Site icon Vistara News

Girl Ends life : ಅಯ್ಯೋ ದೇವ್ರೆ.. ಹೊಟ್ಟೆ ನೋವು ತಾಳಲಾರದೆ 17 ವರ್ಷದ ವಿದ್ಯಾರ್ಥಿನಿ ನೇಣಿಗೆ ಶರಣು

Stomach pain girl ends life Renuka

ಮೈಸೂರು: 17 ವರ್ಷದ ಬಾಲಕಿಯೊಬ್ಬಳು (17 Year old Girl) ಹೊಟ್ಟೆ ನೋವು ತಾಳಲಾರದೆ (Unbearable stomach ache) ನೇಣು ಬಿಗಿದುಕೊಂಡು ಆತ್ಮಹತ್ಯೆ (Ends life by Hanging) ಮಾಡಿಕೊಂಡ ದಾರುಣ ಘಟನೆ ನಂಜನಗೂಡು ತಾಲೂಕಿನ (Nanjanagudu taluk) ಗೋಳೂರು ಗ್ರಾಮದಲ್ಲಿ ನಡೆದಿದೆ.

ನಂಜನಗೂಡು ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ (First PU Student) ಯಾಗಿರುವ, ಮಹದೇವು ಎಂಬುವವರ ಪುತ್ರಿ ರೇಣುಕಾ(17) ಮೃತಪಟ್ಟವಳು.

ಈಕೆಗೆ ಆಗಾಗ್ಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು ಎನ್ನಲಾಗಿದೆ. ಶುಕ್ರವಾರ ಆಕೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾಳೆ.

ಆಕೆಯ ಆತ್ಮಹತ್ಯೆ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಶಿವನಂಜಶೆಟ್ಟಿ, ಪಿಎಸ್ಐ ರಾಮಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಿಂಗಳ ನೋವಿನ ಸಂಕಟವೇ?

ತಿಂಗಳ ಋತುಸ್ರಾವದ ವೇಳೆ ಕೆಲವು ಹೆಣ್ಣುಮಕ್ಕಳಿಗೆ ವಿಪರೀತವಾದ ನೋವು ಕಾಡುತ್ತದೆ. ಅದೇ ನೋವು ರೇಣುಕಾ ಸಾವಿಗೆ ಕಾರಣವಾಯಿತೇ ಎಂಬ ಸಂಶಯ ಕಾಡಿದೆ. ಋತುಸ್ರಾವಕ್ಕೆ ಮೊದಲು ಮತ್ತು ಅತಿ ರಕ್ತಸ್ರಾವದ ದಿನಗಳಲ್ಲಿ ಕೆಲವರಿಗೆ ತಡೆದುಕೊಳ್ಳಲು ಸಾಧ್ಯವಾಗದ ನೋವು ಕಾಡುತ್ತದೆ.

ರಕ್ತಹೀನತೆ ಇರುವವರು, ದೇಹದಲ್ಲಿ ಅಷ್ಟೊಂದು ಶಕ್ತಿ ಇಲ್ಲದವರನ್ನು ಇದು ಅತಿಯಾಗಿ ಕಾಡುತ್ತದೆ. ಕೆಲವರಲ್ಲಿ ಗರ್ಭಕೋಶದಲ್ಲಿ ಗುಳ್ಳೆಗಳು (ಸಿಸ್ಟ್‌) ಇದ್ದರೂ ಈ ಸಮಸ್ಯೆ ಕಂಡುಬರುತ್ತದೆ.

ಸಾಮಾನ್ಯವಾಗಿ ಈ ನೋವು ಒಂದು ಹಂತಕ್ಕೆ ಇರುತ್ತದೆ ಎಂದು ಹೆತ್ತವರು ಕೂಡಾ ಹೆಚ್ಚು ಗಮನ ಕೊಡುವುದಿಲ್ಲ. ಕೆಲವರು ನೋವಿನ ಮಾತ್ರೆ ತೆಗೆದುಕೊಳ್ಳಬಾರದು ಎಂದು ತಾಕೀತು ಮಾಡುತ್ತಾರೆ. ಹೀಗಾಗಿ ನೋವನ್ನು ತಡೆದುಕೊಳ್ಳಲು ಸಾಧ್ಯವೇ ಆಗದಿದ್ದಾಗ ಯಾತನೆ ಅನುಭವಿಸುತ್ತಾರೆ.

ಇದನ್ನೂ ಓದಿ: Menstrual Cramp Home Remedies: ಋತುಚಕ್ರGiದ ದಿನಗಳಲ್ಲಿ ಕಾಡುವ ನೋವಿನಿಂದ ಮುಕ್ತಿ ಪಡೆಯಬೇಕೇ? ಇಲ್ಲಿವೆ ಮನೆಮದ್ದು!

ಇಂಥ ಸಂಕಟಕ್ಕೆ ಏನು ಮಾಡಬೇಕು?

ತಿಂಗಳ ಋತುಸ್ರಾವದ ಸಂದರ್ಭದಲ್ಲಿ ಸೊಂಟ, ಬೆನ್ನು ನೋವು ಇರುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಸ್ವಲ್ಪ ಹೆಚ್ಚು ವಿಶ್ರಾಂತಿಯನ್ನು ಪಡೆಯುವುದು ಉತ್ತಮ. ಒಂದು ವೇಳೆ ತಡೆಯಲು ಸಾಧ್ಯವಾಗದ ನೋವಿದ್ದರೆ ಮನೆಯವರಿಗೆ ತಿಳಿಸಿ ವೈದ್ಯರಲ್ಲಿಗೆ ಹೋಗುವುದು ಉತ್ತಮ. ಅದರಲ್ಲೂ ಮಹಿಳಾ ವೈದ್ಯರು, ಗೈನಕಾಲಜಿಸ್ಟ್‌ಗಳನ್ನು ಭೇಟಿಯಾಗುವುದು ಸರಿಯಾದ ಕ್ರಮ. ಒಂದು ವೇಳೆ ಮನೆಯಲ್ಲಿ ಈ ರೀತಿ ಪರೀಕ್ಷೆಗೆ ಹೆಚ್ಚು ಒಲವು ತೋರದಿದ್ದರೆ ಹೆಣ್ಣು ಮಕ್ಕಳು ತಮ್ಮ ಓರಗೆಯ ಗೆಳತಿಯರ ಜತೆಗಾದರೂ ಹೋಗಿ ಪರಿಶೀಲಿಸಿಕೊಳ್ಳುವುದು ಉತ್ತಮ. ಒಂದು ವೇಳೆ ಗಾಳಿಯ ಗುಳ್ಳೆಗಳು ಇದ್ದರೆ, ಬೇರೆ ಸಮಸ್ಯೆ ಇದ್ದರೆ ವೈದ್ಯರು ಪರಿಹಾರ ಹೇಳುತ್ತಾರೆ.

ಈ ನೋವನ್ನು ಸಹಿಸಿಕೊಂಡು ತುಂಬ ಕಷ್ಟಪಟ್ಟು ಆತ್ಮಹತ್ಯೆಯ ಬಗ್ಗೆ ಯೋಚನೆ ಮಾಡಬೇಕಾದ ಅನಿವಾರ್ಯತೆ ಇಲ್ಲ ಎನ್ನುವುದನ್ನು ಹೆಣ್ಣು ಮಕ್ಕಳು ಮನಗಂಡರೆ ರೇಣುಕಾನಂಥವರ ಸಾವನ್ನು ತಪ್ಪಿಸಬಹುದು, ಯಾತನೆಯಿಂದಲೂ ಹೊರಬರಬಹುದು.

Exit mobile version