Site icon Vistara News

Mysore Dasara : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಳೆಗಟ್ಟಿದ ದಸರಾ ಸಡಗರ; 5ನೇ ಬಾರಿ ಅಂಬಾರಿ ಹೊತ್ತ ಅಭಿಮನ್ಯು

Mysore dasara

ಮೈಸೂರು: ‌ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ 2024 (Mysore Dasara) ಸಡಗರ ಕಳೆಗಟ್ಟಿದೆ. ಅ.12ರಂದು ಮೈಸೂರು ಅರಮನೆಯಲ್ಲಿ ದಶಮಿ ಕಾರ್ಯಕ್ರಮಗಳು ನಡೆಯಲಿದೆ. ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿದೆ.

ದಿನವಿಡೀ ಏನೆಲ್ಲ ಕಾರ್ಯಕ್ರಮ ನಡೆಯಲಿದೆ

-ಬೆಳಗ್ಗೆ 10:15ಕ್ಕೆ ಅರಮನೆ ಆವರಣದಲ್ಲಿ ಉತ್ತರ ಪೂಜೆ.
ಅರಮನೆಗೆ ಆಗಮಿಸಲಿರುವ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ.
-ಬೆಳಗ್ಗೆ 10 ಗಂಟೆಗೆ ಅರಮನೆ ಶ್ವೇತ ವರಹ ದೇವಸ್ಥಾನದಲ್ಲಿ ಜಟ್ಟಿಗಳ ಸಿದ್ಧತೆ.
-ಬೆಳಗ್ಗೆ 10:45 ರಿಂದ 11 ಗಂಟೆಗೆ ಜೆಟ್ಟಿ ಕಾಳಗ.
ಅರಮನೆಯ ಸವಾರಿ ತೊಟ್ಟಿಯಲ್ಲಿ ನಡೆಯಲಿರುವ ಜಟ್ಟಿ ಕಾಳಗ.
-ಬೆಳಗ್ಗೆ 11.10ಕ್ಕೆ ವಿಜಯ ಯಾತ್ರೆ ನಡೆಸಲಿರುವ ಯದುವೀರ್.
-ಬೆಳಗ್ಗೆ 11:20 ರಿಂದ 11:45ಕ್ಕೆ ಭುವನೇಶ್ವರಿ ದೇವಸ್ಥಾನಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ಆಗಮನ.
-ಬನ್ನಿ ಪೂಜೆ ಸಲ್ಲಿಸಲಿರುವ ಯದುವೀರ್. ಬನ್ನಿ ಪೂಜೆಯ ಬಳಿಕ ಯದುವೀರ್ ಸ್ವಸ್ಥಾನಕ್ಕೆ ವಾಪಸ್.
ಪೂಜೆ ಬಳಿಕ ಕಂಕಣ ವಿಸರ್ಜನೆ ಮಾಡಿ ಅರಮನೆ ದಸರಾ ಸಮಾಪ್ತಿ.

Deepa S

ವಜ್ರ ಮುಷ್ಟಿ ಕಾಳಗದಲ್ಲಿ ತಾಯಿ ಚಾಮುಂಡಿಗೆ ರಕ್ತ ಸಮರ್ಪಣೆ ಬಳಿಕ ಅರಮನೆಯ ಆನೆ ಬಾಗಿಲಿನಿಂದ ಹೊರಟು ಭುವನೇಶ್ವರ ಅಮ್ಮನವರ ದೇವಸ್ಥಾನವನ್ನು ವಿಜಯ ಯಾತ್ರೆ ತಲುಪಿತು. ರಾಜ ವಂಶಸ್ತರು, ಪಟ್ಟದ ಆನೆ, ಪಟ್ಟದ ಕುದುರೆ ಹಾಗೂ ಪಟ್ಟದ ಹಸುವಿನೊಂದಿಗೆ ವಿಜಯ ಯಾತ್ರೆ ಮಂಗಳ ವಾದ್ಯಗಳೊಂದಿಗೆ ಸಾಗಿ ಬಂತು. ಪಲ್ಲಕ್ಕಿಯಲ್ಲಿರುವ ಪಟ್ಟದ ಕಟ್ಟಿಗೆ ಯದುವೀರ್ ಒಡೆಯರ್ ನಮಿಸಿದ ಬಳಿಕ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲು ತೆರಳಿದರು.

Deepa S

ಅರಮನೆ ಪ್ರವೇಶಿಸಿದ ಉತ್ಸವ ಮೂರ್ತಿ

ಸುಮಾರು 12 ಕಿ. ಮೀ. ಸಾಗಿ ಬಂದ ಚಾಮುಂಡೇಶ್ವರಿ ಉತ್ಸವ ಮೂರ್ತಿಯು ಅಂಬಾವಿಲಾಸ ಅರಮನೆ ಪ್ರವೇಶಿಸಿತು. ಇದಕ್ಕೂ ಮೊದಲು ರಾಜ ಮಾರ್ತಾಂಡ ದ್ವಾರದಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಅರಮನೆ ವತಿಯಿಂದ ಪೂಜೆ ಸಲ್ಲಿಕೆ ಮಾಡಲಾಯಿತು. ಅರಮನೆ ಪಟ್ಟದ ಆನೆಗಳಿಂದ ತಾಯಿಗೆ ಸ್ವಾಗತಿಸಲಾಯಿತು

Deepa S

ವಿಜಯ ದಶಮಿ ಮೆರವಣಿಗೆ ಆರಂಭಿಸಿದ ಯದುವೀರ್

ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ವಿಜಯ ದಶಮಿ ಮೆರವಣಿಗೆ ಆರಂಭಿಸಿದರು. ಅರಮನೆಯಿಂದ ಭುವನೇಶ್ವರಿ ದೇವಾಲಯದವರೆಗೆ ಚದುರಂಗ ಬಲದೊಂದಿಗೆ ಕಾರಿನಲ್ಲಿ ಯಾತ್ರೆ ನಡೆಸಿದರು. ಪಟ್ಟದ ಕತ್ತಿಯನ್ನು ಕಂಚಿನ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಲಾಯಿತು.

Deepa S

ಆನೆಗಳಿಗೆ ಬಣ್ಣಗಳಿಂದ ಸಿಂಗಾರ

ಅರಮನೆಯಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ಐತಿಹಾಸಿಕ ಜಂಬೂ ಸವಾರಿಗೆ ಕ್ಷಣ ಗಣನೆ ಆರಂಭವಾಗಿದೆ. ಜಂಬೂ ಸವಾರಿಯಲ್ಲಿ ಪಾಲ್ಗೊಲ್ಲುವ ಆನೆಗಳಿಗೆ ಬಣ್ಣಗಳಿಂದ ಸಿಂಗಾರ ಮಾಡಲಾಗುತ್ತಿದೆ. ಕೆಂಪು, ಬಿಳಿ, ಹಸಿರು, ಕೇಸರಿ ಹಾಗೂ ಹಳದಿ ಬಣ್ಣಗಳಿಂದ ಗಜ ಪಡೆಗಳು ಮಿಂಚುತ್ತಿವೆ. ಸೊಂಡಿಲಿಗೆ ಅರಮನೆಯ ಲಾಂಛನವಾಗಿರುವ ಗಂಡಬೆರುಂಡ ಚಿತ್ತಾರ, ಆನೆಯ ಕಿವಿಗಳಿಗೆ ಶಂಖ ಚಕ್ರ, ಕೈ ಹಾಗೂ ಕಾಲುಗಳಿಗೆ ಶುಕ್ರವಾರ ರಾತ್ರಿಯಿಂದಲೇ ಬಳ್ಳಿಯ ಚಿತ್ತಾರವನ್ನು ಹಾಕಲಾಗಿದೆ. 3 ಲಾಯಗಳಲ್ಲಿ 14 ಆನೆಗಳಿಗೆ ಬಣ್ಣ ಬಳಿಯುವ ಕಾರ್ಯ ನಡೆಯುತ್ತಿದೆ. ಧನಂಜಯ, ಲಕ್ಷೀ, ಭೀಮ, ಏಕಲವ್ಯ, ರೋಹಿತ ಆನೆಗಳು ನಯನ ಮನೋಹರವಾಗಿ ಕಂಗೊಳಿಸುತ್ತಿವೆ.

Deepa S

ಚಿನ್ನದ ಅಂಬಾರಿಗೆ ಕೆಂಪು ಪರದೆ‌

ಐತಿಹಾಸಿಕ ಅಂಬಾರಿ ವೀಕ್ಷಣೆಗೆ ಬ್ರೇಕ್ ಹಾಕಲಾಗಿದೆ. ಮೈಸೂರು ಅರಮನೆಯ ಗೊಂಬೆ ತೊಟ್ಟಿಯಲ್ಲಿರುವ 80 ಕೆ.ಜಿ.ಚಿನ್ನ ಸೇರಿ 250 ಕೆ.ಜಿ.ತೂಕ ಇರುವ ಅಂಬಾರಿಗೆ ಕೆಂಪು ಪರದೆ ಹಾಕಲಾಗಿದೆ.

Exit mobile version