ಇಲ್ಲಿದೆ.

ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ನಾಮಪತ್ರ ಸಲ್ಲಿಕೆ; ಹೆಗಲ ಮೇಲೆ ಹೊತ್ತು ಮೆರವಣಿಗೆ ನಡೆಸಿದ ಬೆಂಬಲಿಗರು

ರಾಮನಗರ: ಜಿಲ್ಲೆಯ ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಾವಿರಾರು ಬೆಂಬಲಿಗರು, ಕಾರ್ಯಕರ್ತರೊಂದಿಗೆ ಬೃಹತ್‌ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು. ಅದಕ್ಕೂ ಮೊದಲು ಕನಕಪುರದ ಕೆಂಕೇರಮ್ಮ ದೇವಸ್ಥಾನಕ್ಕೆ ಡಿಕೆಶಿ ಕುಟುಂಬ ಸಮೇತ ತೆರಳಿ ಪೂಜೆ ಸಲ್ಲಿಸಿದರು. ನಂತರ ಸಾವಿರಾರು ಕಾರ್ಯಕರ್ತರ ಜತೆ ಬೃಹತ್ ಬೈಕ್‌ ರ‍್ಯಾಲಿ ನಡೆಸಿ ಶಕ್ತಿ ಪ್ರದರ್ಶನ ಮಾಡಿದರು. ಅಭಿಮಾನಿಗಳು ಅವರನ್ನು ಹೆಗಲಿನ ಮೇಲೆ ಹೊತ್ತು ಮೆರವಣಿಗೆ ಮೂಲಕ ಚುನಾವಣಾ ಅಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಕರೆತಂದರು. ಮತ್ತೊಂದೆಡೆ ರಾಮನಗರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್ ಹುಸೇನ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಹೊಸಕೋಟೆಯಲ್ಲಿ ಶರತ್‌ ಬಚ್ಚೇಗೌಡ ನಾಮಪತ್ರ

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ರಕ್ಷಿತ್ ಶಿವರಾಂ ನಾಮಿನೇಷನ್ | Rakshit Shivaram Nomination | Vistara News

ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿಗೆ ಕಾಂಗ್ರೆಸ್‌ ಅಭ್ಯರ್ಥಿ ಶಾಸಕ ಶರತ್ ಬಚ್ಚೇಗೌಡ ನಾಮಪತ್ರ ಸಲ್ಲಿಸಿದರು. ಅವರಿಗೆ ಪತ್ನಿ ಪ್ರತಿಭಾ ಶರತ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಶ್ಯಾಮಣ್ಣ, ಕಾಂಗ್ರೆಸ್ ಮುಖಂಡ ತಮ್ಮೇಗೌಡ, ಕಾರ್ಯದರ್ಶಿ ಸಗೀರ್ ಅಹ್ಮದ್ ಸಾಥ್‌ ನೀಡಿದರು. ಶರತ್‌ ಬಚ್ಚೇಗೌಡ ನಾಮಪತ್ರ ಸಲ್ಲಿಸುವಾಗ ಸಾವಿರಾರು ಬೆಂಬಲಿಗರು ಜಮಾಯಿಸಿದ್ದರು.

ಮಲ್ಲೇಶ್ವರದಲ್ಲಿ ಅನೂಪ್‌ ಅಯ್ಯಂಗಾರ್‌ ಉಮೇದುವಾರಿಕೆ

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ರಕ್ಷಿತ್ ಶಿವರಾಂ ನಾಮಿನೇಷನ್ | Rakshit Shivaram Nomination | Vistara News

ಬೆಂಗಳೂರು: ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನೂಪ್ ಅಯ್ಯಂಗಾರ್‌ ನಾಮಪತ್ರ ಸಲ್ಲಿಕೆ ಮಾಡಿದರು. ಬಳಿಕ ನಡುರಸ್ತೆಯಲ್ಲೇ ಅವರನ್ನು ಹೆಗಲ ಮೇಲೆ ಹೊತ್ತು ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಒಂದೆಡೆ ಅನೂಪ್ ಅಯ್ಯಂಗಾರ್, ಮತ್ತೊಂದೆಡೆ ಅಶ್ವತ್ಥನಾರಾಯಣ ಬೆಂಬಲಿಗರು ಜಮಾವಣೆ ಆಗಿದ್ದರಿಂದ ಮಲ್ಲೇಶ್ವರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಯಿತು.

ಇದನ್ನೂ ಓದಿ | Karnataka Elections : ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಿ ವರುಣ ಕಣಕ್ಕಿಳಿದ ವಿ. ಸೋಮಣ್ಣ, ವಿಕ್ಟರಿ ಸೋಮಣ್ಣ ಎಂದ ಬೊಮ್ಮಾಯಿ

ದೇವನಹಳ್ಳಿಯಲ್ಲಿ ಕೆ.ಎಚ್‌ ಮುನಿಯಪ್ಪ ನಾಮಪತ್ರ ಸಲ್ಲಿಕೆ

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ರಕ್ಷಿತ್ ಶಿವರಾಂ ನಾಮಿನೇಷನ್ | Rakshit Shivaram Nomination | Vistara News

ಬೆಂ.ಗ್ರಾಮಾಂತರ: ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರು ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಸತತ 7 ಬಾರಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಸಂಸದರಾಗಿದ್ದ ಮುನಿಯಪ್ಪ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದರು. ಹೀಗಾಗಿ ರಾಜ್ಯ ರಾಜಕೀಯಕ್ಕೆ ಮರಳಿರುವ ಅವರು, ಮೊದಲ ಬಾರಿ ವಿಧಾನಸಭೆ ಎಲೆಕ್ಷನ್‌ನಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಆರ್‌.ಆರ್‌.ನಗರದಲ್ಲಿ ಕುಸುಮಾ ಹನುಮಂತರಾಯಪ್ಪ ನಾಮಪತ್ರ

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ರಕ್ಷಿತ್ ಶಿವರಾಂ ನಾಮಿನೇಷನ್ | Rakshit Shivaram Nomination | Vistara News

ಬೆಂಗಳೂರು: ರಾಜರಾಜೇಶ್ವರಿ ನಗರದ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ ಹನುಮಂತರಾಯಪ್ಪ ನಾಮಪತ್ರ ಸಲ್ಲಿಸಿದರು. ಕುಸುಮಾ ಅವರು ಐಎಎಸ್‌ ಅಧಿಕಾರಿಯಾಗಿದ್ದ ದಿವಂಗತ ಡಿ.ಕೆ.ರವಿ ಅವರ ಪತ್ನಿಯಾಗಿದ್ದಾರೆ. 2018ರ ಚುನಾವಣೆಯಲ್ಲಿ ಸಚಿವ ಮುನಿರತ್ನ ವಿರುದ್ಧ ಸೋತಿದ್ದ ಇವರು, ಆರ್‌.ಆರ್‌.ನಗರದ ಕ್ಷೇತ್ರದಲ್ಲಿ ಎರಡನೇ ಬಾರಿ ಸ್ಪರ್ಧಿಸುತ್ತಿದ್ದಾರೆ.

ಗಾಂಧಿನಗರದಲ್ಲಿ ದಿನೇಶ್ ಗುಂಡೂರಾವ್

ಬೆಂಗಳೂರು: ಗಾಂಧಿನಗರ ಕಾಂಗ್ರೆಸ್ ‌ಅಭ್ಯರ್ಥಿಯಾಗಿ ದಿನೇಶ್ ಗುಂಡೂರಾವ್ ಅವರು ಚುನಾವಣಾ ಅಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಅಪಾರ ಬೆಂಬಲಿಗರು, ಕಾರ್ಯಕರ್ತರ ಜತೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದರು. ಈಗಾಗಲೇ ಐದು ಚುನಾಯಿತರಾಗಿರುವ ದಿನೇಶ್ ಗುಂಡೂರಾವ್, ಆರನೇ ಬಾರಿಗೆ ಆಯ್ಕೆ ಬಯಸಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿದರು.

ಶಿವಾಜಿನಗರದಲ್ಲಿ ರಿಜ್ವಾನ್ ಅರ್ಷದ್

ಬೆಂಗಳೂರು: ಶಿವಾಜಿನಗರದಲ್ಲಿ ಶಾಸಕ ರಿಜ್ವಾನ್ ಅರ್ಷದ್ ಅವರು ನಾಮಪತ್ರ ಸಲ್ಲಿಸಿದರು. ಎರಡನೇ ಬಾರಿ ಆಯ್ಕೆ ಬಯಸಿ ಕಣಕ್ಕಿಳಿದಿರುವ ರಿಜ್ವಾನ್ ಅರ್ಷದ್, ಶಿವಾಜಿನಗರ ವಿಧಾನಸಭೆ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು.

ಸುರೇಶ್ ಕುಮಾರ್ ವಿರುದ್ಧ ಗೆಲುವು ಶತಸಿದ್ಧ ಎಂದ ಪುಟ್ಟಣ್ಣ

ಬೆಂಗಳೂರು: ರಾಜಾಜಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪುಟ್ಟಣ್ಣ ನಾಮಪತ್ರ ಸಲ್ಲಿಸಿದರು. ನಂತರ ಮಾತನಾಡಿರುವ ಅವರು, ಕಡಿಮೆ ಎಂದರೂ 25,000 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸುರೇಶ್‌ ಕುಮಾರ್‌ ವಿರುದ್ಧ ಗೆಲ್ಲುವ ಭರವಸೆ ಇದೆ. ಕ್ಷೇತ್ರದಲ್ಲಿ ಸುರೇಶ್ ಕುಮಾರ್ ಯಾವ ಕೆಲಸಗಳನ್ನೂ ಅಚ್ಚುಕಟ್ಟಾಗಿ ಮಾಡಿಲ್ಲ ಎಂಬುವದನ್ನು ಜನರೇ ಹೇಳಿದ್ದಾರೆ. ಬಿಜೆಪಿಯಲ್ಲಿ ಕೇವಲ ದುರುಳರೇ ಇರುವುದರಿಂದ ಪಕ್ಷ ತೊರೆದು ಕಾಂಗ್ರೆಸ್‌ಗೆ ಬಂದಿರುವೆ. ಇದೇ ಕಾರಣದಿಂದ ಈ ಬಾರಿ ರಾಜಾಜಿನಗರದಲ್ಲಿ ಕಾಂಗ್ರೆಸ್ ಬರಲಿದೆ ಎಂದು ಹೇಳಿದರು. ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ಪುಟ್ಟಣ್ಣ ರಾಜೀನಾಮೆ ನೀಡಿ ಇತ್ತೀಚೆಗೆ ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು.

ಭಾಲ್ಕಿಯಲ್ಲಿ ಈಶ್ವರ್‌ ಖಂಡ್ರೆ ನಾಮಪತ್ರ ಸಲ್ಲಿಕೆ

ಬೀದರ್: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಾವು ಜೋರಾಗಿದೆ. ಈ ನಡುವೆ ಜಿಲ್ಲೆಯ ಭಾಲ್ಕಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಉಮೇದುವಾರಿಕೆಯನ್ನು ಚುನಾವಣಾ ಅಧಿಕಾರಿಗೆ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ‌ ಮುನ್ನ ಬೆಳಗ್ಗೆ ಭಾಲ್ಕೇಶ್ವರ ದೇವಸ್ಥಾನಕ್ಕೆ ತೆರಳಿ ಈಶ್ವರ್‌ ಖಂಡ್ರೆ ಪೂಜೆ ಸಲ್ಲಿಸಿದರು. ಬಳಿಕ
ತಮ್ಮ ತಾಯಿ ದಿವಂಗತ ಲಕ್ಷ್ಮಿ ಬಾಯಿ ಅವರ ಸಮಾಧಿ ಬಳಿ ತೆರಳಿ ಆಶೀರ್ವಾದ ಪಡೆದರು. ನಂತರ ಬೃಹತ್‌ ಮೆರವಣಿಗೆ ಮೂಲಕ ತಹಸೀಲ್ದಾರ್‌ ಕಚೇರಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದರು.

ಮತ್ತೊಂದೆಡೆ ಜಿಲ್ಲೆಯ ಹುಮ್ನಾಬಾದ್‌ ರಾಜಶೇಖರ್‌ ಪಾಟೀಲ್‌ ನಾಮಪತ್ರ ಸಲ್ಲಿಸಿದರು. 4ನೇ ಬಾರಿ ಗೆಲುವು ತಮ್ಮದೇ ಆಗಬೇಕು ಎಂದು ನಾಮಪತ್ರ ಸಲ್ಲಿಸುವ ಮುನ್ನ ವೀರಭದ್ರೇಶ್ವರ ದೇವಾಲಯಕ್ಕೆ ತೆರಳಿ ದರ್ಶನ ಪಡೆದರು. ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ್‌ ಕಚೇರಿವರೆಗೆ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದ್ದು, ಅಲ್ಲಿಂದ ಅಪಾರ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ವಿಜಯಪುರದಲ್ಲಿ ಎಂ.ಬಿ.ಪಾಟೀಲ್‌ ಸೇರಿ ಘಟಾನುಘಟಿ ನಾಯಕರಿಂದ ನಾಮಪತ್ರ ಸಲ್ಲಿಕೆ

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ರಕ್ಷಿತ್ ಶಿವರಾಂ ನಾಮಿನೇಷನ್ | Rakshit Shivaram Nomination | Vistara News

1] ಎಂ ಬಿ ಪಾಟೀಲ್ ನಾಮಪತ್ರ ಸಲ್ಲಿಕೆ: ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ.ಬಿ.ಪಾಟೀಲ್ ಅವರು ಬಬಲೇಶ್ವರ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಬೃಹತ್ ರ‍್ಯಾಲಿ ಮೂಲಕ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದರು.

2] ಶಿವಾನಂದ ಪಾಟೀಲ್ ನಾಮಪತ್ರ ಸಲ್ಲಿಕೆ: ಬಸವನ ಬಾಗೇವಾಡಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಾನಂದ ಪಾಟೀಲ್ ಅವರು ಬಸವನ ಬಾಗೇವಾಡಿ ತಹಸೀಲ್ದಾರ್‌ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು.

3] ಸಿ ಎಸ್ (ಅಪ್ಪಾಜಿ) ನಾಡಗೌಡ ನಾಮಪತ್ರ ಸಲ್ಲಿಕೆ: ಮುದ್ದೇಬಿಹಾಳ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಡಗೌಡ ನಾಮಪತ್ರ ಸಲ್ಲಿಸಿದರು.

4] ವಿಠ್ಠಲ ಕಟಕದೊಂಡ ನಾಮಪತ್ರ ಸಲ್ಲಿಕೆ – ನಾಗಠಾಣ (ಎಸ್.ಸಿ ಮೀಸಲು) ಕ್ಷೇತ್ರದಲ್ಲಿ ವಿಠ್ಠಲ ಕಟಕದೊಂಡ ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು, ಏ. 19ರಂದು ಬೃಹತ್ ರ‍್ಯಾಲಿ ಮೂಲಕ ನಾಮಪತ್ರ ಸಲ್ಲಿಕೆಗೆ ತೀರ್ಮಾನ ಮಾಡಿದ್ದಾರೆ.

ಮೂಡಬಿದ್ರೆಯಲ್ಲಿ ಮಿಥುನ್ ರೈ

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ರಕ್ಷಿತ್ ಶಿವರಾಂ ನಾಮಿನೇಷನ್ | Rakshit Shivaram Nomination | Vistara News

ಮಂಗಳೂರು: ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ‌ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಬೃಹತ್ ರೋಡ್ ಶೋ ನಡೆಸಿದ ಬಳಿಕ ಸಾವಿರಾರು ಕಾರ್ಯಕರ್ತರ ಜತೆ ತೆರಳಿ ನಾಮಪತ್ರ ಸಲ್ಲಿಸಿದರು.

ಸೊರಬದಲ್ಲಿ ಗೀತಾ ಶಿವರಾಜ್ ಕುಮಾರ್ ಜತೆ ನಾಮ ಪತ್ರ ಸಲ್ಲಿಸಿದ ಮಧು ಬಂಗಾರಪ್ಪ‌

ಶಿವಮೊಗ್ಗ: ಸೊರಬದಲ್ಲಿ ಗೀತಾ ಶಿವರಾಜ್ ಕುಮಾರ್ ಜತೆ ಮಧು ಬಂಗಾರಪ್ಪ ನಾಮಪತ್ರ ಸಲ್ಲಿಸಿದರು. ಬೃಹತ್ ಮೆರವಣಿಗೆಯಲ್ಲಿ ಬಂದ ಮಧು ಬಂಗಾರಪ್ಪ, ಸೊರಬದ ರಂಗನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ನಾಮಪತ್ರ ಸಲ್ಲಿಕೆ ಮಾಡಿದರು.

ಲಿಂಗಸಗೂರು ಕ್ಷೇತ್ರದ ಅಭ್ಯರ್ಥಿ ಘೋಷಣೆ ಮುನ್ನವೇ ನಾಮಪತ್ರ ಸಲ್ಲಿಕೆ

ರಾಯಚೂರು: ಜಿಲ್ಲೆಯ ಲಿಂಗಸಗೂರು ಕ್ಷೇತ್ರದಲ್ಲಿ ಅಭ್ಯರ್ಥಿ ಘೋಷಣೆ ಮುನ್ನವೇ ಕಾಂಗ್ರೆಸ್ ಶಾಸಕ ಡಿ.ಎಸ್. ಹೂಲಗೇರಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ 3 ಪಟ್ಟಿಗಳಲ್ಲಿ ಲಿಂಗಸಗೂರು ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಹೀಗಿದ್ದರೂ ಸಾಂಕೇತಿಕವಾಗಿ ಕೆಲವು ಕಾರ್ಯಕರ್ತರ ಜತೆ ತೆರಳಿ ಶಾಸಕ ಡಿ.ಎಸ್. ಹೂಲಗೇರಿ ನಾಮಪತ್ರ ಸಲ್ಲಿಸಿದ್ದಾರೆ.

ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ವಿನಯ್ ಕುಲಕರ್ಣಿ ಪರ ನಾಮಪತ್ರ ಸಲ್ಲಿಕೆ

ಧಾರವಾಡ: ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಪರ ನಾಮಪತ್ರ ಸಲ್ಲಿಸಲಾಗಿದೆ. ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ನಂತರ ಧಾರವಾಡ ಪ್ರವೇಶಕ್ಕೆ ವಿನಯ್ ಕುಲಕರ್ಣಿಗೆ ನಿರ್ಬಂಧವಿದೆ. ಈ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು.

ವಿವಿಧ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್‌ ಅಭ್ಯರ್ಥಿಗಳು

ಕೊಪ್ಪಳ- ಕೆ. ರಾಘವೇಂದ್ರ ಹಿಟ್ನಾಳ್
ಸವದತ್ತಿ- ವಿಶ್ವಾಸ್ ವೈದ್ಯ
ಬೈಲಹೊಂಗಲ- ಮಹಾಂತೇಶ ಕೌಜಲಗಿ
ಶಿರಸಿ-ಸಿದ್ದಾಪುರ- ಭೀಮಣ್ಣ ನಾಯ್ಕ
ಹಳಿಯಾಳ- ಆರ್.ವಿ. ದೇಶಪಾಂಡೆ
ಕುಣಿಗಲ್- ಡಾ.ರಂಗನಾಥ್
ಕನಕಗಿರಿ- ಶಿವರಾಜ ತಂಗಡಗಿ
ಬಾಗಲಕೋಟೆ-ಎಚ್.ವೈ.ಮೇಟಿ
ಹೊಸದುರ್ಗ- ಬಿ.ಜಿ.ಗೋವಿಂದಪ್ಪ
ವಿಜಯನಗರ- ಎಚ್. ಆರ್. ಗವಿಯಪ್ಪ
ಕಾಗವಾಡ- ರಾಜು ಕಾಗೆ
ಯಲಬುರ್ಗಾ- ಬಸರಾಜ ರಾಯರಡ್ಡಿ
ಮುಧೋಳ- ಆರ್.ಬಿ‌.ತಿಮ್ಮಾಪೂರ
ಗದಗ- ಎಚ್.ಕೆ.ಪಾಟೀಲ್
ಸೇಡಂ- ಶರಣ ಪ್ರಕಾಶ್ ಪಾಟೀಲ್
ಹಾನಗಲ್- ಶ್ರೀನಿವಾಸ ಮಾನೆ
ಬೆಳ್ತಂಗಡಿ- ರಕ್ಷಿತ್ ಶಿವರಾಂ
ಮಡಿಕೇರಿ- ಡಾ.ಮಂತರ್ ಗೌಡ
ವಿಜಯಪುರ-ಅಬ್ದುಲ್ ಹಮ್ಮಿದ್ ಮುಶ್ರಿಫ್
ಇಂಡಿ- ಯಶವಂತರಾಯಗೌಡ ಪಾಟೀಲ್
ನಾಗಮಂಗಲ-ಚಲುವರಾಯಸ್ವಾಮಿ
ಕೊಳ್ಳೇಗಾಲ- ಎ.ಆರ್. ಕೃಷ್ಣಮೂರ್ತಿ
ಎಚ್.ಡಿ.ಕೋಟೆ- ಅನಿಲ್ ಚಿಕ್ಕಮಾದು
ಚಾಮುಂಡೇಶ್ವರಿ- ಮಾವನಹಳ್ಳಿ ಸಿದ್ದೇಗೌಡ
ಚಿಕ್ಕೋಡಿ- ಗಣೇಶ ಹುಕ್ಕೇರಿ

ಬೆಳ್ತಂಗಡಿಯಲ್ಲಿ ರಕ್ಷಿತ್ ಶಿವರಾಂಗೆ ನಟ ವಿಜಯ ರಾಘವೇಂದ್ರ ಸಾಥ್

ಮಂಗಳೂರು: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರಕ್ಷಿತ್ ಶಿವರಾಂ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಅಪಾರ ಬೆಂಬಲಿಗರೊಂದಿಗೆ ಅವರು ಮೆರವಣಿಗೆ ನಡೆಸಿದರು. ಅಭ್ಯರ್ಥಿಗೆ ಚಿತ್ರ ನಟ ವಿಜಯ ರಾಘವೇಂದ್ರ ಸಾಥ್‌ ನೀಡಿದರು. ರಕ್ಷಿತ್ ಶಿವರಾಂ ವಿಜಯ ರಾಘವೇಂದ್ರ ಅವರ ಭಾವಮೈದ ಆಗಿದ್ದಾರೆ. ಮೆರವಣಿಗೆ ಬಳಿಕ ನಟ ವಿಜಯ ರಾಘವೇಂದ್ರ ಮಾತನಾಡಿ, ರಕ್ಷಿತ್ ನನ್ನ ಭಾವಮೈದ ಆಗಿರುವ ಹಿನ್ನೆಲೆಯಲ್ಲಿ ಅವರಿಗೆ ಬೆಂಬಲ ಸೂಚಿಸುವುದು ನನ್ನ ಕರ್ತವ್ಯ. ಮುಂದಿನ ದಿನಗಳಲ್ಲಿ ಅವರ ಪರ ಪ್ರಚಾರ ಕೂಡ ಮಾಡುತ್ತೇನೆ. ಎರಡೂವರೆ ವರ್ಷಗಳಿಂದ ಬೆಳ್ತಂಗಡಿಯಲ್ಲಿ ರಕ್ಷಿತ್ ಜನಸೇವೆ ಮಾಡಿದ್ದಾರೆ. ಹುಟ್ಟೂರು ಬೆಳ್ತಂಗಡಿ ಬಗ್ಗೆ ಅವರಿಗೆ ಅಪಾರ ಕಲ್ಪನೆ ಇದೆ. ಅವರಿಗೆ ಜನರು ಬೆಂಬಲ ಸೂಚಿಸಬೇಕು ಎಂದು ವಿನಂತಿಸಿದರು.

Exit mobile version