Site icon Vistara News

KSRTC Tour | ವಾರಾಂತ್ಯದ ದಿನಗಳಲ್ಲಿ ಪ್ಯಾಕೇಜ್‌ ಟೂರ್‌: ಜು.23ರಿಂದ ಆರಂಭ

ksrtc bus

oಬೆಂಗಳೂರು: ನಷ್ಟದಿಂದ ಕಂಗೆಟ್ಟಿರುವ ಕೆಎಸ್‌ಆರ್‌ಟಿಸಿ ನಿಗಮವು ಇದೀಗ ಪ್ರಯಾಣಿಕರನ್ನು ತನ್ನತ್ತ ಸೆಳೆಯಲು ವಾರಾಂತ್ಯದ ದಿನಗಳಲ್ಲಿ ಪ್ಯಾಕೇಜ್‌ ಟೂರ್‌ (KSRTC Tour) ಕೈಗೊಂಡಿದೆ. ಇದಕ್ಕಾಗಿ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ.

ಜುಲೈ 23ರಿಂದ ಬೆಂಗಳೂರು-ಗಗನಚುಕ್ಕಿ ಮಾರ್ಗದ ಪ್ಯಾಕೇಜ್‌ ಟೂರ್‌ ಆರಂಭವಾಗಲಿದೆ. ಮುಂಜಾನೆ 6.30ಕ್ಕೆ ಬೆಂಗಳೂರಿನಿಂದ ಹೊರಡುವ ಕೆಎಸ್‌ಆರ್‌ಟಿಸಿ (KSRTC Tour) ಬಸ್‌ ಸೋಮನಾಥಪುರ, ತಲಕಾಡು, ಮಧ್ಯರಂಗ, ಭರಚುಕ್ಕಿ, ಗಗನಚುಕ್ಕಿ ಸ್ಥಳಗಳಿಗೆ ಸಂಚರಿಸಿ ಪುನಃ ರಾತ್ರಿ 9 ಗಂಟೆಗೆ ವಾಪಸ್‌ ಬರಲಿದೆ.

ಜುಲೈ 22ರಿಂದ ಬೆಂಗಳೂರು-ಜೋಗ ಜಲಪಾತ ಪ್ಯಾಕೇಜ್‌ ಟೂರ್‌ ಕೂಡ ಶುರುವಾಗಲಿದೆ. ನಾನ್‌ ಎಸಿ ಸ್ಲೀಪರ್‌ ಬಸ್‌ ವ್ಯವಸ್ಥೆ ಮಾಡಲಾಗಿದ್ದು, ಶುಕ್ರವಾರ ರಾತ್ರಿ 10.30ಕ್ಕೆ ಬೆಂಗಳೂರಿನಿಂದ ಹೊರಟು ಸಾಗರಕ್ಕೆ ಬೆಳಗ್ಗೆ 5.30ಕ್ಕೆ ತಲುಪಲಿದೆ. ಸಾಗರದಿಂದ ಜೋಗಕ್ಕೆ ತೆರಳಿ ಅಲ್ಲಿಂದ ಶನಿವಾರ ರಾತ್ರಿ ಸಾಗರ-ಬೆಂಗಳೂರಿಗೆ ಬಸ್ಸು ತೆರಳಲಿದೆ.

ಪ್ರಯಾಣದ ದರದ ವಿವರ

(ಬೆಂಗಳೂರು-ಗಗನಚುಕ್ಕಿ)

ವಯಸ್ಕರಿಗೆ- 400 ರೂ.

ಮಕ್ಕಳಿಗೆ (6-12) 250 ರೂ.

(ಬೆಂಗಳೂರು-ಜೋಗ ಜಲಪಾತ)

ವಯಸ್ಕರಿಗೆ- 2,300 ರೂ.

ಮಕ್ಕಳಿಗೆ (6-12) 2,100 ರೂ.

ಬೆಂಗಳೂರು-ಗಗನಚುಕ್ಕಿ ಪ್ಯಾಕೇಜ್‌ ಟೂರ್‌ ಶನಿವಾರ & ಭಾನುವಾರ ಮಾತ್ರ ಇರಲಿದ್ದು, ಹಾಗೇ ಶುಕ್ರವಾರ, ಶನಿವಾರದಂದು ಬೆಂಗಳೂರು-ಜೋಗ ಜಲಪಾತ ಟೂರ್‌ ಇರಲಿದೆ. ಪ್ರಯಾಣಿಕರು ಮುಂಗಡ ಟಿಕೆಟ್‌ ಬುಕ್ಕಿಂಗ್‌ ಮಾಡಬಹುದಾಗಿದೆ.

ಇದನ್ನೂ ಓದಿ | Barachukki Falls | ಕದ್ದುಮುಚ್ಚಿ ಭರಚುಕ್ಕಿ ವೀಕ್ಷಣೆ, ಪ್ರವಾಸಿಗರಿಗೆ ಬಸ್ಕಿ ಶಿಕ್ಷೆ

Exit mobile version