ಬೆಂಗಳೂರು: ಲೋಕಾಯುಕ್ತರಾಗಿ ನೇಮಕವಾಗಿರುವ ನ್ಯಾ. ಬಿ.ಎಸ್. ಪಾಟೀಲ್ ಇಂದು (ಬುಧವಾರ) ಪ್ರಮಾಣ ವಚನ ಸ್ವೀಕರಿಸಿದರು. ನಿವೃತ್ತ ನ್ಯಾಯಮೂರ್ತಿ ಭೀಮನಗೌಡ ಸಂಗನಗೌಡ ಪಾಟೀಲ್ ರಾಜಭವನದ ಗಾಜಿನ ಮನೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣ ವಚನ ಬೋಧನೆ ಮಾಡಿದರು. ಈ ಸಮಾರಂಭಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವರಾದ ವಿ. ಸೋಮಣ್ಣ, ಹಾಲಪ್ಪ ಆಚಾರ್ ಇತರು ಭಾಗಿಯಾದರು.
ಇದನ್ನೂ ಓದಿ | ಒಮ್ಮೆ ACB, ಮತ್ತೊಮ್ಮೆ ಲೋಕಾಯುಕ್ತ: ಅಧಿಕಾರಿಗಳನ್ನು ಖೆಡ್ಡಾಕ್ಕೆ ಕೆಡವಲು 30 ಸಿಮ್ ಕಾರ್ಡ್ !
ಹಿಂದಿನ ಲೋಕಾಯುಕ್ತರಾಗಿದ್ದ ಪಿ. ವಿಶ್ವನಾಥ್ ಶೆಟ್ಟಿ ಕಳೆದ ಜನವರಿಯಲ್ಲಿ ನಿವೃತ್ತಿ ಘೋಷಿಸಿದ ನಂತರ ಲೋಕಾಯುಕ್ತ ಸ್ಥಾನ ತೆರವಾಗಿತ್ತು. ಸುಮಾರು 5 ತಿಂಗಳ ಕಾಲ ಖಾಲಿಯಾಗಿದ್ದ ಲೋಕಾಯುಕ್ತ ತನಿಖಾ ಸಂಸ್ಥೆಗೆ ರಾಜ್ಯ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ರ ಹೆಸರು ಶಿಫಾರಸ್ಸು ಮಾಡಿತ್ತು, ಅದಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದು, ಇಂದು ಪ್ರಮಾಣ ವಚನ ಸ್ವೀಕಾರ ನಡೆದಿದೆ.
ಶುಭ ಹಾರೈಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ
ನೂತನ ಲೋಕಾಯುಕ್ತರಿಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿನಂದಿಸಿ ಶುಭ ಹಾರೈಸಿದರು. ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಸೇರಿದಂತೆ ಇತರೆ ನಾಯಕರಯ ಶುಭ ಕೋರಿದ್ದಾರೆ..
ನ್ಯಾ.ಬಿ.ಎಸ್.ಪಾಟೀಲ್ ಬಗ್ಗೆ ಒಂದಿಷ್ಟು ಮಾಹಿತಿ
ನಿವೃತ್ತ ನ್ಯಾಯಮೂರ್ತಿ ಭೀಮನಗೌಡ ಸಂಗನಗೌಡ ಪಾಟೀಲ್ ವಿಜಯಪುರ ಜಿಲ್ಲೆಯ ಪಡೇಕಣ್ಣೂರಿನಲ್ಲಿ 1956ರಲ್ಲಿ ಜನಿಸಿ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿಎ ಪದವಿ ಮುಗಿಸಿದರು. 1980 ರಲ್ಲಿ ವಕೀಲ ವೃತ್ತಿ ಆರಂಭಿಸಿ 2004 ರಲ್ಲಿ ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಯಾಗಿ ನೇಮಕವಾಗಿ, 2018ರಲ್ಲಿ ಹೆಚ್‌ಸಿ ನ್ಯಾಯಾಧೀಶರಾಗಿ ನಿವೃತ್ತಿಯಾದರು. ಬಳಿಕ 2019ರಲ್ಲಿ ಲೋಕಾಯುಕ್ತ ತನಿಖಾ ಸಂಸ್ಥೆಗೆ ಉಪಲೋಕಾಯುಕ್ತರಾಗಿ ನೇಮಕಗೊಂಡಿದರು.
ಇದನ್ನೂ ಓದಿ | ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಶೀಘ್ರ ತೀರ್ಮಾನ : CM ಬಸವರಾಜ ಬೊಮ್ಮಾಯಿ