Site icon Vistara News

ಸಾವಿಗೆ ರಹದಾರಿಯಾಗುತ್ತಿದೆಯೇ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ?; 6 ತಿಂಗಳಲ್ಲಿ ಹಾರಿತು 84 ಜನರ ಪ್ರಾಣಪಕ್ಷಿ!

Road accident between bikes in Bangarpet Two bikers die

ಮಂಡ್ಯ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ (Bengaluru-Mysuru highway) ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಆದರೆ, ಇದರ ಮಧ್ಯೆ ಆತಂಕಕಾರಿ ಅಂಕಿ-ಅಂಶವೊಂದು ಬಹಿರಂಗವಾಗಿದೆ. ಈ ಮೂಲಕ ಈ ಹೆದ್ದಾರಿಯು ಸಾವಿಗೆ ರಹದಾರಿಯಾಗುತ್ತಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಈ ಹೆದ್ದಾರಿಯಲ್ಲಿ ವಾಹನ ಸಂಚಾರ ಆರಂಭವಾದ ಆರೇ ತಿಂಗಳಲ್ಲಿ 335ಕ್ಕೂ ಹೆಚ್ಚು ಅಪಘಾತಗಳು (Highway Accident) ಸಂಭವಿಸಿದ್ದು, 84 ಜನರು ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ.

ದಶಪಥ ಹೆದ್ದಾರಿಯಲ್ಲಿ ನಡೆದ ಅಪಘಾತಗಳ ಪೈಕಿ ಮಂಡ್ಯ ಜಿಲ್ಲೆಯಲ್ಲೇ 225 ಅಪಘಾತಗಳು ನಡೆದಿದ್ದು, 43 ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಜತೆಗೆ 253 ಜನ ಗಾಯಗೊಂಡಿದ್ದಾರೆ. ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಹೆದ್ದಾರಿಯು 51 ಕಿ.ಮೀ. ಹಾದುಹೋಗಲಿದ್ದು, 110 ಅಪಘಾತಗಳು ನಡೆದಿವೆ. ಇದರಿಂದ 41 ಜನ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಇದನ್ನೂ ಓದಿ: NIMMBUS App : ಬಿಎಂಟಿಸಿಯ ನಿಮ್ಮಬಸ್‌ ಆ್ಯಪ್ ಮುಂದಿನ ವಾರ ಬಿಡುಗಡೆ

ಮೈಸೂರು ಜಿಲ್ಲೆ ಸರಹದ್ದಿನ 5 ಕಿ.ಮೀ. ವ್ಯಾಪ್ತಿಯಲ್ಲಿ 30 ಅಪಘಾತಗಳು ನಡೆದಿದ್ದು, 8 ಜನರು ಸಾವಿಗೀಡಾಗಿದ್ದಾರೆ. ಹೀಗಾಗಿ ಬೆಂಗಳೂರು-ಮೈಸೂರು ದಶಪಥದಲ್ಲಿ ಸಂಚರಿಸುವುದು ಎಷ್ಟು ಸುರಕ್ಷಿತ ಎಂಬ ಮಾತುಗಳು ಕೇಳಿಬರುತ್ತಿವೆ.

ಅಪಘಾತಕ್ಕೆ ಕಾರಣಗಳು

ಬೆಂಗಳೂರಿನಿಂದ ಮದ್ದೂರಿನ ನಿಡಘಟ್ಟದವರೆಗೂ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಆದರೆ, ಬಹಳಷ್ಟು ಜನರಿಗೆ ಇದರ ಅರಿವಿಲ್ಲ. ಹೀಗಾಗಿ ಕೇವಲ 80 ನಿಮಿಷದಲ್ಲಿ ನಾವು ಬೆಂಗಳೂರಿನಿಂದ ಮೈಸೂರಿಗೋ ಇಲ್ಲವೇ ಮೈಸೂರಿನಿಂದ ಬೆಂಗಳೂರಿಗೋ ತಲುಪಬಹುದು ಎಂಬ ಧಾವಂತದಲ್ಲಿ ಜನರು ಪ್ರಯಾಣಿಸುತ್ತಿರುವುದು ಸಹ ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Shivamogga terror : ತೀರ್ಥಹಳ್ಳಿಗೇ ಬೆಂಕಿ ಹಚ್ಚುವ ಸಂಚು ನಡೆಸಿದ್ನಾ ಶಾರಿಕ್‌? 15ಕ್ಕೂ ಅಧಿಕ ಕೃತ್ಯಗಳಲ್ಲಿ ಕೈವಾಡ

ಅಲ್ಲದೆ, ಹೆದ್ದಾರಿಗೆ ಇನ್ನೂ ವೇಗದ ಮಿತಿಗೆ ಸಂಬಂಧಿಸಿದಂತೆ ಅಲ್ಲಲ್ಲಿ ಸೂಚನಾ ಫಲಕವನ್ನೂ ಹಾಕಲಾಗಿಲ್ಲ. ಇದೂ ಅಪಘಾತ ಹೆಚ್ಚಾಗಲು ಕಾರಣ ಎನ್ನಲಾಗಿದೆ. ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ ಮೇಲ್ಸೇತುವೆ, ಕೆಳ ಸೇತುವೆಗಳಿದ್ದು, ಹೆಚ್ಚು ತಿರುವುಗಳೂ ಇವೆ. ಇಂಥ ಜಾಗದಲ್ಲಿಯೂ ಅತಿ ವೇಗದಲ್ಲಿ ವಾಹನಗಳನ್ನು ಚಲಾವಣೆ ಮಾಡುತ್ತಿರುವುದು ಸಹ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

Exit mobile version